ಗ್ರಾಮೀಣ ಅಂಚೆ ನೌಕರರ ಪ್ರತಿಭಟನೆ 11ನೇ ದಿನಕ್ಕೆ
Team Udayavani, Jun 2, 2018, 2:35 AM IST
ಲಿಖಿತ ಭರವಸೆ ಸಿಗುವ ತನಕ ಪ್ರತಿಭಟನೆ ಮುಂದುವರಿಕೆ
ಕುಂದಾಪುರ: ಏಳನೇ ವೇತನ ಆಯೋಗದ ವರದಿಯನ್ನು ಜಾರಿಗೊಳಿಸುವಂತೆ ಆಗ್ರಹಿಸಿ ಪುತ್ತೂರು ಪ್ರಧಾನ ಅಂಚೆ ಕಚೇರಿಯ ಎದುರು ಗ್ರಾಮೀಣ ಅಂಚೆ ನೌಕರರು ನಡೆಸುತ್ತಿರುವ ಧರಣಿ ಶುಕ್ರವಾರ 11ನೇ ದಿನಕ್ಕೆ ಕಾಲಿಟ್ಟಿದೆ. ಗ್ರಾಮೀಣ ಅಂಚೆ ನೌಕರರ ಬೇಡಿಕೆ ಈಡೇರಿಸುವ ಕುರಿತು ಕೇಂದ್ರದ ನಾಯಕರೊಂದಿಗೆ ಮಾತುಕತೆ ನಡೆದಿದೆ. ಆದರೂ ಬೇಡಿಕೆ ಈಡೇರಿಸುವ ಕುರಿತು ಲಿಖೀತ ಭರವಸೆ ದೊರೆಯುವ ತನಕ ನಾವು ಪ್ರತಿಭಟನೆಯನ್ನು ಹಿಂದೆ ಪಡೆಯುವುದಿಲ್ಲ ಎಂದು ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದ ಬಂಟ್ವಾಳ ವಿಭಾಗದ ಕಾರ್ಯದರ್ಶಿ ಗಣೇಶ್ ಹೇಳಿದರು.
ದಿಲ್ಲಿ ಚಲೋ
ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ 10 ದಿನಗಳಿಂದ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸುತ್ತಿದ್ದೇವೆ. ಈ ಕುರಿತು ಮಾತುಕತೆಗಳು ನಡೆಯುತ್ತಿವೆ. ಆದರೆ ಲಿಖಿತ ಭರವಸೆಗಳು ದೊರೆತಿಲ್ಲ. ಶುಕ್ರವಾರ ‘ದೆಹಲಿ ಚಲೋ’ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದ್ದು, ಸಾವಿರಾರು ನೌಕರರು ಹೊಸದಿಲ್ಲಿಗೆ ತೆರಳಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಸರಕಾರದಿಂದ ಲಿಖಿತ ಭರವಸೆ ದೊರೆಯದಿದ್ದಲ್ಲಿ ಇಲಾಖೆ ನೌಕರರೂ ಜೂ. 4ರಿಂದ ನಮ್ಮ ಜೊತೆ ಕೈಜೋಡಿಸಲಿದ್ದು, ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಗ್ರಾಮೀಣ ಪ್ರದೇಶದಲ್ಲಿ ಅಂಚೆ ಇಲಾಖೆಯು ಹಣಕಾಸಿನ ಪ್ರಮುಖ ವ್ಯವಹಾರ ಕೇಂದ್ರವಾಗಿದೆ. ಹತ್ತು ದಿನಗಳಿಂದ ಪತ್ರಗಳು ಬಟವಾಡೆ ಆಗದೇ ಕಚೇರಿಯಲ್ಲಿಯೇ ಉಳಿದಿವೆ. ಶಾಲೆ, ಕಾಲೇಜುಗಳು ಆರಂಭಗೊಂಡಿದು, ಅಗತ್ಯ ದಾಖಲೆ ಪತ್ರಗಳು ಬಟವಾಡೆ ಆಗದೆ ಕಚೇರಿಯಲ್ಲಿಯೇ ರಾಶಿ ಬಿದ್ದಿವೆ. ಸಾರ್ವಜನಿಕರಿಗೆ ಇಷ್ಟೊಂದು ತೊಂದರೆ ಉಂಟಾಗುತ್ತಿದ್ದರೂ ಇಲಾಖೆ ಮಾತ್ರ ಇನ್ನೂ ಎಚ್ಚೆತ್ತುಕೊಂಡಿಲ್ಲ ಎಂದು ಆರೋಪಿಸಿದರು.
ಪುತ್ತೂರು ವಿಭಾಗದ ಸಂತೋಷ್, ಶೇಖರ್, ಲಿಯೋ ಡಿ’ಸೋಜಾ, ಸುಳ್ಯ ವಿಭಾಗದ ದಾಮೋದರ ಹಾಗೂ ರಘು ಬೆಳ್ತಂಗಡಿಯ ಕಮಲಾಕ್ಷ ಸಹಿತ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದರು. ಶನಿವಾರ ಹಾಗೂ ರವಿವಾರ ವಿಭಾಗ ಕಚೇರಿಗೆ ರಜೆ ಇರುವುದರಿಂದ ಕಚೇರಿ ಮುಂಭಾಗದಲ್ಲಿ ಧರಣಿ ಇರುವುದಿಲ್ಲ. ಆದರೆ ಗ್ರಾಮೀಣ ಅಂಚೆ ಕಚೇರಿಗಳನ್ನು ಬಂದ್ ಮಾಡಿ ಕರ್ತವ್ಯಕ್ಕೆ ಹಾಜರಾಗದೆ ಪ್ರತಿಭಟನೆ ಮುಂದುವರೆಯುತ್ತದೆ ಎಂದು ನೌಕರರು ತಿಳಿಸಿದ್ದಾರೆ.
ಅಂಚೆ ಕಚೇರಿ ಬೀಗ ಜಡಿದು ಪತ್ರಿಭಟನೆ
ಕಾರ್ಕಳ: ಕಮಲೇಶ್ಚಂದ್ರ ನೇತೃತ್ವದ ಏಕ ಸದಸ್ಯ ಸಮಿತಿಯ ಧನಾತ್ಮಕ ಶಿಫಾರಸುಗಳನ್ನು ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿ ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘ ಪುತ್ತೂರು ವಿಭಾಗದ ಎ.ಐ.ಜಿ.ಡಿ.ಎಸ್. ವತಿಯಿಂದ ಅನಿರ್ದಿಷ್ಟಾವಧಿ ಮುಷ್ಕರ 11ನೇ ದಿನಕ್ಕೆ ಮುಂದುವರಿದಿದ್ದು, ಜೂ. 1ರಂದು ಕಾರ್ಕಳದ ಪ್ರಧಾನ ಅಂಚೆ ಕಚೇರಿಯ ಗೇಟ್ ಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಕಮಲೇಶ್ಚಚಂದ್ರ ವರದಿ ಸರಕಾರಕ್ಕೆ ನೀಡಿ 16 ತಿಂಗಳು ಕಳೆದಿದೆ. ಆದರೆ ಹಣಕಾಸು ಇಲಾಖೆಗೆ ಅನುಮೋದಿಸಿದ ಕಡತ ಸುಮಾರು 2 ತಿಂಗಳಿನಿಂದ ಸಚಿವ ಸಂಪುಟ ಅನುಮೋದನೆ ಮಾಡಲು ಮೀನಮೇಷ ಎನಿಸುತ್ತಿದೆ. ಕಳೆದ 11ದಿನಗಳಿಂದ ಎಲ್ಲ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಲಾಗುತ್ತಿದ್ದು, ನಮಗೆ ನ್ಯಾಯ ದೊರೆತಿಲ್ಲ. ಸರಕಾರ ಎಚ್ಚೆತ್ತುಕೊಳ್ಳಬೇಕು ನೌಕರರು ಆಗ್ರಹಿಸಿದರು.
150ಕ್ಕೂ ಅಧಿಕ ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದು, ಕಳೆದ 11ದಿನಗಳಿಂದ ಪೋಸ್ಟ್ ಗಳು, ಮನಿ ಆರ್ಡರ್, ಪಿಂಚಣಿಗಳು, ಇನ್ನಿತರ ಪತ್ರಗಳು ಸಾರ್ವಜನಿಕರಿಗೆ ಲಭ್ಯಯವಾಗದೇ ಕಚೇರಿಯಲ್ಲೇ ಉಳಿದಿದೆ ಇದರಿಂದಾಗಿ ಜನರಿಗೆ ತೊಂದರೆಯಾಗುತ್ತಿದೆ. ಆದರೂ ಸರಕಾರ ಸುಮ್ಮನಾಗಿದೆ ಎಂದು ದೂರಿದರು. ಪ್ರತಿಭಟನೆಯಲ್ಲಿ ಭಾಗೀಯ ಅಧ್ಯಕ್ಷ ವಿಠಲ ಎಸ್. ಪೂಜಾರಿ, ವಿಭಾಗೀಯ ಕಾರ್ಯದರ್ಶಿ ಸುನಿಲ್ ದೇವಾಡಿಗ, ಶಕೀಲ, ಜಗತ್ಪಾಲ ಹೆಗ್ಡೆ , ವಿಜೇಂದ್ರ ಶೆಣೈ, ಕೆದಿಂಜೆ ಅಶೋಕ್, ವಸಂತಿ, ದಿನೇಶ್ ಪ್ರಭು, ಶಂಭು ಹೆಬ್ರಿ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Online Fraud: ಸುರಕ್ಷೆಗೆ ಹೀಗೆ ಮಾಡಿ: ಸದಾ ಜಾಗರೂಕರಾಗಿರಿ
Ajekar: ಬಾಲಕೃಷ್ಣ ಪೂಜಾರಿ ಪ್ರಕರಣ: ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿ ಸಾವು ಉಲ್ಲೇಖ
Udupi-Dakshina Kannada: ಕರ್ನಾಟಕ ಜಾನಪದ ಪ್ರಶಸ್ತಿ ಪ್ರಕಟ
ಮೀನುಗಾರಿಕೆ ಬಂದರುಗಳ ಕಾಮಗಾರಿ ಶೀಘ್ರ ಆರಂಭಿಸಿ: ಅಧಿಕಾರಿಗಳ ಸಭೆಯಲ್ಲಿ ಕೋಟ ಸೂಚನೆ
Udupi: ಗೀತಾರ್ಥ ಚಿಂತನೆ-84: ಮಧುವಾದದ್ದನ್ನು ನಾಶಪಡಿಸುವವ ಮಧುಸೂದನ
MUST WATCH
ಹೊಸ ಸೇರ್ಪಡೆ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
BBK11: ಕ್ಯಾಪ್ಟನ್ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.