ಬಾವಿಗೆ ಬಿದ್ದ ಕಾಡುಕೋಣ ಕೊನೆಗೂ ಬಚಾವ್!
Team Udayavani, Jun 4, 2018, 5:09 PM IST
ಸಾಗರ: ನೀರನ್ನು ಅರಸುತ್ತ ಕಾಡಿನಿಂದ ಬಂದ ಕಾಡುಕೋಣವೊಂದು ತೋಟದಲ್ಲಿದ್ದ ತೆರೆದ ಬಾವಿಯಲ್ಲಿ ಬಿದ್ದಿದ್ದು, ಗ್ರಾಮಸ್ಥರು ಇದನ್ನು ರಕ್ಷಿಸಿದ್ದಾರೆ. ತಾಲೂಕಿನ ಎಡಜಿಗಳೇಮನೆ ಗ್ರಾಪಂ ವ್ಯಾಪ್ತಿಯ ತುಂಬೆಯ ಚಂದ್ರಶೇಖರ ಭಟ್ ಅವರ ಅಡಕೆ ತೋಟಕ್ಕೆ ಶುಕ್ರವಾರ ಸಂಜೆ ಬಂದ ಕಾಡುಕೋಣ ಬಾವಿಗೆ ಬಿದ್ದಿದ್ದು ಹೊರಬರಲಾರದೆ ಒದ್ದಾಡಿದ್ದು, ಕೊನೆಗೂ ಶನಿವಾರ ಗ್ರಾಮಸ್ಥರಿಂದ ರಕ್ಷಿಸಲ್ಪಟ್ಟು ಕಾಡಿಗೆ ತೆರಳಿದೆ.
ತೋಟಕ್ಕೆ ಬಂದ ಕೋಣ ನೆಲಮಟ್ಟದವರೆಗೆ ನೀರಿನಿಂದ ತುಂಬಿದ್ದ ಬಾವಿಗೆ ಬಗ್ಗಿದೆ. ಈ ಸಂದರ್ಭದಲ್ಲಿ ಕಾಲುಜಾರಿ ನೀರಿಗೆ ಬಿದ್ದಿದೆ. ಮಳೆಯ ಕಾರಣ ಬಾವಿಯ ಸುತ್ತಲಿನ ಮಣ್ಣು ಸಂಪೂರ್ಣ ಜಾರುತ್ತಿದೆ. ಹೀಗಾಗಿ ಕೋಣ ಬಾವಿಯಿಂದ ಮೇಲೆ ಹತ್ತಲು ಪ್ರಯತ್ನಪಟ್ಟರೂ ಸಾಧ್ಯವಾಗಿಲ್ಲ. ಈ ಹಂತದಲ್ಲಿ ಕಕ್ಕಾಬಿಕ್ಕಿಯಾದ ಕೋಣ ನೀರಿನಲ್ಲಿ ಭುಸುಗುಡುತ್ತ ಅಲ್ಲಿಯೇ ಇದೆ.
ಬಾವಿಗೆ ಬಿದ್ದು 12 ತಾಸಿಗೂ ಹೆಚ್ಚು ಸಮಯ ನೀರಲ್ಲಿ ಜೀವ ಉಳಿಸಿಕೊಳ್ಳುವ ಹೋರಾಟದಲ್ಲಿದ್ದ ಕಾಡುಕೋಣ ಶನಿವಾರ ತೋಟದ ಮಾಲೀಕರ ಕಣ್ಣಿಗೆ ಬಿದ್ದಿದೆ. ತಕ್ಷಣ ಊರವರು ಸ್ಥಳಕ್ಕೆ ಧಾವಿಸಿದ್ದಾರೆ. ಅರಣ್ಯ ಇಲಾಖೆಗೂ ಕರೆ ಹೋಗಿದೆ. ಈ ನಡುವೆ ಗ್ರಾಮದವರು ಕೋಣ ಮೇಲಕ್ಕೆ ಹತ್ತಿ ಬರಲು ಸಹಾಯ ಆಗುವಂತೆ ಬಾವಿಗೆ ಸಮನಾಗಿ ಪಕ್ಕದಲ್ಲೇ ಅಗೆದು ದಾರಿ ಮಾಡಿದ್ದಾರೆ. ಆನಂತರ ಕೋಣ ಅಲ್ಲಿಂದ ಕಾಲ್ಕಿತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಕೂಡ ಸ್ಥಳಕ್ಕೆ ಭೇಟಿ ನೀಡಿದ್ದರು. ಕೋಣವನ್ನು ರಕ್ಷಿಸುವ ಕೆಲಸದಲ್ಲಿ ತುಂಬೆಯ ನವನೀತ್ ಹೆಗಡೆ, ದಿನೇಶ್ ಚೌಡೀಮನೆ, ವೆಂಕಟೇಶ್, ಗಣಪತಿ, ಗೋಪಾಲ ಮತ್ತಿತರರು ಕೈ ಜೋಡಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.