ಉದ್ಯಮಿ ಮೇಲೆ ಹಾಡಹಗಲೇ ಗುಂಡಿನ ದಾಳಿ
Team Udayavani, Jun 3, 2018, 12:34 PM IST
ಬೆಂಗಳೂರು: ರಾಜಧಾನಿಯಲ್ಲಿ ಹಾಡಹಗಲೇ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದು, ಗುಂಡಿನ ದಾಳಿ ನಡೆಸುವ ಮೂಲಕ ಉದ್ಯಮಿಯೊಬ್ಬರ ಹತ್ಯೆಗೆ ಯತ್ನಿಸಿ ಸಿನಿಮೀಯ ಶೈಲಿಯಲ್ಲಿ ಪರಾರಿಯಾಗಿದ್ದಾರೆ.
ಕೋರಮಂಗಲದಲ್ಲಿರುವ ರಹೇಜಾ ಆರ್ಕೆಡ್‌ನಲ್ಲಿರುವ ಫಾರ್ಮ್ ಇಂಡಿಯಾ ಇಂಪ್ಲಿಕ್ಸ್ ಪ್ರೈ.ಲಿಮೆಟೆಡ್ ಕಂಪೆನಿ ಮಾಲೀಕ ಕನ್ಹಯ್ಯ ಲಾಲ್ ಅಗರ್‌ವಾಲ್(54) ಮೇಲೆ ಶನಿವಾರ ಮಧ್ಯಾಹ್ನ ಮೂವರು ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು, ಕನ್ಹಯ್ಯ ಲಾಲ್ ಅವರ ತಲೆಗೆ ಪೆಟ್ಟಾಗಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.
ರೈತರಿಂದ ಜೋಳ ಖರೀದಿಸಿ, ಸಗಟು ರೂಪದಲ್ಲಿ ವಿವಿಧ ಕಂಪನಿಗಳಿಗೆ ಮಾರಾಟ ಮಾಡುವ ಉತ್ತರ ಪ್ರದೇಶ ಮೂಲದ ಉದ್ಯಮಿ ಕನ್ಹಯ್ಯ ಲಾಲ್ ಅವರ ಮೇಲೆ ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಅಗರ್‌ವಾಲ್ ಅವರು ಕಚೇರಿಯಲ್ಲಿ ಸಿಸಿ ಕ್ಯಾಮರಾ ಅಳವಡಿಸಿಲ್ಲ. ಆದರೆ, ಕಾಂಪ್ಲೆಕ್ಸ್‌ನಲ್ಲಿರುವ ಸಿಸಿಟಿವಿ ಕ್ಯಾಮರಾಗಳಲ್ಲಿ ದುಷ್ಕರ್ಮಿಗಳ ಚಲನವಲನ ಸೆರೆಯಾಗಿದೆ. ಮೂರು ತಂಡಗಳಲ್ಲಿ ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಕೆಲಸ ಕೇಳ್ಕೊಂಡು ಬಂದು ಗುಂಡು ಹಾರಿಸಿದ್ರು: ಕಳೆದ 25 ವರ್ಷಗಳಿಂದ ಕುಟುಂಬದ ಜತೆ ನೆಲೆಸಿರುವ ಕನ್ಹಯ್ಯ ಲಾಲ್, ದೇಶದ ವಿವಿಧ ರಾಜ್ಯಗಳ ರೈತರಿಂದ ಜೋಳ ಸೇರಿದಂತೆ ದವಸ ಧಾನ್ಯಗಳನ್ನು ಖರೀದಿಸಿ, ಸಗಟು ರೂಪದಲ್ಲಿ ಮಾರಾಟ ಮಾಡುತ್ತಾರೆ. ರಹೇಜಾ ಆರ್ಕೆಡ್‌ನಲ್ಲಿನ ಎರಡನೇ ಮಹಡಿಯಲ್ಲಿ ಸಂಸ್ಥೆ ಕಚೇರಿಯಿದೆ. ಎಂದಿನಂತೆ ಶನಿವಾರ ಕೂಡ ತಮ್ಮ ಇಬ್ಬರು ಪುತ್ರರ ಜತೆ ಕಚೇರಿಗೆ ತೆರಳಿದ್ದ ಅವರು, ತಮ್ಮ ಕ್ಯಾಬಿನ್‌ನಲ್ಲಿ ಕೆಲಸದಲ್ಲಿ ತೊಡಗಿದ್ದರು.
ಮಧ್ಯಾಹ್ನ 2ಗಂಟೆ ಸುಮಾರಿಗೆ ಒಬ್ಬ ಹೆಲ್ಮೆಟ್‌ಧಾರಿ ಸೇರಿದಂತೆ ಮೂವರು ಅಪರಿಚಿತ ದುಷ್ಕರ್ಮಿಗಳು ಏಕಾಏಕಿ ಕಚೇರಿಗೆ ನುಗ್ಗಿದ್ದಾರೆ. ಕೂಡಲೇ ಕನ್ಹಯ್ಯ ಅವರ ಪುತ್ರರಿಬ್ಬರು ದುಷ್ಕರ್ಮಿಗಳನ್ನು ತಡೆದು ಪ್ರಶ್ನಿಸಿದಾಗ ಕೆಲಸ ಕೇಳಿಕೊಂಡು ಬಂದಿರುವುದಾಗಿ ಸಬೂಬು ಹೇಳಿದ್ದಾರೆ. ಸದ್ಯಕ್ಕೆ ಯಾವುದೇ ಕೆಲಸವಿಲ್ಲ ಎಂದು ಕನ್ಹಯ್ಯ ಪುತ್ರರು ಹೇಳುತ್ತಿದ್ದಂತೆ ಮಾತಿನ ನಡುವೇ ಒಬ್ಬ ದುಷ್ಕರ್ಮಿ ಪಿಸ್ತೂಲ್ ತೆಗೆದು ಸುಮಾರು 15 ಅಡಿ ದೂರದಲ್ಲಿ ಗಾಜಿನ ಕ್ಯಾಬಿನ್ ಒಳಗೆ ಕುಳಿತಿದ್ದ ಕನ್ಹಯ್ಯ ಅವರತ್ತ ಗುಂಡು ಹಾರಿಸಿದ್ದಾನೆ.
ಕಚೇರಿಯಲ್ಲೇ ಇದ್ದ ಕಿರಿಯ ಮಗ ರಿಷಿ ಅಗರ್‌ವಾಲ್ ತನ್ನ ತಂದೆಯ ಸಹಾಯಕ್ಕೆ ಧಾವಿಸಿ ಕ್ಯಾಬಿನ್‌ಗೆ ತೆರಳಿ ಟೇಬಲ್‌ನ ಕೆಳಗೆ ಅವಿತುಕೊಳ್ಳುವಂತೆ ಮಾಡಿದ್ದಾನೆ. ಅಷ್ಟರಲ್ಲೇ ಮತ್ತೂರ್ವ ದುಷ್ಕರ್ಮಿ ಎರಡು ಗುಂಡು ಹಾರಿಸಿದ್ದು ಒಂದು ಗುಂಡು ಟೇಬಲ್ ಸೀಳಿಕೊಂಡು ಕನ್ಹಯ್ಯ ಅವರ ತಲೆ ಸವರಿಕೊಂಡು ಹೋಗಿದೆ. ರಕ್ತಸ್ರಾವವಾಗಿ ಕೆಳಗೆ ಬಿದ್ದ ಕನ್ಹಯ್ಯ ಅವರನ್ನು ಕೂಡಲೇ ಕಚೇರಿ ಸಿಬ್ಬಂದಿ, ಸೇಂಟ್ ಜಾನ್ಸ್ ಆಸ್ಪತ್ರೆಗೆ ಕರೆದೊಯ್ದರು ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.
ಉದ್ಯಮ ವಹಿವಾಟಿಗೆ ಸಂಬಂಧಿಸಿದ ದ್ವೇಷದ ಹಿನ್ನೆಲೆಯಲ್ಲಿ ಗುಂಡಿನ ದಾಳಿ ನಡೆಸಿರುವ ಬಗ್ಗೆ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಗಾಯಾಳು ಕನ್ಹಯ್ಯ ಚೇತರಿಸಿಕೊಂಡ ಬಳಿಕ ಮತ್ತಷ್ಟು ನಿಖರ ಕಾರಣ ಗೊತ್ತಾಗಲಿದೆ. ಸದ್ಯ ದುಷ್ಕರ್ಮಿಗಳ ಬಗ್ಗೆ ಮಾಹಿತಿ ಸಿಕ್ಕಿದ್ದು ಶೀಘ್ರದಲ್ಲಿಯೇ ಬಂಧಿಸುವ ವಿಶ್ವಾಸವಿದೆ.
-ಡಾ.ಬೋರಲಿಂಗಯ್ಯ, ಡಿಸಿಪಿ, ಆಗ್ನೇಯ ವಿಭಾಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Renukaswamy Case:ಬೆನ್ನು ನೋವು ಬಳಿಕ ದರ್ಶನ್‌ಗೆ ಮತ್ತೊಂದು ಸಮಸ್ಯೆ; ವಕೀಲರು ಹೇಳಿದ್ದೇನು?
Karkala: ದುರ್ಗಾ ಫಾಲ್ಸ್ ಗೆ ಈಜಲು ಹೋಗಿದ್ದ ವಿದ್ಯಾರ್ಥಿ ನೀರು ಪಾಲು
School Teacher: ಅನಾರೋಗ್ಯದಿಂದ ಉದ್ಯಾವರ ಜೂಲಿಯಾನಾ ಟೀಚರ್ ನಿಧನ
Kalaburagi: ಜಮೀನು ವ್ಯಾಜ್ಯ; ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ
Thirthahalli: ತೀರ್ಥಹಳ್ಳಿ ವ್ಯವಸ್ಥಿತವಾಗಿ ಎರಡನೇ ಭಟ್ಕಳ ಆಗುತ್ತಿದೆ.. ಪ್ರಮೋದ್ ಮುತಾಲಿಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.