ತಡವಾಗಿಯಾದರೂ ಎಚ್ಚೆತ್ತ ಕುಂದಾಪುರ ಪುರಸಭೆ
Team Udayavani, Jun 7, 2018, 2:05 AM IST
ಕುಂದಾಪುರ: ಒಂದು ಬದಿ ಮಾತ್ರ ಚರಂಡಿ ಇದೆ. ಇನ್ನೊಂದು ಬದಿ ರಸ್ತೆಗೆ ಚರಂಡಿಯೇ ಇಲ್ಲ. ಮಳೆಗಾಲದ ನೀರಂತಲ್ಲ ತ್ಯಾಜ್ಯ ನೀರೂ ಹೋಗುವುದು ಕಷ್ಟ ಕೆಲ ಬಾರಿ. ಮಳೆ ಆರಂಭವಾಗಿ ದಿನಗಳು ಅದೆಷ್ಟೋ ಆಗಿದೆ. ಆದರೆ ಬುಧವಾರವಷ್ಟೇ ಜೆಸಿಬಿ ತಂದು ಕಾಮಗಾರಿ ಆರಂಭಿಸಲಾಗಿದೆ. ಇದು ಕುಂದಾಪುರ ಪುರಸಭೆಯ ವಾರ್ಡ್ ಸಂಖ್ಯೆ 10ರ ಸ್ಥಿತಿ.
ಒಂದೇ ಬದಿ ಚರಂಡಿ
ಪುರಸಭೆಯ ಕಂದಾಯ ವಾರ್ಡ್ 5 ಹಾಗೂ ಜನಪ್ರತಿನಿಧಿ ವಾರ್ಡ್ 10ನ್ನು ಉದಯವಾಣಿ ಮಳೆಗಾಲದ ಸಿದ್ಧತೆ ವೀಕ್ಷಣೆಗೆ ಆಯ್ಕೆ ಮಾಡಲಾಗಿತ್ತು. ಚರ್ಚ್ ಕ್ರಾಸ್ನಿಂದ ಆರಂಭವಾಗುತ್ತದೆ. ಇಲ್ಲಿನ ಮುಖ್ಯರಸ್ತೆಯ ಪಾರಿಜಾತ ಸರ್ಕಲ್ ನ ಚರ್ಚ್ ರಸ್ತೆಯಿಂದ ಬರೆಕಟ್ಟೆವರೆಗೆ ಈ ವಾರ್ಡ್ನ ವ್ಯಾಪ್ತಿ ಇದೆ. ಮನೆಗಳು, ವಾಣಿಜ್ಯ ಮಳಿಗೆಗಳು ಎಲ್ಲ ಇವೆ. ಆದರೆ ಚರಂಡಿ ಮಾತ್ರ ಒಂದೇ ಬದಿ ಇದೆ. ಆದರೆ ಈವರೆಗೆ ಅಂತಹ ದೊಡ್ಡ ಪ್ರಮಾಣದ ಸಮಸ್ಯೆ ಆಗಿಲ್ಲ.
12 ಲಕ್ಷ ರೂ. ಮಂಜೂರು
ಮಳೆಗಾಲ ಆರಂಭವಾಗುವ ಮುನ್ನ ನಡೆಸಬೇಕಿದ್ದ ಕಾಮಗಾರಿಯನ್ನು ಮಳೆ ಆರಂಭವಾದ ಬಳಿಕ ಮಾಡಲಾಗಿದೆ. ಇಷ್ಟಾದರೂ ಆಗಿದೆ ಎಂಬ ಸಮಾಧಾನ ಇಲ್ಲಿನ ಜನರದ್ದು. ಚರಂಡಿ ಕಾಮಗಾರಿಗಾಗಿ 12 ಲಕ್ಷ ರೂ. ಮಂಜೂರಾಗಿದ್ದು ಕಾಮಗಾರಿಗೆ ಚಾಲನೆ ನೀಡಲಾಗಿದೆ.
ನೀರಿನ ಸಮಸ್ಯೆ ಇದೆ
ಈ ಭಾಗದಲ್ಲಿ ಒಂದಷ್ಟು ಕುಡಿಯುವ ನೀರಿನ ಸಮಸ್ಯೆ ಇದೆ. ಕುಡಿಯಲು ಪುರಸಭೆಯ ನಳ್ಳಿ ನೀರು. ಆದರೆ ಕೆಂಪು ನೀರು ಬರುತ್ತದೆ. ಇದಕ್ಕೆ ಇನ್ನೂ ಪರಿಹಾರ ಸಿಕ್ಕಿಲ್ಲ. ಕೆಲವರು ಬಾವಿ ತೋಡಲು ಯತ್ನಿಸಿದರೂ ತೈಲಮಿಶ್ರಿತ ನೀರು ಬರಲಾರಂಭಿಸಿತು. ಆದ್ದರಿಂದ ಬಾವಿಯ ಯೋಜನೆ ಕೈ ಬಿಟ್ಟಿದ್ದಾರೆ.
ಬೇಗ ಮಾಡಬಹುದಿತ್ತು
ಮಳೆಗಾಲದಲ್ಲಿ ಕಾಮಗಾರಿ ಆರಂಭಿಸುವ ಬದಲು ಮಳೆ ಆರಂಭಕ್ಕೆ ಮುನ್ನವೇ ಕಾಮಗಾರಿ ನಡೆಸಬಹುದಿತ್ತು. ಉಳಿದಂತೆ ಮಳೆಗಾಲದಲ್ಲಿ ನೀರು ನಿಲ್ಲುವ ಆತಂಕದ ಸಮಸ್ಯೆಗಳು ಇಲ್ಲಿ ಇಲ್ಲ.
– ಪ್ರವೀಣ್ ಕುಮಾರ್ ಟಿ.
ನೀತಿ ಸಂಹಿತೆಯ ತಡೆ
ಚುನಾವಣಾ ನೀತಿ ಸಂಹಿತೆಯಿಂದಾಗಿ ಕಾಮಗಾರಿ ವಿಳಂಬವಾಗಿದೆ. ಆದಷ್ಟು ಶೀಘ್ರ ಕಾಮಗಾರಿ ಮುಗಿಸಿ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುವುದು.
– ರಾಜೇಶ್ ಕಾವೇರಿ, ಪುರಸಭೆ ಉಪಾಧ್ಯಕ್ಷ
— ಲಕ್ಷ್ಮೀ ಮಚ್ಚಿನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
High Court: ಗುರು ರಾಘವೇಂದ್ರ ಬ್ಯಾಂಕ್ ಅಧ್ಯಕಗೆ ಜಾಮೀನು ನಿರಾಕರಣೆ
Arrested: ಬಿಹಾರದ ಬೆಡ್ಶೀಟ್ ಗ್ಯಾಂಗ್ನ 8 ಮಂದಿ ಸೆರೆ
Crime Follow Up: ಅಸ್ಸಾಂ ಯುವತಿ ಹತ್ಯೆ ಕೇಸ್; ಆರೋಪಿ ಸೆರೆಗೆ 3 ತಂಡ ರಚನೆ
Bomb Threat: ಹೋಟೆಲ್, ಶಾಲೆ ಆಯ್ತು, ಈಗ ಬ್ಯಾಂಕ್ಗೆ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ
ಇಸ್ಪೀಟ್ ಅಡ್ಡೆಯ ಮೇಲೆ ಡಿವೈಎಸ್ಪಿ ದಾಳಿ; ಮಾಜಿ ಅಧ್ಯಕ್ಷ-ಹಾಲಿ ಉಪಾಧ್ಯಕ್ಷ ಸೇರಿ 8 ಜನರ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.