ರಾಜ್ಯಪಾಲ, ರಾಜಭವನಗಳ ಭತ್ತೆ ಹೆಚ್ಚಳ
Team Udayavani, Jun 4, 2018, 6:38 AM IST
ಹೊಸದಿಲ್ಲಿ: ಇತ್ತೀಚೆಗಷ್ಟೇ ರಾಜ್ಯಪಾಲರ ಮಾಸಿಕ ವೇತನವನ್ನು 3.5 ಲಕ್ಷ ರೂ.ಗಳಿಗೆ ಏರಿಸಿದ್ದ ಕೇಂದ್ರ ಗೃಹ ಇಲಾಖೆ, ಇದೀಗ ರಾಜ್ಯಪಾಲರ ಪ್ರವಾಸಗಳು, ಆತಿಥಿ ಸತ್ಕಾರ, ಮನ ರಂಜನೆಗಾಗಿ ನೀಡಲಾಗುವ ಭತ್ಯೆಯನ್ನು ಹೆಚ್ಚಿಸಿದೆ. ಜತೆಗೆ, ರಾಜ ಭವನದ ಪೀಠೊಪಕರಣಗಳ ಬದಲಾವಣೆ ಅಥವಾ ನವೀಕರಣಕ್ಕಾಗಿ ನೀಡಲಾಗುವ ವಾರ್ಷಿಕ ಭತ್ಯೆಯನ್ನೂ ಹೆಚ್ಚಿಸಿ ಆದೇಶ ಹೊರಡಿಸಿದೆ.
ಈ ಭತ್ತೆ ಹಂಚಿಕೆ ಎಲ್ಲ ರಾಜ್ಯ ಪಾಲರಿಗೆ ಸಮಾನವಾಗಿಲ್ಲ ಎಂಬುದು ಗಮನಾರ್ಹ. ಈ ಬಗ್ಗೆ ಇಲಾಖೆಯಿಂದ ಯಾವುದೇ ಸ್ಪಷ್ಟನೆ ಬಂದಿಲ್ಲ. ಅತಿ ಹೆಚ್ಚು ಭತ್ತೆ ಸಿಕ್ಕಿರುವುದು ಪಶ್ಚಿಮ ಬಂಗಾಲ ರಾಜ್ಯ ಪಾಲರಿಗೆ. ಅವರಿಗೆ ಪ್ರವಾಸ, ಆತಿಥ್ಯ, ಮನೋರಂಜನೆಗಾಗಿ ವಾರ್ಷಿಕ 1.80 ಕೋಟಿ ರೂ. ನೀಡಲು ನಿರ್ಧರಿಸಲಾಗಿದೆ. ಪಶ್ಚಿಮ ಬಂಗಾಲದ ರಾಜ್ಯಪಾಲರಿಗೆ 2 ರಾಜ ಭವನ ಇರುವುದರಿಂದ (ಕೋಲ್ಕತಾ, ಡಾರ್ಜಿ ಲಿಂಗ್ ), ಈ ಎರಡರ ಪೀಠೊಪಕರಣಗಳ ಆಧುನೀಕರಣಕ್ಕಾಗಿ 80 ಲಕ್ಷ ರೂ, ಈ ರಾಜ ಭವನಗಳ ನಿರ್ವಹಣೆಗೆ 72 ಲಕ್ಷ ರೂ. ನಿಗದಿಗೊಳಿಸಲಾಗಿದೆ. ಹೀಗೆ, ಒಂದಕ್ಕಿಂತ ಹೆಚ್ಚು ರಾಜಭವನಗಳಿರುವ ರಾಜ್ಯಪಾಲರಿಗೆ ದೊಡ್ಡ ಮೊತ್ತದ ಭತ್ತೆ ಸಿಗಲಿದೆ. ಆಯಾ ರಾಜ್ಯಪಾಲರ ವೇತನ, ಭತ್ತೆಗಳನ್ನು ಸಂಬಂಧ ಪಟ್ಟ ರಾಜ್ಯ ಸರಕಾರಗಳೇ ಭರಿಸಲಿವೆ.
ಕರ್ನಾಟಕ ರಾಜ್ಯ ಪಾಲರಿಗೆಷ್ಟು?
ಪರಿಷ್ಕೃತ ಭತ್ತೆಯ ಪ್ರಕಾರ, ಕರ್ನಾಟಕದ ರಾಜ್ಯ ಪಾಲರು ಪ್ರವಾಸ, ಆತಿಥ್ಯ ಹಾಗೂ ಮನೋರಂಜನೆ ಭತ್ತೆ ರೂಪವಾಗಿ ವಾರ್ಷಿಕ 1.05 ಕೋಟಿ ರೂ. ಪಡೆಯಲಿದ್ದಾರೆ. ಬೆಂಗಳೂರಿನಲ್ಲಿರುವ ರಾಜ್ಯ ಪಾಲರ ಅಧಿಕೃತ ನಿವಾಸವಾದ “ರಾಜಭವನ’ದ ಪೀಠೊಪಕರಣಗಳಿಗಾಗಿ ವಾರ್ಷಿಕ 6.5 ಲಕ್ಷ . ಹಾಗೂ ನಿರ್ವಹಣೆಗಾಗಿ 38.2 ಲಕ್ಷ ರೂ. ಸಿಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Indiranagar; ಅಸ್ಸಾಂ ಯುವತಿ ಹ*ತ್ಯೆ ಕೇಸ್: ಆರೋಪಿ ಬಂಧಿಸಿದ ಪೊಲೀಸರು
Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ
Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ
ಚಂದ್ರಶೇಖರ ಶ್ರೀ ವಿರುದ್ಧ ಕೇಸ್; ಒಕ್ಕಲಿಗರು ತಿರುಗಿ ಬೀಳುತ್ತಾರೆ: ಆರ್.ಅಶೋಕ್ ಎಚ್ಚರಿಕೆ
Madikeri: ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.