ಗಾಂಜಾ ಸೇವನೆ ಕಾನೂನುಬದ್ಧಗೊಳಿಸಲು ಶಶಿ ತರೂರ್ ಸಲಹೆ
Team Udayavani, Jun 5, 2018, 7:49 PM IST
ಹೊಸದಿಲ್ಲಿ : ಸದಾ ಡಿಫರೆಂಟ್ ಆಗಿ ಆಲೋಚಿಸುವ ಆಧುನಿಕ ಚಿಂತಕ, ಕಾಂಗ್ರೆಸ್ ನಾಯಕ, ಶಶಿ ತರೂರ್ ಅವರಿಂದ ಇದೀಗ ಔಟ್ ಆಫ್ ದಿ ಬಾಕ್ಸ್ ವಿಚಾರ ಲಹರಿಯೊಂದು ಹೊರ ಬಂದಿದೆ.
ಗಾಂಜಾ ಸೇವನೆಯನ್ನು ಕಾನೂನು ಬದ್ಧಗೊಳಿಸಬೇಕು; ಹಾಗೆ ಮಾಡಿದಲ್ಲಿ ದೇಶದಲ್ಲಿನ ಭ್ರಷ್ಟಾಚಾರ ಕಡಿಮೆಯಾಗುತ್ತದೆ ಎಂದು ತರೂರ್ ತಮ್ಮ ಅತ್ಯಾಧುನಿಕ ಚಿಂತನೆಯನ್ನು ಹರಿಯಬಿಟ್ಟಿದ್ದಾರೆ.
ಇನ್ನೂ ಒಂದು ಹೆಜ್ಜೆ ಮುಂದಿಟ್ಟಿರುವ ತರೂರ್, ಗಾಂಜಾ ಸೇವನೆಯಿಂದ ಮಾನವೀಯ ಮೌಲ್ಯಗಳು ಹೆಚ್ಚುತ್ತವೆ; ಇದರಿಂದ ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯವಾಗುತ್ತದೆ ಎಂದೂ ಹೇಳಿದ್ದಾರೆ.
ತರೂರ್ ಅವರ ಪ್ರಕಾರ ದೇಶದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಗಾಂಜಾ ಮಾರಾಟವಾಗುತ್ತಿದೆ; ಹಾಗಾಗಿ ಗಾಂಜಾ ಸೇವಿಸುವವರ ಸಂಖ್ಯೆಯೂ ಹೆಚ್ಚುತ್ತಿದೆ. ಗಾಂಜಾ ಸೇವನೆಯನ್ನು ಕಾನೂನುಬದ್ಧಗೊಳಿಸುವುದರಿಂದ ಸರಕಾರಕ್ಕೆ ಅತ್ಯಧಿಕ ಲಾಭ ಬರುತ್ತದೆ.
ತರೂರ್ ಅವರ ಚಿಂತನೆಯನ್ನು ಒಪ್ಪುವುದಾದರೆ ಎಲ್ಲ ಬಗೆಯ ಸಾಮಾಜಿಕ ಪಿಡುಗುಗಳಿಗೆ ಕಾರಣವಾಗುವ ಮತ್ತು ಸರಕಾರದ ಆದಾಯವನ್ನು ಹೆಚ್ಚಿಸಬಲ್ಲ ಸಂಗತಿಗಳನ್ನು ಕಾನೂನುಬದ್ಧಗೊಳಿಸಬೇಕಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
By Election: ಯೋಗೇಶ್ವರ್ ನಿಂದಿಸಿದ್ದ ಡಿ.ಕೆ.ಸುರೇಶ್ ಆಡಿಯೋ ಎಚ್‌ಡಿಕೆ ಬಿಡುಗಡೆ
By Election: ನಾಗೇಂದ್ರ, ಜಮೀರ್, ಡಿಕೆಶಿ ಮೇಲೆ ಚುನಾವಣಾ ಆಯೋಗ ಕಣ್ಣಿಡಲಿ: ಡಿವಿಎಸ್
Waqf: ಮುಸ್ಲಿಮರ ಗುರಿ ಮಾಡುವುದು ಬಿಟ್ಟರೆ ಬಿಜೆಪಿಗೆ ಬೇರೇನೂ ಇಲ್ಲ: ಸಚಿವ ದಿನೇಶ್
Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ
Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್ ಅನುಮತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.