ಅರ್ಧ ಸ್ವತ್ತನ್ನು ದಾನ ಮಾಡಲಿರುವ ಬಿ.ಆರ್.ಶೆಟ್ಟಿ
Team Udayavani, Jun 2, 2018, 9:25 AM IST
ನ್ಯೂಯಾರ್ಕ್: ಇತ್ತೀಚೆಗಷ್ಟೇ ಬಿಲ್ ಗೇಟ್ಸ್ ಮತ್ತು ವಾರೆನ್ ಬಫೆಟ್ರಂತಹ ಶತಕೋ ಟ್ಯಧಿಪತಿಗಳು ತಮ್ಮ ಸಂಪತ್ತನ್ನು ದತ್ತಿ ಕಾರ್ಯಕ್ಕಾಗಿ ಬಳಸುವುದನ್ನು ಆರಂಭಿಸಿದ ಬಳಿಕ ಈಗ ದಕ್ಷಿಣ ಕನ್ನಡ ಮೂಲದ ಉದ್ಯಮಿ ಬಿ.ಆರ್. ಶೆಟ್ಟಿ ಕೂಡ ಈ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ತನ್ನ ಒಟ್ಟು ಸ್ವತ್ತಿನ ಅರ್ಧಕ್ಕಿಂತಲೂ ಹೆಚ್ಚಿನ ಮೊತ್ತವನ್ನು ದತ್ತಿ ಕಾರ್ಯಕ್ಕಾಗಿ ಮೀಸಲಿಟ್ಟಿದ್ದಾರೆ. ಎನ್ಎಂಸಿ ಹೆಲ್ತ್ ಹಾಗೂ ಫಿನಾಬಿಎಲ್ಆರ್ ಎಂಬ ಕಂಪೆನಿಗಳನ್ನು ಶೆಟ್ಟಿ ಹೊಂದಿದ್ದಾರೆ. ಎನ್ಎಂಸಿ ಹೆಲ್ತ್ ಅಡಿಯಲ್ಲಿ ಆಸ್ಪತ್ರೆಗಳನ್ನು ನಿರ್ಮಿಸಿದ್ದು, 13ಕ್ಕೂ ಹೆಚ್ಚು ದೇಶಗಳಲ್ಲಿ ಆಸ್ಪತ್ರೆಗಳಿವೆ. ಯುನೈಟೆಡ್ ಅರಬ್ ಎಮಿರೇಟ್ಸ್ ಕೇಂದ್ರವಾಗಿರಿಸಿಕೊಂಡು ಭಾರತ, ಈಜಿಪ್ಟ್ ಹಾಗೂ ನೇಪಾಲದಲ್ಲೂ ಇವರ ವಿವಿಧ ಉದ್ಯಮವಿದೆ. ಅಷ್ಟೇ ಅಲ್ಲದೆ ಹಲವು ಶಿಕ್ಷಣ ಸಂಸ್ಥೆಗಳಿಗೂ ಅವರು ಹಣಕಾಸು ನೆರವು ನೀಡಿದ್ದಾರೆ.
ತಮ್ಮ ಎಷ್ಟು ಸಂಪತ್ತನ್ನು ದತ್ತಿ ಕಾರ್ಯಕ್ಕಾಗಿ ಮೀಸಲಿರಿಸಿದ್ದಾರೆ ಎಂಬುದನ್ನು ಶೆಟ್ಟಿ ಬಹಿರಂಗಗೊಳಿಸಿಲ್ಲ. ಆದರೆ ಇತ್ತೀಚೆಗೆ ಫೋಬ್ಸ್ì ನಿಯತಕಾಲಿಕೆ ಪಟ್ಟಿ ಮಾಡಿದ ಶ್ರೀಮಂತ ಉದ್ಯಮಿಗಳ ಪಟ್ಟಿಯಲ್ಲಿ ಶೆಟ್ಟಿ ಆಸ್ತಿಯನ್ನು 27 ಸಾವಿರ ಕೋಟಿ ರೂ. ಎಂದು ಉಲ್ಲೇಖೀಸಿತ್ತು. ಹೀಗಾಗಿ 13,500 ಕೋಟಿ ರೂಪಾಯಿಯನ್ನು ದಾನಕ್ಕಾಗಿ ಮೀಸಲಿರಿಸುವ ಸಾಧ್ಯತೆ ಇದೆ. ಗಿವಿಂಗ್ ಪ್ಲೆಡ್ಜ್ ಎಂಬ ಅಭಿಯಾನವನ್ನು ಆರಂಭಿಸಲಾಗಿದ್ದು, ಇತ್ತೀಚೆಗೆ 14 ಉದ್ಯಮಿಗಳು ಈ ಪಟ್ಟಿಗೆ ಸೇರಿದ್ದಾರೆ. ತಮ್ಮ ಅರ್ಧಕ್ಕಿಂತಲೂ ಹೆಚ್ಚಿನ ಸ್ವತ್ತನ್ನು ದಾನ ದತ್ತಿಗಳಿಗಾಗಿ ಮೀಸಲಿಡಬೇಕು ಎಂಬುದೇ ಗಿವಿಂಗ್ ಪ್ಲೆಡ್ಜ್ನ ಧ್ಯೇಯವಾಗಿದೆ. ಭಾರತೀಯ ಮೂಲದ ಶಮ್ಶೀರ್ ಶಬೀನಾ ವಯಲಿಲ್ ಕೂಡ ಈ ಪಟ್ಟಿಗೆ ಸೇರಿದ್ದಾರೆ. ಯುಎಇ ಮೂಲದ ವಿಪಿಎಸ್ ಹೆಲ್ತ್ಕೇರ್ನ ಸಂಸ್ಥಾಪಕರಾಗಿದ್ದು, ಅಮಾನತ್ ಹೋಲ್ಡಿಂಗ್ಸ್ ಎಂಬ ಶಿಕ್ಷಣ ಹಾಗೂ ಆರೋಗ್ಯ ಸೇವೆ ಹೂಡಿಕೆ ಕಂಪೆನಿಯ ಉಪಾಧ್ಯಕ್ಷರೂ ಆಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bangladesh:ಇಸ್ಕಾನ್ ನಿಷೇಧಿಸಲು ನಿರಾಕರಿಸಿದ ಬಾಂಗ್ಲಾದೇಶ ಹೈಕೋರ್ಟ್,ಸರ್ಕಾರಕ್ಕೆ ಮುಖಭಂಗ
Bengaluru ಭಯೋ*ತ್ಪಾದಕ ಚಟುವಟಿಕೆ ಆರೋಪಿ, ಉ*ಗ್ರ ಖಾನ್ ರುವಾಂಡದಿಂದ ಭಾರತಕ್ಕೆ ಗಡಿಪಾರು!
Pakistan: ಇಮ್ರಾನ್ ಬಿಡುಗಡೆಗೆ ಬೆಂಬಲಿಗರ ಪ್ರತಿಭಟನೆ: ಹಿಂಸಾಚಾರ, ಸಾವಿರಾರು ಜನರ ಬಂಧನ
Appoint: ಲಾಕ್ಡೌನ್ ಟೀಕಿಸಿದ್ದ ಜಯ ಭಟ್ಟಾಚಾರ್ಯ ಅಮೆರಿಕ ಆರೋಗ್ಯ ಸಂಸ್ಥೆ ಮುಖ್ಯಸ್ಥ
Pakistan: ಪೊಲೀಸರ ಕಾರ್ಯಾಚರಣೆಗೆ ಪಿಟಿಐ ಪ್ರತಿಭಟನೆ ರದ್ದು!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Bajpe: ಹೆಜ್ಜೇನು ಕಡಿತದಿಂದ ದಿನಪತ್ರಿಕೆ ವಿತರಕ ಸಾವು
BBK11: ಆರಂಭದಿಂದಲೂ ಮಂಜು ಮೋಸದಿಂದಲೇ ಆಡುತ್ತಾ ಬರುತ್ತಿದ್ದಾರೆ.. ಮೋಕ್ಷಿತಾ ಕಣ್ಣೀರು
Adani ವಿದ್ಯುತ್ ಖರೀದಿ ಅಕ್ರಮ: ಆರೋಪ ತಳ್ಳಿ ಹಾಕಿದ ಜಗನ್ ರೆಡ್ಡಿ
Mangaluru: ಗಾಂಜಾ ಸೇವನೆ; ಪ್ರತ್ಯೇಕ ಪ್ರಕರಣ; ಇಬ್ಬರು ವಶಕ್ಕೆ
IFFI 2024; ಟಾಕ್ಸಿಕ್ ಗೆ ಅತ್ಯುತ್ತಮ ಪ್ರಶಸ್ತಿ, ವಿಕ್ರಾಂತ್ ಮಸ್ಸೆಗೆ ವಾರ್ಷಿಕ ಪುರಸ್ಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.