ದೂರ್ವಾಸರ ವರ, ಕುಂತಿಯ ಕುತೂಹಲಕ್ಕೆ “ದಾನಶೂರ”ನ ಜನನ!
Team Udayavani, Jun 5, 2018, 3:49 PM IST
ಶೂರ ಎಂಬ ರಾಜನಿಗೆ ವಾಸುದೇವ ಮತ್ತು ಪೃಥೆ ಎಂಬ ಮಕ್ಕಳ್ಳಿದ್ದರು, ಶೂರನ ತಂದೆಯ ತಂಗಿಯ ಮಗ ಕುಂತಿಭೋಜ ಈತನಿಗೆ ಸಂತಾನವಿಲ್ಲದ್ದರಿಂದ ಶೂರನ ಮಗಳಾದ ಪೃಥೆಯನ್ನು ದತ್ತು ಸ್ವೀಕಾರ ಮಾಡಿದ್ದನು. ಕುಂತಿಭೋಜ ಸಾಕುಮಗಳಾದ ಪೃಥೆಯು ಕುಂತಿ ಎಂಬ ಹೆಸರಿಂದ ರಾಜಭವನದಲ್ಲಿ ಬೆಳ್ಳೆಯುತಿದ್ದಳು. ” ನಾರೀ ಉಭಯಕುಲ ಉದ್ದರಿಣೀ” ಹೆಣ್ಣು ಉಭಯ ಕುಲಗಳನ್ನು ಉದ್ಧರಿಸುವವಳು ಎಂಬ ನುಡಿಯಲ್ಲಿ ಅಚಲ ವಿಶ್ವಾಸವಿಟ್ಟು ಲಾವಣ್ಯವತಿಯಾದ ಕುಂತಿಯನ್ನು ಅತಿ ಒಲವಿನಿಂದ ಪೋಷಿಸಿದನು. ಕುಂತಿಯು ವಯಸಿನಲ್ಲಿ ಚಿಕ್ಕವಳಾದರು ಚತುರೆ, ಸೂಕ್ಷ್ಮಮತಿ, ದೂರದರ್ಶಿಯಾಗಿದ್ದಳು.
ಪ್ರಜೆಗಳನ್ನು ಒಡಹುಟ್ಟಿದ ಬಂಧುಗಳಂತೆ ಪಾಲಿಸುತ್ತಿದ್ದ ಅರಸನಿಗೆ ಒಂದು ದಿನ ಬಿಡುವಿಲ್ಲದಷ್ಟು ರಾಜಕಾರ್ಯವಿತ್ತು , ಅದೇ ದಿವಸ ಮಹಾತ್ಮರಾದ ದೂರ್ವಾಸರು ತಮ್ಮ ಶಿಷ್ಯರಿಂದೊಡಗೂಡಿ ಕುಂತಿಭೋಜನ ಅರಮನೆಗೆ ಆಗಮಿಸಿದರು. ಅವರನ್ನು ಸ್ವಾಗತಿಸಲು ರಾಜನಿಂದ ಸಾಧ್ಯವಾಗಲಿಲ್ಲ. ದುರ್ವಾಸರು ಕೋಪಿಸಿದರು ಅದನ್ನು ಗಮನಿಸಿ ತನ್ನ ತಂದೆಯಿಂದ ಆದ ಅಚಾತುರ್ಯವನ್ನು ತಿಳಿದು ಕುಂತಿದೇವಿಯು ಬಂದ ಅಥಿತಿಗಳ ಕಾಲಿಗೆ ಬಿದ್ದು ಅವರನ್ನು ಸತ್ಕರಿಸಿದಳು. ಅವಳ ಸೇವೆಯು ಅವರ ಕೋಪವನ್ನು ಶಾಂತಗೊಳಿಸಿತು.
ದೂರ್ವಾಸರು ಕುಂತಿದೇವಿಗೆ “ನಿನ್ನದು ಎಂತಹ ಆದರ್ಶ ಸಂಸ್ಕಾರ! ನಿನ್ನ ಸೇವೆಗೆ ಪ್ರಸನ್ನನಾದ ನಾನು ನಿನಗೆ ಅಸದೃಶವಾದ ವರವನ್ನು ಅನುಗ್ರಹಿಸುತ್ತಿದ್ದೇನೆ. ಚಿಗುರುತ್ತಿರುವ ನಿನ್ನ ಬಾಳು ಹಸನಾಗಿ ಫಲಭರಿತವಾಗಲು ಐದು ಲೋಕಾಧಿವೀರರು ಆವಿರ್ಭವಿಸುವಂತೆ ವರವನ್ನು ಕರುಣಿಸಿದ್ದೇನೆ. ಯಾವ ದೇವತೆಗಳಿಂದ ಸಂತಾನವನ್ನು ಪಡೆಯಲು ಇಚ್ಛಿಸುವೆಯೋ ಅವರು ಪ್ರತ್ಯಕ್ಷರಾಗಿ ಪುತ್ರನುಗ್ರಹ ಮಾಡುವರು .
ಋಷಿಗಳು ಪ್ರಸನ್ನರಾಗಿ ತೆರಳಿದ ನಂತರ , ಕುಂತಿದೇವಿಯ ಮನಸ್ಸಿನಲ್ಲಿ ಮುನಿಗಳು ಕೊಟ್ಟ ವರವನ್ನು ಪರೀಕ್ಷಿಸುವ ಕುತೂಹಲ ಅಂಕುರಿಸಿತು. ಮುನಿಗಳ ಮಾತು ನಿಜವಾಗಿದ್ದರೆ, ಇನ್ನಿತರ ಬಾಲಕ, ಬಾಲಕಿಯರು ನಿರ್ಜೀವ ಗೊಂಬೆಗಳೊಂದಿಗೆ ಆಡುವುದಿದ್ದರೆ ತಾನು ಸಜೀವ ಗೊಂಬೆಯೊಂದಿಗೆ ಆಡಬಹುದು ಎಂದು ಪರೀಕ್ಷಿಸುವ ನಿರ್ಧಾರ ಮಾಡಿದಳು.
ನಂತರ ಮಹಾನದಿ ಗಂಗಾ ತೀರಕ್ಕೆ ಹೋಗಿ ಸ್ನಾನ ಮಾಡಿ ಮಡಿಯನ್ನುಟ್ಟು ಮುನಿಗಳು ಅನುಗ್ರಹಿಸಿದ ಮಂತ್ರವನ್ನು ಉಚ್ಚರಿಸಿ ಗಗನಮಣಿಯನ್ನು ಪ್ರಾರ್ಥಿಸಿದಾಗ ಜಗಚ್ಚಕ್ಷುವು ಒಲಿದು ಪ್ರತ್ಯಕ್ಷನಾದನು , ಕಣ್ಣುತೆರೆದು ನೋಡಿದಾಗ ದಿವ್ಯಾಲಂಕಾರ ಭೂಷಿದಾನದ ಆದಿತ್ಯದೇವನನ್ನು ಕಂಡಳು. ಸೂರ್ಯನನ್ನು ಕಂಡ ಬಾಲಕಿಯ ಹೃದಯ ಕಂಪಿಸಿತು, ಮುನಿಗಳ ವರ ನಿಜವೆಂದು ತಿಳಿದೊಡನೆಯೇ ಅವಳು ಹೆದರಿ ಮುಗ್ಧವಾಗಿ ನೀನು ಇಲ್ಲಿಂದ ಹೋಗು ಎಂದು ಭಿನ್ನವಿಸಿಕೊಂಡಳು. ಸೂರ್ಯದೇವನು ಕುಂತಿಯನ್ನು ಸಮಾಧಾನಗೊಳಿಸಲು ಅವಳನ್ನು ಸ್ಪರ್ಶಿಸಲು ಲೋಕಸುಂದರನಾಗಿ ಶೋಭಿಸುವ ತೇಜಸ್ವಿಯಾದ ಶಿಶುವೊಂದು ಜನಿಸಿತು.
ದಿನಮಣಿಯು ” ಎಲೈ ಕನ್ಯೆಯೇ ನೀನು ಅಂಜಬೇಡ ಈ ಸುಂದರ ಮಗುವನ್ನು ಪಡೆದೆಯಾದರು ನಿನ್ನ ಕನ್ಯತ್ತ್ವವು ಕೆಡಲಿಲ್ಲ ಎಂದು ಅಂತರ್ಧಾನನಾದನು. ಕುಂತಿಗೆ ಉಭಯಸಂಕಟವಾಯಿತು ಶಿಶುವನ್ನು ಅರಮನೆಗೆ ಒಯ್ದರೆ ಪ್ರಜೆಗಳ ಪ್ರಶ್ನೆಗಳಿಗೆ ಏನೆಂದು ಉತ್ತರಿಸಲಿ ? ಲೋಕಾಪವಾದದಿಂದ ಹೇಗೆ ಪಾರಾಗಲಿ? ಜನ್ಮಕೊಟ್ಟ ವಂಶವನ್ನು ಸಾಕಿ ಸಲಹಿದ ಕುಂತಿಭೋಜ ಮಹಾರಾಜನನ್ನು ನಗೆಗೀಡುಮಾಡಲೇ…..! ಹೀಗೆ ಹಲವಾರು ಯೋಚನೆಗಳು ಉದ್ಭವಿಸಿದವು. ತನ್ನೊಳಗೆ ತಾನು ನೊಂದು ಮೂಕಳಾಗಿ ಭೋರ್ಗರೆದು ಹರಿಯುತ್ತಿರುವ ಜಾನ್ಹವಿಯನ್ನು ಕರಜೋಡಿಸಿ ಪ್ರಾರ್ಥಿಸಿದಳು.
” ಅಮ್ಮ, ಅರಿಯದೆ ದೊಡ್ಡ ಪ್ರಮಾದವನ್ನೆಸಗಿದ್ದೇನೆ, ಲೋಕಾಪವಾದಕ್ಕೆ ಹೆದರಿ ಈ ಕೂಸನ್ನು ನಮ್ಮ ಅರಮನೆಗೆ ಕೊಂಡು ಹೋಗಲಾರೆ, ನಿನ್ನ ಸೀರೆಯ ಸೆರಗಿನಂತಿರುವ ಈ ಮಹಾ ಪ್ರವಾಹದಲ್ಲಿ ತೇಲಿಬಿಡುತಿದ್ದೇನೆ ನಿನ್ನ ಮಡಿಲಲ್ಲಿ ಇರಿಸಿಕೊಂಡು ಈ ಹಸುಳೆಯನ್ನು ಕಾಯ್ದುಕೊ. ಲೋಕಮಾತೆಯಾಗಿರುವ ನಿನಗೆ ತಾಯಿತನದ ನೋವು ನಲಿವಿನ ಅರಿವಿದೆ. ಶಿಶುವನ್ನು ಕಾಯುವುದಾಗಲಿ, ಕೊಲ್ಲುವುದಾಗಲಿ ನಿನಗೆ ಬಿಟ್ಟಿರುತ್ತೇನೆ. ಈ ನನ್ನ ಮನದಾಳವನ್ನು ಹೆತ್ತ ಕರುಳು ಮಾತ್ರ ಅರಿಯಬಲ್ಲದು, ಅಮ್ಮ ನನ್ನ ವಂಶವನ್ನು ಕುಲಗೌರವವನ್ನು ಕಾಪಾಡು ಎಂದು ಆ ಮಗುವನ್ನು ಗಂಗೆಯಲ್ಲಿ ತೇಲಿಬಿಟ್ಟಳು. ಗಂಗಾ ಪ್ರವಾಹದಲ್ಲಿ ಮಗು ತೇಲಿಕೊಂಡು ಹೋಗುತಿತ್ತು. ಜಾನ್ಹವಿ ಕರುಣಾಮಯಿಯಲ್ಲವೇ…..? ಆ ಕಂದನ ಭಾಗ್ಯ ಭಾಗೀರಥಿಯಲ್ಲಿ ನಶಿಸಿಹೋಗದೆ, ದೂರದ ತೀರವನ್ನು ಸೇರಿಕೊಂಡಿತು.
ವಿಶ್ವಚಕ್ಷುವಾದ ಸೂರ್ಯನನ್ನು ನೋಡಿ ಅಳುತ್ತ ಕೈಕಾಲುಗಳನ್ನು ಆಡಿಸುತ್ತಾ ನದಿ ತೀರದಲ್ಲಿದ್ದ ಮಗುವನ್ನು ಅಲ್ಲೇ ಸನಿಹದಲ್ಲಿ ಹೋಗುತಿದ್ದ ಅಧಿರಥನು ನೋಡಿದನು. ಸಂತಾನವಿಲ್ಲದೆ ನರಳುತ್ತಿದ್ದ ಅವನ ಹೃದಯಕ್ಕೆ ಶಿಶುವನ್ನು ಕಂಡಾಗ ಎಲ್ಲಿಲ್ಲದ ಆನಂದ.. ಮನೆಯ ನಂದಾದೀಪ ಬೆಳಗಿಸುವುದಕ್ಕೆ ಭಗವಂತನೇ ತಂದಿರಿಸಿದನು ಎನ್ನುವ ಸಂತೋಷ. ಆ ಸುಂದರ ಶಿಶುವನ್ನು ಕರಗಳಲ್ಲಿ ಎತ್ತಿಕೊಂಡು ತನ್ನ ಗುಡಿಸಲಿಗೆ ಓಡಿಬಂದು ತನ್ನ ಹೆಂಡತಿಯ ಕೈಲಿಟ್ಟನು ಅವಳು ಬಹಳ ಹರುಷದಿಂದ ಮಗುವನ್ನು ಮುದ್ದಾಡಿದಳು.
ಈ ಮಗುವಾದರೂ ಜನಿಸಿದಾಗಲೇ ಆಭರಣಗಳಿಂದಲೂ , ಎದೆಯಲ್ಲಿ ಅಮೃತಕಲಶ, ಕವಚಗಳಿಂದಲೂ ಕೊಡಿದ್ದಾ ಮಗುವಿಗೆ ವಸುಷೇಣನೆಂದು ಕರೆದರೂ.. ಕಿವಿಯಲ್ಲಿ (ಕರ್ಣ)ಕುಂಡಲ ಇದ್ದ ಕಾರಣ ಕರ್ಣನೆಂಬ ಹೆಸರಾಯಿತು. ಮಗು ಬಹಳ ಬುದ್ದಿವಂತನು , ಧೈರ್ಯಶಾಲಿಯು ಆಗಿದ್ದನು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ
JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?
“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…
ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!
ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ
Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ
ಚಂದ್ರಶೇಖರ ಶ್ರೀ ವಿರುದ್ಧ ಕೇಸ್; ಒಕ್ಕಲಿಗರು ತಿರುಗಿ ಬೀಳುತ್ತಾರೆ: ಆರ್.ಅಶೋಕ್ ಎಚ್ಚರಿಕೆ
Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್
ಬಾಲ್ಯದ ಮಧುರ ನೆನೆಪಿನೊಳಗೆ…: ಆ ಕಾಲ ಹೀಗಿತ್ತು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.