ಅಂಪಾಯರ್ಗಳ ವೇತನ ದೇಶಿ ಕ್ರಿಕೆಟಿಗರ ವೇತನಕ್ಕಿಂತ ಜಾಸ್ತಿ!
Team Udayavani, Jun 4, 2018, 9:19 AM IST
ಮುಂಬಯಿ: ಭಾರತ ಕ್ರಿಕೆಟ್ ಮಂಡಳಿಯ (ಬಿಸಿಸಿಐ) ಪದಾಧಿಕಾರಿಗಳು ಮತ್ತು ನ್ಯಾಯ ಪೀಠ ನಿಯೋಜಿತ ಆಡಳಿತಾಧಿಕಾರಿಗಳ ನಡುವಿನ ವಾಗ್ವಾದ ಜೋರಾಗಿದೆ. ಇತ್ತೀಚೆಗಷ್ಟೇ ಅಂಪಾಯರ್ಗಳು ಮತ್ತು ಕ್ಯುರೇಟರ್ಗಳ ವೇತನವನ್ನು ಆಡಳಿತಾಧಿಕಾರಿಗಳು ಹೆಚ್ಚಿಸಿದ್ದರು. ಈ ವೇಳೆ ದೇಶಿ ಆಟಗಾರರ ವೇತನಕ್ಕಿಂತ ಅಂಪಾಯರ್ಗಳ ವೇತನವೇ ಹೆಚ್ಚಾಗಿದೆ ಎಂದು ಕೆಲವು ರಾಜ್ಯ ಕ್ರಿಕೆಟ್ ಸಂಸ್ಥೆಗಳ ಪದಾಧಿಕಾರಿಗಳು ತಕರಾರು ತೆಗೆದಿದ್ದಾರೆ. ಆದ್ದರಿಂದ ಜೂ. 22ಕ್ಕೆ ವಿಶೇಷ ಸಭೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ದಿನಕ್ಕೆ 40 ಸಾವಿರ
ವೇತನ ಪರಿಷ್ಕರಣೆಯ ಪ್ರಕಾರ ಅಂಪಾಯರ್ಗಳು ಪ್ರಥಮ ದರ್ಜೆ ಪಂದ್ಯವೊಂದರಲ್ಲಿ ದಿನವೊಂದಕ್ಕೆ ತಲಾ 40,000 ರೂ. ಪಡೆಯುತ್ತಾರೆ. ಸೀಮಿತ ಓವರ್ಗಳ ಪಂದ್ಯವಾದರೆ ದಿನಕ್ಕೆ 20,000 ರೂ. ಪಡೆಯಲಿದ್ದಾರೆ. ಆದರೆ ಆಟಗಾರರ ವೇತನ ದಿನಕ್ಕೆ 35,000 ರೂ. ಮಾತ್ರ. ಇಂಥ ತಾರತಮ್ಯ ಏಕೆ, ಆಟಗಾರರ ವೇತನ ಏಕೆ ಕಡಿಮೆಯಾಗಿದೆ ಎಂದು ಬಿಸಿಸಿಐ ಮಾಜಿ ಕಾರ್ಯದರ್ಶಿ, ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಮುಖ್ಯಸ್ಥ ನಿರಂಜನ್ ಶಾ ತಕರಾರು ತೆಗೆದಿದ್ದಾರೆ.
10 ಬೇಡಿಕೆಗಳ ನೋಟಿಸ್
ಇದೇ ಕಾರಣಕ್ಕೆ 10 ಬೇಡಿಕೆಗಳ ನೋಟಿಸೊಂದನ್ನು 20 ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ಕಳುಹಿಸಲಾಗಿದೆ. ಆದರೆ ಈ ವಿಶೇಷ ಸಭೆಗೆ ಆಡಳಿತಾಧಿಕಾರಿಗಳು ಅವಕಾಶ ನೀಡಿಲ್ಲ. ಇದು ಬಿಸಿಸಿಐ ಒಳಗಿನ ತಿಕ್ಕಾಟ ಬಿಗಡಾಯಿಸುವಂತೆ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Tollywood: ‘ಗೇಮ್ ಚೇಂಜರ್ʼಗೆ ರಾಮ್ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.