ನಿರ್ವಹಣೆಯ ಕೊರತೆ: ಸಾರ್ವಜನಿಕರಿಗೆ ತೊಂದರೆ
Team Udayavani, Jun 5, 2018, 6:15 AM IST
ಅಜೆಕಾರು: ಮರ್ಣೆ ಗ್ರಾ. ಪಂ. ವ್ಯಾಪ್ತಿಯ ಅಜೆಕಾರು ಪೇಟೆಯಲ್ಲಿರುವ ಸಾರ್ವಜನಿಕ ಶೌಚಾಲಯವು ಸೂಕ್ತ ನಿರ್ವಹಣೆಯಿಲ್ಲದೆ ಗಬ್ಬೆದ್ದಿದೆ.
ಅಜೆಕಾರು ಪೇಟೆಯಲ್ಲಿರುವ ಈ ಶೌಚಾಲಯದಲ್ಲಿ ನೀರಿನ ವ್ಯವಸ್ಥೆ ಸೇರಿದಂತೆ ಮೂಲ ಸೌಕರ್ಯಗಳಿದ್ದರೂ ಸ್ವಚ್ಛ ತೆಯಲ್ಲಿ ಹಿಂದೆ ಬಿದ್ದಿದೆ.
ಶೌಚಾಲಯದ ಒಂದು ಪಾರ್ಶ್ವದಲ್ಲಿ ಪುರುಷರಿಗೆ ಹಾಗೂ ಇನ್ನೊಂದು ಪಾರ್ಶ್ವದಲ್ಲಿ ಮಹಿಳೆಯರಿಗೆ ಪ್ರತ್ಯೇಕವಾಗಿ ವ್ಯವಸ್ಥೆ ಕಲ್ಪಿಸಲಾಗಿದ್ದರೂ ಕಟ್ಟಡ ಮಾತ್ರ ನಿರ್ವಹಣೆ ಇಲ್ಲದೆ ಶೌಚಾಲಯದ ಮೇಲ್ಛಾವಣಿ ಪೊದೆಗಳಿಂದ ಆವೃತಗೊಂಡಿದೆ.
ಅಸಹ್ಯಕರ ಸ್ಥಿತಿ
ಶೌಚಾಲಯದ ಒಳಗೆ ಸ್ವಚ್ಛತೆ ಇಲ್ಲದೆ ದುರ್ವಾಸನೆಯಿಂದ ಕೂಡಿದೆ. ಜತೆಗೆ ಕಟ್ಟಡದ ಒಳಗೆ ಹಳೆಯ ಬಟ್ಟೆಗಳು, ಬಾಟಲಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ಅಸಹ್ಯಕರವಾಗಿದೆ. ಶೌಚಾಲಯಕ್ಕೆ ಹೊಂದಿಕೊಂಡೇ ರಿಕ್ಷಾ ನಿಲ್ದಾಣವಿದ್ದು ಇದರ ದುರ್ವಾಸನೆ ಸಹಿಸಿಕೊಂಡೆ ಹೊಟ್ಟೆಪಾಡಿಗಾಗಿ ದಿನ ಕಳೆಯಬೇಕಾಗಿದೆ ಎಂಬುದು ರಿಕ್ಷಾ ಚಾಲಕ ಮಾಲಕರ ಅಳಲು.
ಸೂಕ್ತ ನಿರ್ವಹಣೆ ಇಲ್ಲದೆ ಪರಿಸರ ದುರ್ವಾಸನೆಯಿಂದ ಕೂಡಿದ್ದು ಸಾಂಕ್ರಾಮಿಕ ರೋಗ ಭೀತಿ ಹೆಚ್ಚಳವಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಗಮನ ಹರಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಮಹಿಳೆಯರಿಗೆ ಮುಜುಗರ
ಅಜೆಕಾರು ಪೇಟೆಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕವಾಗಿ ಶೌಚಾಲಯ ಹಲವು ವರ್ಷಗಳ ಹಿಂದೆ ನಿರ್ಮಿಸಿದ್ದರೂ ಸಹ ಕೆಲ ವರ್ಷಗಳ ಹಿಂದೆ ಶೌಚಾಲಯದ ಸಮೀಪವೇ ರಿಕ್ಷಾ ತಂಗುದಾಣ ನಿರ್ಮಿಸಿರುವುದರಿಂದ ಮಹಿಳೆಯರು ಶೌಚಾಲಯಕ್ಕೆ ತೆರಳಲು ಮುಜುಗರಪಡುತ್ತಿದ್ದು ಶೌಚಾಲಯ ಇದ್ದೂ ಉಪಯೋಗಕ್ಕೆ ಬಾರದಂತಾಗಿದೆ ಎಂಬುದು ಮಹಿಳೆಯರ ಆರೋಪ.
ನಾಗರಿಕರ ಸಹಕಾರ ಅಗತ್ಯ
ಸಾರ್ವಜನಿಕ ಶೌಚಾಲಯವನ್ನು ಉಪಯೋಗಿಸುವ ನಾಗರಿಕರು ಸಹ ಸ್ವಚ್ಛತೆ ಕಾಪಾಡುವಲ್ಲಿ ಮುತುವರ್ಜಿ ವಹಿಸ ಬೇಕಾಗಿದೆ. ಶೌಚಾಲಯ ಉಪಯೋಗಿಸಿದ ಅನಂತರ ಸೂಕ್ತವಾಗಿ ಸ್ವತ್ಛಗೊಳಿಸುವುದು ಪ್ರತಿಯೋರ್ವರ ಕರ್ತವ್ಯವಾಗಿದ್ದು ಈ ನಿಟ್ಟಿನಲ್ಲಿ ಸ್ಥಳೀಯ ಸಂಘ ಸಂಸ್ಥೆಗಳು ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ.
ಸಾಂಕ್ರಾಮಿಕ ರೋಗ ಹರಡುವ ಭೀತಿ
ಸಾರ್ವಜನಿಕ ಶೌಚಾಲಯವು ಸ್ವಚ್ಛತೆಯ ಕೊರತೆಯಿಂದಾಗಿ ಪರಿಸರ ದುರ್ವಾಸನೆಯಿಂದ ಕೂಡಿದ್ದು ಸಾಂಕ್ರಾಮಿಕ ರೋಗ ಹರಡುವ ಭೀತಿ ಉಂಟಾಗಿದೆ. ಈ ದುರ್ವಾಸನೆಯಿಂದಾಗಿ ರಿಕ್ಷಾ ತಂಗುದಾಣದಲ್ಲಿ ರಿಕ್ಷಾ ಚಾಲಕ ಮಾಲಕರಿಗೆ ಸಮಸ್ಯೆ ಉಂಟಾಗುತ್ತಿದೆ.
– ಸಂದೇಶ್ ನಾಯಕ್, ರಿಕ್ಷಾ ಚಾಲಕ- ಮಾಲಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.