ಮನೆಯ ಹತ್ತಿರದಲ್ಲೇ ಅಪಾಯಕಾರಿಯಾಗಿದ್ದ ಮರದ ರೆಂಬೆ ತೆರವು
Team Udayavani, Jun 2, 2018, 11:05 AM IST
ಮಹಾನಗರ: ಮನೆಯ ಹತ್ತಿರದಲ್ಲೇ ಅಪಾಯಕಾರಿ ಮರವಿದ್ದು, ಈ ಬಗ್ಗೆ ಸಂಬಂಧಪಟ್ಟವರಿಗೆ ತಿಳಿಸಿದರೂ ಕ್ರಮ ಕೈಗೊಳ್ಳುತ್ತಿಲ್ಲವೆಂದು ಸುದಿನಕ್ಕೆ ಮೊರೆ ಇಟ್ಟ ಕರಂಗಲ್ಪಾಡಿ ನಿವಾಸಿ ಜಿ. ಹರಿರಾಮ ಶೆಣೈ ಈಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಕಾರಣ, ಮಹಾನಗರ ಪಾಲಿಕೆಯ ಮೇಯರ್ ಭಾಸ್ಕರ್ ಕೆ. ನಿರ್ದೇಶನದಲ್ಲಿ ಸಂಬಂಧಪಟ್ಟ ಅಧಿಕಾರಿಗಳೂ ಸೇರಿದಂತೆ ಸುಮರು 40 ಜನರ ತಂಡವೊಂದು ಅಪಾಯಕಾರಿ ಮರದ ರೆಂಬೆಗಳನ್ನು ಕಡಿದು ಅನಾಹುತವಾಗದಂತೆ ಶುಕ್ರವಾರ ಕ್ರಮ ಕೈಗೊಂಡಿದ್ದಾರೆ. ನಗರದ ಜೈಲ್‌ರೋಡ್‌ನ ಸುಬ್ರಹ್ಮಣ್ಯ ಸಭಾದ ಬಳಿ ಬೃಹತ್ ಗಾತ್ರದ ಮರವೊಂದು ಅಪಾಯಕಾರಿ ಸ್ಥಿತಿಯಲ್ಲಿದ್ದು, ಅದರ ರೆಂಬೆಗಳನ್ನು ತೆರವುಗೊಳಿಸುವಂತೆ ಮೂರು
ವರ್ಷ ಗಳಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರಿತ್ತ ಬಗ್ಗೆ ಹಾಗೂ ಕ್ರಮ ಕೈಗೊಳ್ಳದಿರುವ ಕುರಿತಾಗಿ ಸ್ಥಳೀಯ ನಿವಾಸಿ ಹರಿರಾಮ ಶೆಣೈ ಸುದಿನಕ್ಕೆ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಮೇ 24ರ ಸುದಿನದಲ್ಲಿ ಅಪಾಯಕಾರಿ ಮರದ ಸಚಿತ್ರ ವರದಿ ಪ್ರಕಟಗೊಂಡಿತ್ತು. ಪರಿಸ್ಥಿತಿಯ ಗಂಭೀರತೆ ಅರಿತ ಮಹಾನಗರ ಪಾಲಿಕೆ ಶುಕ್ರವಾರ ಅರಣ್ಯ ಇಲಾಖೆ, ಮೆಸ್ಕಾಂ ಅಧಿಕಾರಿಗಳ ಜತೆ ಮಾತುಕತೆ ನಡೆಸಿ ಬೃಹತ್ ಗಾತ್ರದ ಮರದ ರೆಂಬೆಗಳನ್ನು ಕಡಿಯುವ
ಕೆಲಸ ಕೈಗೊಂಡರು. ಅದಕ್ಕೂ ಮೊದಲು ಮೆಸ್ಕಾಂ ಇಲಾಖೆ ವಿದ್ಯುತ್‌ತಂತಿಯನ್ನು ತೆರವುಗೊಳಿಸಿ ಸಹಕರಿಸಿದರು.
ಸಮಸ್ಯೆ ಬಗೆಹರಿದಿರುವುದು ಸಂತಸ ತಂದಿದೆ
ಈ ಬಗ್ಗೆ ಸುದಿನದೊಂದಿಗೆ ಸಂತಸ ಹಂಚಿಕೊಂಡ ದೂರುದಾರರಾದ ಹರಿರಾಮ ಶೆಣೈ, ಈ ಮರ ಸುಮಾರು 80 ವರ್ಷಕ್ಕಿಂತಲೂ ಹಳೆ ಯ ದಾಗಿದ್ದು, ಗಾಳಿ ಮಳೆ ಬರುವಾಗ ಸಹಜವಾಗಿಯೇ ಆತಂಕಗೊಳ್ಳುತ್ತಿದ್ದೆವು. 2015 ರಿಂದಲೇ ಅರಣ್ಯ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರಿತ್ತಿದ್ದೆ. ಹಿಂದಿನ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಕೊಂಬೆಗಳನ್ನು ಕತ್ತರಿಸಲು ಕ್ರಮಕೈಗೊಳ್ಳಬೇಕೆಂದು ಹಿಂಬರಹ ನೀಡಿದ್ದರೂ ಪ್ರಯೋಜನವಾಗಿಲ್ಲ. ಇದೀಗ
ಸುದಿನದಲ್ಲಿ ಸುದ್ದಿ ಪ್ರಕಟವಾದ ಬಳಿಕ ಮೇಯರ್ ಭಾಸ್ಕರ್ ಕೆ. ಅವರು ಸೂಕ್ತ ಕ್ರಮಕೈಗೊಂಡಿದ್ದು, ಸಮಸ್ಯೆ ಬಹೆಹರಿದಿರುವುದು ಸಂತಸ ತಂದಿದೆ. ಅದಕ್ಕಾಗಿ ಪತ್ರಿಕೆ ಮತ್ತು ಮೇಯರ್ ಅವರನ್ನು ಅಭಿನಂದಿಸುತ್ತೇನೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.