ನೀರು ಸೋರಿಕೆ ತಡೆಗೆ ಜಲಮಂಡಳಿ ಸಜ್ಜು


Team Udayavani, Jun 6, 2018, 12:19 PM IST

neeru-sorike.jpg

ಬೆಂಗಳೂರು: ನೂರಾರು ಕಿ.ಮೀ ದೂರದಿಂದ ರಾಜಧಾನಿಗೆ ಹರಿದು ಬರುತ್ತಿರುವ ಕಾವೇರಿ ನೀರಿನ ಸೋರಿಕೆ ಪ್ರಮಾಣ ನಿಯಂತ್ರಣಕ್ಕೆ ಅತ್ಯಾಧುನಿಕ ತಂತ್ರಜ್ಞಾನ ಬಳಕೆಗೆ ಬೆಂಗಳೂರು ಜಲಮಂಡಳಿ ಸಜ್ಜಾಗುತ್ತಿದೆ.

ಜಲಮಂಡಳಿಯ ನಗರದ ಲಕ್ಷಾಂತರ ಮನೆಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆಯಾದರೂ, ನೀರಿನ ಸೋರಿಕೆ ಹಾಗೂ ನೀರಿನ ಕಳ್ಳತನ ತಡೆಯುವುದು ಸವಾಲಾಗಿ ಪರಿಣಮಿಸಿದೆ. ನೀರಿನ ಸೋರಿಕೆ ನಿಯಂತ್ರಿಸುವ ನಿಟ್ಟಿನಲ್ಲಿ ಮಂಡಳಿ ಈಗಾಗಲೇ ಹಲವಾರು ಕ್ರಮಗಳನ್ನು ಕೈಗೊಂಡರೂ ಪ್ರಾಯೋಜನವಾಗಿಲ್ಲ. ಆ ಹಿನ್ನೆಲೆಯಲ್ಲಿ ವಿದೇಶಿ ತಂತ್ರಜ್ಞಾನ ಅಳವಡಿಕೆಗೆ ಮಂಡಳಿ ನಿರ್ಧರಿಸಿದೆ.

ತೊರೆಕಾಡನಹಳ್ಳಿ ಸಂಸ್ಕರಣಾ ಘಟಕದಿಂದ ನಗರಕ್ಕೆ ಜಲಮಂಡಳಿಯ ನಿತ್ಯ 1450 ದಶಲಕ್ಷ ಲೀಟರ್‌ ಕಾವೇರಿ ನೀರನ್ನು ಪಂಪ್‌ ಮಾಡುತ್ತದೆ. ನಗರಕ್ಕೆ ನೀರು ಪೂರೈಕೆಯಾಗುವ ಮಾರ್ಗ ಹಾಗೂ ನಗರದ ಹಲವಾರು ಬಡಾವಣೆಗಳಲ್ಲಿ ಶೇ.39 ರಷ್ಟು ನೀರು ಸೋರಿಕೆಯಾಗುತ್ತಿದೆ.

ಉದಾಹರಣೆಗೆ ಮಂಡಳಿ 100ಲೀ ಸರಬರಾಜ ಮಾಡಿದರೆ ಆ ಪೈಕಿ 61 ಲೀ. ನೀರು ಎಲ್ಲಿಗೆ ಹೋಗುತ್ತಿದೆ ಎಂಬ ಮಾಹಿತಿ ಮಾತ್ರ ಲಭ್ಯವಾಗುತ್ತಿದೆ. ಇನ್ನುಳಿದ 39 ಲೀ ನೀರು ಎಲ್ಲಿ? ಹೇಗೆ? ಸೋರಿಕೆಯಾಗುತ್ತಿದೆ ಎಂಬ ಮಾಹಿತಿ ಲಭ್ಯವಿಲ್ಲ. ಪರಿಣಾಮ, ಮಂಡಳಿಗೆ ಪ್ರತಿ ತಿಂಗಳು ಲಕ್ಷಾಂತರ ರೂ. ನಷ್ಟವಾಗುತ್ತಿದೆ.

ಮಂಡಳಿಯಿಂದ ಪೂರೈಕೆಯಾಗುವ ಪ್ರತಿಯೊಂದು ಹನಿಯೂ ಸದ್ಬಳಕೆಯಾಗಬೇಕೆಂಬ ಉದ್ದೇಶದಿಂದ ಮಂಡಳಿಯ ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿಗೆ ಜಪಾನ್‌ನ ಅತ್ಯಾಧುನಿಕ ನೀರು ಸೋರಿಕೆ ನಿಯಂತ್ರಣ ತಂತ್ರಜ್ಞಾನದ ಕುರಿತು ತರಬೇತಿ ಹಮ್ಮಿಕೊಳ್ಳಲಾಗಿದೆ.  

ಜಪಾನ್‌ನ ಸೂಡೊ ಟೆಕ್ನಿಕಲ್ಸ್‌ ಸಂಸ್ಥೆಯು ಜಲಮಂಡಳಿಯ ಎಂಜಿನಿಯರ್ ಹಾಗೂ ಮೀಟರ್‌ ಮಾಪಕರು ಒಳಗೊಂಡಂತೆ 300 ಸಿಬ್ಬಂದಿಗಳಿಗೆ ತರಬೇತಿ ನೀಡಲು ಮುಂದಾಗಿದೆ. ಅದರಂತೆ ಮೇ.22 ರಿಂದ ಆಗಸ್ಟ್‌ 13ರ ವರೆಗೆ ಆರು ಹಂತಗಳಲ್ಲಿ ಸೂಡೋ ಕಂಪನಿಯ ಮೂವರು ತಜ್ಞರು ತರಬೇತಿ ನೀಡುತ್ತಿದ್ದಾರೆ.

ಮಂಡಳಿಯ ಉಪವಿಭಾಗಗಳಿಗೆ ಅನುಗುಣವಾಗಿ 50 ಜನರ 6 ಗುಂಪುಗಳನ್ನು ಮಾಡಿ ತಲಾ 10 ದಿನಗಳ ಕಾಲ ತರಬೇತಿ ನೀಡಲಾಗುತ್ತಿದ್ದು, ಈಗಾಗಲೇ ಈಶಾನ್ಯ ವಲಯದ ಸಿಬ್ಬಂದಿಗೆ ತರಬೇತಿ ಪೂರ್ಣಗೊಳಿಸಲಾಗಿದ್ದು, ಜೂ.5 ರಿಂದ 2 ಹಂತದ ತರಬೇತಿ ಆರಂಭವಾಗಿದೆ.

ಖುದ್ದು ಸೋರಿಕೆಯಾಗುತ್ತಿರುವ ಸ್ಥಳಗಳಿಗೆ ಸಿಬ್ಬಂದಿಯನ್ನು ಕರೆದುಕೊಂಡು ಹೋಗಿ ಸೋರಿಕೆ ಪತ್ತೆ ಮಾಡಲು ಲಿಸನಿಂಗ್‌ ಸ್ಟಿಕ್‌, ವಾಟರ್‌ ಲೀಕೇಜ್‌ ಡಿಟೆಕ್ಟರ್‌, ಬೋರಿಂಗ್‌ ಬಾರ್‌, ಲೀಕ್‌ ನಾಯ್ಸ ಕೊರಲೇಟರ್‌ ಉಪಕರಣಗಳ ಬಳಕೆ ಮಾಡಿ ನೀರು ಸೋರಿಕೆ ಹಾಗೂ ನೀರಿನ ಕಳ್ಳತನದ ಬಗ್ಗೆ ಶಿಬಿರಾರ್ಥಿಗಳಿಗೆ ಅರಿವು ಮೂಡಿಸಲಾಗುತ್ತಿದೆ. 

ಸೋರಿಕೆ ಪತ್ತೆ ಮಾಡುವುದು ಹೇಗೆ?: ಸೂಡೊ ಟೆಕ್ನಿಕಲ್ಸ್‌ ಸಂಸ್ಥೆಯ ಉಪಕರಣಗಳಿಂದ ಸುಲಭವಾಗಿ ನೀರು ಸೋರಿಕೆಯಾಗುತ್ತಿರುವ ಸ್ಥಳದ ಮಾಹಿತಿ ಪಡೆಯಬಹುದಾಗಿದ್ದು, ನಲ್ಲಿ, ವಾಲ್‌ ಹಾಗೂ ಪೈಪ್‌ಗೆ ಉಪಕರಣ ಹಿಡಿದು ಆಲಿಸಿದಾಗ ಸೋರಿಕೆಯ ಶಬ್ಧ ಕೇಳಿಬರಲಿದೆ.

ಶಬ್ಧದ ತೀವ್ರತೆಯ ಆಧಾರದ ಮೇಲೆ ಅತ್ಯಂತ ಸುಲಭವಾಗಿ ಸೋರಿಕೆಯಾಗುತ್ತಿರುವ ಸ್ಥಳ ಪತ್ತೆ ಹಚ್ಚಬಹುದಾಗಿದೆ. ಅಲ್ಲದೆ ಸೋರಿಕೆ ಸ್ಥಳವನ್ನು ನಿಖರವಾಗಿ  ಉಪಕರಣಗಳ ಮೂಲಕ ಪತ್ತೆ ಮಾಡಬಹುದಾಗಿದೆ ಎಂದು ಮಂಡಳಿಯ ಲೆಕ್ಕ ಸಿಗದ ನೀರು ಉಪವಿಭಾಗದ ಎಂಜಿನಿಯರ್‌ ಕೆ.ಎಸ್‌.ಹೆಗ್ಡೆ “ಉದಯವಾಣಿ’ಗೆ ಮಾಹಿತಿ ನೀಡಿದರು. 

ಸೋರಿಕೆ ತಡೆಗಟ್ಟುವಲ್ಲಿ ಈ ತರಬೇತಿ ಉತ್ತಮವಾಗಿದ್ದು, ಉಪನ್ಯಾಸದ ಜತೆಗೆ ಹೊಸ ಉಪಕರಣಗಳ ಬಳಸುವ ತಂತ್ರವನ್ನು ಪ್ರಾಯೋಗಿಕವಾಗಿ ಹೇಳಿಕೊಟ್ಟಿದ್ದಾರೆ. 
-ವೀಣಾ, ತರಬೇತಿ ಪಡೆದ ಅಧಿಕಾರಿ 

ಜೈಕಾ ಸಂಸ್ಥೆಯೊಂದಿಗೆ ಜಲಮಂಡಳಿ ಒಪ್ಪಂದ ಮಾಡಿಕೊಂಡಿರುವುದರಿಂದ ಅಲ್ಲಿನ ಸಂಸ್ಥೆಯ ತಜ್ಞರು ಉಚಿತವಾಗಿ ಮಂಡಳಿಯ ಅಧಿಕಾರಿಗಳಿಗೆ ತರಬೇತಿ ನೀಡಲು ಮುಂದಾಗಿದ್ದಾರೆ. ಇದರಿಂದಾಗಿ ನೀರಿನ ಸೋರಿಕೆಯನ್ನು ಗಣನೀಯ ಪ್ರಮಾಣದಲ್ಲಿ ತಡೆಯಬಹುದಾಗಿದೆ.
-ಕೆಂಪರಾಮಯ್ಯ, ಪ್ರಧಾನ ಎಂಜಿನಿಯರ್‌ ಜಲಮಂಡಳಿ 
 
-ಶೇ.61 ಮಾತ್ರ ಕಾವೇರಿ ನೀರಿನ ಬಳಕೆ
-ಶೇ.39 ನೀರು ಪೋಲು
-3 ಜನ ಸೂಡೊ ಟೆಕ್ನಿಕಲ್ಸ್‌ ಸಂಸ್ಥೆಯಿಂದ ನೀರು ಪೋಲು ತಡೆಗೆ ತರಬೇತಿ
-300 ಜಲಮಂಡಳಿ ಅಧಿಕಾರಿಗಳಿಗೆ ತರಬೇತಿ
-20 ಲಕ್ಷ ರೂ. ವೆಚ್ಚದ ಉಪಕರಣಗಳ ಬಳಕೆ
-8 ಉಪ ವಿಭಾಗಗಳಿಗೆ ಒಂದು ಉಪಕರಣ ವಿತರಣೆ 

* ಜಯಪ್ರಕಾಶ್‌ ಬಿರಾದಾರ್‌

ಟಾಪ್ ನ್ಯೂಸ್

Kaup ಶ್ರೀ ಹೊಸ ಮಾರಿಗುಡಿ ಬ್ರಹ್ಮಕಲಶೋತ್ಸವ: ಸಿಎಂ, ಸಚಿವರಿಗೆ ಆಹ್ವಾನKaup ಶ್ರೀ ಹೊಸ ಮಾರಿಗುಡಿ ಬ್ರಹ್ಮಕಲಶೋತ್ಸವ: ಸಿಎಂ, ಸಚಿವರಿಗೆ ಆಹ್ವಾನ

Kaup ಶ್ರೀ ಹೊಸ ಮಾರಿಗುಡಿ ಬ್ರಹ್ಮಕಲಶೋತ್ಸವ: ಸಿಎಂ, ಸಚಿವರಿಗೆ ಆಹ್ವಾನ

Udupi ಸಪ್ತೋತ್ಸವ: ಭಜನೆ ಸಂಕೀರ್ತನೆ ಉದ್ಘಾಟನೆ

Udupi ಸಪ್ತೋತ್ಸವ: ಭಜನೆ ಸಂಕೀರ್ತನೆ ಉದ್ಘಾಟನೆ

Mangaluru: ಹೈಡ್ರೋ ವೀಡ್‌ ಗಾಂಜಾ ಸಹಿತ ಓರ್ವನ ಬಂಧನ

Mangaluru: ಹೈಡ್ರೋ ವೀಡ್‌ ಗಾಂಜಾ ಸಹಿತ ಓರ್ವನ ಬಂಧನ

1-shami

ಇಂಗ್ಲೆಂಡ್‌ ವಿರುದ್ಧದ ಸರಣಿಗೆ ಆಕಾಶ್‌ ಬದಲು ಶಮಿಗೆ ಸ್ಥಾನ?

Mangaluru ಕಮಿಷನ್‌ ಆಮಿಷವೊಡ್ಡಿ 9 ಲ. ರೂ. ವಂಚನೆMangaluru ಕಮಿಷನ್‌ ಆಮಿಷವೊಡ್ಡಿ 9 ಲ. ರೂ. ವಂಚನೆ

Mangaluru ಕಮಿಷನ್‌ ಆಮಿಷವೊಡ್ಡಿ 9 ಲ. ರೂ. ವಂಚನೆ

Narimogru: ಕಾಲೇಜು ವಿದ್ಯಾರ್ಥಿನಿ ಆತ್ಮಹ*ತ್ಯೆ

Narimogru: ಕಾಲೇಜು ವಿದ್ಯಾರ್ಥಿನಿ ಆತ್ಮಹ*ತ್ಯೆ

Kulai: ನೀರುಪಾಲಾದವರ ಶವ ಹಸ್ತಾಂತರ

Kulai: ನೀರುಪಾಲಾದವರ ಶವ ಹಸ್ತಾಂತರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಅಪಹರಿಸಿದ್ದ ಶಿಕ್ಷಕ ಸೆರೆ

Arrested: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಅಪಹರಿಸಿದ್ದ ಶಿಕ್ಷಕ ಸೆರೆ

Bengaluru: ರೋಡ್‌ ರೇಜ್‌: ಕಾರಿನ ಬಾನೆಟ್‌ ಮೇಲೆ ಹತ್ತಿ ಯುವಕರ‌ ಪುಂಡಾಟ

Bengaluru: ರೋಡ್‌ ರೇಜ್‌: ಕಾರಿನ ಬಾನೆಟ್‌ ಮೇಲೆ ಹತ್ತಿ ಯುವಕರ‌ ಪುಂಡಾಟ

BNg-Mureder

Brutal: ಪತ್ನಿ, ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ!

Naxals-Meet-Cm

Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು

Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ

Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Kaup ಶ್ರೀ ಹೊಸ ಮಾರಿಗುಡಿ ಬ್ರಹ್ಮಕಲಶೋತ್ಸವ: ಸಿಎಂ, ಸಚಿವರಿಗೆ ಆಹ್ವಾನKaup ಶ್ರೀ ಹೊಸ ಮಾರಿಗುಡಿ ಬ್ರಹ್ಮಕಲಶೋತ್ಸವ: ಸಿಎಂ, ಸಚಿವರಿಗೆ ಆಹ್ವಾನ

Kaup ಶ್ರೀ ಹೊಸ ಮಾರಿಗುಡಿ ಬ್ರಹ್ಮಕಲಶೋತ್ಸವ: ಸಿಎಂ, ಸಚಿವರಿಗೆ ಆಹ್ವಾನ

Udupi ಸಪ್ತೋತ್ಸವ: ಭಜನೆ ಸಂಕೀರ್ತನೆ ಉದ್ಘಾಟನೆ

Udupi ಸಪ್ತೋತ್ಸವ: ಭಜನೆ ಸಂಕೀರ್ತನೆ ಉದ್ಘಾಟನೆ

Padubidri ಪಾದೆಬೆಟ್ಟು: ನೇಣು ಬಿಗಿದು ಯುವಕ ಆತ್ಮಹತ್ಯೆ

Padubidri ಪಾದೆಬೆಟ್ಟು: ನೇಣು ಬಿಗಿದು ಯುವಕ ಆತ್ಮಹತ್ಯೆ

1-hak

ಕೊಡವ ಕೌಟುಂಬಿಕ ಹಾಕಿಗೆ ಸರಕಾರದಿಂದ 1 ಕೋ. ರೂ.

Mangaluru: ಹೈಡ್ರೋ ವೀಡ್‌ ಗಾಂಜಾ ಸಹಿತ ಓರ್ವನ ಬಂಧನ

Mangaluru: ಹೈಡ್ರೋ ವೀಡ್‌ ಗಾಂಜಾ ಸಹಿತ ಓರ್ವನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.