ನ್ಯಾ. ಕೆಂಪಣ್ಣ ಆಯೋಗದ ವರದಿ ಶೈತ್ಯಾಗಾರಕ್ಕೆ?
Team Udayavani, Jun 4, 2018, 6:50 AM IST
ಬೆಂಗಳೂರು: ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಭಾರೀ ಸದ್ದು ಮಾಡಿದ್ದ ಹಾಗೂ ಆಗಿನ ಸಿಎಂ ಸಿದ್ದರಾಮಯ್ಯ ವಿರುದ್ಧ ನೇರ ಆರೋಪ ಮಾಡಲಾಗಿದ್ದ “ಅರ್ಕಾವತಿ ಡಿನೋಟಿಫಿಕೇಷ ನ್ ಹಗರಣ’ಕ್ಕೆ ಸಂಬಂಧಿಸಿದ ನ್ಯಾ. ಕೆಂಪಣ್ಣ ಆಯೋಗದ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿ ಇಲ್ಲಿಗೆ ಒಂಭತ್ತು ತಿಂಗಳು ತುಂಬಿದೆ.
ಆದರೆ, “ಡೆಲಿವರಿ’ ಮಾತ್ರ ಇನ್ನೂ ಆಗಿಲ್ಲ! ಈಗಿನ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಅದು ಆಗುವ ಸಾಧ್ಯತೆಯೂ ಕಡಿಮೆ. ಈ ಹಿಂದೆ ಬಿಜೆಪಿ ಹಾಗೂ ಜೆಡಿಎಸ್ ಎರಡೂ ಪಕ್ಷಗಳು ಅರ್ಕಾವತಿ ಡಿನೋಟಿಫಿಕೇಷನ್ ಹಗರಣದ ವಿರುದ್ಧ ಹೋರಾಟ ಮಾಡಿದ್ದವು. ಆದರೆ, ಇಂದು ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕಾಂಗ್ರೆಸ್,
ಜೆಡಿಎಸ್ ಒಂದಾಗಿ ಆಡಳಿತದ ಚುಕ್ಕಾಣಿ ಹಿಡಿದಿವೆ.
ಹೀಗಾಗಿ ನ್ಯಾ. ಕೆಂಪಣ್ಣ ಆಯೋಗದ ವರದಿ “ಶೈತ್ಯಾಗಾರ’ ಸೇರುವುದರಲ್ಲಿ ಅನುಮಾನವಿಲ್ಲ.ಸತತ ವರ್ಷಗಳ ಕಾಲ ವಿಚಾರಣೆ ನಡೆಸಿದ ನ್ಯಾ. ಕೆಂಪಣ್ಣ ನೇತೃತ್ವದ ಆಯೋಗ 2017ರ ಆಗಸ್ಟ್ 23ರಂದು ಸರ್ಕಾರಕ್ಕೆ ವರದಿ ಸಲ್ಲಿಸಿತ್ತು.
ನಿಯಮದ ಪ್ರಕಾರ ವರದಿ ಸಲ್ಲಿಕೆಯಾದ ಕನಿಷ್ಠ ಆರು ತಿಂಗಳೊಳಗಾಗಿ ವರದಿಯನ್ನು ಸಚಿವ ಸಂಪುಟ ದಲ್ಲಿ ಒಪ್ಪಿ, ಅದನ್ನು ಸದನದಲ್ಲಿ ಮಂಡಿಸ ಬೇಕು. ಇಲ್ಲದಿದ್ದರೆ ಸಂಪುಟದಲ್ಲಿ ಮಂಡಿಸಿ ಅದರ ಪರಾಮರ್ಶೆಗೆ ಸಮಿತಿಯೊಂದನ್ನು ರಚಿಸಬಹುದು. ಆದರೆ, ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಇದರಲ್ಲಿ ಯಾವುದೂ ಆಗಿಲ್ಲ.
ಆಯೋಗದ ವರದಿಯಲ್ಲಿ ಸಿದ್ದರಾಮಯ್ಯ ನವರಿಗೆ “ಕ್ಲೀನ್‌ಚಿಟ್’ ನೀಡಲಾಗಿದೆ ಎಂದು ವಿಶ್ಲೇಷಿ ಸಲಾಗಿತ್ತು. ಆದರೆ, ವರದಿಯಲ್ಲಿ ಸಿದ್ದರಾಮಯ್ಯ ನವರು ತಪ್ಪು ಮಾಡಿದ್ದಾರೆಂದು ಸ್ಪಷ್ಟವಾಗಿ ಹೇಳಲಾಗಿದೆ.
ಹಾಗಾಗಿ, ವರದಿ ಬಹಿರಂಗಪಡಿಸಲು ಹಿಂದೇಟು ಹಾಕುತ್ತಿದ್ದಾರೆಂದು ಆಗ ಪ್ರತಿ ಪಕ್ಷ ನಾಯಕರಾಗಿದ್ದ ಜಗದೀಶ ಶೆಟ್ಟರ್ ಆರೋಪಿಸಿದ್ದರು. ಸರ್ಕಾರವೇ ಆಯೋಗ ರಚನೆ ಮಾಡಿರುವುದರಿಂದ ವರದಿ ನಿರೀಕ್ಷಿತ. ಹಾಗೊಮ್ಮೆ
ದಾಖಲೆಗಳನ್ನು ಪರಿಶೀಲಿಸಿ ಸತ್ಯಾಂಶಗಳ ಆಧಾರದಲ್ಲಿ ವರದಿ ನೀಡಿದ್ದರೆ ನ್ಯಾ. ಕೆಂಪಣ್ಣ ಅವರನ್ನು ಬಹಿರಂಗವಾಗಿ ಅಭಿನಂದಿಸುತ್ತೇನೆಂದು ಈಗ ಮುಖ್ಯಮಂತ್ರಿ ಆಗಿರುವ ಕುಮಾರಸ್ವಾಮಿ ಆಗ ಹೇಳಿದ್ದರು. ಈ ನಡುವೆ ಯಾರನ್ನೂ ಹೊಣೆಗಾರರ ನ್ನಾಗಿ ಅಥವಾ ತಪ್ಪಿತಸ್ಥರನ್ನಾಗಿ ಮಾಡುವ ಅಧಿಕಾರ ಆಯೋಗಕ್ಕೆ ಕೊಟ್ಟಿಲ್ಲ. ಆದ್ದರಿಂದ “ಕ್ಲೀನ್‌ಚಿಟ್’ ಅನ್ನುವುದು ಅಪ್ರಸ್ತುತ ಎಂದು ಆಯೋಗದ ಅಧಿಕಾರಿಗಳು ಹೇಳಿದ್ದರು.
ಯಾವ ಸರ್ಕಾರದ ಅವಧಿಯಲ್ಲಿ ವರದಿ
ಸಲ್ಲಿಕೆಯಾಗಿರುತ್ತದೋ, ಆ ಸರ್ಕಾರದ ಅವಧಿ ಯಲ್ಲಿ ವರದಿ ಬಗ್ಗೆ ಯಾವುದೇ ಕ್ರಮ ಆಗಿರಲಿಲ್ಲದಿದ್ದರೆ, ಮುಂಬರುವ ಸರ್ಕಾರದ ಮೇಲೆ ವರದಿ ಮಂಡನೆ ಮತ್ತು ಜಾರಿಯ ಜವಾಬ್ದಾರಿ ಬೀಳುತ್ತದೆ ಎಂದು ಕಾನೂನು ತಜ್ಞರು ಹೇಳುತ್ತಾರೆ. ಹೀಗಾಗಿ ನ್ಯಾ. ಕೆಂಪಣ್ಣ ಆಯೋಗದ ವರದಿ ಒಪ್ಪಿಕೊಳ್ಳುವ, ಅನುಪಾಲನ ವರದಿ ಯೊಂದಿಗೆ ಅದನ್ನು ಸದನದಲ್ಲಿ ಮಂಡಿಸುವ ಹೊಣೆ ಈಗ ಸಮ್ಮಿಶ್ರ ಸರ್ಕಾರದ ಮೇಲಿದೆ. ಸಮ್ಮಿಶ್ರ ಸರ್ಕಾರ ದಲ್ಲಿ ಕಾಂಗ್ರೆಸ್ ಮೈತ್ರಿ ಪಕ್ಷ ಆಗಿರುವುದರಿಂದ ಅದರ ಸಾಧ್ಯತೆ ತೀರಾ ಕಡಿಮೆ.
ಏನಿದು ನ್ಯಾ. ಕೆಂಪಣ್ಣ ವರದಿ?
ಅರ್ಕಾವತಿ ಬಡಾವಣೆ ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಳ್ಳಲಾದ ಜಮೀನಿನ ಪೈಕಿ 981 ಎಕರೆ ಜಮೀನು ಡಿನೋಟಿಫಿಕೇಷನ್ ಮಾಡಲಾಗಿದ್ದು, ಸಿಎಂ ಸಿದ್ದರಾಮಯ್ಯ ಭಾಗಿಯಾಗಿದ್ದಾರೆಂದು ಪ್ರತಿಪಕ್ಷಗಳು
ಆರೋಪಿಸಿದ್ದವು. ಪ್ರತಿಪಕ್ಷಗಳ ಒತ್ತಡಕ್ಕೆ ಮಣಿದ ಸರ್ಕಾರ ನ್ಯಾ.ಕೆಂಪಣ್ಣ ಆಯೋಗ ನೇಮಿಸಿತ್ತು. 2017ರ ಆ.23ಕ್ಕೆ 4 ಸಂಪುಟಗಳಲ್ಲಿ ಸುಮಾರು 9 ಸಾವಿರ ಪುಟಗಳ ಅಂತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು.
– ರಫೀಕ್ ಅಹ್ಮದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾವು
Aadhar Card: ಆಧಾರ್ ನವೀಕರಣ ಮಾಡಿಕೊಂಡಿದ್ದೀರಾ?: ಹಾಗಾದರೆ ಈ ಸುದ್ದಿ ಓದಲೇಬೇಕು!
ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ
ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ
AICC ಅಧಿವೇಶನ: ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿಂದು ಮಹತ್ವದ ಸಭೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾವು
Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್ ಸಿಇಒ ಸುಂದರ್ ಪಿಚೈ
Arrest Warrant: ರಾಬಿನ್ ಉತ್ತಪ್ಪ ವಿರುದ್ದ ಬಂಧನ ವಾರೆಂಟ್; ಜೈಲು ಪಾಲಾಗ್ತಾರಾ ಕ್ರಿಕೆಟಿಗ
Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ
M. Chinnaswamy ಸ್ಟಾಂಡ್‌ಗೆ ಶಾಂತಾ ರಂಗಸ್ವಾಮಿ ಹೆಸರಿಡಲು ಯಾಕೆ ಹಿಂದೇಟು? ಏನಿದು ವಿವಾದ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.