ಅಜ್ಜರಕಾಡು ಜಿಲ್ಲಾಸ್ಪತ್ರೆ: ರಾತ್ರಿ ಪಾಳಿಗೆ ವೈದ್ಯರ ಕೊರತೆ
Team Udayavani, Jun 4, 2018, 6:05 AM IST
ಉಡುಪಿ: ಜಿಲ್ಲಾಸ್ಪತ್ರೆ ಎಂದು ಕರೆಯುವುದು ಮಾತ್ರ. ಆದರೆ ಇನ್ನೂ ಕೂಡ ಅಜ್ಜರಕಾಡು ಆಸ್ಪತ್ರೆ ಜಿಲ್ಲಾಸ್ಪತ್ರೆ ದರ್ಜೆಗೆ ಏರಿಲ್ಲ. ಇಲ್ಲಿ ಇಂದಿಗೂ 24 ಗಂಟೆ ಸೇವೆ ದೊರೆಯುತ್ತಿಲ್ಲ. ಸಂಜೆಯ ಅನಂತರ ಬರುವ ರೋಗಿಗಳಿಗೆ ಚಿಕಿತ್ಸೆ ನೀಡಲು ವೈದ್ಯರೇ ಇಲ್ಲ ಎಂಬ ದೂರಿದೆ.
ಎಲ್ಲ ವಿಭಾಗದಲ್ಲೂ ಒಬ್ಬೊಬ್ಬರೇ
ಜನರಲ್ ಸರ್ಜನ್, ಆಥೊì ಪಿಡಿಶಿಯನ್, ಇಎನ್‌ಟಿ ಸರ್ಜನ್ ಹೀಗೆ ಎಲ್ಲಾ ವಿಭಾಗಗಳಲ್ಲಿ ಒಬ್ಬೊಬ್ಬರೇ ಇದ್ದಾರೆ. ಅವರು ಹಗಲಿನ ವೇಳೆ ಸೇವೆಗೆ ಲಭ್ಯರಿರುತ್ತಾರೆ. ರಾತ್ರಿ ಪಾಳಿಗೆ ವೈದ್ಯರೇ ಇಲ್ಲ. ಒಂದು ವೇಳೆ ರಾತ್ರಿ ವೇಳೆ ಅನಿವಾರ್ಯವಾಗಿ ಕೆಲಸ ಮಾಡಿದರೆ ಅವರಿಂದ ಹಗಲು ವೇಳೆ ಕೂಡ ಕೆಲಸ ಮಾಡಿಸಿಕೊಳ್ಳಲು ಆಗದೆ ಆಸ್ಪತ್ರೆ ಅಧಿಕಾರಿಗಳು ಅಸಹಾಯಕರಾಗುತ್ತಾರೆ. ರಜೆ ಹಾಕಿ ಹೋದರೆ ಬೇರೆ ವೈದ್ಯರಿಲ್ಲ. ಒಬ್ಬ ವೈದ್ಯರು 8 ಗಂಟೆ ಕೆಲಸ ಮಾಡಿದರೆ 24 ಗಂಟೆ ಸೇವೆ ನೀಡಬೇಕಾದರೆ ಒಂದು ವಿಭಾಗದಲ್ಲಿ ಕನಿಷ್ಠ 3 ಮಂದಿ ವೈದ್ಯರಾದರೂ ಬೇಕು. ಆಸ್ಪತ್ರೆ ಯಲ್ಲಿ ಪ್ರಸ್ತುತ ಆಲ್ಟ್ರಾಸೋನೋಗ್ರಫಿ (ಯುಎಸ್‌ಡಿ) ಇದೆ. ಅದಕ್ಕೆ ತಜ್ಞರು ಕೂಡ ಇದ್ದಾರೆ. ತಜ್ಞ ವೈದ್ಯರ ಜತೆಗೆ ಸ್ಟಾಫ್ ನರ್ಸ್,
ಟೆಕ್ನಿಕಲ್ ಸ್ಟಾಫ್, ಎಕ್ಸ್‌ರೇ, ಲ್ಯಾಬ್, ಓಟಿ ಸೇರಿದಂತೆ ಇತರ ಸ್ಟಾಫ್ಗಳು ಕೂಡ ಬೇಕು. ಈಗ ಇರುವ ಹುದ್ದೆಗಳಲ್ಲಿ ಹೆಚ್ಚಿನವು ಭರ್ತಿ ಇವೆ. ಆದರೆ ಹೊಸ ಹುದ್ದೆಗಳನ್ನು ಸೃಷ್ಟಿಸಬೇಕು. ಈಗ ದಿನಕ್ಕೆ ಸರಿಸುಮಾರು 500-600 ಮಂದಿ ರೋಗಿಗಳು ಜಿಲ್ಲಾ ಸ್ಪತ್ರೆಗೆ ಬರುತ್ತಿದ್ದು 24 ಗಂಟೆಯ ಸೇವೆ ಅತ್ಯಗತ್ಯವಾಗಿದೆ.
ಮೇಲ್ದರ್ಜೆಗೇರಿಲ್ಲ
ಅಜ್ಜರಕಾಡು ಆಸ್ಪತ್ರೆಯನ್ನು ಜಿಲ್ಲಾಸ್ಪತ್ರೆ ಎಂದು ಕರೆಯುವುದು ಮಾತ್ರ. ಆದರೆ ವಾಸ್ತವವಾಗಿ ಅದು ಜಿಲ್ಲಾಸ್ಪತ್ರೆ ದರ್ಜೆಗೇರಿಲ್ಲ.ಇಲ್ಲಿ ಸಂಜೆಯ ಅನಂತರ ವೈದ್ಯರು ಸಿಗುವುದಿಲ್ಲ.ಹೆಚ್ಚಿನ ತಜ್ಞ ವೈದ್ಯರು,ಅತ್ಯಾಧುನಿಕವಾದ ಸುಸಜ್ಜಿತ ಶಸ್ತ್ರಚಿಕಿತ್ಸಾ ಘಟಕ ಮೊದಲಾದವುಗಳ ಅವಶ್ಯಕತೆ ಇದೆ.
ಅಪಘಾತಕ್ಕೊಳಗಾದವರು ಹಾಗೂ ಇತರ ಅನೇಕ ರೋಗಿಗಳನ್ನು ತುರ್ತು ಸಂದರ್ಭದಲ್ಲಿ ಜಿಲ್ಲಾಸ್ಪತ್ರೆಗೆ ಕರೆತಂದು ಇಲ್ಲಿ ಸಿಟಿಸ್ಕ್ಯಾನ್‌ನ ಅಗತ್ಯ ಬಿದ್ದಾಗ ಅದು ದೊರೆಯದೆ ಮಂಗಳೂರಿನ ವೆನಾÉಕ್‌ಗೆ ಸಾಗಿಸಿದ ಘಟನೆಗಳು ಅನೇಕ ಇವೆ ಎನ್ನುತ್ತಾರೆ ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರು.
ತಿಂಗಳೊಳಗೆ ಸಿಟಿಸ್ಕ್ಯಾನ್ ವ್ಯವಸ್ಥೆ?
ಅಪಘಾತ ಮತ್ತಿತರ ಸಂದರ್ಭದಲ್ಲಿ ತಲೆ, ಹೊಟ್ಟೆ ಮೊದಲಾದವುಗಳ ಸಮಗ್ರ, ಅತ್ಯಾಧುನಿಕ ರೀತಿಯ ತಪಾಸಣೆಗೆ ನೆರವಾಗುವ ಸಿಟಿ ಸ್ಕ್ಯಾನ್ ಯಂತ್ರದ ಸೇವೆ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಒಂದು ತಿಂಗಳೊಳಗೆ ದೊರೆಯುವ ನಿರೀಕ್ಷೆ ಇದೆ. ಇದಕ್ಕಾಗಿ ಆಸ್ಪತ್ರೆಯ ಕಟ್ಟಡವೊಂದನ್ನು ಸಿದ್ಧಗೊಳಿಸಲಾಗುತ್ತಿದೆ. ಕಳೆದ ವರ್ಷವೇ ಸಿಟಿಸ್ಕ್ಯಾನ್ ಯಂತ್ರ ಮಂಜೂರಾಗಿತ್ತು. ಆದರೆ ರಾಜ್ಯ ದಾದ್ಯಂತ ಒಂದೇ ಸಂಸ್ಥೆಯವರು ಟೆಂಡರ್ ವಹಿಸಿಕೊಂಡಿರುವುದರಿಂದ ಪೂರೈಕೆಯಲ್ಲಿ ವಿಳಂಬವಾಗಿದೆ. ಯುಪಿಎಸ್, ಇಂಟೀರಿಯರ್ ಕೆಲಸ ನಡೆಯುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.