ಮೊಬೈಲ್‌ ಕಳ್ಳನೆಂದು ಶಂಕಿಸಿ ಅಪರಿಚಿತನಿಗೆ ಧರ್ಮದೇಟು


Team Udayavani, Jun 4, 2018, 11:26 AM IST

vij-4.jpg

ಆಲಮಟ್ಟಿ: ವಾರದ ಸಂತೆಯಾದ ರವಿವಾರದಂದು ಸಂತೆಯಲ್ಲಿ ಕೆಲವು ವ್ಯಕ್ತಿಗಳ ಮೊಬೈಲ್‌ ಕಳ್ಳತನವಾಗಿದ್ದರಿಂದ ವ್ಯಕ್ತಿಯೊಬ್ಬನ ಶಂಕಾಸ್ಪದವಾಗಿ ಶಂಕಿಸಿ ಇಪ್ಪತ್ತಕ್ಕೂ ಹೆಚ್ಚು ಜನರು ಅಪರಿಚಿತ ವ್ಯಕ್ತಿಯನ್ನು ಥಳಿಸಿದ ಘಟನೆ ಜರುಗಿದೆ.

ಘಟನೆ ವಿವರ: ಆಲಮಟ್ಟಿಯ ವಾರದ ಸಂತೆಯು ರವಿವಾರವಾದ್ದರಿಂದ ಸಂತೆಗೆ ಆಗಮಿಸಿದ್ದ ಇಬ್ಬರ ವ್ಯಕ್ತಿಗಳ ಮೊಬೈಲ್‌ಗ‌ಳು ಹಾಗೂ ಓರ್ವ ವ್ಯಕ್ತಿಯ 5000 ರೂ. ಕಳ್ಳತನವಾಗಿದೆ. ಒಬ್ಬನ ಮೊಬೈಲ್‌ ಕಳ್ಳತನವಾಗುವಾಗ ಕಳ್ಳನನ್ನು ನೋಡಿ ಕಳ್ಳ ಕಳ್ಳ ಎಂದು ಚೀರಿದಾಗ, ಓರ್ವ ಯುವಕ ಓಡಿ ಹೋಗುವುದನ್ನು ಕಂಡ ಸಂತೆಗೆ ಬಂದ ಜನ ಅಪರಿಚಿವ ವ್ಯಕ್ತಿಯನ್ನು ಹಿಡಿಯಲು ಪ್ರಯತ್ನಿಸಿ ಕೊನೆಗೆ ಆ ವ್ಯಕ್ತಿಯನ್ನು ಹಿಡಿದು ಧರ್ಮದೇಟು ನೀಡಿದ್ದಾರೆ.

ತಪ್ಪಿಸಿಕೊಳ್ಳಲು ಯತ್ನ: ಸೇರಿದ ಜನರು ಧರ್ಮದೇಟು ನೀಡುತ್ತಿರುವಾಗ ವ್ಯಕ್ತಿಯೋರ್ವನನ್ನು ನೂಕಿ ಪರಾರಿಯಾಗಲು ಯತ್ನಿಸಿದ್ದಾನೆ. ಇದರಿಂದ ಕುಪಿತಗೊಂಡ ಜನ ಮತ್ತೆ ಥಳಿಸಲಾರಂಬಿಸಿದ್ದಾರೆ. ಆತ ಹೊಡೆತ ತಾಳಲಾರದೆ ಓಡಿ ಹೋಗಲು ಯತ್ನಿಸಿದ್ದಾನೆ. ಕೆಲ ಮನೆಗಳ ಕಾಂಪೌಂಡ್‌ ಹಾರಿ ಒಬ್ಬರ ಮನೆಯಲ್ಲಿ ಅಡಗಿದ್ದಾನೆ. ಅಷ್ಟರೊಳಗೆ ಅಲ್ಲಿಗೆ ಬಂದ ಗ್ರಾಮಸ್ಥರು ಹಾಗೂ ಸಂತೆಗೆ ಬಂದ ಹಲವು ಜನ ಸೇರಿ ಆತನನ್ನು ಹಿಗ್ಗಾಮುಗ್ಗಾ ಮತ್ತೆ ಥಳಿಸಿದ್ದಾರೆ.

ಆಲಮಟ್ಟಿಯಲ್ಲಿ ಪ್ರತಿ ರವಿವಾರವೂ ಸಂತೆ ನಡೆಯುತ್ತದೆ. ಇಲ್ಲಿಗೆ ನೂರಾರು ಹಳ್ಳಿಗಳಿಂದ ಜನರು ಸಂತೆಗೆ ಆಗಮಿಸುತ್ತಾರೆ. ಅವರ ರಕ್ಷಣೆಗೆ ಇಲ್ಲಿ ಯಾವ ಪೊಲೀಸರು ಇರುವುದಿಲ್ಲ. ಕಳ್ಳತನ ಘಟನೆಗಳು ಮೇಲಿಂದ ಮೇಲೆ ನಡೆದರೂ ಅದರ ಬಗ್ಗೆ ಪೊಲೀಸರು ಮಾತ್ರ ಮೌನವಾಗುತ್ತಾರೆ. ಈಗ ಸಿಕ್ಕಿರುವ ವ್ಯಕ್ತಿಯು ಕಳ್ಳನೋ ಅಥವಾ ನಿರಪರಾಧಿಯೋ ಎನ್ನುವುದನ್ನು ನೋಡದೇ ಸಂತೆಗೆ ಆಗಮಿಸಿದ್ದ ಜನ ಅಪರಿಚಿತ ವ್ಯಕ್ತಿಯನ್ನು ರಸ್ತೆ ಮೇಲೆ ಎಸೆದಿದ್ದಾರೆ. ಇಷ್ಟೆಲ್ಲಾ ಘಟನೆಯಾದರೂ ಯಾವೊಬ್ಬ ಪೊಲೀಸರು ಘಟನಾ ಸ್ಥಳಕ್ಕೆ ಬರಲಿಲ್ಲ ಎಂದು ನೆರೆದ ಜನ ಮಾತನಾಡುತ್ತಿರುವುದು ಕಂಡು ಬಂತು.

ಸಿಂದಗಿ ಪಟ್ಟಣದ ವಿಜಯನಗರ ಬಡಾವಣೆಯ ನಿವಾಸಿಯಾಗಿದ್ದೇನೆ. ನನ್ನ ಮಿತ್ರ ಆಲಮಟ್ಟಿಗೆ ಬರುವುದಾಗಿ ತಿಳಿಸಿದ್ದ, ಅದಕ್ಕಾಗಿ ನಾನು ಆಲಮಟ್ಟಿಗೆ ಬಂದಿದ್ದೆ. ಅಲ್ಲಿ ಬಂದು ಸರಾಯಿ ಕುಡಿದಿದ್ದೆ. ಆದರೆ ಮೊಬೈಲ್‌ ಕಳ್ಳತನ ಮಾಡಿಲ್ಲ. ಏಕಾಏಕಿ ನುಗ್ಗಿದ 20ಕ್ಕೂ ಅಧಿಕ ಜನ ಹಿಗ್ಗಾಮುಗ್ಗಾ ಥಳಿಸಿದರು. ಎಷ್ಟೇ ಮನವಿ ಮಾಡಿದರೂ ಬಿಡಲಿಲ್ಲ. ಜೀವದ ಸಂಕಟಕ್ಕೆ ಅಲ್ಲಿಂದ ಓಡಿ ಹೋದೆ, ಆಗ ಕಾಂಪೌಂಡ್‌ ಜಿಗಿದು ಒಬ್ಬರ ಮನೆಯಲ್ಲಿ ಅಡಗಿದ್ದೆ, ಅಲ್ಲಿಯೂ ಬಂದ ಜನ ನನ್ನನ್ನು ಹೊಡೆದರು. 
 ಹನುಮಂತ ಕಟ್ಟಿಮನಿ, ಥಳಿತಕ್ಕೊಳಗಾದ ವ್ಯಕ್ತಿ

ಮೊಬೈಲ್‌ ಕಳ್ಳತನದ ಬಗ್ಗೆ ಯಾರೂ ಕೂಡ ಮಾಹಿತಿ ನೀಡಿಲ್ಲ. ಆದರೆ ಸಂತೆಯಲ್ಲಿ ಮೊಬೈಲ್‌ ಹಾಗೂ ಹಣ ಕಳ್ಳತನ ಮಾಡಿದ ವ್ಯಕ್ತಿಯನ್ನು ಜನರು ಹೊಡೆಯುತ್ತಿದ್ದಾರೆ ಎಂದು ಮಾಹಿತಿ ಬಂದ ಕೂಡಲೇ ಸ್ಥಳಕ್ಕೆ ಸಿಬ್ಬಂದಿಯನ್ನು ಕಳಿಸಲಾಗಿದ್ದು ಅಲ್ಲಿಯ ಜನರೇ ಆಸ್ಪತ್ರೆಗೆ ಕಳುಹಿಸಿದ್ದಾರೆ.
 ಎಸ್‌.ಡಿ. ಕೊಲ್ಹಾರ, ಪಿಎಸೈ

ಟಾಪ್ ನ್ಯೂಸ್

1-cm-yogi

Mahakumbh; ಕುಂಭ ಮೇಳ ಸನಾತನ ಗರ್ವ: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌

CT Ravi

CID; ಶಾಸಕ ಸಿ.ಟಿ. ರವಿ ಬೆಳಗಾವಿ ದೌರ್ಜನ್ಯ ವಿವರಣೆ

ಮಹಾರಾಷ್ಟ್ರದಲ್ಲೂ ರಾಜ್ಯದ ಮಕ್ಕಳ ಶಾಲಾ ದಾಖಲಾತಿ!

ಮಹಾರಾಷ್ಟ್ರದಲ್ಲೂ ರಾಜ್ಯದ ಮಕ್ಕಳ ಶಾಲಾ ದಾಖಲಾತಿ!

vaman

Mangaluru: ವಾಮಂಜೂರು ಗುಂಡು ಹಾರಾಟ ಪ್ರಕರಣ: ಇಬ್ಬರು ಕುಖ್ಯಾತರ ಬಂಧನ

1-uss

American wildfires:1 ಲಕ್ಷ ಮಂದಿಯ ಸ್ಥಳಾಂತರ! ; ಹಾಲಿವುಡ್‌ನ‌ ಹಲವು ಕಾರ್ಯಕ್ರಮ ರದ್ದು

Bhopal: ಮಧ್ಯಪ್ರದೇಶದಲ್ಲೀಗ ವಿಷ ತ್ಯಾಜ್ಯ ಅಪಾಯ

Bhopal: ಮಧ್ಯಪ್ರದೇಶದಲ್ಲೀಗ ವಿಷ ತ್ಯಾಜ್ಯ ಅಪಾಯ

cyber crime

Cyber ​​fraud ಬ್ಯಾಂಕ್‌ ಹೊಣೆ: ಸುಪ್ರೀಂಕೋರ್ಟ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijayapura: ಮಹಿಳಾ ವಿವಿಯಿಂದ ನಟಿ ತಾರಾ, ಮೀನಾಕ್ಷಿ ಬಾಳಿ, ವೇದಾರಾಣಿಗೆ ಗೌರವ ಡಾಕ್ಟರೇಟ್

Vijayapura: ಮಹಿಳಾ ವಿವಿಯಿಂದ ನಟಿ ತಾರಾ, ಮೀನಾಕ್ಷಿ ಬಾಳಿ, ವೇದಾರಾಣಿಗೆ ಗೌರವ ಡಾಕ್ಟರೇಟ್

Vijayapura: ಮಕ್ಕಳ ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿಗೆ ಜೀವಾವಧಿ ಶಿಕ್ಷೆ

Vijayapura: ಮಕ್ಕಳ ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿಗೆ ಜೀವಾವಧಿ ಶಿಕ್ಷೆ

Leopard spotted in Vijayapura city: CCTV footage captured

Leopard: ವಿಜಯಪುರ ನಗರದಲ್ಲಿ ಕಾಣಿಸಿಕೊಂಡ ಚಿರತೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ

Yathanaa

BJP Inner Politics: ಬಿ.ವೈ.ವಿಜಯೇಂದ್ರ ಬಿಜೆಪಿ ಹಂಗಾಮಿ ರಾಜ್ಯಾಧ್ಯಕ್ಷ: ಬಸನಗೌಡ ಯತ್ನಾಳ್‌

arrested

Vijayapura; ವಿದ್ಯಾರ್ಥಿನಿಯರಿಗೆ ಲೈಂಗಿ*ಕ ಕಿರುಕುಳ: ಸರಕಾರಿ ಕಾಲೇಜು ಪ್ರಾಂಶುಪಾಲ ಸೆರೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

1-cm-yogi

Mahakumbh; ಕುಂಭ ಮೇಳ ಸನಾತನ ಗರ್ವ: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌

CT Ravi

CID; ಶಾಸಕ ಸಿ.ಟಿ. ರವಿ ಬೆಳಗಾವಿ ದೌರ್ಜನ್ಯ ವಿವರಣೆ

ಮಹಾರಾಷ್ಟ್ರದಲ್ಲೂ ರಾಜ್ಯದ ಮಕ್ಕಳ ಶಾಲಾ ದಾಖಲಾತಿ!

ಮಹಾರಾಷ್ಟ್ರದಲ್ಲೂ ರಾಜ್ಯದ ಮಕ್ಕಳ ಶಾಲಾ ದಾಖಲಾತಿ!

vaman

Mangaluru: ವಾಮಂಜೂರು ಗುಂಡು ಹಾರಾಟ ಪ್ರಕರಣ: ಇಬ್ಬರು ಕುಖ್ಯಾತರ ಬಂಧನ

1-uss

American wildfires:1 ಲಕ್ಷ ಮಂದಿಯ ಸ್ಥಳಾಂತರ! ; ಹಾಲಿವುಡ್‌ನ‌ ಹಲವು ಕಾರ್ಯಕ್ರಮ ರದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.