ತರಬೇತಿ ಶಿಬಿರಕ್ಕೆ ಕ್ರಿಸ್ಟಿಯಾನೊ ರೊನಾಲ್ಡೊ
Team Udayavani, Jun 6, 2018, 6:00 AM IST
ಮಾಸ್ಕೊ: 2018ರ ವಿಶ್ವ ಕಪ್ ಫುಟ್ಬಾಲ್ ಕೂಟದ ಸಿದ್ಧತೆಗಾಗಿ ಖ್ಯಾತ ಆಟಗಾರ ಕ್ರಿಸ್ಟಿ ಯಾನೊ ರೊನಾಲ್ಡೊ ಪೋರ್ಚುಗಲ್ ತಂಡದ ತರಬೇತಿ ಶಿಬಿರಕ್ಕೆ ಸೇರ್ಪಡೆಯಾಗಿದ್ದಾರೆ. ಪೋರ್ಚುಗಲ್ ತಂಡವು ಸೋಚಿಯಲ್ಲಿ ಜೂ. 15ರಂದು ಸ್ಪೇನ್ ತಂಡವನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.
ಮೇ 26ರಂದು ನಡೆದ ಚಾಂಪಿಯನ್ಸ್ ಲೀಗ್ ಫೈನಲ್ ಕೂಟದ ಬಳಿಕ ರಿಯಲ್ ಮ್ಯಾಡ್ರಿಡ್ ತಂಡದ ತಾರೆ ಕೆಲವು ದಿನ ವಿಶ್ರಾಂತಿಯಲ್ಲಿದ್ದರು. ಚಾಂಪಿಯನ್ಸ್ ಲೀಗ್ ಫೈನಲ್‌ನಲ್ಲಿ ಲಿವರ್‌ಪೂಲ್ ವಿರುದ್ಧ ಬ್ಲ್ಯಾಂಕೋಸ್ ಗೆಲುವು ಸಾಧಿಸಿತ್ತು. ರೊನಾಲ್ಡೊ ಸೋಮವಾರ ತಂಡದ ತರಬೇತಿ ಸ್ಥಳಕ್ಕೆ ಆಗಮಿಸಿ ಶಿಬಿರದಲ್ಲಿ ಪಾಲ್ಗೊಂಡರು.
ವಿಶ್ವದ ಶ್ರೇಷ್ಠ ಫುಟ್ಬಾಲರ್‌ಗೆ ನೀಡಲಾಗುವ ಬಾಲನ್ ಡಿ’ಆರ್ ಪ್ರಶಸ್ತಿಯನ್ನು ಐದು ಬಾರಿ ಗೆದ್ದಿರುವ ರೊನಾಲ್ಡೊ ತಂಡದಲ್ಲಿದ್ದರೆ ಪೋರ್ಚು ಗಲ್ ಹೊಸ ಉತ್ಸಾಹದಿಂದ ಆಡಲಿದೆ. ಅವರ ಬಲದಿಂದಲೇ ಪೋರ್ಚುಗಲ್ ಹಲವು ಪಂದ್ಯಗಳಲ್ಲಿ ಜಯಭೇರಿ ಬಾರಿಸಿದ ಉದಾಹರಣೆಗಳಿವೆ.
ಈಗ ನಮ್ಮದು ಪರಿಪೂರ್ಣ ತಂಡವಾಗಿದೆ. ಅವರು ನಮ್ಮ ಪಾಲಿಗೆ ಹೊಸ ಸ್ಫೂರ್ತಿ ನೀಡುವ ಆಟಗಾರ, ವಿಶ್ವಶ್ರೇಷ್ಠ ಆಟಗಾರ ನಮ್ಮ ಜತೆಗಿದ್ದಾರೆ ಮತ್ತು ಅವರ ಜತೆ ಆಡುವ ಮೂಲಕ ನಾವು ಸಾಕಷ್ಟು ವಿಷಯ ಕಲಿಯಲಿದ್ದೇವೆ ಎಂದು ಪೋರ್ಚುಗಲ್ ತಂಡದ ಸದಸ್ಯ ಜೊವೊ ಮಾಟಿನ್ಹೊ ಹೇಳಿದ್ದಾರೆ.
ಗುರುವಾರ ನಡೆಯುವ ಅಭ್ಯಾಸ ಪಂದ್ಯದಲ್ಲಿ ಪೋರ್ಚುಗಲ್ ತಂಡವು ಅಲ್ಜೀರಿಯ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ರೊನಾಲ್ಡೊ ಆಡಲಿದ್ದಾರೆ. ಪೋರ್ಚು ಗಲ್ ಈ ಮೊದಲು ಆಡಿದ ಪಂದ್ಯದಲ್ಲಿ ಟ್ಯುನಿಶಿಯಾ ವಿರುದ್ಧ 2-2 ಗೋಲುಗಳಿಂದ ಡ್ರಾ ಸಾಧಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
BJP Internal Dispute: ಶಾಸಕ ಬಸನಗೌಡ ಯತ್ನಾಳ್ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು
Constitution Day: ಉಡುಪಿ ಪೇಜಾವರ ಶ್ರೀ ಮನುಸ್ಮೃತಿ ಪ್ರತಿಪಾದಕರು: ಸಿಎಂ ಸಿದ್ದರಾಮಯ್ಯ
Train: ಗೋಮಟೇಶ್ವರ ಎಕ್ಸ್‌ಪ್ರೆಸ್ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು
Kambala: ತೀರ್ಪುಗಾರರ ತೀರ್ಮಾನವೇ ಅಂತಿಮ:ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ನಿರ್ಣಯ
Congress: ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಸ್ವರ ಎತ್ತಿದರೆ ಶಿಸ್ತುಕ್ರಮ: ಡಿ.ಕೆ.ಶಿವಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.