ಅಣಬೆ ನೂಡಲ್ಸ್
Team Udayavani, Jun 2, 2018, 4:00 PM IST
ಬೇಕಾಗುವ ಸಾಮಗ್ರಿ
.ಒಂದು ಕಪ್ ಅಣಬೆ
.ಒಂದು ಕಪ್ ನೂಡಲ್ಸ್
.2 ಈರುಳ್ಳಿ (ಕತ್ತರಿಸಿದ್ದು)
.10 ಬೆಳ್ಳುಳ್ಳಿ ಎಸಳು (ಜಜ್ಜಿದ) ಮತ್ತು
.ಸ್ವಲ್ಪ ಜೀರಿಗೆ
.ಕತ್ತರಿಸಿದ ಹಸಿಮೆಣಸಿನ ಕಾಯಿ 2
. 4 ಚಮಚ ಹಾಲಿನ ಕೆನೆ
.3 ಚಮಚ ಬೆಣ್ಣೆ
.ರುಚಿಗೆ ತಕ್ಕ ಉಪ್ಪು
.1/2 ಚಮಚ ಕರಿಮೆಣಸಿನ ಪುಡಿ
.ತುರಿದ ಚೀಸ್ 5 ಚಮಚ
ಮಾಡುವ ವಿಧಾನ
ನೂಡಲ್ಸ್ ಅನ್ನು ಒಂದು ಪಾತ್ರೆಗೆ ಹಾಕಿ ಸ್ವಲ್ಪ ಉಪ್ಪು, ನೀರು ಹಾಕಿ ಬೇಯಿಸಿ. ಬೆಂದ ಬಳಿಕ ತಣ್ಣನೆಯ ನೀರಿನಲ್ಲಿ ಹಾಕಿ ತೆಗೆದಿಡಿ. ಶುಚಿ ಮಾಡಿಟ್ಟ ಅಣಬೆಯನ್ನು ಚಿಕ್ಕ ತುಂಡುಗಳಾಗಿ ಕತ್ತರಿಸಿಡಿ. ಒಂದೂವರೆ ಚಮಚ ಬೆಣ್ಣೆಯನ್ನು ಬಾಣಲೆಯಲ್ಲಿ ಹಾಕಿ ಬಿಸಿ ಮಾಡಿ.
ಈಗ ನೂಡಲ್ಸ್ ಹಾಕಿ, ಚಿಟಿಕೆ ಉಪ್ಪು ಸೇರಿಸಿ ಫ್ರೈ ಮಾಡಿ ಒಂದು ಪಾತ್ರೆಗೆ ಹಾಕಿಡಿ. ಉಳಿದ ಒಂದೂವರೆ ಚಮಚ ಬೆಣ್ಣೆಯನ್ನು ಬಿಸಿ ಮಾಡಿ ಅದರಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿ, ಹಸಿಮೆಣಸಿನ ಕಾಯಿ ಹಾಕಿ, ಈರುಳ್ಳಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು. ಅನಂತರ ಅಣಬೆ ಮತ್ತು ಸ್ವಲ್ಪ ಜೀರಿಗೆ ಹಾಕಿ 2 ನಿಮಿಷ ಬಿಸಿ ಮಾಡಬೇಕು. ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಕಾಳುಮೆಣಸಿನ ಪುಡಿ ಮತ್ತು ಸ್ವಲ್ಪ ನೀರು ಸೇರಿಸಿ ಅಣಬೆಯನ್ನು ಬೇಯಿಸಬೇಕು. ಬಳಿಕ 4 ಚಮಚ ಹಾಲಿನ ಕೆನೆ (ಕ್ರೀಮ್ ) ಹಾಕಿ 2-3 ನಿಮಿಷ ಬೇಯಿಸಿದ ಬಳಿಕ ನೂಡಲ್ಸ್ ಸೇರಿಸಿ. ಕೊನೆಗೆ ತುರಿದ ಚೀಸ್ ಹಾಕಿ ಮಿಶ್ರ ಮಾಡಿದರೆ ಮಶ್ರೂಮ್ ನೂಡಲ್ಸ್ಸಿದ್ಧ. ಇದನ್ನು ಟೊಮೇಟೊ ಸಾಸ್ ಜತೆ ಸವಿಯಲು ರುಚಿಯಾಗಿರುತ್ತದೆ.
ವಿದ್ಯಾ ಕೆ. ಇರ್ವತ್ತೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.