ಪರಶಿವನ ಪ್ರತಿರೂಪವೇ ಇಷ್ಟಲಿಂಗ
Team Udayavani, Jun 5, 2018, 9:45 AM IST
ಕಾಳಗಿ: ವೀರಶೈವ ಲಿಂಗಾಯತರು ಪ್ರತಿದಿನ ದೇಹವನ್ನೆ ದೇಗುಲ ಮಾಡಿ ಲಿಂಗವನ್ನೇ ಆರಾಧ್ಯ ದೈವವನ್ನಾಗಿಸಿ ಪರಶಿವನ ಪ್ರತಿರೂಪವಾದ ಇಷ್ಟಲಿಂಗ ಮಹಾಪೂಜೆ ಮಾಡಿದರೆ ಬರುವ ಅನಿಷ್ಟಗಳು ದೂರಾಗಿ ಇಷ್ಟಾರ್ಥಗಳು ಈಡೇರುತ್ತವೆ ಎಂದು ಬಾಳೆಹೊನ್ನೂರಿನ ರಂಭಾಪುರಿ ಜಗದ್ಗುರು ಡಾ| ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಆಶೀರ್ವಚನ ನೀಡಿದರು.
ತಾಲೂಕಿನ ಮಂಗಲಗಿ ಗ್ರಾಮದ ಶಾಂತೇಶ್ವರ ಹಿರೇಮಠದಲ್ಲಿ ಸೋಮವಾರ ಬೆಳಗ್ಗೆ ಅಧಿಕ ಮಾಸದ ನಿಮಿತ್ತ ಲೋಕಕಲ್ಯಾಣಾರ್ಥವಾಗಿ ಇಷ್ಟಲಿಂಗ ಮಹಾಪೂಜೆ ನೆರವೇರಿಸಿ ಭಕ್ತರನ್ನುದ್ಧೇಶಿಸಿ ಆಶೀರ್ವಚನ ನೀಡಿದರು.
ಪ್ರಥಮ ಬಾರಿಗೆ ಗ್ರಾಮೀಣ ಭಾಗದ ಮಂಗಲಗಿಯಲ್ಲಿ ಮೂರುದಿನಗಳ ಕಾಲ ವಾಸ್ತವ್ಯ ಮಾಡಿ, ಸಮಾಜದ ಜನರಲ್ಲಿ ಇಷ್ಟಲಿಂಗ ಮಹಾಪೂಜೆ ಮಹತ್ವ ತಿಳಿಸಿ, ಧರ್ಮಸಭೆಗಳ ಮೂಲಕ ಜನಜಾಗೃತಿ ಮೂಡಿಸುವಂತಹ ಪವಿತ್ರ ಕಾರ್ಯ ನಡೆಯುತ್ತಿದೆ. ಇದರ ಕೀರ್ತಿ ಡಾ| ಶಾಂತಸೋಮನಾಥ
ಶಿವಾಚಾರ್ಯರಿಗೆ ಸಲ್ಲುತ್ತದೆ ಎಂದರು.
ವೀರಶೈವ ಧರ್ಮವನ್ನು ಉತ್ಕೃಷ್ಟ ಮಟ್ಟಕ್ಕೆ ತೆಗೆದುಕೊಂಡು ಹೋಗುವ ಕೆಲಸವನ್ನು ಪಂಚಪೀಠಗಳು ಮಾಡಿವೆ. ಈ ಧರ್ಮದವರು ಹೆಸರಿಗಷ್ಟೇ ಲಿಂಗಪೂಜೆ ಮಾಡದೆ ಭಕ್ತಿಯಿಂದ ಗುರುದೀಕ್ಷೆ ಪಡೆದು ದಿನನಿತ್ಯ ಲಿಂಗಪೂಜೆ ಮಾಡಿದರೆ ಜೀವನ ಸಾರ್ಥಕವಾಗುತ್ತದೆ. ಲಿಂಗವನ್ನು ಪ್ರತಿದಿನ ಧರಿಸುವುದರಿಂದ ದೇಹ ಶುದ್ಧಿ ಆಗುವುದರ ಜೊತೆಗೆ ನಿಮ್ಮನ್ನು ಮುಟ್ಟಿದವರ ಜೀವನವೂ ಪವಿತ್ರವಾಗುತ್ತದೆ ಎಂದರು.
ಮಂಗಲಗಿ ಶಾಂತೇಶ್ವರ ಹಿರೇಮಠದ ಪೂಜ್ಯ ಡಾ| ಶಾಂತಸೋಮನಾಥ ಶಿವಾಚಾರ್ಯರು ಆಶೀರ್ವಚನ ನೀಡಿದರು. ಜಿರಟಿಗಿಯ ಮಡಿವಾಳ ಶಾಸ್ತ್ರೀ ಪ್ರಾಸ್ತಾವಿಕ ಮಾತನಾಡಿದರು. ಗುಂಡಪ್ಪ ದೇಶಮುಖ ಪರಿವಾರದವರು ಪೂಜೆ ಹಾಗೂ ದಾಸೋಹ ಸೇವೆ ಸಲ್ಲಿಸಿದರು. ಮಂಗಲಗಿ,
ತೆಂಗಳಿ, ಕೊಡದೂರ, ಕಾಳಗಿ, ಚಿತ್ತಾಪುರ ಹಾಗೂ ಸುತ್ತಲಿನ ಗ್ರಾಮದ ನೂರಾರು ಭಕ್ತರು ಇಷ್ಟಲಿಂಗ ಮಹಾಪೂಜೆಯಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
Hunasagi: ನಕಲಿ ಕ್ಲಿನಿಕ್ ಮೇಲೆ ತಾಲೂಕು ವೈದ್ಯಾಧಿಕಾರಿಗಳಿಂದ ದಾಳಿ
MUST WATCH
ಹೊಸ ಸೇರ್ಪಡೆ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Bhairathi Ranagal Review: ರೋಣಾಪುರದ ರಣಬೇಟೆಗಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.