ಶೀಘ್ರವೇ ರೈಲೂಟದಲ್ಲಿ ಬದಲಾವಣೆ
Team Udayavani, Jun 6, 2018, 5:15 AM IST
ಸದ್ಯದಲ್ಲೇ ನೀವು ರೈಲುಗಳಲ್ಲಿ ಸಿಗುವ ಆಹಾರದಲ್ಲಿ ಹಲವು ಬದಲಾವಣೆಗಳನ್ನು ಕಾಣುತ್ತೀರಿ. ರೈಲುಗಳಲ್ಲಿ ಪೂರೈಕೆಯಾಗುವ ಆಹಾರದ ಗುಣಮಟ್ಟದ ಬಗ್ಗೆ ಪದೇ ಪದೇ ದೂರುಗಳು ಕೇಳಿಬರುತ್ತಿರುವುದರಿಂದ, ಪ್ರಮಾಣಕ್ಕಿಂತ ಗುಣಮಟ್ಟಕ್ಕೇ ಹೆಚ್ಚು ಒತ್ತು ನೀಡಲು ಭಾರತೀಯ ರೈಲ್ವೇ ಕೆಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (IRCTC) ಚಿಂತನೆ ನಡೆಸಿದ್ದು, ಪ್ರಸ್ತಾವವನ್ನು ರೈಲ್ವೇ ಮಂಡಳಿಗೆ ಕಳುಹಿಸಿದೆ. ಇದಕ್ಕೆ ಒಪ್ಪಿಗೆ ಸಿಕ್ಕಿದರೆ, ರೈಲಿನಲ್ಲಿನ ಊಟದ ಪ್ರಮಾಣ ಹಾಗೂ ಮೆನುವಿನಲ್ಲೂ ಸಣ್ಣಮಟ್ಟಿಗೆ ಬದಲಾವಣೆ ಆಗಲಿದೆ.
ಕಾರಣವೇನು?
ಆಹಾರದ ಗುಣಮಟ್ಟದ ಬಗ್ಗೆ ಕೇಳಿಬರು ತ್ತಿರುವ ದೂರುಗಳು ಒಂದು ಕಾರಣವಾ ದರೆ, ಕಚ್ಚಾ ವಸ್ತುಗಳ ದರ ಏರಿಕೆಯಾಗಿರುವುದರಿಂದ ಕಡಿಮೆ ದರದಲ್ಲಿ ಗುಣಮಟ್ಟದ ಆಹಾರ ಒದಗಿಸುವುದು ಸವಾಲಾಗಿ ಪರಿಣಮಿಸಿರುವುದೂ IRCTC ಈ ನಿರ್ಧಾರಕ್ಕೆ ಕಾರಣ.
ಪರಿಸರ ದಿನ
ವಿಶ್ವ ಪರಿಸರ ದಿನವಾದ ಮಂಗಳವಾರದಿಂದ ಕೆಲವು ರಾಜಧಾನಿ ಹಾಗೂ ಶತಾಬ್ದಿ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಜೈವಿಕ ವಿಘಟನೀಯ ಕಂಟೇನರ್ ಗಳಲ್ಲಿ ಆಹಾರವನ್ನು ಪೂರೈಸಲು IRCTC ಆರಂಭಿಸಿದೆ.
– ಒಟ್ಟಾರೆ ಊಟದ ಪ್ರಮಾಣವನ್ನು 700 ಗ್ರಾಂಗೆ ಇಳಿಸಲು ಚಿಂತನೆ
– ದಾಲ್ ಪ್ರಮಾಣ ಈಗಿರುವ 150 ಗ್ರಾಂ ಬದಲು 100-120 ಗ್ರಾಂ
– ಮಾಂಸಾಹಾರಿ ಊಟಕ್ಕೆ ಚಿಕನ್ ಪೀಸ್ ಬದಲು ಬೋನ್ ಲೆಸ್ ಚಿಕನ್ ಗ್ರೇವಿ
– ಹಸಿ ತರಕಾರಿಯನ್ನೂ ಒದಗಿಸುವ ವ್ಯವಸ್ಥೆ
– ವಿಮಾನದಲ್ಲಿರುವ ಕಾಂಬೋ ಮೀಲ್ಸ್ ಆಫರ್
– ಸೂಪ್ ಮತ್ತು ಬ್ರೆಡ್ ಸ್ಟಿಕ್ ಪೂರೈಕೆ ರದ್ದು
900 ಗ್ರಾಂ : ಸದ್ಯ ನೀಡಲಾಗುತ್ತಿರುವ ಊಟದ ಪ್ರಮಾಣ
700 ಗ್ರಾಂ : ಇನ್ನು ಮುಂದೆ ನೀಡಲು ಚಿಂತನೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.