ಬ್ಯಾಟ್‌- ಚೆಂಡಿನೊಂದಿಗೆ ಆಡಿ ಸಂಭ್ರಮಿಸಿದ ಮಹಿಳಾ ಮಣಿಗಳು


Team Udayavani, Jun 4, 2018, 10:51 AM IST

4june-2.jpg

ಮಹಾನಗರ : ಇಂದಿನ ದಿನಗಳಲ್ಲಿ ಕ್ರಿಕೆಟ್‌ ಹೆಚ್ಚಿನ ಜನಪ್ರಿಯತೆಗಳಿಸುತ್ತಿದ್ದು, ಬೇರೆ ಬೇರೆ ಸಂಘಟನೆ ಗಳು ದೊಡ್ಡ ಮಟ್ಟದ ಪಂದ್ಯವನ್ನು ಆಯೋಜಿಸುತ್ತಲೇ ಇರುತ್ತವೆ. ಅದೆಲ್ಲವೂ ಪುರುಷರಿಗೆ ಮೀಸಲಾದ ಪಂದ್ಯಗಳಾಗಿವೆ. ಆದರೆ ರವಿವಾರ ನಗರದ ಉರ್ವ ಮೈದಾನ ಮಹಿಳೆಯರ ಕ್ರಿಕೆಟ್‌ ಪಂದ್ಯಾಟವೊಂದಕ್ಕೆ ಸಾಕ್ಷಿಯಾಗಿದೆ.

ಇದೇ ಮೊದಲ ಬಾರಿಗೆ ಪಂದ್ಯಾಟ
 ನಗರದ ಪಾತ್‌ವೇ ಸಂಸ್ಥೆಯು ಇದೇ ಮೊದಲ ಬಾರಿಗೆ ‘ಫಸ್ಟ್‌ ವಿಮೆನ್ಸ್‌ ಕ್ರಿಕೆಟ್‌ ಚಾಂಪಿಯನ್‌ಶಿಪ್‌- 2018’ ಅನ್ನು ಆಯೋಜಿಸುವ ಮೂಲಕ ಮಹಿಳೆಯರೂ ಕ್ರಿಕೆಟ್‌ನಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುವಂತೆ ಮಾಡಿದೆ. ಈ ಹಿಂದೆ ಲಗೋರಿ ಪಂದ್ಯ ವನ್ನು ದೊಡ್ಡ ಮಟ್ಟದಲ್ಲಿ ಆಯೋಜಿಸಿ, ಗ್ರಾಮೀಣ ಕ್ರೀಡೆಗೆ ಆಧುನಿಕ ಸ್ಪರ್ಶ ನೀಡುವ ಕಾರ್ಯವನ್ನು ಪಾತ್‌ವೇ ಮಾಡಿತ್ತು. 

‘ಕ್ರಿಕೆಟ್‌ದ ಗೊಬ್ಬು…’
ಬ್ಯಾಟ್‌ ಬೀಸುವಾಗ, ಚೆಂಡು ಹಿಡಿಯುವಾಗ ಒಂದೆರಡು ಸಣ್ಣಪುಟ್ಟ ತಪ್ಪುಗಳಾದರೂ ಉಳಿದಂತೆ ಪುರುಷರಿಗೆ ಯಾವ ರೀತಿಯಲ್ಲೂ ಕಡಿಮೆ ಇಲ್ಲದಂತೆ ಪಾಲ್ಗೊಂಡರು. ಈ ಪಂದ್ಯಾಟಕ್ಕಾಗಿಯೇ ‘ಕ್ರಿಕೆಟ್‌ದ ಗೊಬ್ಬು’ ಎಂಬ ತುಳು ಸಾಹಿತ್ಯದ ಹಾಡೊಂದನ್ನು ಸಂಯೋಜಿಸಿ, ಪಂದ್ಯಾಟದ ಮಧ್ಯೆ ಪದೇ ಪದೇ ಈ ಹಾಡನ್ನು ಹಾಕುವುದರ ಮೂಲಕ ಆಟಗಾರ್ತಿಯರಲ್ಲಿ ಉತ್ಸಾಹ ತುಂಬುವ ಕಾರ್ಯ ಮಾಡಲಾಗುತ್ತಿತ್ತು.  ವಿಜೇತರಿಗೆ ಟ್ರೋಫಿಯ ಜತೆಗೆ ನಗದು ಬಹುಮಾನ, ಮೂರು ಉತ್ತಮ ಆಟಗಾರರಿಗೆ ಮೊಬೈಲ್‌ ಹೀಗೆ ಆಕರ್ಷಕ ಬಹುಮಾನಗಳೂ ಅಲ್ಲಿದ್ದವು.

ಕ್ರಿಕೆಟ್‌ ಉದ್ಘಾಟನೆ
ಪಂದ್ಯಾಟವನ್ನು ಎಂಆರ್‌ಎಸ್‌ ಇಂಡಿಯಾದ ನಿರ್ದೇಶಕಿ ಪ್ರತಿಭಾ ಉದ್ಘಾಟಿಸಿದ್ದು, ಅತಿಥಿಗಳಾಗಿ ಉದ್ಯಮಿ ಮರ್ಸಿ ವೀಣಾ ಡಿ’ಸೋಜಾ, ಸಂವೇದನಾ ಟ್ರಸ್ಟ್‌ನ ಜಯಲತಾ ಎಸ್‌. ಅಮೀನ್‌, ಪರಿವರ್ತನಾ ಚಾರಿಟೆಬಲ್‌ ಟ್ರಸ್ಟ್‌ನ ಸಂಸ್ಥಾಪಕಿ ವಾಯಿಲೇಟ್‌ ಪಿರೇರಾ, ಕಾರ್ಯದರ್ಶಿ ಸಂಜನಾ ಎಸ್‌., ಮಹಿಳಾ ಕ್ರಿಕೆಟ್‌ ಚಾಂಪಿಯನ್‌ಶಿಪ್‌ ಮಂಡಳಿಯ ಅಧ್ಯಕ್ಷೆ ಮೊನಿಕಾ ಅಂದ್ರಾದೆ, ಲಾಲ್‌ಬಾಗ್‌ ಜೇಸಿಐ ಅಧ್ಯಕ್ಷೆ ಸೌಜನ್ಯಾ ಹೆಗ್ಡೆ, ಜಯಶ್ರೀ, ವರ್ಷಿಲ್‌ ಅಂಚನ್‌ ಮೊದಲಾದವರು ಪಾಲ್ಗೊಂಡಿದ್ದರು.

ಒಟ್ಟು ಎಂಟು ತಂಡಗಳು
ವಿಮೆನ್ಸ್‌ ಕ್ರಿಕೆಟ್‌ ಚಾಂಪಿಯನ್‌ ಶಿಪ್‌ನಲ್ಲಿ ಒಟ್ಟು ಎಂಟು ತಂಡಗಳು ಪಾಲ್ಗೊಂಡಿದ್ದು, ಸುಮಾರು ನೂರಕ್ಕೂ ಅಧಿಕ ಮಹಿಳಾ ಆಟಗಾರರು ಕ್ರಿಕೆಟ್‌ನಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ಮಂಗಳೂರು ಸೇರಿದಂತೆ ಉಡುಪಿ, ವಿಟ್ಲ, ಮಣಿಪಾಲ ಆಟಗಾರರಿದ್ದರು. ಕ್ವೀನ್‌ ಇಲೆವೆನ್‌ ಕುಡ್ಲ, ವಂಡರ್‌ ಗರ್ಲ್ಸ್‌ ತುಳುನಾಡು, ಕುಡ್ಲ ರಾಕರ್, ಪಿಂಕ್‌ ಪ್ಯಾಂಥರ್ ಕಲ್ಮಾಡಿ, ಮಂಗಳಸ್ಪೋರ್ಟ್ಸ್, ಎಂ.ಎಂಡಬ್ಲ್ಯೂ ವಾರಿಯರ್, ರಾಕ್‌ಸ್ಟಾರ್‌ ಮಣಿಪಾಲ್‌, ಜಸ್ಟ್‌ ಫಾರ್‌
ಯೂ ತಂಡಗಳು ಭಾಗವಹಿಸಿದ್ದವು. 

 ಉತ್ತಮ ಸ್ಪಂದನೆ
ತಾಯಂದಿರ ದಿನದ ಅಂಗವಾಗಿ ಈ ಕ್ರಿಕೆಟ್‌ ಪಂದ್ಯ ವನ್ನು ಆಯೋಜಿಸಿದ್ದು, ಚುನಾವಣೆ ಹಿನ್ನೆಲೆಯಲ್ಲಿ ಮುಂದೂಡಬೇಕಾಯಿತು. ಈ ಪಂದ್ಯಾಟಕ್ಕೆ ತಂಡಗಳಿಂದ ಉತ್ತಮ ಸ್ಪಂದನೆ ದೊರಕಿದ್ದು, ಮಹಿಳಾ ಉದ್ಯಮ ಸಂಸ್ಥೆಗಳ ಜತೆಗೆ ಸಂವೇದನಾ ಟ್ರಸ್ಟ್‌ ಕೂಡ ನಮಗೆ ಸಹಕಾರ ನೀಡಿದೆ.
– ದೀಪಕ್‌ ಗಂಗೂಲಿ, ಮುಖ್ಯಸ್ಥ, ಪಾತ್‌ವೇ ಸಂಸ್ಥೆ 

 ದಾಂಡೇಲಿಯಿಂದ ಆಗಮಿಸಿದ್ದೇನೆ
ಮಹಿಳೆಯರಿಗಾಗಿ ಕ್ರಿಕೆಟ್‌ ಆಯೋಜಿಸಿದ ಪಾತ್‌ವೇ ಸಂಸ್ಥೆಗೆ ವಂದನೆಯನ್ನು ಸಲ್ಲಿಸುತ್ತಿದ್ದೇವೆ. ತಾನು ಜಿಎಸ್‌ಬಿ ತಂಡದಲ್ಲಿ ನಿರಂತರವಾಗಿ ಕ್ರಿಕೆಟ್‌ ಆಡುತ್ತಿದ್ದು, ಈಗ ದಾಂಡೇಲಿಯಿಂದ ಈ ಪಂದ್ಯಾಟಕ್ಕಾಗಿಯೇ ಆಗಮಿಸಿದ್ದೇನೆ. ಇಲ್ಲಿ ಸುರೇಖಾ ಅವರು ನಾಯಕಿಯಾಗಿರುವ ಕುಡ್ಲ ರಾಕರ್ ತಂಡದಲ್ಲಿದ್ದೇನೆ.
 - ಸಹನಾ ಕಾಮತ್‌,
ಆಟಗಾರ್ತಿ, ಕುಡ್ಲ ರಾಕರ್

ಟಾಪ್ ನ್ಯೂಸ್

TMK-somanna2

ತುಮಕೂರು ಅಥವಾ ನೆಲಮಂಗಲ ಸಮೀಪವೇ ಮತ್ತೊಂದು ಏರ್‌ಪೋರ್ಟ್‌ ಆಗಲಿ: ವಿ.ಸೋಮಣ್ಣ

1-ayodhya

Ayodhya; ರಾಮಮಂದಿರ ಪ್ರಾಣ ಪ್ರತಿಷ್ಠಾ ಮೊದಲ ವಾರ್ಷಿಕೋತ್ಸವ ಸಂಭ್ರಮ

kejriwal 3

Ramesh Bidhuri ಬಿಜೆಪಿಯ ಸಿಎಂ ಫೇಸ್ ಎಂದು ಅಭಿನಂದನೆ ಸಲ್ಲಿಸಿದ ಕೇಜ್ರಿವಾಲ್!

rape

Kerala; 5 ವರ್ಷಗಳಲ್ಲಿ 64 ಜನರಿಂದ ಲೈಂಗಿ*ಕ ದೌರ್ಜನ್ಯ: ಯುವತಿ ಹೇಳಿಕೆ !!

Vijayendra did not go to Kalaburagi due to Priyank Kharge’s threat: MLA Yatnal

BJP: ಪ್ರಿಯಾಂಕ್ ಖರ್ಗೆ ಧಮ್ಕಿಯಿಂದ ಕಲಬುರಗಿಗೆ ಹೋಗದ ವಿಜಯೇಂದ್ರ: ಶಾಸಕ ಯತ್ನಾಳ್

ಅಂದು ಪ್ರತಾಪ್‌ ಇಂದು ಹನುಮಂತು: ಫಿನಾಲೆ ತಲುಪಿದ ರೈತನ ಮಗನಿಗೆ ಒಲಿಯುತ್ತಾ ಬಿಗ್‌ಬಾಸ್ ಕಪ್?

ಅಂದು ಪ್ರತಾಪ್‌ ಇಂದು ಹನುಮಂತು: ಫಿನಾಲೆ ತಲುಪಿದ ರೈತನ ಮಗನಿಗೆ ಒಲಿಯುತ್ತಾ ಬಿಗ್‌ಬಾಸ್ ಕಪ್?

1-asssam-1

New York Time ಟ್ರಾವೆಲ್ 2025 ಲಿಸ್ಟ್; 52 ಸ್ಥಳಗಳ ಪಟ್ಟಿಯಲ್ಲಿ ಅಸ್ಸಾಂಗೆ ನಾಲ್ಕನೇ ಸ್ಥಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

Kumbale: ರೈಲಿನಿಂದ ಬಿದ್ದು ಯುವಕನ ಸಾವು

Kumbale: ರೈಲಿನಿಂದ ಬಿದ್ದು ಯುವಕನ ಸಾವು

Kumbale: ಸಾರ್ವಜನಿಕರಿಗೆ ಸಮಸ್ಯೆ; ಇಬ್ಬರ ಬಂಧನ

Kumbale: ಸಾರ್ವಜನಿಕರಿಗೆ ಸಮಸ್ಯೆ; ಇಬ್ಬರ ಬಂಧನ

10

Malpe: ಕುಸಿದು ಬಿದ್ದು ವ್ಯಕ್ತಿ ಸಾವು

TMK-somanna2

ತುಮಕೂರು ಅಥವಾ ನೆಲಮಂಗಲ ಸಮೀಪವೇ ಮತ್ತೊಂದು ಏರ್‌ಪೋರ್ಟ್‌ ಆಗಲಿ: ವಿ.ಸೋಮಣ್ಣ

8

Gangolli: 9 ದಿನ ಕಳೆದರೂ ಮೀನುಗಾರನ ಸಿಗದ ಸುಳಿವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.