ಸಾಲ ಕೂಪಕ್ಕೆ ಬೀಳದಿರಲು ಚೀನ ಯೋಜನೆ ಪುನರ್ ಪರಿಶೀಲನೆ: ಮಲೇಶ್ಯ
Team Udayavani, Jun 6, 2018, 4:12 PM IST
ಸಿಂಗಾಪುರ : ಬೆಲ್ಟ್ ಆ್ಯಂಡ್ ರೋಡ್ ಯೋಜನೆಯಡಿ ಚೀನ ನೀಡಿರುವ ವಿವಿಧ ಮೂಲ ಸೌಕರ್ಯ ನಿರ್ಮಾಣ ಯೋಜನೆಗಳ ಕೊಡುಗೆಯನ್ನು ಮಲೇಶ್ಯ ಕುರುಡಾಗಿ ಒಪ್ಪಿಕೊಳ್ಳುವುದಿಲ್ಲ ಎಂದು ಈಚೆಗಷ್ಟೇ ಚುನಾಯಿತವಾಗಿರುವ ಮಲೇಶ್ಯನ್ ಸರಕಾರ ಹೇಳಿದೆ.
ಸಾಲದ ಕೂಪಕ್ಕೆ ತಳ್ಳಿ ದೇಶದ ಸಾರ್ವಭೌಮತೆಗೆ ಅಪಾಯ ಒಡ್ಡುವ ಚೀನದ ಯೋಜನೆಯನ್ನು ಮಲೇಶ್ಯ ಪುನರ್ ಪರಿಶೀಲಿಸಲಿದೆ ಮತ್ತು ಆ ಮೂಲಕ ಬೀಜಿಂಗ್ ಜತೆಗಿನ ಸಂಬಂಧಗಳಲ್ಲಿ ಸಂತುಲನೆಯನ್ನು ಸಾಧಿಸಲಿದೆ ಎಂದಿರುವ ಮಲೇಶ್ಯದ ಹೊಸ ಸರಕಾರ, ಹಿಂದಿನ ಸರಕಾರ ಒಪ್ಪಿಕೊಂಡಿರುವ ಚೀನೀ ಯೋಜನೆಗಳನ್ನು ಪುನರ್ ಪರಿಶೀಲಿಸಲಿದೆ ಎಂದು ಹೇಳಿದೆ.
ಚೀನದ ಸಾಲ ಕೂಪಕ್ಕೆ ಬೀಳುವುದನ್ನು ತಪ್ಪಿಸುವುದೇ ಮಲೇಶ್ಯದಲ್ಲಿ ಈಚೆಗೆ ನಡೆದಿದ್ದ ಮಹಾಚುನಾವಣೆಯ ಮುಖ್ಯ ವಿಷಯವಾಗಿತ್ತು. ಅಂತೆಯೇ ಮಲೇಶ್ಯದ ಪಕಾತಾನ್ ಹರಪಾನ್ ಮೈತ್ರಿ ಕೂಟ ಮತ್ತು ಅದರ ನಾಯಕರಾಗಿರುವ ಹಾಲಿ ಪ್ರಧಾನಿ 92ರ ಹರೆಯದ ಮಹಾತೀರ್ ಮೊಹಮ್ಮದ್ ಅವರು “ದೇಶವನ್ನು ಸಾಲದ ಕೂಪಕ್ಕೆ ಚೀನೀ ಯೋಜನೆಗಳಿಂದ ದೇಶದ ಸಾರ್ವಭೌಮತೆಗೆ ಅಪಾಯವಿದೆ’ ಎಂದು ಪದೇ ಪದೇ ಹೇಳುತ್ತಲೇ ಬಂದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್ಗೆ ಕ್ಲೀನ್ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
Marriage: ಕ್ರಿಸ್ಮಸ್ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.