ಅನಿರ್ದಿಷ್ಟ ಕಾಲಾವಧಿ ಮುಷ್ಕರದ ಹಿನ್ನೆಲೆ: ಸೇವೆಯಲ್ಲಿ ವ್ಯತ್ಯಯ

Team Udayavani, Jun 1, 2018, 1:12 PM IST

1june-6.jpg

ಬಜಪೆ : ಕೆಲಸ ಖಾಯಂ ಮಾಡಬೇಕು, ಪಿಂಚಣಿ ವ್ಯವಸ್ಥೆ , ಕೆಲಸದ ಭದ್ರತೆ ನೀಡಬೇಕು ಮತ್ತು 7ನೇ ವೇತನ ಆಯೋಗ ಜಾರಿ ಮಾಡಬೇಕು ಎಂದು ಗ್ರಾಮೀಣ ಅಂಚೆ ನೌಕರರು ರಾಷ್ಟ್ರವ್ಯಾಪಿ ನಡೆಸುತ್ತಿರುವ ಅನಿರ್ದಿಷ್ಟ ಕಾಲಾವಧಿ ಮುಷ್ಕರದ ಹಿನ್ನೆಲೆಯಲ್ಲಿ ಗ್ರಾಮೀಣ ಅಂಚೆ ಸೇವೆಯಲ್ಲಿ ವ್ಯತ್ಯಯವಾಗಿದೆ. ಇದರಿಂದ ಸದಾ ಜನಜಂಗುಳಿಯಿಂದ ತುಂಬಿರುತ್ತಿ ದ್ದ ಬಜಪೆ ಅಂಚೆ ಕಚೇರಿ ಗುರುವಾರವೂ ಜನರಿಲ್ಲದೇ ಖಾಲಿ ಖಾಲಿಯಾಗಿತ್ತು. ಅಂಚೆ ಕಚೇರಿ ತೆರೆದಿದ್ದರೂ ಗ್ರಾಮೀಣ ಅಂಚೆ ಸೇವೆಯನ್ನು ಬಿಟ್ಟು ಉಳಿದೆಲ್ಲ ಸೇವೆಗಳು ಚಾಲ್ತಿಯಿತ್ತು.

ಒಂದೆಡೆ ಬ್ಯಾಂಕ್‌ನೌಕರರ ಮುಷ್ಕರ, ಮತ್ತೊಂದೆಡೆ ಅಂಚೆ ನೌಕರರ ಮುಷ್ಕರವಿದ್ದರೂ ಹಣಕಾಸು ವವ್ಯವಹಾರ ಕಡಿಮೆ ಯಾಗಿತ್ತು. ಕೆಲವೆಡೆ ಅಂಚೆ ಬಟವಾಡೆಯಾಗದೇ ಜನರು ತೊಂದರೆಯನ್ನೂ ಅನುಭವಿಸಿರುವುದು ತಿಳಿದು ಬಂದಿದೆ. ಬಜಪೆ ಅಂಚೆ ಕಚೇರಿಯ ವ್ಯಾಪ್ತಿಯಲ್ಲಿ 6 ಉಪಅಂಚೆ ಕಚೇರಿ ಕಾರ್ಯ ನಿರ್ವಹಿಸುತ್ತಿದ್ದು, ಪಡುಪೆರಾರ, ಕೊಳಂಬೆ, ಅದ್ಯಪಾಡಿ, ಪೇಜಾವರ, ಕಳವಾರು, ಕೆಂಜಾರು ಇದರಲ್ಲಿ ಈಗಾಗಲೇ ಮೂರು ಉಪಅಂಚೆ ಕಚೇರಿ ಮಾತ್ರ ಕಾರ್ಯನಿರ್ವಹಿಸುತ್ತಿದೆ. ಒಟ್ಟು 21 ಉದ್ಯೋಗಿಯಲ್ಲಿ 5 ಮಂದಿ ಮಾತ್ರ ಖಾಯಂ ನೌಕರರಾಗಿದ್ದಾರೆ. 

ಕಿನ್ನಿಗೋಳಿಯಲ್ಲೂ ಅಂಚೆ ಸೇವೆ ಸ್ಥಗಿತ
ಕಿನ್ನಿಗೋಳಿ ಹಾಗೂ ಐಕಳ ಕೇಂದ್ರ ಕಚೇರಿಯ ವ್ಯಾಪ್ತಿಯಲ್ಲಿನ ಪುನರೂರು, ನಡುಗೋಡು, ಎಳತ್ತೂರು, ಏಳಿಂಜೆ, ಕೊಲ್ಲೂರು ಗ್ರಾಮೀಣ ಅಂಚೆ ಕಚೇರಿಗಳು ಮುಚ್ಚಿದ್ದವು. ಇದ ರಿಂದ ಈ ವ್ಯಾಪ್ತಿಯ ಲ್ಲಿ ಕಾಗದ ಪತ್ರ, ಮನಿಯಾರ್ಡರ್‌, ಪಾರ್ಸೆಲ್‌
ಗಳು ಬಟವಾಡೆ ಆಗದೆ ಬಾಕಿ ಉಳಿದಿದೆ. ಒಂದಡೆಯಲ್ಲಿ ಬ್ಯಾಂಕ್‌ ನೌಕರರ ಮುಷ್ಕರ ಇನ್ನೊಂದಡೆ ಗ್ರಾಮೀಣ ಅಂಚೆ ಕಚೇರಿಗಳು ಮುಷ್ಕರ ನಡೆಸುತ್ತಿರುವುದರಿಂದ ಗ್ರಾಮೀಣ ಭಾಗದ ಜನರು ಪರದಾಡುವಂತಾಗಿದೆ.

ಮೂಲ್ಕಿ: ಅಂಚೆ ಸೇವೆ ನಿರಾಂತಕ
ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಗಾಮೀಣ ಪ್ರದೇಶದ ಅಂಚೆ ಸಿಬಂದಿ ಮುಷ್ಕರ ಬಿಸಿ ಈ ವರೆಗೆ ಮೂಲ್ಕಿಯ ಅಂಚೆ ಉಪ ಕಚೇರಿಯ ವ್ಯಾಪಿಯಲ್ಲಿರುವ ಎಲ್ಲಾ ಬ್ರಾಂಚ್‌ ಉಪ ಕಚೇರಿಗಳ ಸೇವೆಯಲ್ಲಿ ಯಾವುದೇ ಆತಂಕ ಇಲ್ಲದೆ ಸಾರ್ವಜನಿಕರಿಗೆ ಅಂಚೆ ಸೇವೆ ಲಭ್ಯವಾಗುತ್ತಿದೆ. ಕಾರ್ನಾಡು ಸದಾಶಿವ ನಗರ, ಕಾರ್ನಾಡು,ಪಂಜನಡ್ಕ, ಕರ್ನಿರೆ,ಬಳ್ಕುಂಜೆ , ಅತಿಕಾರಿ ಬೆಟ್ಟು, ಕೆಂಚನಕೆರೆ, ಚಿತ್ರಾಪು,ಕಿಲ್ಪಾಡಿ ಮುಂತಾದೆಡೆಗಳ ಉಪ ಕಚೇರಿಯ ಸೇವೆಗಳು ಎಂದಿನಂತೆ ಯಾವುದೇ ವ್ಯತ್ಯಯ ಇಲ್ಲದೆ ನಡೆಯುತ್ತಿದೆ ಎಂದು ಅಂಚೆ ಮೂಲಗಳು ತಿಳಿಸಿವೆ.

ಟಾಪ್ ನ್ಯೂಸ್

BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್

BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್

ncp

NCP Vs NCP: ಶರದ್‌ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್‌ ಬಣ

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ

Bisanala-Dairy

Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!

PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ

PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ

Bantwala-Crime

Bantwala: ತುಂಬೆ ದೇವಸ್ಥಾನ ಕಳ್ಳತನ ಪ್ರಕರಣ: ಮೂವರು ಖದೀಮರ ಸೆರೆ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್

BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್

ncp

NCP Vs NCP: ಶರದ್‌ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್‌ ಬಣ

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ

Bisanala-Dairy

Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!

PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ

PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.