ಐತಿಹಾಸಿಕ ಬಸದಿ ಜೀರ್ಣೋದ್ಧಾರಕ್ಕೆ ಸಿಧ್ಧತೆ

Team Udayavani, Jun 4, 2018, 11:40 AM IST

4june-4.jpg

ಸುಳ್ಯ : ಬೆಳ್ಳಾರೆ ಅನೇಕ ಐತಿಹ್ಯಗಳ ನೆಲೆ. ಪ್ರಥಮ ಸ್ವಾತಂತ್ರ್ಯ ಹೋರಾಟದ ನೆಲೆಗಟ್ಟಿನಲ್ಲಿ ಇತಿಹಾಸದ ಪುಟದಲ್ಲಿ ದಾಖಲಾದ ಊರು. ಇಲ್ಲಿನ ಪೇಟೆಯಿಂದ 1 ಕಿ.ಮೀ. ದೂರದ ಬಸ್ತಿಗುಡ್ಡೆ ಯಲ್ಲಿ ಜೀರ್ಣಾವಸ್ಥೆಯಲ್ಲಿ ಸಾವಿರಕ್ಕೂ ಅಧಿಕ ವರ್ಷಗಳ ಇತಿಹಾಸ ಇರುವ ಬಸದಿಯೊಂದು ಜೀರ್ಣೋದ್ಧಾರದ ಸಿದ್ಧತೆಯಲ್ಲಿದೆ.

ದೇವಿ ಸ್ವರೂಪದಲ್ಲಿ ಪದ್ಮಾವತಿ ಅಮ್ಮ, ಪಾರ್ಶ್ವನಾಥನ ಆರಾಧನೆ ನಡೆಯುತ್ತಿದ್ದ ಸ್ಥಳ ಎಂದು ಪ್ರಶ್ನಾಚಿಂತನೆಯಲ್ಲಿ ಕಂಡು ಬಂದಿದ್ದು, ಅದಕ್ಕೆ ಸಾಕ್ಷಿಯಾಗಿ ವಿಗ್ರಹ, ಗರ್ಭಗುಡಿ, ಬಾವಿ ಮೊದಲಾದವುಗಳು ಇಲ್ಲಿನ ಗತವೈಭವದ ದಿನಗಳನ್ನು ನೆನಪಿಸುತ್ತಿದೆ. ಪುರಾತನ ಶೈಲಿಯ ಕೆತ್ತನೆ, ಸಂಪೂರ್ಣ ಶಿಲಾಮಯ ಸ್ಥಿತಿಯಲ್ಲಿದ್ದ ಈ ಬಸದಿ ಜೈನ ಪರಂಪರೆಗೆ ಸಂಬಂಧಿಸಿದೆ.

ಬಲ್ಲಾಳರ ಆಳ್ವಕೆಯ ಕಾಲದಲ್ಲಿ ಈ ಬಸದಿ ನಿರ್ಮಾಣವಾಗಿರಬಹುದು. ಇದೇ ಪರಿಸರದ ಬೂಡುವಿನಲ್ಲಿ ಅರಮನೆ, ಮಣಿಮಜಲಿನಲ್ಲಿ ದೈವಗಳ ಗುಡಿ, ಬಸ್ತಿಗುಡ್ಡೆಯಲ್ಲಿ ಬಸದಿ ಇತ್ತು ಎಂಬುದಕ್ಕೆ ಕುರುಹುಗಳಿವೆ. ಮಣಿಮಜಲು, ಪನ್ನೆಯಲ್ಲಿ ಪುನರುತ್ಥಾನ ಕಾರ್ಯಗಳು ನಡೆದಿವೆ. ಜೀರ್ಣಾವಸ್ಥೆಯಲ್ಲಿರುವ ಬಸದಿ ಮೂರು ಗ್ರಾಮಕ್ಕೆ ಸೇರಿದ್ದು ಎಂಬ ಹಿನ್ನೆಲೆ ಇದೆ. ಬೆಳ್ಳಾರೆ, ಪೆರುವಾಜೆ, ಕಳಂಜ ಗ್ರಾಮಗಳಿಗೆ ಬಸದಿಯ ನಂಟಿದೆ. ಇಲ್ಲಿರುವ ಎಲ್ಲ ದೇವಸ್ಥಾನಗಳಿಗೂ ಬಸದಿಗೂ ವಿಶೇಷ ಸಂಬಂಧ ಇತ್ತು. ಒಂದು ಮಾಹಿತಿ ಪ್ರಕಾರ, ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ಪೇಟೆ ಸವಾರಿ ಈ ಬಸದಿ ತನಕ ಬಂದು ತೆರಳುತ್ತಿತ್ತು ಎಂದು ಕೆಲವರು ಅಭಿಪ್ರಾಯಿಸುತ್ತಾರೆ.

ಕಾಲ ಕ್ರಮೇಣ ಬಸದಿ ನೋಡಿಕೊಳ್ಳುತ್ತಿದ್ದ ಜೈನಮನೆತನ ನಶಿಸಿ ಹೋದ ಬಳಿಕ ಇಲ್ಲಿ ಪೂಜಾ ಕಾರ್ಯಕ್ರಮಗಳು ನಿಂತು ಜೀರ್ಣಾವಸ್ಥೆಗೆ ತಲುಪಿತ್ತು. ಇಲ್ಲಿ ಧಾರ್ಮಿಕ ಆಚರಣೆಗಳು ಯಾವ ಕಾಲದ ತನಕ ನಡೆದಿತ್ತು ಎಂಬ ಬಗ್ಗೆ ಲಿಖೀತ ಮಾಹಿತಿ ಇಲ್ಲ. ಅಂದರೆ 100 ವರ್ಷದ ಮೊದಲೇ ಪೂಜೆ, ಪುನಸ್ಕಾರ ನಿಂತಿರಬಹುದು ಎಂದು ಊಹಿಸಲಾಗಿದೆ.

ಪದ್ಮಾವತಿ ಅಮ್ಮ, ಪಾರ್ಶ್ವನಾಥ
ಜ್ಯೋತಿಷ್ಯಶಾಸ್ತ್ರದಲ್ಲಿ ಕಂಡು ಬಂದಂತೆ ಇಲ್ಲಿ ಪದ್ಮಾವತಿ ಅಮ್ಮ, ಪಾರ್ಶ್ವನಾಥನ ಆರಾಧನೆ ನಡೆಯುತ್ತಿತ್ತು. ಇಲ್ಲಿಂದ 11 ಕಿ.ಮೀ. ದೂರದ ಸವಣೂರಿನಲ್ಲಿ ಪದ್ಮಾವತಿ ಅಮ್ಮನ ಬಸದಿ ಇದ್ದು, ಪೆರುವಾಜೆ ಗ್ರಾಮದ ಅಂಚಿನಲ್ಲಿರುವ ಪಾಲ್ತಾಡಿ ಗ್ರಾಮದಲ್ಲಿ ಜೈನ ಕುಟುಂಬಗಳು ಈಗಲು ಇವೆ. ಹಾಗಾಗಿ ಇಲ್ಲಿನ ಆರಾಧನೆಗೆ ಪುಷ್ಟಿ ನೀಡುತ್ತಿದೆ. ಈಗ ಬಸ್ತಿಗುಡ್ಡೆಯ ಬಸದಿ ಇರುವ ಸ್ಥಳ ಪೊದೆ ಆವರಿಸಿದೆ. ಬಸದಿ ಕಲ್ಲಿನ ಮಂಟಪಗಳು ಕಾಣಬಹುದು.

ಐತಿಹಾಸಿಕ ಬಸದಿ
ಹಲವು ವರ್ಷಗಳ ಇತಿಹಾಸ ಇರುವ ಬಸದಿ ಪುನರ್‌ ನಿರ್ಮಾಣಕ್ಕೆ ಊರ ಹತ್ತು ಸಮಸ್ತರ ಸಮಿತಿ ರಚಿಸಿ, ಸಾರ್ವಜನಿಕರ ಸಹಭಾಗಿತ್ವದಲ್ಲಿ ಯೋಜನೆ ಹಮ್ಮಿಕೊಳ್ಳಲಾಗಿದೆ. ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿದ್ದೇವೆ. ಮೊದಲ ಹಂತದಲ್ಲಿ ದೋಷ ಪರಿಹಾರ ಕಾರ್ಯ ನಡೆದು, ಮುಂದಿನ ಪ್ರಕ್ರಿಯೆಗಳು ನಡೆಯಲಿವೆ. 
– ಚಂದ್ರಶೇಖರ ಪನ್ನೆ
ಕಾರ್ಯದರ್ಶಿ, ಊರ ಹತ್ತು
ಸಮಸ್ತರ ಸಮಿತಿ, ಬಸ್ತಿಗುಡ್ಡೆ

 ಕಿರಣ್‌ ಪ್ರಸಾದ್‌ ಕುಂಡಡ್ಕ

ಟಾಪ್ ನ್ಯೂಸ್

Mangaluru Lit Fest: ಯಾವುದೇ ಉತ್ಸವ ಯಾಂತ್ರಿಕವಾದರೆ ಹೊಸತನ ಮೂಡಲ್ಲ: ಎಸ್.ಎಲ್ ಭೈರಪ್ಪ

Mangaluru Lit Fest: ಯಾವುದೇ ಉತ್ಸವ ಯಾಂತ್ರಿಕವಾದರೆ ಹೊಸತನ ಮೂಡಲ್ಲ: ಎಸ್.ಎಲ್ ಭೈರಪ್ಪ

Belagavi: Siblings clash over marijuana

Belagavi: ಗಾಂಜಾ ವಿಚಾರಕ್ಕೆ ಒಡಹುಟ್ಟಿದವರ ಗಲಾಟೆ; ಓರ್ವ ಸಾವು, ಮತ್ತೋರ್ವ ಗಂಭೀರ

Mudhol: ಪ್ರಯಾಣಿಕರ ಉಪಯೋಗಕ್ಕೆ ಬಾರದ ತಂಗುದಾಣ… ಅಂಗಡಿ ಮುಂಗಟ್ಟಿನಿಂದ ಕಣ್ಮರೆ

Mudhol: ಪ್ರಯಾಣಿಕರ ಉಪಯೋಗಕ್ಕೆ ಬಾರದ ತಂಗುದಾಣ… ಅಂಗಡಿ ಮುಂಗಟ್ಟಿನಿಂದ ಕಣ್ಮರೆ

Hubli: ರಾಜ್ಯದ ಕಾಂಗ್ರೆಸ್ ಸರ್ಕಾರ ಪತನಗೊಳ್ಳುವುದು ಖಚಿತ: ಜಗದೀಶ ಶೆಟ್ಟರ್

Hubli: ರಾಜ್ಯದ ಕಾಂಗ್ರೆಸ್ ಸರ್ಕಾರ ಪತನಗೊಳ್ಳುವುದು ಖಚಿತ: ಜಗದೀಶ ಶೆಟ್ಟರ್

Shettar: ಪ್ರಧಾನಿ ಮೋದಿ ಭೇಟಿಯಾದ ಶೆಟ್ಟರ್;‌ ಬೆಳಗಾವಿಗೆ ವಂದೇ ಭಾರತ್‌ ವಿಸ್ತರಣೆಗೆ ಮನವಿ

Shettar: ಪ್ರಧಾನಿ ಮೋದಿ ಭೇಟಿಯಾದ ಶೆಟ್ಟರ್;‌ ಬೆಳಗಾವಿಗೆ ವಂದೇ ಭಾರತ್‌ ವಿಸ್ತರಣೆಗೆ ಮನವಿ

Police firing on drug trafficker in Kalaburagi

Kalaburagi: ಡ್ರಗ್ಸ್ ದಂಧೆಕೋರನ ಮೇಲೆ ಕಲಬುರಗಿಯಲ್ಲಿ ಪೊಲೀಸ್ ಫೈರಿಂಗ್

ಲಿವ್ ಇನ್ ಸಂಗಾತಿಯನ್ನು ಕೊಂದು ದೇಹವನ್ನು 6 ತಿಂಗಳು ಫ್ರಿಡ್ಜ್ ನಲ್ಲಿ ಇಟ್ಟಿದ್ದ ಆರೋಪಿ

Tragedy: Live-In ಸಂಗಾತಿಯನ್ನು ಕೊಂದು ದೇಹವನ್ನು ಫ್ರಿಡ್ಜ್ ನಲ್ಲಿ ಇಟ್ಟು ಮನೆ ತೊರೆದ ಹಂತಕ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Mangaluru Lit Fest: ಯಾವುದೇ ಉತ್ಸವ ಯಾಂತ್ರಿಕವಾದರೆ ಹೊಸತನ ಮೂಡಲ್ಲ: ಎಸ್.ಎಲ್ ಭೈರಪ್ಪ

Mangaluru Lit Fest: ಯಾವುದೇ ಉತ್ಸವ ಯಾಂತ್ರಿಕವಾದರೆ ಹೊಸತನ ಮೂಡಲ್ಲ: ಎಸ್.ಎಲ್ ಭೈರಪ್ಪ

19-uv-fusion

Kannada: ಮಾತೃಭಾಷಾ ಹೊಳಪು

18-uv-fusion

Kannada: ಕನ್ನಡ ಎನೆ ಕುಣಿದಾಡುವುದೆನ್ನೆದೆ… ಕನ್ನಡ ಎನೆ ಕಿವಿ ನಿಮಿರುವುದು…

Belagavi: Siblings clash over marijuana

Belagavi: ಗಾಂಜಾ ವಿಚಾರಕ್ಕೆ ಒಡಹುಟ್ಟಿದವರ ಗಲಾಟೆ; ಓರ್ವ ಸಾವು, ಮತ್ತೋರ್ವ ಗಂಭೀರ

Mudhol: ಪ್ರಯಾಣಿಕರ ಉಪಯೋಗಕ್ಕೆ ಬಾರದ ತಂಗುದಾಣ… ಅಂಗಡಿ ಮುಂಗಟ್ಟಿನಿಂದ ಕಣ್ಮರೆ

Mudhol: ಪ್ರಯಾಣಿಕರ ಉಪಯೋಗಕ್ಕೆ ಬಾರದ ತಂಗುದಾಣ… ಅಂಗಡಿ ಮುಂಗಟ್ಟಿನಿಂದ ಕಣ್ಮರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.