ನೋ ಶ್ಯಾಂಪೂ ಪ್ಲೀಸ್
Team Udayavani, Jun 6, 2018, 9:11 AM IST
ನೀಳ ಕೇಶರಾಶಿ ಪಡೆಯಲು ಯಾವ ಶ್ಯಾಂಪೂ ಬಳಸಬೇಕು ಗೊತ್ತೇ? “ಯಾವುದೇ ಶ್ಯಾಂಪೂವನ್ನೂ ಬಳಸಬಾರದು’! ಅರೆ, ಏನಿದು ಹೀಗೆ ಹೇಳುತ್ತಿದ್ದಾರೆ ಅಂತ ಅಚ್ಚರಿಯೇ? ಜಾಹೀರಾತುಗಳಲ್ಲಿ ತೋರಿಸುವಂತೆ, ಶ್ಯಾಂಪೂ ಬಳಸಿದ ಕೂಡಲೇ ನೀವು ಉದ್ದ ಕೂದಲಿನ ಒಡತಿಯರಾಗುವುದಿಲ್ಲ. ಬದಲಿಗೆ, ನಿಮ್ಮ ಕೂದಲು ಇನ್ನಷ್ಟು ಹಾಳಾಗುತ್ತದೆ. ಅಂಗಡಿಯಲ್ಲಿ ಸಿಗುವ ಥರಹೇವಾರಿ ಶ್ಯಾಂಪೂಗಳಿಗೆ ಮಾರುಹೋಗುವ ಮುನ್ನ, ಶ್ಯಾಂಪೂ ಬಳಸದಿದ್ದರೆ ಏನಾಗುತ್ತದೆ ಅಂತ ಒಮ್ಮೆ ಓದಿ.
– ಆರೋಗ್ಯವಂತ ಕೇಶರಾಶಿ ಪಡೆಯಬಹುದು.
– ಕೂದಲಿನ ಬುಡದಲ್ಲಿ ತಲೆಗೆ ಬೇಕಾಗುವಷ್ಟು ಎಣ್ಣೆ ಉತ್ಪತ್ತಿಯಾಗುತ್ತದೆ.
– ಕೂದಲು ನೈಸರ್ಗಿಕವಾಗಿ ಹೊಳಪು ಪಡೆಯುತ್ತದೆ.
– ಸಲ್ಫೆàಟ್, ಫಾರ್ಮಲ್‌ಡಿಹೈಡ್‌ನಂಥ ರಾಸಾಯನಿಕದಿಂದ ಕೂದಲನ್ನು ರಕ್ಷಿಸಬಹುದು.
– ನೈಸರ್ಗಿಕ ಜಿಡ್ಡಿನಾಂಶ ಹಾಗೇ ಉಳಿಯುವುದರಿಂದ ಕೂದಲು ಸತ್ವಹೀನವಾಗುವುದಿಲ್ಲ.
– ಕೂದಲು ಉದುರುವುದು ನಿಲ್ಲುತ್ತದೆ.
ಕೂದಲಿನ ಆರೋಗ್ಯ ಕಾಪಾಡಿಕೊಳ್ಳಲು ಸದ್ಯ ಚಾಲ್ತಿಯಲ್ಲಿರುವ ಟ್ರೆಂಡ್ ಅಂದರೆ ಅದು “ನೋ ಪೂ ಮೆಥಡ್ (No Poo Method)! ಅಂದರೆ, ಕೂದಲಿಗೆ ಶ್ಯಾಂಪೂ ತಾಗಿಸದಿರುವುದು. ತೆಳು ಹಾಗೂ ಸಾಫ್ಟ್ ಕೂದಲು ಬೇಗ ಜಿಡ್ಡಾಗಿ ಕಾಣುವುದರಿಂದ, ಅಂಥ ಕೂದಲಿನವರು ಒಮ್ಮೆಲೇ ಶ್ಯಾಂಪೂ ಬಳಕೆ ನಿಲ್ಲಿಸುವುದರ ಬದಲು, ನಿಧಾನಕ್ಕೆ ಶ್ಯಾಂಪೂ ಬಳಕೆ ಪ್ರಮಾಣವನ್ನು ತಗ್ಗಿಸುತ್ತಾ ಬರಬಹುದು. ಗುಂಗುರು ಕೂದಲಿನವರು ಈ ನೋ ಪೂ ಮೆಥಡ್ ಅನ್ನು ಟ್ರೈ ಮಾಡಿ ನೋಡಿ. ಮೊದ ಮೊದಲು ಕೂದಲು ಜಿಡ್ಡಾಗಿ, ಎಣ್ಣೆ ಮೆತ್ತಿಟ್ಟಂತೆ ಕಾಣಿಸುತ್ತದೆ. ಆದರೆ, ಯಾವಾಗ ಜಿಡ್ಡಿನಾಂಶವನ್ನು ತೊಲಗಿಸುವ ಶ್ಯಾಂಪೂ ಬಳಕೆ ನಿಲ್ಲುತ್ತದೋ, ಕ್ರಮೇಣವಾಗಿ ಕೂದಲಿನ ಬುಡ ಕಡಿಮೆ ಎಣ್ಣೆ ಉತ್ಪತ್ತಿಸುತ್ತದೆ.
ಶ್ಯಾಂಪೂ ಬದಲಿಗೆ ಏನನ್ನು ಬಳಸಬಹುದು?
1. ಬೇಕಿಂಗ್ ಸೋಡ ಮತ್ತು ಆ್ಯಪಲ್ ಸೈಡರ್ ವಿನೆಗರ್
ಕೂದಲಿನ ಬುಡದ ಆರೋಗ್ಯಕ್ಕೆ ಬೇಕಿಂಗ್ ಸೋಡ ಬಹಳ ಉತ್ತಮ. ಆ್ಯಪಲ್ ಸೈಡರ್ ವಿನೆಗರ್ ಬಳಕೆಯಿಂದ ಕೂದಲಿಗೆ ಹೊಳಪು ಸಿಗುತ್ತದೆ. ಸುಲಭವಾಗಿ ಸಿಗುವ ಈ ವಸ್ತುಗಳನ್ನು ಶ್ಯಾಂಪೂವಿನ ಬದಲು ವಾರದಲ್ಲಿ ಎರಡು ಬಾರಿ ಬಳಸಬಹುದು.
2. ಕಂಡಿಷನರ್ ಬಳಸಿ
ಶ್ಯಾಂಪೂ ಬಳಸಿ ಕೂದಲು ತೊಳೆದ ನಂತರ ಕಂಡಿಷನರ್ ಬಳಸುವುದು ರೂಢಿ. ಇನ್ನುಮುಂದೆ ಶ್ಯಾಂಪೂವಿನ ಬದಲು ಕಂಡಿಷನರ್ ಅನ್ನು ಮಾತ್ರ ಬಳಸಿ. ಕೂದಲು ಒಣಗಿದ ಹುಲ್ಲಿನಂತಾಗುವುದುನ್ನು ತಡೆಯಲು ಸಹಕಾರಿ.
3. ಶ್ಯಾಂಪೂ ಬಾರ್/ ಸೋಪು
ಮಾರುಕಟ್ಟೆಗೆ ಶ್ಯಾಂಪೂಗಳು ಲಗ್ಗೆಯಿಡುವ ಮುನ್ನ ನಮ್ಮ ಹಿರಿಯರು ಏನು ಬಳಸುತ್ತಿದ್ದರು ಹೇಳಿ? ಹಾnಂ, ಶ್ಯಾಂಪೂ ಬಾರ್/ ಸೋಪುಗಳನ್ನು ತಾನೇ? ಎಲ್ಲ ವಿಧದ ಕೂದಲಿನವರೂ ಯಾವುದೇ ಹಿಂಜರಿಕೆಯಿಲ್ಲದೆ ಸೋಪ್‌ಗ್ಳನ್ನು ತಲೆ ಸ್ನಾನಕ್ಕೆ ಬಳಸಬಹುದು.
4. ನೀರಿನಲ್ಲಿ ಸ್ನಾನ ಮಾಡಿ
ಶ್ಯಾಂಪೂ, ಕಂಡಿಷನರ್, ಸೋಪ್‌ಗ್ಳ ಹಂಗಿಲ್ಲದೆ ಸುಮ್ಮನೆ ನೀರಿನಲ್ಲಿ ಕೂದಲು ತೊಳೆಯಿರಿ. ನೀರು ಉಗುರು ಬೆಚ್ಚಗೆ ಇದ್ದರೆ ಸಾಕು. ಬರೀ ನೀರಿನಲ್ಲಿ ಕೂದಲು ತೊಳೆಯುತ್ತೀರಿ ಎಂದಾದರೆ, ಪ್ರತಿದಿನವೂ ತಲೆಗೆ ಸ್ನಾನ ಮಾಡುವುದು ಉತ್ತಮ. ಶ್ಯಾಂಪೂ ಬಳಸಿ ಹೇಗೆ ಕೂದಲು ಉಜ್ಜುತ್ತೀರೋ ಹಾಗೆಯೇ ನೀರಿನಲ್ಲಿ ಉಜ್ಜಿ ತೊಳೆದರೆ ಜಿಡ್ಡಿನಾಂಶ ಹೋಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.