ಗ್ರಾಮೀಣ ಅಂಚೆ ನೌಕರರಿಂದ ಪ್ರತಿಭಟನ ಮೆರವಣಿಗೆ
Team Udayavani, Jun 3, 2018, 7:00 AM IST
ಉಡುಪಿ: ಗ್ರಾಮೀಣ ಅಂಚೆ ನೌಕರರ ವೇತನ ಪರಿಷ್ಕರಣೆಗಾಗಿ ಸರಕಾರದಿಂದ ನೇಮಿಸಲ್ಪಟ್ಟ ಕಮಲೇಶ್ ಚಂದ್ರ ಏಕಸದಸ್ಯ ಸಮಿತಿಯ ವರದಿ ಅನುಷ್ಠಾನಕ್ಕೆ ಒತ್ತಾಯಿಸಿ ಉಡುಪಿ ವಿಭಾಗದ ಗ್ರಾಮೀಣ ಅಂಚೆ
ನೌಕರರಿಂದ ಪ್ರತಿಭಟನ ಮೆರವಣಿಗೆ ನಡೆಯಿತು.
ಅಖೀಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದ ಕರೆಯ ಮೇರೆಗೆ ಉಡುಪಿ ವಿಭಾಗದ ಸುಮಾರು 200 ಗ್ರಾಮೀಣ ಅಂಚೆ ಕಚೇರಿಯ 525 ನೌಕರರು ಉಡುಪಿ ಪ್ರಧಾನ ಅಂಚೆ ಕಚೇರಿ ಎದುರು ಮೇ 22ರಿಂದ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಂಡಿದ್ದು, 12ನೇ ದಿನದತ್ತ ಸಾಗುತ್ತಿದ್ದೇವೆ. ಗ್ರಾಮೀಣ ಅಂಚೆ ಕಚೇರಿಗಳು ಸಂಪೂರ್ಣವಾಗಿ ಮುಚ್ಚಲ್ಪಟ್ಟ ಪರಿಣಾಮ ಅಂಚೆ ಸೇವೆಗಳು ಅಸ್ತವ್ಯಸ್ತ ವಾಗಿದ್ದರೂ ಕೇಂದ್ರ ಸರಕಾರ ಗಮನ ಹರಿಸುತ್ತಿಲ್ಲ ಎಂದು ಪ್ರತಿಭಟನ ಸಭೆಯಲ್ಲಿ ನೌಕರರು ಅಳಲನ್ನು ತೋಡಿಕೊಂಡರು.
ಸರಕಾರದ ನಿರ್ಲಕ್ಷ್ಯ
ಗ್ರಾಮೀಣ ಡಾಕ್ ಸೇವಕರು (ಡಿಜಿಎಸ್) ಕನಿಷ್ಠ ವೇತನದಿಂದ ವಂಚಿತರಾಗಿ ದಿನಕೂಲಿ ನೌಕರರಿಗಿಂತಲೂ ಹೀನಾಯ ಸ್ಥಿತಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಸದ್ಯದ ಆರಂಭಿಕ ವೇತನ 4,200 ರೂ. ಆಗಿದ್ದು, ಸುಮಾರು 40 ವರ್ಷಗಳಿಂದ ಸೇವೆ ಸಲ್ಲಿಸಿದವರೂ ಕೂಡ 12,500 ರೂ. ಮೀರಿರುವುದಿಲ್ಲ. ಗ್ರಾಮೀಣ ಅಂಚೆ ಸೇವಕರು ಮಳೆ, ಬಿಸಿಲೆನ್ನದೆ ಗ್ರಾಮೀಣ ಭಾಗದಲ್ಲಿ ಸೇವೆ ನೀಡಿರುವುದನ್ನು ಸರಕಾರ ನಿರ್ಲಕ್ಷಿéಸುತ್ತಿದೆ ಎಂದು ರಾಷ್ಟ್ರೀಯ ಗ್ರೂಪ್ “ಸಿ’
ಅಂಚೆ ನೌಕರರ ಸಂಘದ ವಿಭಾಗೀಯ ಕಾರ್ಯದರ್ಶಿ ಸುರೇಶ್ ಕೆ. ಹೇಳಿದರು.ನಗರದ ಪ್ರಧಾನ ಅಂಚೆ ಕಚೇರಿಯಿಂದ ಚಿತ್ತರಂಜನ್ ಸರ್ಕಲ್, ಡಯಾನ ಸರ್ಕಲ್, ಕೋರ್ಟ್ ಹಿಂಭಾಗದ ರಸ್ತೆ ಮೂಲಕ ಬಸ್‌ನಿಲ್ದಾಣದ ಸಾಗಿ ಕ್ಲಾಕ್ ಟವರ್‌ಗೆ ಸುತ್ತುವರಿದು ಪುನಃ ಪ್ರಧಾನ ಅಂಚೆ ಕಚೇರಿ ವರೆಗೆ ಮೆರವಣಿಗೆ ನಡೆಯಿತು.
ಸಂಘದ ವಿಭಾಗ ಅಧ್ಯಕ್ಷ ಬಸವ ಬಿಲ್ಲವ, ಕಾರ್ಯದರ್ಶಿ ಸಂತೋಷ್ ಮಧ್ಯಸ್ಥ, ಉಪಾಧ್ಯಕ್ಷ ಕಳತ್ತೂರು ದಿವಾಕರ ಬಿ. ಶೆಟ್ಟಿ, ಕೋಶಾಧಿಕಾರಿ ಖಜಾಂಚಿ ರಾಮನಾಥ್ ಆರ್. ಮೊಲಿ, ರಾಜೇಶ್ ಹೇರೂರು, ಕೃಷ್ಣ ಪಿತ್ರೋಡಿ, ರಾಜೇಶ್ ಪಣಿಯೂರು, ಅಖೀಲ ಭಾರತ ಪೋಸ್ಟ್‌ಮ್ಯಾನ್ ಮತ್ತು ಎಂಟಿಎಸ್ ಸಂಘದ ರಾಜ್ಯಾಧ್ಯಕ್ಷ ಬಿ. ವಿಜಯ ನಾಯರಿ, ರಾಷ್ಟ್ರೀಯ ಗ್ರಾಮೀಣ ಅಂಚೆ ನೌಕರರ ಸಂಘದ ಅಧ್ಯಕ್ಷ ಹಿರಿಯಣ್ಣ ಮಡಿವಾಳ, ವಿಭಾಗೀಯ ಕಾರ್ಯದರ್ಶಿ ಅಶ್ವತ್ಥ್ ಕುಮಾರ್, ಉಪಾಧ್ಯಕ್ಷ ಟಿ. ಆನಂದ, ಸ. ಕಾರ್ಯದರ್ಶಿ ಬಿ. ಸುರೇಶ್ ಶೇರಿಗಾರ್, ಕೋಶಾಧಿಕಾರಿ ಎನ್. ಭಾಸ್ಕರ್, ಅರವಿಂದ ನಾಯಕ್, ನರೇಂದ್ರ ನಾಯಕ್, ಕುಮಾರ ಪಾಂಗಾಳ, ಅನಿತಾ ಮಣಿಪುರ, ಪೂರ್ಣಿಮಾ ಚಿಟಾ³ಡಿ, ಶಕುಂತಳಾ ಮತ್ತಿತರರು ಉಪಸ್ಥಿತರಿದ್ದರು.
ಜನಸಾಮಾನ್ಯರಿಗೆ ತೊಂದರೆ
ಕಳೆದ 12 ದಿನಗಳಿಂದ ನಗರದ ಪ್ರ.ಅಂಚೆ ಕಚೇರಿಯ ಮುಖ್ಯದ್ವಾರದಲ್ಲಿಯೇ ಕುಳಿತು ನೌಕರರು ಮುಷ್ಕರ ನಡೆಸುತ್ತಿರುವ ನೆಲೆಯಲ್ಲಿ ಅಂಚೆ ಸೇವೆ ಪಡೆಯಲು ಬರುವ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.
– ಕೆ. ರಾಮಚಂದ್ರ ಆಚಾರ್ಯ, ಕಿನ್ನಿಮೂಲ್ಕಿ, ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
MUST WATCH
ಹೊಸ ಸೇರ್ಪಡೆ
Organ Donation: ಸಾವಿನ ನಂತರವೂ ನೆರವಾದ ಜೀವ
Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್‌ಐ ವಿರುದ್ದ ಪೊಲೀಸ್ ಆಯುಕ್ತರಿಗೆ ದೂರು
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.