ಜ್ಞಾನ ದಾನಕ್ಕೆ ಶೇಷ್ಠ ಅಧಿ ಕಮಾಸ: ಮಂತ್ರಾಲಯ ಶ್ರೀ
Team Udayavani, Jun 4, 2018, 9:52 AM IST
ಬಳಗಾನೂರು: ಪ್ರತಿ ಮೂರು ವರ್ಷಕ್ಕೊಮ್ಮೆ ಬರುವ ಅಧಿಕ ಮಾಸವನ್ನು ಪರಮಾತ್ಮ ತನ್ನ ಪೂಜೆಗೆ ಮೀಸಲು ಇಟ್ಟುಕೊಂಡಿರುವ ಹಿನ್ನೆಲೆಯಲ್ಲಿ ಪುರುಷೋತ್ತಮನನ್ನು ಧ್ಯಾನ ಮಾಡಲು ಶೇಷ್ಠವಾದ ಮಾಸವಿದು ಎಂದು ಮಂತ್ರಾಲಯ ಮಠದ ಸುವಿಧ್ಯೇಂದ್ರತಿರ್ಥ ಶ್ರೀಪಾದಂಗಳು ನುಡಿದರು.
ಅಧಿ ಕ ಜೇಷ್ಠ ಮಾಸ ನಿಮಿತ್ತ ಪಟ್ಟಣದ ಮಾರುತಿ ದೇವಸ್ಥಾನದಲ್ಲಿ ವಿಪ್ರ ಸಮುದಾಯ ಹಾಗೂ ಭಕ್ತರು ಹಮ್ಮಿಕೊಂಡಿದ್ದ ಮುಖ್ಯ ಪ್ರಾಣ ದೇವರಿಗೆ ವಿಶೇಷ ಪೂಜೆ ಹಾಗೂ ಪವಮಾನ ಹೋಮ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಸಕಲರಿಗೂ ಬಂಧು-ಬಳಗವಾಗಿರುವ ಮುಖ್ಯ ಪ್ರಾಣದೇವರು ಭಗವಂತನ ಪ್ರಧಾನ ಅರ್ಚಕರು. ಇವರ ಸಾನ್ನಿಧ್ಯದಲ್ಲಿ ಪುರುಷೋತ್ತಮ ಮಾಸದಲ್ಲಿ ಭಗವಂತನಿಗೆ ಪೂಜೆ, ಹೋಮ-ಹವನ ನೆರವೇರಿಸುವುದರಿಂದ ಇಷ್ಟಾರ್ಥಗಳು ಪ್ರಾಪ್ತಿಯಾಗುತ್ತವೆ. ಈ ಮಾಸದಲ್ಲಿ ಪ್ರತಿಯೊಬ್ಬರು ಜ್ಞಾನ ದಾನದಲ್ಲಿ ತೊಡಗಬೇಕು. 33 ಕೋಟಿ ದೇವತೆಗಳನ್ನು ಪೂಜೆ ಮಾಡಲು ಶೇಷ್ಠವಾದ ಮಾಸ ಇದಾಗಿದೆ. ಪ್ರಾಣ ದೇವರಲ್ಲಿ ಪರಮಾತ್ಮ ಪುರುಷೋತ್ತಮರು ನೆಲೆಸಿದ್ದಾರೆ. 33 ಸಂಖ್ಯೆ ಪರಮಾತ್ಮನಿಗೆ ಪ್ರಿಯವಾಗಿರುವ ಹಿನ್ನೆಲೆಯಲ್ಲಿ 33 ಪವಮಾನ ಹೋಮ, ಪೂಜಾ ವಿಧಾನಗಳನ್ನು ನೆರವೇರಿಸುವುದರ ಮೂಲಕ ಭಗವಂತನ ಕೃಪೆ ದೊರೆಯಲಿದೆ. ಇಂತಹ ಅಭೂತಪೂರ್ವ ಮಹಾತ್ಕಾರ್ಯ ನೆರವೇರಿಸಿರುವ ಸದ್ಭಕ್ತರಿಗೆ ಸನ್ಮಂಗಲವಾಗಲಿ ಎಂದರು.
ಮಂತ್ರಾಲಯ ಮಠದ ಸುವಿಧ್ಯೇಂದ್ರತಿರ್ಥ ಶ್ರೀಪಾದಂಗಳು ಪವಮಾನ ಹೋಮ, ಪೂರ್ಣಾಹುತಿ ಕಾರ್ಯ ನೆರವೇರಿಸಿದರು. ಶ್ರೀ ಮಾರುತಿಗೆ ಮಧು ಅಭಿಷೇಕ, ವಿವಿಧ ಪೂಜಾ ಕಾರ್ಯಕ್ರಮಗಳನ್ನು ಸುರೇಂದ್ರ ಆಚಾರ್ಯ ಕೋರ್ತಕುಂದ ನೇತೃತ್ವದಲ್ಲಿ ನೆರವೇರಿಸಲಾಯಿತು. 46 ಜೋಡಿ ದಂಪತಿ ಪಾಲ್ಗೊಂಡಿದ್ದರು.
ಮಸ್ಕಿ ಕ್ಷೇತ್ರದ ಶಾಸಕ ಪ್ರತಾಪಗೌಡ ಪಾಟೀಲ ಸೇರಿದಂತೆ ಹೋಮ ಕಾರ್ಯದಲ್ಲಿ ಭಾಗವಹಿಸಿದ್ದ ದಂಪತಿಗೆ ಮಂತ್ರಾಲಯ ಶ್ರೀಗಳು ಆಶೀರ್ವಚನ ನೀಡಿದರು. ಸಂದರ್ಭದಲ್ಲಿ ಹನುಮೇಶ ಜೋಷಿ, ಗುರುರಾಜ ಆಚಾರ್ಯ ಮೂರ್ತಿ ಆಚಾರ್ಯ, ಹನುಮೇಶ ಕುಲಕರ್ಣಿ, ಗಿರೀಶ ಆಚಾರ್ಯ, ಪದ್ಮನಾಭಾಚಾರ್ಯ, ಸಮೀರ ಆಚಾರ್ಯ, ಮಧುಸೂಧನ ಆಚಾರ್ಯ, ರಾಮಾಚಾರ್ಯ, ವಿಜಯಾಚಾರ್ಯ, ಬದ್ರಿ ಆಚಾರ್ಯ, ಸುರೇಶ ಆಚಾರ್ಯ, ರಂಗನಾಥ ಪೂಜಾರ, ಮುಖಂಡರಾದ ಶಂಕರರಾವ್ ಕುಲಕರ್ಣಿ, ಶೇಖರಪ್ಪ ಮೇಟಿ, ಪಂಪನಗೌಡ ಮಾಲಿಪಾಟೀಲ, ಮಲ್ಲರಾವ ಪಟವಾರಿ, ಬಾಬಣ್ಣ ಆಚಾರ್ಯ ಹಾಗೂ ಸದ್ಭಕ್ತರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Gautam Adani;ಯುಎಸ್ ದೋಷಾರೋಪಣೆಯ ತನಿಖೆ ಕೋರಿ ಸುಪ್ರೀಂ ನಲ್ಲಿ ಹೊಸ ಮನವಿ
Siddakatte Kodange Kambala: ಈ ಸೀಸನ್ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.