ಒಬ್ಬ ಶಿಕ್ಷಕಗೆ 2 ಶಾಲಾ ಮುಖ್ಯ ಶಿಕ್ಷಕ ಹುದ್ದೆ!
Team Udayavani, Jun 4, 2018, 11:40 AM IST
ದೇವದುರ್ಗ: ಶಿಕ್ಷಣ ಇಲಾಖೆ ನಿಯಮಗಳು ಗಾಳಿಗೆ ತೂರಿ ಒಬ್ಬ ಶಿಕ್ಷಕನಿಗೆ ಎರಡು ಶಾಲಾ ಮುಖ್ಯ ಶಿಕ್ಷಕ ಹುದ್ದೆ ನೀಡಲಾಗಿದೆ. ಸಿಆರ್‌ಪಿ ಎಡವಟ್ಟಿನಿಂದ ಇಂಥ ಅವಾಂತರ ಕೊಪ್ಪರ ಕ್ಲಸ್ಟರ್‌ನಲ್ಲಿ ಜರುಗಿದೆ.!
ಸರ್ಕಾರಿ ಕಿರಿಯ ಪ್ರಾಥಮಿಕ ಶಾಂತಿ ನಗರ ಕೊಪ್ಪರ ಶಾಲಾ ಮುಖ್ಯಶಿಕ್ಷಕ ಶರಣಪ್ಪ ಕಳೆದ ವರ್ಷ ಜೂನ್‌ನಲ್ಲಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಕೊಪ್ಪರ ಶಾಲೆಗೆ ಎರವಲು ಸೇವೆಗೆ ಹೋಗಿ ಅಲ್ಲಿಯೂ ಮುಖ್ಯಶಿಕ್ಷಕ ಹುದ್ದೆ ನಿಭಾಯಿಸುತ್ತಿದ್ದಾರೆ. ಸ್ವಗ್ರಾಮದವರೆಂಬ ಕಾರಣಕ್ಕೆ ಎರಡು
ಶಾಲಾ ಮುಖ್ಯಶಿಕ್ಷಕ ಹುದ್ದೆ ಮತ್ತು ಸಿಆರ್‌ಪಿ ನೀಡಿದ್ದು, ಶಿಕ್ಷಕರ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಶಾಂತಿನಗರ ಶಾಲೆಯಲ್ಲಿ ಸಹ ಶಿಕ್ಷಕಿ ಇದ್ದು, ಅವರಿಗೆ ಮುಖ್ಯಶಿಕ್ಷಕ ಹುದ್ದೆ, ಜಾರ್ಜ್ ನೀಡದೇ ಹಿಂದೇಟು ಹಾಕಿ ಎರಡು ಶಾಲೆಗಳಲ್ಲಿ ಮುಖ್ಯಶಿಕ್ಷಕನಾಗಿ ಕರ್ತವ್ಯ ನಿಭಾಹಿಸುತ್ತಿರುವುದು ಇಲಾಖೆ
ನಿಯಮ ಗಾಳಿಗೆ ತೋರಲಾಗಿದೆ. ಶಾಲೆಯಲ್ಲಿದ್ದ ಖಾಯಂ ಶಿಕ್ಷಕರಿಗೆ ಮುಖ್ಯಶಿಕ್ಷಕ ಹುದ್ದೆ, ನೀಡಬೇಕೆಂಬ ನಿಯಮ ಸಂಪೂರ್ಣ ಮರೀಚಿಕೆಯಾಗಿದೆ.
ಶಿಕ್ಷಕರ ಕೊರತೆ: ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1ರಿಂದ 8ನೇ ತರಗತಿ 437 ಮಕ್ಕಳು ವಿದ್ಯಾಭ್ಯಾಸ ಮಾಡಲಾಗುತ್ತಿದೆ. ಅದರಲ್ಲಿ 8ನೇ ತರಗತಿ ಮಕ್ಕಳಿಗೆ ಬೋಧಿಸುವ ಶಿಕ್ಷಕರು ಇರದ ಕಾರಣ ಕೊಪ್ಪರ ಪ್ರೌಢಶಾಲೆಗೆ 60ಕ್ಕೂ ಹೆಚ್ಚು ಮಕ್ಕಳು ಅಲ್ಲಿಗೆ ಹೋಗುತ್ತಿದ್ದು, 1ರಿಂದ 7ನೇ
ತರಗತಿ ಮಕ್ಕಳಿಗೆ ಮೂರು ಜನ ಶಿಕ್ಷಕರು ಪಾಠ ಪ್ರವಚನ ಮಾಡಲಾಗುತ್ತಿದೆ. ದೈಹಿಕ ಶಿಕ್ಷಕ ಸೇರಿ 13 ಜನ ಶಿಕ್ಷಕರು ಇರಬೇಕು.
ಆದರೆ ಮೂರು ಜನ ಶಿಕ್ಷಕರು ಇದ್ದರು. ವಿಷಯವಾರು ಶಿಕ್ಷಕರ ಕೊರತೆ ಹಿನ್ನೆಲೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಂಪೂರ್ಣ ಮರೀಚಿಕೆ ಎನ್ನುವಂತಾಗಿದೆ.
ಸೌಲಭ್ಯ ಕೊರತೆ ಮಕ್ಕಳು ಪರದಾಟ: ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶುದ್ಧ, ಕುಡಿಯುವ ನೀರು, ಶೌಚಾಲಯ ಸೇರಿ ಅಗತ್ಯ ಮೂಲ ಸೌಲಭ್ಯಗಳು ಇಲ್ಲವಾಗಿವೆ. ನೂರಾರೂ ಮಕ್ಕಳು ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಶಾಲೆ ಸುತ್ತಲೂ ಜಾಲಿಗಿಡಗಳು ಬೆಳೆದು ಅಸ್ವತ್ಛತೆಯ ತಾಣವಾಗಿದೆ.
ಹೊಂದಾಣಿಕೆ ಕೊರತೆ: ಇಲ್ಲಿನ ಶಾಲೆಯಲ್ಲಿ ಖಾಯಂ ಮುಖ್ಯ ಶಿಕ್ಷಕರು ಲಭ್ಯವಿರದ ಕಾರಣ ಬಿಸಿಯೂಟ ಅಡುಗೆ ಸಿಬ್ಬಂದಿಗಳು ಪ್ರಭಾರಿ ಮುಖ್ಯ ಶಿಕ್ಷಕರ ಆದೇಶಕ್ಕೆ ಮಣ್ಣನೆ ನೀಡದೇ ಇರುವುದರಿಂದ ಹೊಂದಾಣಿಕೆ ಕೊರತೆಯಿಂದ ಮಧ್ಯಾಹ್ನ ಮಕ್ಕಳಿಗೆ ತಯಾರಿಸುವ ಬಿಸಿಯೂಟದಲ್ಲಿ ಪೌಷ್ಟಿಕಾಂಶ ಮತ್ತು ಗುಣಮಟ್ಟ ಸಾಮರ್ಥ್ಯ ಕಳೆದುಕೊಳ್ಳುತ್ತಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಬಿಸಿಯೂಟ ಅಡುಗೆ ಸಿಬ್ಬಂದಿಗಳ ವಿರುದ್ಧ, ಸಂಬಂಧಪಟ್ಟ ಅಧಿಕಾರಿಗಳಿಗೆ ಗ್ರಾಮಸ್ಥರು ದೂರು ನೀಡಿದ್ದಾರೆ.
ಅತಿಥಿ ಶಿಕ್ಷಕರೇ ಆಧಾರ: 1ರಿಂದ 7ನೇ ತರಗತಿ ಮಕ್ಕಳಿಗೆ ವಿಷಯವಾರ ಶಿಕ್ಷಕರು ಇರದೇ ಹಿನ್ನೆಲೆ ಗುಣಮಟ್ಟದ ಶಿಕ್ಷಣ ಮರೀಚಿಕೆಯಾಗಿದೆ. ಮೂರು ಜನ ಶಿಕ್ಷಕರಿಂದ 7ತರಗತಿ 350 ಮಕ್ಕಳಿಗೆ ಸಮಪರ್ಕ ಶಿಕ್ಷಣ ಲಭ್ಯವಾಗುತ್ತಿಲ್ಲ. ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ
ಖಾಸಗಿ ಶಾಲೆಗಳಿಗೆ ಪ್ರವೇಶ ಪಡೆಯುತ್ತಿದ್ದಾರೆ. ಹೀಗಾಗಿ ಶಿಕ್ಷಕರು ಇಲ್ಲದೇ ಇರುವುದರಿಂದ ನೂರಾರು ಮಕ್ಕಳು ಒಂದಿಲ್ಲೊಂದು ಸಮಸ್ಯೆ ಎದುರಿಸುತ್ತಿದ್ದಾರೆ. ಸರಕಾರ ಪ್ರತಿ ವರ್ಷ ಅತಿಥಿ ಶಿಕ್ಷಕರನ್ನು ನಿಯೋಜನೆ ಮಾಡುವವರಿಗೆ ಅಧಿಕಾರಿಗಳು ಕಾಯಬೇಕು. ಹೀಗಾಗಿ ಕೊಪ್ಪರ ಸರ್ಕಾರಿ
ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಅತಿಥಿ ಶಿಕ್ಷಕರೇ ಆಧಾರ ಎನ್ನುವಂತಾಗಿದೆ.
ಎರಡು ಶಾಲೆಗೆ ಒಬ್ಬ ಶಿಕ್ಷಕರೇ ಮುಖ್ಯ ಶಿಕ್ಷಕರಾಗಿ ಹುದ್ದೆ ನಿಭಾಹಿಸುತ್ತಿದ್ದಾರೆ ಎನ್ನಲಾಗಿದೆ. ಕೂಡಲೇ ಸಂಬಂಧಪಟ್ಟ ಸಿಆರ್ ಪಿಯಿಂದ ಮಾಹಿತಿ ಪಡೆದು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ.
ಎಸ್.ಎಂ. ಹತ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಶಿಕ್ಷಕರ ಕೊರತೆ ಮಕ್ಕಳಿಗೆ ಗುಣಮಟ್ಟದ ಸೌಲಭ್ಯ ಒದಗಿಸಲು ಕೂಡಲೇ ಶಿಕ್ಷಕರನ್ನು ನಿಯೋಜನೆ ಮಾಡಬೇಕು. ಅದರಂತೆ ಶುದ್ಧ, ಕುಡಿವ ನೀರು ಶೌಚಾಲಯ ಸೇರಿ ಮೂಲ ಸೌಲಭ್ಯಗಳು ಪೂರೈಸಲು ಕ್ರಮಕೈಗೊಳ್ಳಬೇಕು.
ಶಬ್ಬೀರ ಜಾಲಹಳ್ಳಿ, ಎಸ್‌ಎಫ್‌ಐ ಸಂಘಟನೆ ರಾಜ್ಯ ಉಪಾಧ್ಯಕ್ಷ
ನಾಗರಾಜ ತೇಲ್ಕರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಯಚೂರು: ರೈತರ ನಿದ್ದೆಗೆಡಿಸಿದ ಬೆಳೆದು ನಿಂತ “ಬಿಳಿ ಬಂಗಾರ’ ಹತ್ತಿ
Raichur: ರಾತೋ ರಾತ್ರಿ ದೇವಸ್ಥಾನ ತೆರವುಗೊಳಿಸಿದ ಜಿಲ್ಲಾಡಳಿತ ; ಬಿಜೆಪಿಯಿಂದ ಪ್ರತಿಭಟನೆ
Raichur; ರಾತೋರಾತ್ರಿ ಸಿಎ ಸೈಟ್ ನಲ್ಲಿದ್ದ ಶಿವ, ಗಣೇಶ ದೇವಸ್ಥಾನ ತೆರವು
Raichur: ಪ್ರಶ್ನೆಪತ್ರಿಕೆ ವಿಳಂಬ; ಪಿಡಿಒ ಪರೀಕ್ಷೆ ಬಹಿಷ್ಕಾರ
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.