ಕಾಪು ಪೇಟೆ ಜನತೆಯ ದಶಕಗಳ ಸಮಸ್ಯೆಗೆ ಕೊನೆಗೂ ಮುಕ್ತಿ!
Team Udayavani, Jun 2, 2018, 3:00 AM IST
ವಿಶೇಷ ವರದಿ – ಕಾಪು: ಕಾಪು ಪೇಟೆಯ ಜನತೆಯನ್ನು ದಶಕಗಳಿಂದಲೂ ಕಾಡುತ್ತಿದ್ದ ಮಳೆ ನೀರು ಹರಿಯುವ ಚರಂಡಿ ಸಮಸ್ಯೆಗೆ ಶಾಶ್ವತ ಮುಕ್ತಿ ಒದಗಿಸಿ ಕೊಡುವ ನಿಟ್ಟಿನಲ್ಲಿ ಪುರಸಭೆ ಹೆಜ್ಜೆಯನ್ನಿರಿಸಿದೆ. ಪ್ರಥಮ ಹಂತದಲ್ಲಿ ಚರಂಡಿ ಪ್ರದೇಶದ ಒತ್ತುವರಿ ತೆರವುಗೊಳಿಸಿ, ಚರಂಡಿಯ ಹೂಳೆತ್ತುವಿಕೆ ನಡೆಸುವ ಕಾಮಗಾರಿಗೆ ಚಾಲನೆ ನೀಡಲಾಗಿದೆ.
ಎಲ್ಲಿಂದ ಎಲ್ಲಿಯವರೆಗೆ?
ಪೊಲಿಪು ಮಸೀದಿಯಿಂದ ಹಿಡಿದು ಕಾಪು ವಿದ್ಯಾನಿಕೇತನ ಜಂಕ್ಷನ್ವರೆಗಿನ ಸುಮಾರು 600 ಮೀಟರ್ ದೂರದ ವರೆಗಿನ ಪ್ರದೇಶದಲ್ಲಿ ಯಾವುದೇ ರೀತಿಯಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆಗಳಿಲ್ಲ. ಕಾಪು ಪೇಟೆಯಲ್ಲಿ 1 ಗಂಟೆ ಜೋರಾಗಿ ಮಳೆ ಸುರಿದರೆ, ಅವಾಂತರ ಸೃಷ್ಟಿಯಾಗುತ್ತಿತ್ತು. ಮೊನ್ನೆ ಮಂಗಳವಾರದ ಮಳೆ ಅವಾಂತರ, ಒಳಚರಂಡಿ ಯೋಜನೆಯ ಮ್ಯಾನ್ ಹೋಲ್ ಕುಸಿತದ ಬಳಿಕ ಎಚ್ಚೆತ್ತುಕೊಂಡಿರುವ ಕಾಪು ಪುರಸಭೆ ಚರಂಡಿ ಕಾಮಗಾರಿ ಪ್ರಾರಂಭಿಸಿದೆ.
16 ವರ್ಷಗಳ ಬಳಿಕ ಕಾಮಗಾರಿ
ಕಾಪು ಗ್ರಾಮ ಪಂಚಾಯತ್ ಅಸ್ತಿತ್ವದಲ್ಲಿದ್ದಾಗ 2001-2002ನೇ ಇಸವಿಯಲ್ಲಿ ಕಾಪು ಅಭಿವೃದ್ಧಿ ಸಮಿತಿಯ ನೇತೃತ್ವದಲ್ಲಿ ಕಾಪು ಪೇಟೆಯಲ್ಲಿ ಚರಂಡಿ ರಚನೆ ಕಾಮಗಾರಿ ನಡೆದಿತ್ತು. ಬಳಿಕ ಚರಂಡಿ ರಚನೆಗೆ ಚಾಲನೆ ನೀಡಲಾಗಿದ್ದರೂ ಅರ್ಧಕ್ಕೇ ನಿಲುಗಡೆಯಾಗಿತ್ತು. ಬಳಿಕ ಹೊಸದಾಗಿ ಪೇಟೆಯ ಒಳಚರಂಡಿ ನೀರು ಸರಬರಾಜು ಯೋಜನೆಗಾಗಿ 3 ಕೋ. ರೂ. ವೆಚ್ಚದ ಕಾಮಗಾರಿಗೆ ಚಾಲನೆ ನೀಡಲಾಗಿತ್ತು.
ಕುಸಿತಕ್ಕೂ ಚರಂಡಿ ಕಾರಣ
ಚರಂಡಿ ವ್ಯವಸ್ಥೆಯಿಲ್ಲದ ಕಾರಣ ಒಳ ಚರಂಡಿ ನೀರು ಸರಬರಾಜು ಯೋಜನೆಯ ಕಾಮಗಾರಿಯ ಸಂದರ್ಭ ಅಳವಡಿಸಲಾಗಿದ್ದ ಮ್ಯಾನ್ಹೋಲ್ ಮತ್ತು ಅದರ ಪೈಪ್ ಲೈನ್ ನೊಳಗೆ ಮಳೆ ನೀರು ನುಗ್ಗಿ ಮ್ಯಾನ್ ಹೋಲ್ ಕುಸಿತಕ್ಕೊಳಗಾಗಿತ್ತು. ಕಾಪು ಅಭಿವೃದ್ಧಿ ಸಮಿತಿ ಅಧ್ಯಕ್ಷ ಮತ್ತು ಸ್ವತಃ ಗುತ್ತಿಗೆದಾರರಾಗಿರುವ ವಾಸುದೇವ ಶೆಟ್ಟಿ ಅವರು ಮ್ಯಾನ್ಹೋಲ್ ಕುಸಿತಕ್ಕೆ ಅಸಮರ್ಪಕ ಚರಂಡಿ ವ್ಯವಸ್ಥೆಯೇ ಮುಖ್ಯ ಕಾರಣ ಎಂದು ಆರೋಪಿಸಿದ್ದರು.
ಜಿಲ್ಲಾಧಿಕಾರಿ ಅನುಮತಿ ಪಡೆದು ಕಾಮಗಾರಿ
ಪೇಟೆಯಲ್ಲಿ ಸಮರ್ಪಕ ಚರಂಡಿಯ ವ್ಯವಸ್ಥೆಯಿಲ್ಲದೇ ಮಳೆ ನೀರು ಹರಿಯಲು ತುಂಬಾ ತೊಂದರೆಯಾಗುತ್ತಿತ್ತು. ಜಿಲ್ಲಾಧಿಕಾರಿಗಳ ಒಪ್ಪಿಗೆ ಪಡೆದು ತತ್ಕ್ಷಣಕ್ಕೆ ಚರಂಡಿ ಬಿಡಿಸುವಿಕೆ, ಅತಿಕ್ರಮಣ ತೆಗೆಯುವಿಕೆ ಮತ್ತು ಹೂಳೆತ್ತುವಿಕೆ ಕಾಮಗಾರಿ ನಡೆಸಲಾಗುತ್ತಿದೆ.
– ಶೀನ ನಾಯ್ಕ, ಪುರಸಭೆ ಮುಖ್ಯಾಧಿಕಾರಿ
ಪುರಸಭೆ ಕೆಲಸ ಸ್ವಾಗತಾರ್ಹ
ಪುರಸಭೆ ವತಿಯಿಂದ ಕಾಪು ಪೇಟೆಯಲ್ಲೇ ಚರಂಡಿ ರಚನೆ ಮತ್ತು ಚರಂಡಿ ಹೂಳೆತ್ತುವಿಕೆ ಕಾಮಗಾರಿಗೆ ಚಾಲನೆ ದೊರಕಿರುವುದು ಸಂತಸದಾಯಕವಾಗಿದೆ. ಈ ಕಾಮಗಾರಿ ಇಡೀ ಕಾಪು ಪೇಟೆಯಲ್ಲಿ ನಡೆಯಬೇಕಿದೆ. ಈ ಕೆಲಸ ಯಾವತ್ತೋ ನಡೆಯಬೇಕಿತ್ತು.
– ಯೋಗೀಶ್ ರೈ, ಕಾಪು ಗ್ರಾ.ಪಂ. ಮಾಜಿ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ಬಾವಿಗೆ ಬಿದ್ದು ವ್ಯಕ್ತಿ ಸಾವು; ಮೃತದೇಹ ಮೇಲಕ್ಕೆತ್ತಿದ ಅಗ್ನಿಶಾಮಕ ಪಡೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
Udupi: ಮೀನುಗಾರಿಕೆ ಕಾರ್ಮಿಕ ಸಾವು; ಪ್ರಕರಣ ದಾಖಲು
MUST WATCH
ಹೊಸ ಸೇರ್ಪಡೆ
Team India: ದ.ಆಫ್ರಿಕಾ ವಿರುದ್ದದ ಗೆಲುವಿನೊಂದಿಗೆ ಪಾಕ್ ದಾಖಲೆ ಮುರಿದ ಟೀಂ ಇಂಡಿಯಾ
Udupi: ಸಿಎನ್ಜಿ ಪೂರೈಕೆಯಲ್ಲಿ ಕೊರತೆಯಾಗದಂತೆ ಕ್ರಮ ಕೈಗೊಳ್ಳಿ: ಸಂಸದ ಕೋಟ ಸೂಚನೆ
BGT: ಟೀಂ ಇಂಡಿಯಾಗೆ ಮತ್ತೆ ಆಘಾತ; ವಿರಾಟ್, ರಾಹುಲ್ ಬಳಿಕ ಮತ್ತೊಬ್ಬ ಬ್ಯಾಟರ್ ಗೆ ಗಾಯ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.