ಟ್ರಂಪ್-ಕಿಮ್ ಶೃಂಗಕ್ಕೆ ಸಿಂಗಾಪುರ ಗೂರ್ಖಾ ಪಡೆ ಭದ್ರತೆ
Team Udayavani, Jun 5, 2018, 4:29 PM IST
ಸಿಂಗಾಪುರ : ಈ ತಿಂಗಳಾಂತ್ಯದಲ್ಲಿ ಇಲ್ಲಿ ನಡೆಯಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉತ್ತರ ಕೊರಿಯ ಸರ್ವಾಧಿಕಾರಿ ನಾಯಕ ಕಿಮ್ ಜಾಂಗ್ ಉನ್ ಅವರೊಳಗಿನ ಐತಿಹಾಸಿಕ ಶೃಂಗಕ್ಕೆ ವಿಶ್ವ ಪ್ರಸಿದ್ಧ ಬಡುಕಟ್ಟು ಯೋಧರೆನಿಸಿರುವ ನೇಪಾಲದ ಗೂರ್ಖಾ ಗಳು ರಕ್ಷಣೆ ನೀಡಲಿದ್ದಾರೆ.
ಉಭಯ ನಾಯಕರು ತಮ್ಮೊಂದಿಗೆ ತಮ್ಮ ದೇಶದ ಭದ್ರತಾ ಸಿಬಂದಿಗಳನ್ನು ಕರೆ ತರುತ್ತಾದರೂ ಗೂರ್ಖಾ ಪಡೆಯನ್ನು ಒಳಗೊಂಡಿರುವ ಸಿಂಗಾಪುರ ಪೊಲೀಸರು ಶೃಂಗ ನಡೆಯುವ ತಾಣಕ್ಕೆ, ಅಲ್ಲಿಗೆ ತಲುಪುವ ರಸ್ತೆಗಳಿಗೆ, ಹೊಟೇಲು ಮತ್ತಿತರ ಆಯಕಟ್ಟಿನ ಸ್ಥಳಗಳಿಗೆ ರಕ್ಷಣೆ ನೀಡಲಿದ್ದಾರೆ ಎಂದು ಈ ದ್ವೀಪ ರಾಷ್ಟ್ರದಲ್ಲಿ ವಿಐಪಿ ಭದ್ರತೆಯೊಂದಿಗೆ ನಿಕಟ ಸಂಪರ್ಕ ಹೊಂದಿರುವ ರಾಜತಂತ್ರಜ್ಞರು ತಿಳಿಸಿದ್ದಾರೆ.
ಸಿಂಗಾಪುರದಲ್ಲಿನ ಗೂರ್ಖಾ ಪಡೆಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುವುದು ಕಡಿಮೆ. ಈಚೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕದ ರಕ್ಷಣಾ ಸಚಿವ ಜಿಮ್ ಮ್ಯಾಟಿಸ್ ಮತ್ತು ಇತರ ಪ್ರಾದೇಶಿಕ ಸಚಿವರು ಪಾಲ್ಗೊಂಡ ಸಿಂಗಾಪುರದ ಶಾಂಗ್ರಿಲಾ ಹೊಟೇಲ್ಗೆ ಬಿಗಿ ಭದ್ರತೆ ನೀಡಿದವರೇ ಗೂರ್ಖಾ ಪಡೆಗಳು ಎನ್ನುವುದು ಉಲ್ಲೇಖನೀಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್ಗೆ ಕ್ಲೀನ್ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
Marriage: ಕ್ರಿಸ್ಮಸ್ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.