ಆತಿಥೇಯ ರಶ್ಯ ತಂಡ ಅಧಿಕೃತ ಪ್ರಕಟ
Team Udayavani, Jun 6, 2018, 6:00 AM IST
ಮಾಸ್ಕೊ: 2018ರ ಫಿಫಾ ವಿಶ್ವಕಪ್ ಆರಂಭವಾಗಲು ಇನ್ನು ಕೇವಲ 10 ದಿನಗಳು ಬಾಕಿ ಉಳಿದಿದ್ದು ಭಾಗವಹಿಸುತ್ತಿರುವ 32 ತಂಡಗಳ 23 ಸದಸ್ಯರ ಪೂರ್ಣ ತಂಡ ಅಧಿಕೃತಗೊಂಡಿದೆ. ಈ ತಂಡಗಳ ಪಟ್ಟಿಯ ಅಧಿಕೃತ ಪ್ರಕಟನೆಯಿಂದಾಗಿ ಫಿಫಾ ವಿಶ್ವಕಪ್ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಒಟ್ಟಾರೆ 736 ಆಟಗಾರರು ತಮ್ಮ ತಂಡದ ಗೆಲುವಿಗಾಗಿ ಹೋರಾಡಲಿದ್ದಾರೆ.
ಜೂನ್ 14ರಂದು ಇಲ್ಲಿನ ಲುಝಿ°ಕಿ ಕ್ರೀಡಾಂಗಣದಲ್ಲಿ ಆತಿಥೇಯ ರಷ್ಯಾ ತಂಡವು ಸೌದಿ ಅರೇಬಿಯಾ ತಂಡವನ್ನು ಎದುರಿಸುವ ಮೂಲಕ 21ನೇ ಫಿಫಾ ವಿಶ್ವಕಪ್ ಫುಟ್ಬಾಲ್ ಹಬ್ಬ ಆರಂಭವಾಗಲಿದೆ.
ಆರ್ಜೆಂಟೀನಾದ ನಂಬರ್ ವನ್ ಗೋಲ್‌ಕೀಪರ್ ನಹುಯೆಲ್ ಗುಜ್ಮಾನ್ ಅವರಿಂದ ಹಿಡಿದು ಉರುಗ್ವೆಯ 23ನೇ ರ್‍ಯಾಂಕಿನ ಮಾರ್ಟಿನ್ ಸಿಲ್ವ ಅವರು ಈಗಾಗಲೇ ರಶ್ಯದ ನೆಲದಲ್ಲಿದ್ದು ಕಠಿನ ತರಬೇತಿಯಲ್ಲಿ ತೊಡಗಿದ್ದಾರೆ. ಇವರೆಲ್ಲರ ಆಟವನ್ನು ವಿಶ್ವಕಪ್ ಆರಂಭವಾಗುತ್ತಿದ್ದಂತೆ ನೋಡಬಹುದು. ಪ್ರತಿಯೊಂದು ತಂಡದಲ್ಲಿಯೂ ವಿಶ್ವಖ್ಯಾತಿಯ ಆಟಗಾರರು ಇರುವ ಕಾರಣ ಯಾವ ತಂಡ ಪ್ರಶಸ್ತಿ ಗೆಲ್ಲುತ್ತದೆ ಎಂದು ಹೇಳುವುದು ಕಷ್ಟ.
2014ರಲ್ಲಿ ಬ್ರಝಿಲ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ಜರ್ಮನಿ ಪ್ರಶಸ್ತಿ ಜಯಿಸಿತ್ತು. ಪ್ರಶಸ್ತಿ ಗೆದ್ದ ತಂಡದಲ್ಲಿದ್ದ 9 ಮಂದಿ ರಶ್ಯದಲ್ಲಿಯೂ ಆಡಲಿದ್ದಾರೆ. ಇದೇ ವೇಳೆ ಆತಿಥ್ಯ ತಂಡವಾದ ರಷ್ಯಾದಲ್ಲಿ 16 ಮಂದಿಗಿದು ಚೊಚ್ಚಲ ಬಾರಿ ವಿಶ್ವಕಪ್ ಫೈನಲ್‌ನಲ್ಲಿ ಆಡುವ ಸಂಭ್ರಮವಾಗಿದೆ.
ಪೆನಾಲ್ಟಿ ಕಾರ್ನರ್
ಅತೀ ಹಿರಿಯ ಆಟಗಾರ
45ರ ಹರೆಯದಲ್ಲೂ ವಿಶ್ವಕಪ್ ಫುಟ್ಬಾಲ್ ಕೂಟದಲ್ಲಿ ಆಡುತ್ತಾರೆಯೆ. ಯಾಕಾಗಬಾರದು ? ಈಜಿಪ್ಟ್ನ ಗೋಲ್‌ಕೀಪರ್ ಎಸ್ಸಾಮ್ ಎಲ್ ಹಾದರಿ ಅವರಿಗೆ ಪ್ರಾಯ ಒಂದು ಸಂಖ್ಯೆ ಮಾತ್ರ. ಒಂದು ವೇಳೆ ಅವರು ರಶ್ಯದಲ್ಲಿ ನಡೆಯುವ ವಿಶ್ವಕಪ್ ಫುಟ್ಬಾಲ್ ಕೂಟದ ಅಂತಿಮ ತಂಡದಲ್ಲಿ ಕಾಣಿಸಿಕೊಂಡರೆ ಅವರು ವಿಶ್ವಕಪ್ ಫುಟ್ಬಾಲ್‌ನಲ್ಲಿ ಆಡಿದ ಅತ್ಯಂತ ಹಿರಿಯ ಆಟಗಾರ ಎಂದೆನಿಸಿಕೊಳ್ಳಲಿದ್ದಾರೆ. ಈಜಿಪ್ಟ್ ಪರ 156 ಪಂದ್ಯಗಳಲ್ಲಿ ಆಡಿರುವ ಹಾದರ್ ತಂಡಕ್ಕೆ ಆಯ್ಕೆಯಾಗುವ ಸಮರ್ಥ ಗೋಲ್‌ಕೀಪರ್ ಆಗಿದ್ದಾರೆ. ಸದ್ಯ ಕೊಲಂಬಿಯದ ಗೋಲ್‌ಕೀಪರ್ ಫರೀದ್ ಮೊಂಡ್ರಾಗನ್ ವಿಶ್ವಕಪ್ ಫುಟ್ಬಾಲ್‌ನಲ್ಲಿ ಆಡಿದ ಅತೀ ಹಿರಿಯ ಆಟಗಾರರಾಗಿದ್ದರು. 2014ರಲ್ಲಿ ಬ್ರಝಿಲ್‌ನಲ್ಲಿ ಜಪಾನ್ ವಿರುದ್ಧದ ಪಂದ್ಯವನ್ನಾಡಿದಾಗ ಅವರಿಗೆ 43 ವರ್ಷ ಮತ್ತು 3 ದಿನವಾಗಿತ್ತು.
32 ತಂಡಗಳ 23 ಆಟಗಾರರ ಪಟ್ಟಿ ಲಭ್ಯ
ವಿಶ್ವಕಪ್‌ನಲ್ಲಿ ಆಡಲಿರುವ 736 ಆಟಗಾರರು