ಮೈದುಂಬಿಕೊಳ್ಳುತ್ತಿರುವ ಕಾವೇರಿ ಕಣಿವೆ ಜಲಾಶಯಗಳು
Team Udayavani, Jun 4, 2018, 2:31 PM IST
ಮೈಸೂರು: ಕಳೆದ ನಾಲ್ಕು ವರ್ಷಗಳಿಂದ ಸತತ ಬರಗಾಲದಿಂದ ಕಂಗೆಟ್ಟಿದ್ದ ಕಾವೇರಿ ಕಣಿವೆಯ ರೈತರಲ್ಲಿ ಈ ವರ್ಷ ಪೂರ್ವ ಮುಂಗಾರು ಹಾಗೂ ಮುಂಗಾರು ಮಳೆ ಉತ್ತಮವಾಗಿ ಬೀಳುತ್ತಾ, ಈ ಭಾಗದ ಜಲಾಶಯಗಳು ಮೈದುಂಬಿ ಕೊಳ್ಳುತ್ತಿರುವುದು ಹರ್ಷ ಮೂಡಿಸಿದೆ.
ಹಿಂದಿನ ಮೂರು ವರ್ಷಗಳ ಕಾಲ ಮಳೆ ಕೊರತೆಯಿಂದಾಗಿ ಜಲಾಶಯಗಳು ಬರಿದಾಗಿದ್ದರೆ, ಕಳೆದ ವರ್ಷ ಮಳೆ ಕೊರತೆಯಾದರೆ ಕುಡಿಯುವ ನೀರಿಗೆ ಅಭಾವ ತಲೆದೋರಲಿದೆ ಎಂಬ ಕಾರಣಕ್ಕೆ ಸರ್ಕಾರ ಅಚ್ಚುಕಟ್ಟಿಗೆ ನೀರು ಬಿಡಲಿಲ್ಲ. ಹೀಗಾಗಿ ನೀರಾವರಿ ಪ್ರದೇಶದ ರೈತರು ಬೆಳೆ ಬೆಳೆಯಲಾಗಲಿಲ್ಲ.
ಆ ನಂತರ ವಾಡಿಕೆಗಿಂತ ಹೆಚ್ಚು ಮಳೆ ಸುರಿದರೂ ರೈತರಿಗೆ ಉಪಯೋಗಕ್ಕೆ ಬರಲಿಲ್ಲ. ಈ ವರ್ಷ ಪೂರ್ವ ಮುಂಗಾರು ಆಶಾದಾಯಕವಾಗಿದ್ದು, ಈ ಭಾಗದ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಾವೇರಿ ಕಣಿವೆಯ ಕೆಆರ್‌ಎಸ್, ಕಬಿನಿ, ಹಾರಂಗಿ, ಹೇಮಾವತಿ ಜಲಾಶಯಗಳು ಮೈದುಂಬಿಕೊಳ್ಳುತ್ತಿವೆ.
ಕೆಆರ್‌ಎಸ್ ನೀರಿನ ಮಟ್ಟ: 124.80 ಅಡಿ ಗರಿಷ್ಠ ನೀರು ಸಂಗ್ರಹಣಾ ಸಾಮರ್ಥ್ಯದ ಕೆಆರ್‌ಎಸ್ ಜಲಾಶಯದಲ್ಲಿ ಸದ್ಯ 75.55 ಅಡಿ ನೀರು ಇದೆ. ಜಲಾಶಯ ಭರ್ತಿಯಾಗಲು 49.25 ಅಡಿ ಬಾಕಿ ಇದೆ. ಕಳೆದ ವರ್ಷ ಇದೇ ದಿನ 68.31 ನೀರು ಸಂಗ್ರಹ ಇತ್ತು.
45.05 ಟಿಎಂಸಿ ನೀರು ಸಂಗ್ರಹಣಾ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 4.56 ಟಿಎಂಸಿ ನೀರಿದ್ದು, ಕಳೆದ ವರ್ಷ ಇದೇ ದಿನ 2.11 ಟಿಎಂಸಿ ನೀರು ಸಂಗ್ರಹವಿತ್ತು. ಮುಂಗಾರು ಮಳೆ ಉತ್ತಮವಾಗಿ ಆಗುತ್ತಿರುವುದರಿಂದ ಜಲಾಶಯಕ್ಕೆ 2361 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, 301 ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ.
ಒಳಹರಿವು ಹೆಚ್ಚಳ: ಕಾವೇರಿ ಕಣಿವೆಯ ಜಲಾಶಯಗಳ ಪೈಕಿ ಬಹು ಬೇಗ ಭರ್ತಿಯಾಗುವ ಎಚ್.ಡಿ.ಕೋಟೆ ತಾಲೂಕಿನ ಕಬಿನಿ ಜಲಾಶಯಕ್ಕೆ ಕೇರಳದಲ್ಲಿ ಮುಂಗಾರು ಆಗಮನದಿಂದ ಜಲಾಶಯಕ್ಕೆ ಒಳ ಹರಿವು ಹೆಚ್ಚಳವಾಗುತ್ತಿದೆ. 2284.00 ಅಡಿ ಗರಿಷ್ಠ ನೀರು ಸಂಗ್ರಹಣಾ ಸಾಮರ್ಥ್ಯದ ಈ ಜಲಾಶಯದಲ್ಲಿ ಸದ್ಯ 2258.40 ಅಡಿ ನೀರಿದೆ. ಇನ್ನು ಭರ್ತಿಯಾಗಲು 25.60 ಅಡಿ ಬಾಕಿ ಇದೆ. ಕಳೆದ ವರ್ಷ ಇದೇ ದಿನ 2248.19 ಅಡಿ ನೀರು ಸಂಗ್ರಹವಿತ್ತು. 1203 ಕ್ಯುಸೆಕ್ ಒಳಹರಿವು ಬರುತ್ತಿದ್ದು, 300 ಕ್ಯುಸೆಕ್ ನದಿಗೆ ಹರಿಯಬಿಡಲಾಗುತ್ತಿದೆ.
ಹೇಮಾವತಿ: 2922.00 ಅಡಿ ಗರಿಷ್ಠ ನೀರು ಸಂಗ್ರಹಣಾ ಸಾಮರ್ಥ್ಯದ ಹಾಸನ ಜಿಲ್ಲೆಯ ಹೇಮಾವತಿ ಜಲಾಶಯದಲ್ಲಿ ಸದ್ಯ 2867.50 ಅಡಿ ನೀರು ಸಂಗ್ರಹವಿದ್ದು, ಭರ್ತಿಯಾಗಲು 54.50 ಅಡಿ ಬಾಕಿ ಇದೆ. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 2852.75 ಅಡಿ ನೀರು ಸಂಗ್ರಹವಿತ್ತು. ಸದ್ಯ ಜಲಾಶಯಕ್ಕೆ 4322 ಕ್ಯುಸೆಕ್ ಒಳಹರಿವು ಬರುತ್ತಿದ್ದು, 200 ಕ್ಯುಸೆಕ್ ನೀರು ನದಿಗೆ ಬಿಡಲಾಗುತ್ತಿದೆ.
ಹಾರಂಗಿ: 2859.00 ಅಡಿ ನೀರು ಸಂಗ್ರಹಣಾ ಸಾಮರ್ಥ್ಯದ ಕೊಡಗು ಜಿಲ್ಲೆಯ ಹಾರಂಗಿ ಜಲಾಶಯದಲ್ಲಿ ಸದ್ಯ 2784.23 ಅಡಿ ನೀರು ಸಂಗ್ರಹವಿದ್ದು, ಭರ್ತಿಯಾಗಲು 74.77 ಅಡಿ ಬಾಕಿ ಇದೆ. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 2807.13 ಅಡಿ ನೀರಿತ್ತು. ಸದ್ಯ ಜಲಾಶಯಕ್ಕೆ 250 ಕ್ಯುಸೆಕ್ ಒಳ ಹರಿವು ಬರುತ್ತಿದ್ದು, 30 ಕ್ಯುಸೆಕ್ ನೀರು ನದಿಗೆ ಹರಿಬಿಡಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUDA: 20 ವರ್ಷದಿಂದ ಶಾಸಕರಾಗಿ, ಮುಡಾ ಸದಸ್ಯರಾಗಿದ್ದೀರಿ, ಯಾಕೀ ಅವ್ಯವಸ್ಥೆ?: ಸಿಎಂ
Name Road Row: ಮೈಸೂರಿನ ರಸ್ತೆಗೆ ನಾಮಕರಣ ವಿಚಾರ; ಗೊಂದಲಗಳಿಗೆ ತೆರೆ ಎಳೆದ ಸಿಎಂ
Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್
Hunsur: ಹುಲಿ ದಾಳಿಯಿಂದ ಹಸುವಿಗೆ ಗಾಯ
Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್ ಗೌಡ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.