ವಿಶ್ವಕಪ್‌ ಫ‌ುಟ್‌ಬಾಲ್‌ ಎಂಬ ಮಾಯೆ!

Team Udayavani, Jun 4, 2018, 8:54 AM IST

28.jpg

2018ರ ಫಿಫಾ ವಿಶ್ವಕಪ್‌ ಫ‌ುಟ್‌ಬಾಲ್‌ ಪಂದ್ಯಾವಳಿಗೆ ರಶ್ಯ ಸಿಂಗರಿಸಿಕೊಂಡು ನಿಂತಿರುವಾಗ ಜಗತ್ತಿನ ಸರ್ವಶ್ರೇಷ್ಠ ಆಟಗಾರರ ಆರಂಭದ ದಿನಗಳು ನೆನಪಾಗುತ್ತವೆ.

17ರ ಹರೆಯದಲ್ಲೇ  ಸೂಪರ್‌ಸ್ಟಾರ್‌
ಸ್ವೀಡನ್‌ನಲ್ಲಿ ನಡೆದ 1958ರ ವಿಶ್ವಕಪ್‌ ಫ‌ುಟ್‌ಬಾಲ್‌ ತನಕ ಪೀಲೆ ಎಂಬ ಹೆಸರು ಬಹುಶಃ ಜಗತ್ತಿಗೇ ತಿಳಿದಿರಲಿಲ್ಲ. ಆಗ ಪೀಲೆ ಅಂದರೆ “ಎಡ್ಸನ್‌ ಅರಂಟೆಸ್‌ ಡು ನೆಸಿಮೆಟು’. ಇದು ಅವರ ನಿಜ ನಾಮಧೇಯ. ಬ್ರಝಿಲ್‌ ಮೊದಲ ಸಲ ವಿಶ್ವಕಪ್‌ ಗೆದ್ದು ಸಂಭ್ರಮಿಸಿದ್ದರಲ್ಲಿ ಪೀಲೆ ಅವರದು ಸಿಂಹಪಾಲು. ಸೆಮಿಫೈನಲ್‌ನಲ್ಲಿ ಫ್ರಾನ್ಸ್‌ ವಿರುದ್ಧ ಬ್ರಝಿಲ್‌ನದ್ದು 5-2 ವಿಕ್ರಮ. ಇದರಲ್ಲಿ ಪೀಲೆ ಅವರದು ಹ್ಯಾಟ್ರಿಕ್‌ ಸಾಧನೆ. ಫೈನಲ್‌ನಲ್ಲಿ ಆತಿಥೇಯ ಸ್ವೀಡನ್‌ ವಿರುದ್ಧವೂ 5-2 ಜಯಭೇರಿ. ಇದರಲ್ಲಿ ಪೀಲೆ ಪಾಲು ಅವಳಿ ಗೋಲು. 17ರ ಹರೆಯದ ಈ ಬ್ರಝಿಲ್‌ ಫ‌ುಟ್ಬಾಲಿಗ ವಿಶ್ವ ಮಟ್ಟದ ಸ್ಟಾರ್‌ ಆಗಿ ಬೆಳಗಲು ಇನ್ನೇನು ತಾನೆ ಬೇಕಿತ್ತು! ಅತ್ಯಧಿಕ 3 ಸಲ ವಿಶ್ವಕಪ್‌ ಗೆದ್ದ ತಂಡದ ಸದಸ್ಯನೆಂಬ ಪೀಲೆ ಅವರ ವಿಶ್ವದಾಖಲೆ ಇಂದಿಗೂ ಅಜೇಯವಾಗಿ ಉಳಿದಿದೆ (1958, 1962, 1970). 

ಮರಡೋನಾ ಎಂಬ ಮಾಯಾವಿ
ಪೀಲೆ ಅವರಂತೆ ಸಾರ್ವಕಾಲಿಕ ಶ್ರೇಷ್ಠ ಫ‌ುಟ್ಬಾಲಿಗನಾಗಿ ಮೆರೆದಾಡಿದವರಲ್ಲಿ ಆರ್ಜೆಂಟೀನಾದ ಡೀಗೋ ಮರಡೋನಾ ಅವರದು ಬಹು ದೊಡ್ಡ ಹೆಸರು. 1982ರ ಸ್ಪೇನ್‌ ವಿಶ್ವಕಪ್‌ನಲ್ಲಿ ಆಡಿದ್ದರೂ ಇದರಲ್ಲಿ ಮರಡೋನಾ ಅವರದು ಫ್ಲಾಪ್‌ ಶೋ. ಹೀಗಾಗಿ ಈ ಹೆಸರು ವಿಶ್ವಖ್ಯಾತಿಯಾಗಲು ಇನ್ನೂ 4 ವರ್ಷ ಕಾಯಬೇಕಾಯಿತು. ಅದು ಮೆಕ್ಸಿಕೋದಲ್ಲಿ ನಡೆದ ಟೂರ್ನಿ. ಆರ್ಜೆಂಟೀನಾ 2ನೇ ಸಲ ವಿಶ್ವಕಪ್‌ ಎತ್ತಿ ಮೆರೆದಾಡಿತು. ಇದರ ರೂವಾರಿ ಮರಡೋನಾ. ಅಂದು ಮರಡೋನಾ ತಂಡದ ಸಾರಥಿಯೂ ಆಗಿದ್ದರು. ಇವರ ಒಂದೊಂದು ಗೋಲಿನೊಂದಿಗೂ ಒಂದೊಂದು ಹೆಸರು ಅಚ್ಚೊತ್ತಲ್ಪಟ್ಟಿತು. “ಹ್ಯಾಂಡ್‌ ಆಫ್ ಗಾಡ್‌’, “ಗೋಲ್‌ ಆಫ್ ದಿ ಸೆಂಚುರಿ’ ಇತ್ಯಾದಿ. ಫೈನಲ್‌ನಲ್ಲಿ ಪಶ್ಚಿಮ ಜರ್ಮನಿಯನ್ನು 3-2 ಗೋಲುಗಳಿಂದ ಮಣಿಸಿದ ಆರ್ಜೆಂಟೀನಾ ಕಿರೀಟ ಧರಿಸಿತು. ಮರಡೋನಾ ಒಟ್ಟು 5 ಗೋಲು ಹೊಡೆದು ಮೆರೆದಾಡಿದರು.

ಮೆಸ್ಸಿ -ಆಧುನಿಕ ಫ‌ುಟ್‌ಬಾಲಿನ ಕೋಲ್ಮಿಂಚು
ಲಿಯೋನೆಲ್‌ ಮೆಸ್ಸಿ ಅವರನ್ನು ಆಧುನಿಕ ಫ‌ುಟ್‌ಬಾಲಿನ ಕೋಲ್ಮಿಂಚು ಎಂದೇ ಕರೆಯುತ್ತಾರೆ. ಆರ್ಜೆಂಟೀನಾದ ಫಾರ್ವರ್ಡ್‌ ಆಟಗಾರನಾಗಿರುವ ಮೆಸ್ಸಿ ಈಗ ನಿವೃತ್ತಿಯ ಹಾದಿಯಲ್ಲಿದ್ದಾರೆ. ಮೆಸ್ಸಿ ಕೂಡ ವಿಶ್ವಕಪ್‌ ಮೂಲಕವೇ ಚಾಲ್ತಿಗೆ ಬಂದ ಆಟಗಾರ. 2006 ಜರ್ಮನಿ ಕೂಟದಲ್ಲಿ ಮೊದಲ ಸಲ ಕಾಣಿಸಿಕೊಂಡ ಮೆಸ್ಸಿ ಒಂದೇ ಗೋಲಿನಿಂದ ಮನೆಮಾತಾದ ಹೀರೋ. ವಿಶ್ವಕಪ್‌ನಲ್ಲಿ ಆರ್ಜೆಂ ಟೀನಾವನ್ನು ಪ್ರತಿನಿಧಿಸಿದ ಅತೀ ಕಿರಿಯನೆಂಬ ದಾಖಲೆ ಮೆಸ್ಸಿ ಹೆಸರಲ್ಲೇ ಇದೆ. 

ಅದು ಸರ್ಬಿಯಾ ಆ್ಯಂಡ್‌ ಮಾಂಟೆನೆಗ್ರೊ ವಿರುದ್ಧದ ಪಂದ್ಯ. ಆರ್ಜೆಂಟೀನಾದ 6-0 ಗೆಲುವಿನಲ್ಲಿ ಮೆಸ್ಸಿ ಕೊನೆಯ ಗೋಲು ಹೊಡೆದು ಇಲ್ಲಿಯೂ “ಕಿರಿಯ’ನೆಂಬ ಹಿರಿಮೆಗೆ ಪಾತ್ರರಾದರು. ಈವರೆಗೆ 15 ವಿಶ್ವಕಪ್‌ ಪಂದ್ಯಗಳಿಂದ 5 ಗೋಲು ಹೊಡೆದಿದ್ದಾರೆ. ಆದರೆ ಈವರೆಗೆ ಮೆಸ್ಸಿ ತಂಡ ವಿಶ್ವಕಪ್‌ ಗೆದ್ದಿಲ್ಲ ಎಂಬುದೊಂದು ದುರಂತ! 2014ರ ಫೈನಲಿಸ್ಟ್‌ ಆರ್ಜೆಂಟೀನಾ ಈ ಬಾರಿ ಮೆಸ್ಸಿ ನಾಯಕತ್ವದಲ್ಲೇ ಕಣಕ್ಕಿಳಿಯಲಿದೆ.

“ವಿಶ್ವಕಪ್‌ ಫ‌ುಟ್‌ಬಾಲ್‌ ಎಂಬುದೊಂದು ಮಾಯೆ’ ಎಂದವರು ಫ‌ುಟ್‌ಬಾಲ್‌ ಲೆಜೆಂಡ್‌, ಬ್ರಝಿಲ್‌ನ ಪೀಲೆ. ಕಾರಣ, ಪೀಲೆ ಎಂಬ ಹೆಸರು ಇಂದಿಗೂ ಜಾಗತಿಕ ಕ್ರೀಡಾ ಮಟ್ಟದಲ್ಲಿ ಉಳಿದಿರಬೇಕಾದರೆ ಅದಕ್ಕೆ ವಿಶ್ವಕಪ್‌ ಫ‌ುಟ್‌ಬಾಲ್‌ ಪಂದ್ಯಾವಳಿಯೇ ಕಾರಣ. ಈ ಮಾಯಾ ಲೋಕದಿಂದ ಅವತರಿಸಿ ಬಂದವರು ನಾವೆಲ್ಲ ಎಂದು ಪೀಲೆ ಹೇಳಿದ್ದರಲ್ಲಿ ಖಂಡಿತ ಅಚ್ಚರಿ ಇಲ್ಲ. ಅಲ್ಲಿಯ ತನಕ ಕ್ಲಬ್‌ ಮಟ್ಟಕ್ಕಷ್ಟೇ ಸೀಮಿತವಾಗಿದ್ದ, ಅಥವಾ ಅನಾಮಧೇಯ ರಾಗಿಯೇ ಉಳಿದಿದ್ದ ಫ‌ುಟ್ಬಾಲಿಗರೆಲ್ಲ ವಿಶ್ವಕಪ್‌ನಲ್ಲಿ ಮಿಂಚು ಹರಿಸಿ ಒಮ್ಮಿಂದೊಮ್ಮೆಲೆ ಪ್ರಜ್ವಲಿಸಿದವರಲ್ಲಿ ಪೀಲೆ ಎಂಬ ಹೆಸರಿಗೆ ಅಗ್ರಸ್ಥಾನ. ಈ ಸಾಲಿಗೆ ಸೇರುವ ಕೆಲವೇ ಹೆಸರುಗಳೆಂದರೆ ಡೀಗೋ ಮರಡೋನಾ, ಲಿಯೋನೆಲ್‌ ಮೆಸ್ಸಿ ಮೊದಲಾದವರು.

ಪೆನಾಲ್ಟಿ  ಕಾರ್ನರ್‌
ವೀಸಾ ಇಲ್ಲದೇ ವಿಶ್ವಕಪ್‌ಗೆ!
ನೀವು ವಿಶ್ವಕಪ್‌ ಫ‌ುಟ್‌ಬಾಲ್‌ ಪಂದ್ಯ ವೀಕ್ಷಿಸಲು ರಶ್ಯಕ್ಕೆ ಹೋಗಬೇಕೆಂಬ ಆಸೆ ಇದೆಯೇ? ನಿಮಗೆ ಪಂದ್ಯದ ಟಿಕೆಟ್‌ ಸಿಕ್ಕಿದೆ, ಆದರೆ ವೀಸಾ ಇಲ್ಲವೇ? ಚಿಂತೆ ಬೇಡ. ವಿಶ್ವಕಪ್‌ ವೀಕ್ಷಣೆಗೆ ರಶ್ಯಕ್ಕೆ ಹೋಗಲು ವೀಸಾದ ಅಗತ್ಯ ಇಲ್ಲ! ವಿಶ್ವಕಪ್‌ ಟಿಕೆಟ್‌ ಹೊಂದಿದವರಿಗೆ “ಫ್ಯಾನ್‌ ಐಡಿ’ ಎಂಬ ವಿಶೇಷ ವ್ಯವಸ್ಥೆಯ ಮೂಲಕ ರಶ್ಯ ಪ್ರವೇಶಿಸಲು ಹಾಗೂ ವಾಪಸಾಗಲು ಅನುಮತಿ ನೀಡಲಾಗುತ್ತದೆ. ಇದಕ್ಕೆ ವೀಸಾದಷ್ಟೇ ಮಹತ್ವವಿದೆ. ಆದರೆ ಟಿಕೆಟ್‌ ಖರೀದಿಯ ದಾಖಲೆ, ಫಿಫಾ ನೀಡಿದ ಪ್ರವೇಶ ದಾಖಲೆ ಯನ್ನು ನೀವು ಹೊಂದಿರಬೇಕಾದುದು ಆಗತ್ಯ.
 
ಟಾಪ್ ನ್ಯೂಸ್

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

naxal-file

Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್‌ ನಿಶ್ಶಬ್ದ

purushotham-bilimale

Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!

Naxals-CM-Office

Naxals Surrender: ಶರಣಾದ ನಕ್ಸಲರ ಪ್ರಕರಣಗಳಿಗೆ ತ್ವರಿತ ನ್ಯಾಯಾಲಯ: ಸಿಎಂ ಸಿದ್ದರಾಮಯ್ಯ

Sathish-jarakhoili

Dinner Politics: ಊಟ, ಅಜೆಂಡಾ ನಮ್ಮದು, ಬೇರೆಯವರಿಗೆ ಆತಂಕ ಏಕೆ?: ಸತೀಶ್‌ ಜಾರಕಿಹೊಳಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijay Hazare Trophy: ಏಕದಿನ ಪ್ರಸಿದ್ಧ್ ಕೃಷ್ಣ ,ಪಡಿಕ್ಕಲ್‌ ಆಟ

Vijay Hazare Trophy: ಏಕದಿನ ಪ್ರಸಿದ್ಧ್ ಕೃಷ್ಣ ,ಪಡಿಕ್ಕಲ್‌ ಆಟ

Sam Konstas: ಇದೇ ಪರಿಸ್ಥಿತಿ ಮರುಕಳಿಸಿದರೆ ಸುಮ್ಮನಿರುವೆ

Sam Konstas: ಇದೇ ಪರಿಸ್ಥಿತಿ ಮರುಕಳಿಸಿದರೆ ಸುಮ್ಮನಿರುವೆ

ICC ಚಾಂಪಿಯನ್ಸ್‌ ಟ್ರೋಫಿ ಪಾಕ್‌ ಕ್ರೀಡಾಂಗಣಗಳೇ ಸಜ್ಜಾಗಿಲ್ಲ !

ICC ಚಾಂಪಿಯನ್ಸ್‌ ಟ್ರೋಫಿ ಪಾಕ್‌ ಕ್ರೀಡಾಂಗಣಗಳೇ ಸಜ್ಜಾಗಿಲ್ಲ !

ICC ಪಿಚ್‌ ರೇಟಿಂಗ್‌: ಸಿಡ್ನಿ ತೃಪ್ತಿಕರ, ಉಳಿದವು ಅತ್ಯುತ್ತಮ

ICC ಪಿಚ್‌ ರೇಟಿಂಗ್‌: ಸಿಡ್ನಿ ತೃಪ್ತಿಕರ, ಉಳಿದವು ಅತ್ಯುತ್ತಮ

ICC Bowling Ranking: ಐಸಿಸಿ ಬೌಲಿಂಗ್‌ ರ್‍ಯಾಂಕಿಂಗ್‌… ಬುಮ್ರಾ ಅಗ್ರಸ್ಥಾನ ಗಟ್ಟಿ

ICC Bowling Ranking: ಐಸಿಸಿ ಬೌಲಿಂಗ್‌ ರ್‍ಯಾಂಕಿಂಗ್‌… ಬುಮ್ರಾ ಅಗ್ರಸ್ಥಾನ ಗಟ್ಟಿ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

naxal-file

Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್‌ ನಿಶ್ಶಬ್ದ

purushotham-bilimale

Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.