ರೋಗದ ಸುತ್ತ ಹೀಗೊಂದು ಸಿನಿಮಾ
Team Udayavani, Jun 3, 2018, 11:51 AM IST
ಈಗಾಗಲೇ ರೋಗಗಳನ್ನಿಟ್ಟುಕೊಂಡು ಇತರೆ ಭಾಷೆಗಳಲ್ಲಿ ಸಾಕಷ್ಟು ಸಿನಿಮಾಗಳು ಬಂದಿವೆ. ಯಾವುದಾದರೊಂದು ರೋಗಕ್ಕೆ ತುತ್ತಾಗಿರುವ ವ್ಯಕ್ತಿ ಹೇಗೆ ವರ್ತಿಸುತ್ತಾನೆ, ಆತನ ವರ್ತನೆಯಿಂದ ಸುತ್ತಲ ವಾತಾವರಣ ಹೇಗೆಲ್ಲಾ ನಿರ್ಮಾಣವಾಗುತ್ತದೆ ಎಂಬ ಅಂಶದೊಂದಿಗೆ ಅಂತಹ ಸಿನಿಮಾಗಳು ಸಾಗಿಬಂದಿವೆ. ಅವು ಕನ್ನಡದಲ್ಲೂ ಹೊರತಾಗಿಲ್ಲ. ಕನ್ನಡದಲ್ಲೂ ಅಂತಹ ಅನೇಕ ಚಿತ್ರಗಳು ಬಂದಿವೆ.
ಈಗ ಹೊಸಬರ ತಂಡವೊಂದು ಅಂಥದ್ದೊಂದು “ರೋಗ’ ಕುರಿತು ಕಥೆ ಮಾಡಿಕೊಂಡು ಚಿತ್ರ ಮಾಡಿ ಮುಗಿಸಿದೆ. ಅದು “ಸಂಕಷ್ಟಕರ ಗಣಪತಿ’. ಹೌದು, ಈ ಚಿತ್ರದ ನಿರ್ದೇಶಕ ಅರ್ಜುನ್ ಕುಮಾರ್ “ಅಲಿಯನ್ ಹ್ಯಾಂಡ್ ಸಿಂಡ್ರೋಮ್’ ಎಂಬ ವಿಚಿತ್ರ ಖಾಯಿಲೆ ಇರುವ ರೋಗದ ಕುರಿತು ಸಿನಿಮಾ ಮಾಡಿದ್ದಾರೆ. ಈ ಚಿತ್ರದಲ್ಲಿ ಕಥಾನಾಯಕ ವ್ಯಂಗ ಚಿತ್ರಕಾರ. ಒಂದು ಹಂತದಲ್ಲಿ ಅವನಿಗೆ “ಅಲಿಯನ್ ಹ್ಯಾಂಡ್ ಸಿಂಡ್ರೋಮ್’ ಖಾಯಿಲೆ ಆವರಿಸಿಕೊಂಡಾಗ ಆಗುವ ಪರಿಪಾಟಿಲು ಚಿತ್ರದ ಹೈಲೆಟ್.
ಇದೊಂದು ಕಾಮಿಡಿ ಜೊತೆಗೆ ಸುಂದರ ಪ್ರೇಮ ಕಥಾಹಂದರ ಹೊಂದಿದೆ. ಸಂಕಷ್ಟ ಅಂದರೆ ತೊಂದರೆಗಳು, ಕರ ಅಂದರೆ ಕೈ, ನಾಯಕನ ಹೆಸರು ಗಣಪತಿ ಆಗಿರುವುದರಿಂದ ಚಿತ್ರಕ್ಕೆ “ಸಂಕಷ್ಟಕರ ಗಣಪತಿ’ ಎಂದು ಇಡಲಾಗಿದೆ. ಇನ್ನು, ಈ ಚಿತ್ರಕ್ಕೆ ಲಿಖಿತ್ ಶೆಟ್ಟಿ ಹೀರೋ. ಇವರಿಗೆ ಶ್ರುತಿ ನಾಯಕಿ. ಚಿತ್ರದಲ್ಲಿ ಅಚ್ಯುತಕುಮಾರ್, ಮಂಜುನಾಥ್ ಹೆಗಡೆ, ಶ್ರೀನಿವಾಸಪ್ರಭು, ರೇಖಾಸಾಗರ್, ನಾಗಭೂಷಣ್ ಇತರರು ನಟಿಸಿದ್ದಾರೆ.
ಚಿತ್ರದ ಐದು ಹಾಡುಗಳಿಗೆ ಲಿಖಿತ್ ಮುರಳಿಧರ್ ಸಂಗೀತ ಸಂಯೋಜಿಸಿದ್ದಾರೆ. ವಿಜೇತ್ ಸಂಕಲನವಿದೆ. ಉದಯಲೀಲಾ ಛಾಯಗ್ರಹಣ ಮಾಡಿದ್ದಾರೆ. ರಘುನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ. ಫೈಜಾನ್ ಖಾನ್ ತಮ್ಮ ಗೆಳೆಯರಾದ ಭರತ್ರಾವ್ ಹಾಗು ಇತರರ ಜತೆ ನಿರ್ಮಾಣ ಮಾಡಿದ್ದಾರೆ. ಸದ್ಯಕ್ಕೆ ಚಿತ್ರದ ಡಿಐ ಕೆಲಸ ನಡೆಯುತ್ತಿದ್ದು, ಸದ್ಯದಲ್ಲೇ ಸೆನ್ಸಾರ್ಗೆ ಹೋಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
ZEBRA Movie: ಜೀಬ್ರಾ ಮೇಲೆ ಡಾಲಿ ಕಣ್ಣು
Drone Prathap: ಸಿನಿಮಾರಂಗಕ್ಕೆ ಡ್ರೋನ್ ಪ್ರತಾಪ್ ಎಂಟ್ರಿ; ಮೊದಲ ಚಿತ್ರದಲ್ಲೇ ಹೀರೋ
MUST WATCH
ಹೊಸ ಸೇರ್ಪಡೆ
Amazon Employee: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.