ಯುದ್ಧದ ಕತೆ ಹೇಳುವ ತೋಪುಗಳು


Team Udayavani, Jun 2, 2018, 11:40 AM IST

498.jpg

 ಇತಿಹಾಸವನ್ನು ಪುಸ್ತಕ ತೆರೆದು, ಓದಿ ತಿಳಿಯಬೇಕಿಲ್ಲ. ಕಣ್ಣ ಮುಂದೆಯೇ ಇರುತ್ತದೆ ಅನ್ನೋದಕ್ಕೆ ವಿಜಯಪುರವೇ ಸಾಕ್ಷಿ. ಇಲ್ಲಿ ಹತ್ತಾರು ತೋಪುಗಳು ಯುದ್ಧಭೂಮಿಯಲ್ಲಿ ಸುಲ್ತಾನನನ್ನು ರಕ್ಷಿಸುತ್ತಾ, ಪ್ರಾಣವನ್ನು ಪಣವಾಗಿಟ್ಟು ಹೋರಾಡುವ ಸೈನಿಕರಿಗೆ ಆತ್ಮಬಲ ನೀಡುತ್ತಿದ್ದವು. ಅಂದಿನ ಯುದ್ಧಗಳಲ್ಲಿ ಮಹತ್ವದ ಪಾತ್ರ ವಹಿಸಿದ್ದ ತೋಪುಗಳ ಕಥೆಗಳು ಇಲ್ಲಿವೆ.

ವಿಜಯಪುರ ಅಂದ ತಕ್ಷಣ ಗೋಲ್‌ ಗುಂಬಜ್‌, ಇಬ್ರಾಹಿಂ ರೋಜಾ ಸೇರಿದಂತೆ ಹಲವಾರು ಸ್ಮಾರಕಗಳು ನಮ್ಮ ಕಣ್ಣ ಮುಂದೆ ಬರುತ್ತದೆ.  ಗುಮ್ಮಟವೆ ನಗರಿ, ಸ್ಮಾರಕಗಳ ನಗರಿ ಎಂತಲೇ ಪ್ರಖ್ಯಾತಿ ಪಡೆದ ವಿಜಯಪುರದ ಇತಿಹಾಸದ ಪುಟಗಳನ್ನು ತೆರೆದರೆ ಅಲ್ಲಿ 200 ವರ್ಷಗಳ ಕಾಲ ಆಳಿದ ಆದಿಲ್‌ ಶಾಹಿ ದೊರೆಗಳ ಕೊಡುಗೆಗಳು ಗಮನ ಸೆಳೆಯುತ್ತವೆ. ಆದಿಲ… ಶಾಹಿಗಳು ಶತೃಗಳ ಉಪಟಳವನ್ನು ನಿಯಂತ್ರಿಸುವುದಕ್ಕಾಗಿ ವಿಜಯಪುರ ನಗರದ ಸುತ್ತ ಬಲಿಷ್ಠ ಕೋಟೆಯನ್ನು ಕಟ್ಟಿಸಿದರು. ಇದಕ್ಕೆ ಸಾಕ್ಷಿ ಎಂಬಂತೆ ಇಂದಿಗೂ ವಿಜಯಪುರ ನಗರದಲ್ಲಿ ಕೋಟೆಗಳು ಕಾಣಸಿಗುತ್ತವೆ. 
ಬರೀ ಸ್ಮಾರಕಗಳು ಮಾತ್ರವಲ್ಲ. ಇತಿಹಾಸದ ಕತೆಯನ್ನು ಹೇಳುವ ತೋಪುಗಳು ಕೂಡಾ ಇಲ್ಲಿನ ಪ್ರಮುಖ ಆಕರ್ಷಣೆಯಾಗಿವೆ. 

ವಿಜಯಪುರ ನಗರದ ವಿವಿಧ ಭಾಗಗಳಲ್ಲಿ ಸಂರಕ್ಷಿಸಿ ಇರಿಸಲಾಗಿರುವ ತೋಪುಗಳು ಇತಿಹಾಸದ ತುಣುಕುಗಳಾಗಿ ಹೊರಹೊಮ್ಮಿವೆ. ಯುದ್ಧಭೂಮಿಯಲ್ಲಿ ಭೋರ್ಗರೆದು, ಬೆಂಕಿ ಉಗುಳಿದ್ದ ತೋಪುಗಳು ಇಂದು ಶಾಂತವಾಗಿ ಮಲಗಿವೆ. ಈ ತೋಪುಗಳು ಅಂದು ಯುದ್ಧಭೂಮಿಯಲ್ಲಿ ಮದ್ದುಗುಂಡುಗಳನ್ನು ನುಂಗಿ ಲಕ್ಷಾಂತರ ಜನರನ್ನು ಬಲಿ ತೆಗೆದುಕೊಂಡು ರಣಚಂಡಿಗೆ ಔತಣ ನೀಡುತ್ತಿದ್ದವು. ಕೋಟೆಯ ಮೇಲೆ ಕಾವಲು ಕಾಯುತ್ತಾ, ಯುದ್ಧಭೂಮಿಯಲ್ಲಿ ಸುಲ್ತಾನನನ್ನು ರಕ್ಷಿಸುತ್ತಾ, ಪ್ರಾಣವನ್ನು ಪಣವಾಗಿಟ್ಟು ಹೋರಾಡುವ ಸೈನಿಕರಿಗೆ ಆತ್ಮಬಲ ನೀಡುತ್ತಿದ್ದವು. ಅಂದಿನ ಯುದ್ಧಗಳಲ್ಲಿ ಮಹತ್ವದ ಪಾತ್ರ ವಹಿಸಿದ್ದ ತೋಪುಗಳು ಕಥೆಗಳು ರೋಚಕವಾಗಿವೆ.

ಎಲ್ಲೆಲ್ಲಿ ಇವೆ?
ಮಲಿಕ್‌-ಇ- ಮೈದಾನ್‌ ತೋಪು
ವಿಜಯಪುರ ನಗರದ ಮಧ್ಯಭಾಗದಲ್ಲಿ ಕೋಟೆಯ ಮೇಲೆ ಇರಿಸಲಾಗಿರುವ ಈ ತೋಪು ಶಿವಾಜಿ ವೃತ್ತದ ಹತ್ತಿರದಲ್ಲಿದೆ. ಬರೋಬ್ಬರಿ 55ಟನ್‌ ತೂಗುವ ಈ ತೋಪು, ವಿಶ್ವದ ಬೃಹತ್‌ ತೋಪುಗಳಲ್ಲಿ ಒಂದು ಎಂಬ ಹೆಗ್ಗಳಿಕೆ ಹೊಂದಿದೆ. ಉರ್ದುವಿನಲ್ಲಿ ಮಲಿಕ್‌ ಇ ಮೈದಾನ್‌ ಅಂದರೆ ರಣರಂಗದ ರಾಜ ಎಂಬ ಅರ್ಥವಿದೆ. ಅಹ್ಮದ್‌ ನಗರದ ರಾಜಕುಮಾರಿ ಚಾಂದ್‌ ಬೀಬಿ, ಆದಿಲ… ಶಾಹಿ ಮನೆತನದ ಸೊಸೆಯಾಗಿ ಬರುವ ಸಂದರ್ಭದಲ್ಲಿ ಈ ತೋಪು ವರದಕ್ಷಿಣೆಯ ರೂಪದಲ್ಲಿ ಆದಿಲ… ಶಾಹಿಗಳಿಗೆ ಬಳುವಳಿಯಾಗಿ ಬಂದಿತ್ತು. ಈ ತೋಪು ಸಿಂಹದ ಬಾಯಿಯಂತೆ ವಿಶಿಷ್ಟವಾಗಿ ರೂಪಿತವಾಗಿದೆ. ಹೊರ ಮೈಯನ್ನು ಉಜ್ಜಿ ಮಿರಿಮಿರಿ ಹೊಳಪನ್ನು ನೀಡಲಾಗಿದೆ. ಇದರ ಮೇಲಿರುವ ಪಾರ್ಸಿ ಮತ್ತು ಅರಬ್ಬೀ ಶಾಸನಗಳ ಪ್ರಕಾರ ಈ ಫಿರಂಗಿಯನ್ನು ತುರ್ಕಿ ದೇಶದ ಮೊಹಮದ್‌ ಹಸನ್‌ ಎಂಬುವವನು ಅನೇಕ ಧಾತುಗಳ ಮಿಶ್ರಣವನ್ನು ಎರಕಹೊಯ್ದು  ಕ್ರಿ.ಶ.1549ರಲ್ಲಿ ನಿರ್ಮಿಸಿದನಂತೆ. ಈ ತೋಪು ಅನೇಕ ಯುದ್ಧಗಳಲ್ಲಿ ತನ್ನ ಪರಾಕ್ರಮ ತೋರಿಸಿದೆ. ವಿಜಯನಗರ ಸಾಮ್ರಾಜ್ಯದ ಪತನಕ್ಕೇ ಕಾರಣವಾದ ತಾಳಿಕೋಟೆ ಕದನದಲ್ಲಿ ಬಹುಮನಿ ಸುಲ್ತಾನರ ವಿಜಯದಲ್ಲಿ ಈ ತೋಪಿನ ಪಾತ್ರವೇ ಹೆಚ್ಚು. ನಂತರ ಬ್ರಿಟಿಷರು ಇದನ್ನು ತಮ್ಮ ದೇಶಕ್ಕೇ ತೆಗೆದುಕೊಂಡು ಹೋಗುವುದಕ್ಕೇ ಪ್ರಯತ್ನಿಸಿದ್ದರಂತೆ. ಆದರೆ ಇದರ ಭಾರಕ್ಕೇ ಬೆಂಡಾದ ಪರಂಗಿಯವರು ಈ ಫಿರಂಗಿಯನ್ನು ಇಲ್ಲಿಯೇ ಬಿಟ್ಟುಹೋದರು. ಕುತೂಹಲದ ವಿಷಯವೆಂದರೆ- 1854ರಲ್ಲಿ ಬಿಜಾಪೂರದ ಮ್ಯಾಜಿಸ್ಟ್ರೇಟ್‌ ಇದನ್ನು ಹರಾಜು ಹಾಕಿದಾಗ ಕೇವಲ 150 ರೂಪಾಯಿಗೆ ಈ ತೋಪು ಹರಾಜಾಯಿತು.ಆದರೆ ಅತ್ಯಂತ ಐತಿಹಾಸಿಕ ಮಹತ್ವ ಹೊಂದಿರುವ ಈ ತೋಪನ್ನು ಸಂರಕ್ಷಿಸುವ ಸಲುವಾಗಿ ಹರಾಜು ಆದೇಶವನ್ನು ಸರಕಾರ ಹಿಂಪಡೆಯಿತು. ವಿಜಯಪುರದ ತೋಪುಗಳಲ್ಲೇ ಆಕರ್ಷಕವಾಗಿರುವ ಈ ತೋಪನ್ನು ಶೇರ್‌ ಜಿ ಬುರಜ್‌ ಮೇಲೆ ಸಂರಕ್ಷಿಸಿ ಇಡಲಾಗಿದೆ.

ಉಪ್ಪಲಿ ಬುರಬ್‌ ತೋಪುಗಳು
ಮಲಿಕ್‌-ಇ-ಮೈದಾನದ ಹತ್ತಿರದಲ್ಲೇ  ಉಪ್ಪಲಿ ಬುರಜ್‌ ಎಂಬ ಕಾವಲುಕೋಟೆಯಿದೆ. ಅದರ ಮೇಲೆ ಎರಡು ಬೃಹತ್‌ ತೋಪುಗಳನ್ನು ಇಡಲಾಗಿದೆ. ಒಂದು 30 ಅಡಿ, ಮತ್ತೂಂದು 28 ಅಡಿ ಉದ್ದವಿದೆ. ಇವುಗಳನ್ನು ನೋಡಲು ನೀವು ಬುರಜ್‌ನ ಮೆಟ್ಟಿಲುಗಳನ್ನು ಹತ್ತಿಕೊಂಡು ಹೋಗಬೇಕು. ಅಂದು ರಾಜ್ಯವನ್ನು ಕಾವಲು ಕಾಯುತ್ತಿದ್ದ ಈ ತೋಪುಗಳು ಪ್ರವಾಸಿಗರನ್ನು ಆತ್ಮೀಯತೆಯಿಂದ ತಮ್ಮತ್ತ ಬರಮಾಡಿಕೊಳ್ಳುಂತೆ ಭಾಸವಾಗುತ್ತದೆ. 

ಲಂಡಾಕಸಾಬ್‌ ತೋಪುಗಳು
 ಮುರಾನ್‌ ಕೇರಿ ಎಂಬ ಕೋಟೆಯೂ ವಿಜಯಪುರದಲ್ಲಿದೆ.  ಅದರ ಮೇಲಿರುವ ಒಂದು ಸಣ್ಣ ಮತ್ತು ದೊಡ್ಡ ತೋಪೇ ಈ ಲಂಡಾಕಸಾಬ್‌ ತೋಪು. ಇವುಗಳ ಸುತ್ತ ತೊಟ್ಟಿಗಳನ್ನು ನಿರ್ಮಿಸಲಾಗಿದ್ದು, ಯುದ್ಧದ ಸಂದರ್ಭದಲ್ಲಿ ಇವುಗಳು ಭಯಂಕರ ಸದ್ದು ಮಾಡುತ್ತಿದ್ದರಿಂದ ಸೈನಿಕರು ಈ ನೀರಿನ ತೊಟ್ಟಿಗಳಲ್ಲಿ ತಮ್ಮ ಕಿವಿಗಳನ್ನು ರಕ್ಷಿಸಿಕೊಳ್ಳಲು ಅಡಗಿಕೊಳ್ಳುತ್ತಿದ್ದರಂತೆ. ಕೋಟೆಯ ಮೇಲೆ ಅನಾಥವಾಗಿ ಬಿದ್ದಿರುವ ಈ ತೋಪುಗಳು ಸಧ್ಯ ತಮಗೆ ಒದಗಿರುವ ದುಃಸ್ಥಿತಿ ನೆನೆಯುತ್ತ ಮಳೆ,ಗಾಳಿ,ಬಿಸಿಲಿನಿಂದ ರಕ್ಷಣೆ ಬೇಡುತ್ತಾ ಬಿದ್ದುಕೊಂಡು ಪ್ರವಾಸಿಗರಿಗೆ ಕಾಣದಂತೆ ಉಳಿದುಬಿಟ್ಟಿವೆ.

ಅಲಿಬುರುಜ್‌ ತೋಪು
ಗೋಲ್‌ ಗುಮ್ಮಟದ ಹಿಂಭಾಗದಲ್ಲಿರುವ ಕೋಟೆಯ ಪಹರೆ ಸ್ಥಳದ ಮೇಲೆ ಈ ತೋಪನ್ನು ಇಡಲಾಗಿದೆ. ನಾಲ್ಕೂ ದಿಕ್ಕುಗಳಿಂದ ಆಕ್ರಮಣ ಮಾಡಲು ಹೊಂಚು ಹಾಕುತ್ತಿದ ಶತ್ರುರಾಜ್ಯದ ಸೈನಿಕರನ್ನು ಹೊಡೆದುರುಳಿಸಲು ಅದನ್ನು ನಿಲ್ಲಿಸಲಾಗಿತ್ತು. ಹೀಗಾಗಿ ವಿಜಯಪುರ ಕೋಟೆಯ ನಾಲ್ಕೂ ದಿಕ್ಕುಗಳಲ್ಲಿ ಇಂತಹ ತೋಪುಗಳನ್ನು ಇಡಲಾಗಿದೆ.

ಮುಸ್ತಾಫಾಬಾದ್‌ ತೋಪು
ವಿಜಯಪುರದ ಎರಡನೇ ಬೃಹತ್‌ ತೋಪು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ತೋಪನ್ನು ಈಗ ನಗರದ ಅಲ್ಲಾ ಪೂರ ದ್ವಾರಬಾಗಿಲಿನ ಮೇಲಿರುವ ಫಿರಂಗಿ ಬುರಜ… ಮೇಲಿರಿಸಲಾಗಿತ್ತು. ಆದರೆ, ಕೋಟೆ ಮೇಲಿನ ಉಪ್ಪರಿಗೆಯಿಂದ ಕುಸಿದು ತಿಪ್ಪೆಯಲ್ಲಿ ಬಿದ್ದು ಈಗ ಅದು ಹಂದಿ,ನಾಯಿಗಳ ಒಡನಾಡಿಯಾಗಿದೆ. 1597ರಲ್ಲಿ ಎರಡನೇ ಇಬ್ರಾಹಿಂ ಆದಿಲ… ಶಾಹಿ ಕಾಲದಲ್ಲಿ ನಿರ್ಮಾಣವಾದ ಈ ತೋಪು ಸುಮಾರು 12 ಅಡಿ ಉದ್ದವಿದೆ.ಅದನ್ನು ಸಂರಕ್ಷಿಸಿ ಬೇರೆ ಎÇÉಾದರೂ ಇಡಲು ಪ್ರಾಚ್ಯವಸ್ತು ಸಂರಕ್ಷಣಾ ಇಲಾಖೆ ಗಮನಹರಿಸಬೇಕಾಗಿದೆ.

ಕಣ್ಮನ ಸೆಳೆಯುವ ಸಣ್ಣತೋಪುಗಳು
ಗೋಲ… ಗುಂಬಜ… ಮುಂದಿರುವ ವಸ್ತುಸಂಗ್ರಹಾಲಯದ ಮುಂಭಾಗದಲ್ಲಿ 6 ಸಣ್ಣ ತೋಪುಗಳನ್ನು ಸಂರಕ್ಷಿಸಿ ಇರಿಸಲಾಗಿದೆ. ಅವು ಯುದ್ಧದ ನೆನಪುಗಳನ್ನು ಮೆಲುಕು ಹಾಕುತ್ತಾ ನೋಡುಗರನ್ನು ಆಕರ್ಷಿಸುತ್ತಿವೆ. ವಸ್ತು ಸಂಗ್ರಹಾಲಯದ ಒಳಗಡೆ ಹೋದರೆ ನೀವು, ಮದ್ದುಗುಂಡುಗಳನ್ನೂ ನೋಡಬಹುದು.

ಹಿಂದೆ ರಾಜ್ಯರಕ್ಷಣೆಯಲ್ಲಿ ಮಹತ್ವದ ಪಾತ್ರವಹಿಸಿದ್ದ ಬಹುತೇಕ ತೋಪುಗಳು ಇಂದು ಅನಾಥವಾಗಿ ಬಿದ್ದಿವೆ. ಬಿಸಿಲು, ಗಾಳಿ,ಮಳೆಯಿಂದ ರಕ್ಷಣೆ ಸಿಗದೇ ಶಿಥಿಲಗೊಳ್ಳುತ್ತಿವೆ. ಕೆಲ ತೋಪುಗಳು ಮಣ್ಣಲ್ಲಿ ಹೂತು ಹೋಗಿ, ದಿನೇ ದಿನೇ ಆಕರ್ಷಣೆಯನ್ನೇ ಕಳೆದುಕೊಳ್ಳುತ್ತಿವೆ. ಇವುಗಳನ್ನೆÇÉಾ ಒಂದೆಡೆ ಸಂಗ್ರಹಿಸಿ ಸಂರಕ್ಷಿಸಿ ಇಟ್ಟರೆ ಪ್ರವಾಸಿಗರಿಗೆ ನೋಡಲು ಅನುಕೂಲವಾಗುತ್ತದೆ. ದರ ಜೊತೆಗೆ ಇತಿಹಾಸಕ್ಕೆ ಸಾಕ್ಷಿಯಾಗಿರುವ ಪ್ರಮುಖ ವಸ್ತುಗಳನ್ನು ರಕ್ಷಿಸಿದಂತೆಯೂ ಆಗುತ್ತದೆ. 

ಹನಮಂತ ಕೊಪ್ಪದ  

ಟಾಪ್ ನ್ಯೂಸ್

arrested

Punjab; ಗುಂಡಿನ ಚಕಮಕಿ ಬಳಿಕ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಇಬ್ಬರ ಬಂಧನ

2-ai

Artificial Intelligence: ಎಐ ಯುಗದಲ್ಲಿ ನಾವು ನೀವು?

Pushpa 2 Movie: ವರ್ಷದ ಅತೀ ಉದ್ದದ ಸಿನಿಮಾ..? ʼಪುಷ್ಪ-2ʼ ರನ್‌ ಟೈಮ್‌ ಎಷ್ಟು?

Pushpa 2 Movie: ವರ್ಷದ ಅತೀ ಉದ್ದದ ಸಿನಿಮಾ..? ʼಪುಷ್ಪ-2ʼ ರನ್‌ ಟೈಮ್‌ ಎಷ್ಟು?

1-bheesh

Chikkamagaluru: 92 ರ ಹರೆಯದಲ್ಲಿ ಬೀದಿಗೆ ಬಿದ್ದ ಜಿಲ್ಲಾ ಬಿಜೆಪಿ ಭೀಷ್ಮ ವಿಟ್ಠಲ ಆಚಾರ್ಯ

adani

Gautam Adani, ಸೋದರಳಿಯ ಸಾಗರ್ ವಿರುದ್ಧ ಲಂಚದ ಆರೋಪ ಇಲ್ಲ: ಅದಾನಿ ಗ್ರೂಪ್

1-bang

Bangladesh: ಚಿನ್ಮಯ್‌ ಕೃಷ್ಣದಾಸ್‌ ಬಂಧನ ಖಂಡಿಸಿ ಪ್ರತಿಭಟನೆ: ವಕೀಲನ ಹ*ತ್ಯೆ

Samantha Ruth Prabhu: ನನ್ನ ಸೆಕೆಂಡ್‌ ಹ್ಯಾಂಡ್‌ ಅಂದ್ರು!: ಸಮಂತಾ ದುಃಖದ ಮಾತು

Samantha Ruth Prabhu: ನನ್ನ ಸೆಕೆಂಡ್‌ ಹ್ಯಾಂಡ್‌ ಅಂದ್ರು!: ಸಮಂತಾ ದುಃಖದ ಮಾತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

arrested

Punjab; ಗುಂಡಿನ ಚಕಮಕಿ ಬಳಿಕ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಇಬ್ಬರ ಬಂಧನ

3-aranthodu

Aranthodu: ವಾಹನ ಡಿಕ್ಕಿ ಹೊಡೆದು ಕಾಡು ಹಂದಿ ಸಾವು

2-ai

Artificial Intelligence: ಎಐ ಯುಗದಲ್ಲಿ ನಾವು ನೀವು?

Pushpa 2 Movie: ವರ್ಷದ ಅತೀ ಉದ್ದದ ಸಿನಿಮಾ..? ʼಪುಷ್ಪ-2ʼ ರನ್‌ ಟೈಮ್‌ ಎಷ್ಟು?

Pushpa 2 Movie: ವರ್ಷದ ಅತೀ ಉದ್ದದ ಸಿನಿಮಾ..? ʼಪುಷ್ಪ-2ʼ ರನ್‌ ಟೈಮ್‌ ಎಷ್ಟು?

1-bheesh

Chikkamagaluru: 92 ರ ಹರೆಯದಲ್ಲಿ ಬೀದಿಗೆ ಬಿದ್ದ ಜಿಲ್ಲಾ ಬಿಜೆಪಿ ಭೀಷ್ಮ ವಿಟ್ಠಲ ಆಚಾರ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.