ಹೈನೋದ್ಯಮಕ್ಕೆ ವಿಫುಲ ಅವಕಾಶಗಳಿವೆ: ದೇಸಾಯಿ
Team Udayavani, Jun 3, 2018, 5:26 PM IST
ಕುಷ್ಟಗಿ: ರಾಜ್ಯದಲ್ಲಿ ಹೈನೋದ್ಯಮಕ್ಕೆ ವಿಫುಲ ಅವಕಾಶಗಳಿದ್ದರೂ ಇಲ್ಲಿ ಬೆಳೆದ ಹಸಿ ಮೇವು ಟನ್‌ಗಟ್ಟಲೇ ನೆರೆಯ ಕೇರಳ, ಗೋವಾ, ತಮಿಳುನಾಡಿನ ಹೈನೋದ್ಯಮಕ್ಕಾಗಿ ಸಾಗಣೆಯಾಗುತ್ತಿದೆ ಎಂದು ರಾಬಕೊ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ನಿರ್ದೇಶಕ ಜಯತೀರ್ಥ ದೇಸಾಯಿ ಕಳವಳ ವ್ಯಕ್ತಪಡಿಸಿದರು.
ಶನಿವಾರ, ಇಲ್ಲಿನ ಎಪಿಎಂಸಿ ಯಾರ್ಡನ ಕೆಎಂಎಫ್ ಉಪಕಚೇರಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಎಎಂಸಿಯು ಘಟಕಗಳಿಗೆ ಸ್ವಯಂ ಚಾಲಿತ ಹಾಲು ಶೇಖರಣ ಯಂತ್ರ ಹಾಗೂ ಹಾಲು ಪರೀಕ್ಷಾ ಯಂತ್ರ ಖರೀ ದಿಗೆ ಧನ ಸಹಾಯ ವಿತರಿಸಿ ಮಾತನಾಡಿದರು.
ಇಲ್ಲಿ ಬೆಳೆಸಿದ ಮೇವನ್ನು ಕಟಾವು ಮಾಡಿ ರವಾನಿಸುವುದರಲ್ಲಿಯೇ ರೈತರು ತೃಪ್ತರಾಗುವಂತಾಗಿದೆ. ಕೇರಳ ರೈತರಿಗೆ ಜಮೀನು ಇಲ್ಲದಿದ್ದರೂ ಹೈನುಗಾರಿಕೆಯಲ್ಲಿ ಮುಂಚೂಣಿಯಲ್ಲಿದೆ. ನಮ್ಮ ರೈತರಿಗೆ ಜಮೀನು ಇದ್ದಾಗ್ಯೂ ಹೈನುಗಾರಿಕೆ ಒಲ್ಲದ ಮನಸ್ಸಾಗಿದೆ. 2 ಎಕರೆ ಜಮೀನಿನ ಇಳುವರಿ 2 ಹಸುಗಳ ಹಾಲಿನ ಉತ್ಪನ್ನಕ್ಕೆ ಸಮವಿದೆ ಎಂದರು.
ಹಾಲು ಉತ್ಪಾದಕರ ಸೊಸೈಟಿಗಳಲ್ಲಿ ಅಗಾಧ ಶಕ್ತಿ ಅಡಗಿದ್ದು, ಅದನ್ನು ಸೋಲಲು ಬಿಡಬೇಡಿ. ಹೈನುಗಾರಿಕೆ ಗಟ್ಟಿಯಾಗಲು ದಕ್ಷ, ಪ್ರಮಾಣಿಕ ಸೇವೆಯಿಂದ ಹಾಲು ಉತ್ಪಾದಕರ ಸಂಘಗಳ ಸಶಕ್ತಗೊಳ್ಳಲು ಸಾಧ್ಯವಿದೆ. ಹೈನುಗಾರಿಕೆ ಕುಸಿದರೆ ಸಂಘಗಳು ಕುಸಿದಂತೆ ಎಂದರು. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ತಾಲೂಕಿನ ಹಾಲು ಉತ್ಪಾದಕರ ಸಂಘಗಳ ಕ್ರಿಯಾಶೀಲತೆ ಮೈಗೂಡಿಸಿಕೊಳ್ಳಲು, ಪಾರದರ್ಶಕ ವ್ಯವಹಾರಕ್ಕಾಗಿ, ಯಾಂತ್ರಿಕ ಉಪಕರಣಗಳಿಗೆ ಧನ ಸಹಾಯ ನೀಡುವ ಮೂಲಕ ಯೋಜನೆ, ಅವಕಾಶ ಕಲ್ಪಿಸಿದೆಯಾದರೂ ಒತ್ತಡದಲ್ಲಿ ಕ್ರಿಯಾಶೀಲತೆ ಕಳೆದುಕೊಂಡು ಯೋಚಿಸಲು ಅವಕಾಶ ಇಲ್ಲದಂತಾಗಿದೆ ಎಂದು ವಿಷಾದಿಸಿದರು.
ದೇವರು ದುಡ್ಡಲ್ಲ, ದುಡ್ಡು ದೇವರಿಗಿಂತ ದೊಡ್ಡದು ಅಲ್ಲ ಎಂದ ಅವರು, ಸರ್ಕಾರದ ಅನುದಾನ ನಿರೀಕ್ಷಿಸಿದೆ ಹಾಲು ಉತ್ಪಾದಕರ ಸಂಘಗಳನ್ನು ಸ್ವಯಂಶಕ್ತಗೊಳಿಸಬೇಕೆಂದರು. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿಯ ಕ್ರಮಬದ್ದ ಅನುಷ್ಠಾನದಿಂದ ಫಲಾನುಭವಿಗಳಿಗೆ ಮುಟ್ಟುತ್ತಿವೆ. ಅರಿವಿನ ಕೊರತೆ ಇರುವ ಈ ಪ್ರದೇಶದಲ್ಲಿ ಧರ್ಮಸ್ಥಳ ಗ್ರಾಮೀಣಾವೃದ್ಧಿಗೆ ಹಲವು ಯೋಜನೆಗಳು ಸಾಕಾರಗೊಳ್ಳಲು ಸಾದ್ಯವಿದೆ ಎಂದರು. ಹೈನೋದ್ಯಮದಲ್ಲಿ ಲೆಕ್ಕ ಇಡುವುದು ಮಹತ್ವದ್ದು ಆಗಿದೆ. ಲೆಕ್ಕ ಇಲ್ಲದೇ ವ್ಯವಸ್ಥೆಯೇ ಅಲ್ಲ ಎಂದರು.
ಧರ್ಮಸ್ಥಳ ಗ್ರಾಮೀಣಾವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಮುರಳೀಧರ ಎಚ್. ಎಲ್. ಮಾತನಾಡಿ, ಸಹಕಾರಿ ತತ್ವ ಒಬ್ಬನೇ ಬೆಳೆಯುವುದಲ್ಲ, ಎಲ್ಲರೂ ಬೆಳೆಯುವುದಾಗಿದೆ. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಜನ ಕಲ್ಯಾಣ ಯೋಜನೆಗಳನ್ನು ಅವಕಾಶಗಳ ಮೂಲಕ ಬಳಸಿಕೊಳ್ಳಬೇಕಿದೆ. ಹೈನೋದ್ಯಮಕ್ಕೆ ತಾಂತ್ರಿಕತೆ ಪ್ರೇರಣೆಯಾಗಿದೆ ಎಂದರು. ಸಹಾಯಕ ವ್ಯವಸ್ಥಾಪಕ ಗೋಪಾಲ ಕುಲಕರ್ಣಿ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಯೋಜನಾ ನಿರ್ದೇಶಕ ವಿನಾಯಕ ನಾಯಕ್, ಗವಿಸಿದ್ದಪ್ಪ, ಸತ್ಯ ನಾರಾಯಣ ಅಂಗಡಿ, ವಿಜಯಕುಮಾರ ಇದ್ದರು. ವಿಸ್ತೀರ್ಣಾಧಿ ಕಾರಿ ಬಸವರಾಜ ಯರದೊಡ್ಡಿ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಸರ್ಕಾರ ಮತ್ತು ವಿಜಯೇಂದ್ರ ನಡುವೆ ಉತ್ತಮ ಅಡ್ಜಸ್ಟ್‌ಮೆಂಟ್ ಇದೆ: ಯತ್ನಾಳ್ ಆರೋಪ
Hubli: ಕಸದ ವಾಹನಕ್ಕೆ ಸ್ಕೂಟಿ ಡಿಕ್ಕಿ: ಓರ್ವ ವಿದ್ಯಾರ್ಥಿ ಸಾವು, ಮತ್ತೋರ್ವ ಗಂಭೀರ
BJP ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ಗೊತ್ತಿಲ್ಲ: ಸಚಿವ ಜೋಶಿ
BJP ರಾಜ್ಯಾಧ್ಯಕ್ಷರ ನೇಮಕ ಹೈಕಮಾಂಡ್ ನಿರ್ಧಾರ: ಅರವಿಂದ ಬೆಲ್ಲದ
Hubli: ಮೀಟರ್ ಬಡ್ಡಿಗೆ ಮನನೊಂದು ಲಾರಿ ಚಕ್ರದಡಿ ಬಿದ್ದು ವ್ಯಕ್ತಿ ಆತ್ಮಹ*ತ್ಯೆ