ರಾಜಭವನ ರಸ್ತೆಯಲ್ಲಿ ಕೊಳಚೆ ನೀರು: ವಾಹನ ಸವಾರರಿಗೆ ಕಿರಿಕಿರಿ
Team Udayavani, Jun 6, 2018, 12:19 PM IST
ಬೆಂಗಳೂರು: ನಗರದ ರಾಜಭವನ ಮುಖ್ಯ ರಸ್ತೆಯ ಪ್ರಧಾನ ಅಂಚೆ ಕಚೇರಿ ಮುಂಭಾಗದಲ್ಲಿ ಕಳಪೆ ಕಾಮಗಾರಿಯಿಂದಾಗಿ ಒಳಚರಂಡಿ ಕೊಳವೆಯೊಂದು (ಮ್ಯಾನ್ಹೋಲ್) ಬಾಯ್ಬಿಟ್ಟಿದ್ದು, ಕೊಳಚೆ ನೀರು ರಸ್ತೆ ತುಂಬೆಲ್ಲ ಹರಿದು ವಾಹನ ಸವಾರರಿಗೆ ಸಾಕಷ್ಟು ಕಿರಿಕಿರಿ ಉಂಟುಮಾಡುತ್ತಿದೆ.
ವಿಧಾನಸೌಧ, ರಾಜಭವನ, ಹೈಕೋರ್ಟ್ ಎಚ್.ಎ.ಎಲ್ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳಿಗೆ ಈ ರಸ್ತೆಯು ಸಂಪರ್ಕ ಕಲ್ಪಿಸುವುದರಿಂದ ಈ ಜಾಗದಲ್ಲಿ ಸಾಕಷ್ಟು ವಾಹನ ದಟ್ಟಣೆ ಇದ್ದು, ಅಧಿಕಾರಿ -ಸಿಬ್ಬಂದಿ ದುರ್ವಾಸನೆಯಿಂದ ಮೂಗು ಮುಚ್ಚಿ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.
ಕೊಳಚೆ ನೀರು ಕೊಳವೆಯಿಂದ ಹೊರಬಂದು ರಸ್ತೆ ತುಂಬೆಲ್ಲಾ ನಿಲ್ಲುವುದರಿಂದ ಸಾಕಷ್ಟು ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ಇನ್ನು ವಾಹನಗಳ ಸಂಚರಿಸುವ ವೇಳೆ ಅಕ್ಕಪಕ್ಕದ ವಾಹನಗಳಿಗೆ ಹಾಗೂ ಪಾದಚಾರಿಗಳಿಗೆ ಈ ಕೊಳಚೆ ನೀರು ಸಿಡಿಯುತ್ತಿದೆ.
ಕಳೆದ ಒಂದು ತಿಂಗಳಿಂದ ಈ ಸಮಸ್ಯೆ ಇದ್ದು, ಪ್ರತಿನಿತ್ಯ ಆಫೀಸಿಗೆ ತಡವಾಗಿ ಹೋಗುತ್ತಿದ್ದೇವೆ. ಸುತ್ತಮುತ್ತಲ ಕಚೇರಿಗಳು ದುರ್ವಾಸನೆಯಿಂದ ಕೂಡಿವೆ. ಇಷ್ಟೇಲ್ಲಾ ಸಮಸ್ಯೆ ಇದ್ದರೂ ಜಲಮಂಡಳಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಎಂದು ಬಹುಮಹಡಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯೊಬ್ಬರು ಹೇಳುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
India: ಸಂವಿಧಾನದ ಕುರಿತಾಗಿ ಶೈಕ್ಷಣಿಕ ನೆಲೆಯಲ್ಲಿ ಚಿಂತನ ಮಂಥನ ನಡೆಯಬೇಕು?
Video: ಮದುವೆ ಸಂಭ್ರಮದ ಖುಷಿಯಲ್ಲಿ ಪಟಾಕಿ ಸಿಡಿಸಲು ಹೋಗಿ ಕಾರೇ ಸುಟ್ಟಿತು
MGM: ಮಹಾತ್ಮ ಗಾಂಧಿ ಮೆಮೋರಿಯಲ್ ಕಾಲೇಜು; ಅಮೃತ ಮಹೋತ್ಸವ
SMAT T20: 28 ಎಸೆತದಲ್ಲಿ ಶತಕ ಬಾರಿಸಿ T20ಯಲ್ಲಿ ದಾಖಲೆ ಬರೆದ ಇಂಡಿಯನ್ ಬ್ಯಾಟರ್
Jewelry Clean Tips: ಮನೆಯಲ್ಲೇ ಆಭರಣಗಳನ್ನು ಈ ರೀತಿಯಾಗಿ ಸ್ವಚ್ಛಗೊಳಿಸಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.