ಗ್ರಾಮೀಣ ಅಂಚೆ ಸೇವಕರ ಮುಷ್ಕರ 12ನೇ ದಿನಕ್ಕೆ
Team Udayavani, Jun 2, 2018, 11:07 AM IST
ಮಂಗಳೂರು: ಕೇಂದ್ರ ಸರಕಾರಿ ನೌಕರರಿಗೆ ಏಳನೇ ವೇತನ ಆಯೋಗ ಅನುಷ್ಠಾನಗೊಂಡು ಒಂದು ವರ್ಷ ಕಳೆದಿದ್ದರೂ ಅಂಚೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 2.42 ಲಕ್ಷ ಗ್ರಾಮೀಣ ಅಂಚೆ ಸೇವಕರಿಗೆ ಇನ್ನೂ ಅದರ ಪ್ರಯೋಜನ ಸಿಕ್ಕಿಲ್ಲ ಎಂದು ದೇಶಾದ್ಯಂತ ಅಂಚೆ ಸೇವಕರು ನಡೆಸುತ್ತಿರುವ ಮುಷ್ಕರ 12ನೇ ದಿನಕ್ಕೆ ಕಾಲಿಟ್ಟಿದೆ.
ಅಖೀಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘ, ರಾಷ್ಟ್ರೀಯ ಗ್ರಾಮೀಣ ಅಂಚೆ ನೌಕರರ ಸಂಘ ಸೇರಿದಂತೆ ರಾಷ್ಟ್ರಮಟ್ಟದಲ್ಲಿ ನಾಲ್ಕು ಸಂಘಗಳಿಂದ ನಡೆಯುತ್ತಿರುವ ಗ್ರಾಮೀಣ ಅಂಚೆ ಸೇವಕರ ಮುಷ್ಕರ ಶುಕ್ರವಾರ 11ನೇ ದಿನ ಪೂರೈಸಿದೆ.
ಗ್ರಾಮೀಣ ಅಂಚೆ ನೌಕರರ ವೇತನ ಪರಿಷ್ಕರಣೆಗಾಗಿ 2015ರಲ್ಲಿ ಕೇಂದ್ರ ಸರಕಾರ ಕಮಲೇಶ್‌ಚಂದ್ರ ನೇತೃತ್ವದ ಏಕಸದಸ್ಯ ಸಮಿತಿ ನೇಮಿಸಿತ್ತು. ಈ ಸಮಿತಿ ಶಿಫಾರಸುಗಳನ್ನು 2016ರ ನ. 24ರಂದು ಸರಕಾರಕ್ಕೆ ಸಲ್ಲಿಸಿದೆ.
ಸುಮಾರು 17 ತಿಂಗಳ ಬಳಿಕ ಇದರ ಪುನರ್‌ಪರಿಶೀಲನೆಗಾಗಿ ಉಪಸಮಿತಿ ನೇಮಿಸಿದ್ದು, ಅದರ ಪರಿಷ್ಕೃತ ವರದಿಗೆ ಕೇಂದ್ರ ಆರ್ಥಿಕ ಸಚಿವಾಲಯ ಅನುಮೋದನೆ ನೀಡಿದೆ, ಸಚಿವ ಸಂಪುಟದ ಅನುಮೋದನೆಗೆ ಕಾಯಲಾಗುತ್ತಿದೆ.
ಸಂಘದ ಹೋರಾಟಕ್ಕೆ ಸರಕಾರದಿಂದ 18 ತಿಂಗಳಿಂದ ಯಾವುದೇ ಉತ್ತರ ಸಿಗದಿದ್ದಾಗ ಮೇ 22ರಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ.
ಪ್ರಸ್ತುತ ಗ್ರಾಮೀಣ ಅಂಚೆ ಕಚೇರಿಗಳು ಮುಚ್ಚಿದ್ದು, ಬಟವಾಡೆ ಅಸ್ತವ್ಯಸ್ತಗೊಂಡಿದೆ. ಇದರಿಂದ ಸರಕಾರಿ ಸೌಲಭ್ಯಗಳು ಲಭಿಸದೆ ಫಲಾನುಭವಿಗಳು ಕಷ್ಟ ಅನುಭವಿಸುವಂತಾಗಿದೆ. ರೈಲ್ವೇ ಸ್ಟೇಷನ್‌ನಲ್ಲೂ ಅಂಚೆ ಪತ್ರಗಳನ್ನು ವಿಂಗಡಿಸುವ ಹಾಗೂ ಅದನ್ನು ಆಯಾಯ ಪ್ರದೇಶಗಳ ರೈಲಿಗೆ ಹಾಕುವ ಕೆಲಸಕ್ಕೂ ಅಂಚೆ ಸೇವಕರು ಬಾರದ ಕಾರಣ ಕಳೆದ ಕೆಲವು ದಿನಗಳಿಂದ ಅಂಚೆ ಪತ್ರಗಳು ಬಾಕಿ ಉಳಿದಿದ್ದವು. ಶುಕ್ರವಾರ ಅಂಚೆ ನೌಕರರು ಮಧ್ಯಪ್ರವೇಶಿಸಿ ಅಂಚೆ ವಿಲೇವಾರಿ ಮಾಡಲು ಸಹಕರಿಸಿದರು.
ಸೋಮವಾರದಿಂದ ಅಂಚೆ ನೌಕರರು ಪ್ರತಿಭಟನೆಯಲ್ಲಿ ಭಾಗಿ
ಕಳೆದ 11 ದಿನಗಳಿಂದ ಅಂಚೆ ಸೇವಕರು ಮಾತ್ರ ಅನಿರ್ದಿಷ್ಟಾವಧಿ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಸೋಮವಾರದಿಂದ ಅವರೊಂದಿಗೆ ಅಂಚೆ ನೌಕರರು ಭಾಗಿಯಾಗಲಿದ್ದಾರೆ. ಅಂಚೆ ಸೇವಕರ ಬೇಡಿಕೆಗೆ ಕೇಂದ್ರ ಸರಕಾರ ಸ್ಪಂದಿಸುತ್ತಿಲ್ಲ. ಹೀಗೆ ಮುಂದುವರಿದರೆ ಅವರೊಂದಿಗೆ ನಾವು ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದೇವೆ ಎಂದು ಅಂಚೆ ನೌಕರರು ಉದಯವಾಣಿಗೆ ತಿಳಿಸಿದ್ದಾರೆ.
ಜೂ. 4ರಿಂದ ಎಲ್ಲ ಸಂಘಟನೆಗಳಿಂದ ಮುಷ್ಕರ
ಉಡುಪಿ: ಗ್ರಾಮೀಣ ಅಂಚೆ ನೌಕರರ ಮುಷ್ಕರ ಶನಿವಾರಕ್ಕೆ 12ನೆಯ ದಿನಕ್ಕೆ ಕಾಲಿರಿಸುತ್ತಿದೆ. ಜೂ. 4ರಿಂದ ಅಂಚೆ ಇಲಾಖೆಯ ಎಲ್ಲ ನೌಕರರ ಸಂಘಟನೆಗಳೂ ಮುಷ್ಕರಕ್ಕೆ ಕರೆ ನೀಡಿರುವುದಾಗಿ ಮುಖಂಡರು ತಿಳಿಸಿದ್ದಾರೆ.
ಶನಿವಾರ ಉಡುಪಿ ಪ್ರಧಾನ ಅಂಚೆ ಕಚೇರಿ ಎದುರಿನಿಂದ ಪ್ರತಿಭಟನ ಮೆರವಣಿಗೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಲಿದೆ. ಮಂಗಳೂರು, ಪುತ್ತೂರು, ಕಾರ್ಕಳದಲ್ಲಿ ಶನಿವಾರ ಪ್ರಧಾನ ಅಂಚೆ ಕಚೇರಿ ಎದುರು ಮುಷ್ಕರ ನಡೆಯಲಿದೆ. ಉಡುಪಿಯಲ್ಲಿ ಮುಷ್ಕರ ನಿರತರನ್ನು ಸಂಸದರ ಪರವಾಗಿ ಜಿ.ಪಂ. ಸದಸ್ಯೆ ಗೀತಾಂಜಲಿ ಸುವರ್ಣ ಭೇಟಿಯಾದರು ಮತ್ತು ಸಂಸದರು ಅಂಚೆ ನೌಕರರ ಸಂಘಟನೆ ನಾಯಕರೊಂದಿಗೆ ದೂರವಾಣಿಯಲ್ಲಿ ಮಾತನಾಡಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ದನ ತೋನ್ಸೆ, ಹರೀಶ್ ಕಿಣಿ ಭೇಟಿ ನೀಡಿದರು.
ಕೇಂದ್ರದ ಗಮನ ಸೆಳೆಯುವೆ: ಸಂಸದ ನಳಿನ್
ಮೂಡಬಿದಿರೆ: ಗ್ರಾಮೀಣ ಅಂಚೆ ನೌಕರರ ಮುಷ್ಕರದ ಬಗ್ಗೆ ಸಂಬಂಧಪಟ್ಟ ಸಚಿವರ ಜತೆ ಮಾತುಕತೆ ನಡೆಸಿ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಸಂಸದ ನಳಿನ್ ಕುಮಾರ್ ಕಟೀಲು ತಿಳಿಸಿದರು. ಮೂಡಬಿದಿರೆಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಅಂಚೆ ಇಲಾಖೆಗೆ ಹೊಸ ಹೊಸ ಯೋಜನೆಗಳನ್ನು ಜೋಡಿಸುವ ಮುಖಾಂತರ ಅಂಚೆ ಇಲಾಖೆಯ ಭವಿಷ್ಯವನ್ನು ರೂಪಿಸಿದ್ದಾರೆ. ಅದೇ ರೀತಿ ಅಂಚೆ ಇಲಾಖೆಯ ನೌಕರರ ಸಮಸ್ಯೆಗಳನ್ನು ಆಲಿಸಿ, ಪರಿಹಾರ ಮಾರ್ಗವನ್ನು ತೋರಿಸಿಕೊಡುವ ಭರವಸೆ ಇದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Subramanya: ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರಭಟನಾ ಸಭೆ ಆರಂಭ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್; ಗಾಯಗೊಂಡ ರಾಹುಲ್
Editorial: ಪಾಕ್ ಪ್ರೇರಿತ ಉಗ್ರರ ತಂತ್ರಕ್ಕೆ ಸೂಕ್ತ ಪ್ರತಿತಂತ್ರ ಈಗಿನ ತುರ್ತು
Kannada: ಕನ್ನಡನಾಡಲ್ಲಿ ಕನ್ನಡ ಕಲಿಕೆಯ ಹಾಡು-ಪಾಡು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.