ಚುನಾವಣಾ ಅಕ್ರಮ ಬಹಿರಂಗಪಡಿಸುವವರ ಗುರುತು ರಕ್ಷಣೆ: ಸಿಇಸಿ
Team Udayavani, Jun 2, 2018, 4:39 PM IST
ಕೋಲ್ಕತ : ಚುನಾವಣಾ ಆಯೋಗದ ಮೊಬೈಲ್ ಆ್ಯಪ್ ಮೂಲಕ ಚುನಾವಣಾ ಅಕ್ರಮಗಳ ಮಾಹಿತಿಯನ್ನು ಬಹಿರಂಗಪಡಿಸುವವರ ಗುರುತನ್ನು ಸೂಕ್ತ ರಕ್ಷಣೆಯೊಂದಿಗೆ ಗೌಪ್ಯವಾಗಿ ಇಡಲಾಗುವುದು ಎಂದು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಒ ಪಿ ರಾವತ್ ಭರವಸೆ ನೀಡಿದ್ದಾರೆ.
ಈಚೆಗೆ ನಡೆದ ಕರ್ನಾಟಕ ವಿಧಾನ ಸಭಾ ಚುನಾವಣೆಯ ವೇಳೆ ಪ್ರಾಯೋಗಿಕವಾಗಿ ಪರಿಚಯಿಸಲಾಗಿದ್ದ ಚುನಾವಣಾ ಆಯೋಗದ ಆ್ಯಪ್ ಮೂಲಕ ಸುಮಾರು 680 ವಿಡಿಯೋ ದೂರುಗಳು ದಾಖಲಾಗಿದ್ದವು.
ಈ ಬಗೆಯ ಚುನಾವಣಾ ಅಕ್ರಮ ವಿಡಿಯೋ ದೂರುಗಳನ್ನು ನೀಡುವವರ ಗುರುತು ಬಹಿರಂಗವಾಗದಂತೆ ನಾವು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ರಾವತ್ ಹೇಳಿದರು.
ಇಲ್ಲಿನ ಎಂಸಿಸಿಐ ನಲ್ಲಿ ಏರ್ಪಡಿಸಲಾಗಿದ್ದ ಸಂವಹನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ರಾವತ್, ಚುನಾವಣಾ ಆಯೋಗದ ಈ ಮೊಬೈಲ್ ಆ್ಯಪ್‌ನಿಂದ ಸಾಮಾನ್ಯ ಜನರಿಗೆ ಚುನಾವಣಾ ಅಕ್ರಮಗಳ ವಿರುದ್ಧ ಸೆಟೆದು ನಿಲ್ಲುವ ಶಕ್ತಿ ಬಂದಿದೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.