ವಿತರಣೆಗಾಗಿ ಕಾದಿವೆ 2 ಲಕ್ಷ ಸಸಿಗಳು
Team Udayavani, Jun 7, 2018, 2:35 AM IST
ಉಡುಪಿ: ಗಿಡ-ಮರಗಳನ್ನು ನೆಟ್ಟು ಪರಿಸರ ಸಮೃದ್ಧಿಗೆ ಉತ್ತೇಜನ ನೀಡಲು ಸರಕಾರ ಅರಣ್ಯ ಇಲಾಖೆ ಮೂಲಕ ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ಸಸಿಗಳನ್ನು ವಿತರಿಸುತ್ತಿದೆ. ಕುಂದಾಪುರ ವಿಭಾಗದ ಎಂಟು ವಲಯಗಳಲ್ಲಿ ತಲಾ ಒಂದು ನರ್ಸರಿಗಳಿದ್ದು ಇವುಗಳಲ್ಲಿ ಸಾರ್ವಜನಿಕ ವಿತರಣೆಗಾಗಿ ಹಾಗೂ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ 1.45 ಲಕ್ಷ ಸಸಿಗಳನ್ನು ಬೆಳೆಸಲಾಗಿದೆ. ರೆಗ್ಯುಲರ್ ಅರಣ್ಯ ವಿಭಾಗವಲ್ಲದೆ ಉಡುಪಿ ಜಿ.ಪಂ. ಸಾಮಾಜಿಕ ಅರಣ್ಯ ವಿಭಾಗದಲ್ಲಿ ಸಾರ್ವಜನಿಕ ವಿತರಣೆಗಾಗಿ 65,000 ಗಿಡಗಳನ್ನು ಬೆಳೆಸಲಾಗಿದೆ.
ಯಾವೆಲ್ಲ ಸಸಿಗಳು?
ನೇರಳೆ, ಬೆತ್ತ, ಸಾಗುವಾನಿ, ರಕ್ತಚಂದನ, ಮಹಾಗನಿ, ದಾಲಿcನಿ, ಹಲಸು, ಬಾದಾಮಿ, ಕಿರಾಲುಬೋಗಿ, ರಾಂಪತ್ರೆ, ಹೆಬ್ಬೇವು, ಅಂಟುವಾಳ, ಬೆಂಗ, ಹೊಂಗೆ, ನಾಗಲಿಂಗ ಪುಷ್ಪ, ಹೊಳೆ ದಾಸವಾಳ, ಕಕ್ಕೆ, ಬೀಟೆ, ಮಾವು, ಅಶೋಕ, ಬಿಲ್ವಪತ್ರೆ, ನೆಲ್ಲಿ, ಪುನರ್‌ಪುಳಿ, ಮುತ್ತುಗ, ಶ್ರೀಗಂಧ, ಸಂಪಿಗೆ, ಶಿವಾನಿ, ಬಿಲ್ವಾರ, ಮುರಿಯ, ಸೆಳ್ಳೆ, ರೆಂಜ ಇತ್ಯಾದಿ ಗಿಡಗಳನ್ನು ಬೆಳೆಸಲಾಗಿದೆ. ಇದರಲ್ಲಿ ಹಣ್ಣು- ಹೂವು ಬಿಡುವ, ಉರುವಲು ಆಗುವ, ಗೃಹೋಪಯೋಗಿ ಗಿಡಗಳಿವೆ.
ರಿಯಾಯಿತಿ ದರ
ವಿತರಣೆಗಾಗಿ ಬೆಳೆಸಿದ ಸಸಿಗಳನ್ನು ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ನೀಡಲಾಗುವುದು.(58 ಗಾತ್ರದ ಸಸಿಗೆ 1 ರೂ., 812 ಗಾತ್ರದ ಸಸಿಗೆ 3 ರೂ. ನಿಗದಿಪಡಿಸಲಾಗಿದೆ. )
ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ
ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ಸಸಿಗಳನ್ನು ರಿಯಾಯಿತಿ ದರದಲ್ಲಿ ವಿತರಿಸಲಾಗುತ್ತಿದೆ. ಸಸಿ ಇಚ್ಛಿಸುವ ರೈತರು ಸಸಿ ನೆಡಲು ಲಭ್ಯವಿರುವ ಸ್ಥಳಕ್ಕೆ ಸಂಬಂಧಿಸಿದ ಪಹಣಿ ಪತ್ರದೊಂದಿಗೆ ಸಮೀಪದ ವಲಯ ಕಚೇರಿಗೆ ತಾವು ಇಚ್ಛಿಸಿದ ಸಸಿಗಳ ವಿವರದೊಂದಿಗೆ ಅರ್ಜಿ ಸಲ್ಲಿಸಿದಲ್ಲಿ ಸಸಿ ಸರಬರಾಜು ಮಾಡಲಾಗುತ್ತದೆ. ಈ ಯೋಜನೆಯಡಿ ಸಸಿ ನೆಟ್ಟ ರೈತರಿಗೆ 1 ವರ್ಷದ ತರುವಾಯ ಪ್ರತಿ ಜೀವಿತ ಸಸಿಗೆ ಮೊದಲ ವರ್ಷದಲ್ಲಿ 40 ರೂ., ಎರಡನೇ ವರ್ಷದಲ್ಲಿ 30 ರೂ., 3ನೇ ವರ್ಷದಲ್ಲಿ 30 ರೂ. ಸಹಾಯಧನ ನೀಡಲಾಗುವುದು. ಯೋಜನೆಯಡಿ ಹೆಕ್ಟೇರ್ ಗೆ ಗರಿಷ್ಠ 400 ಸಸಿಗಳಿಗೆ ಪ್ರೋತ್ಸಾಹ ಧನ ಪಡೆಯಲು ಅವಕಾಶ ಇದೆ. 2 ವರ್ಷಗಳ ಹಿಂದೆ ಈ ಯೋಜನೆಯಡಿ ಒಂದು ಸಸಿಗೆ 40 ರೂ. ಇತ್ತು, ಹೋದ ವರ್ಷದಿಂದ 100 ರೂ.ಗೆ ಏರಿಕೆಯಾಗಿದೆ. ಇದು ಪಾಳುಬೀಳುವ ಜಾಗದಲ್ಲಿ ಸುಲಭದಲ್ಲಿ ಆದಾಯ ತರುವ ಯೋಜನೆಯಾಗಿದೆ.
ಸಬ್ಸಿಡಿ ದರ
ಒಂದು ಗಿಡ ಬೆಳೆಸಲು ಇಲಾಖೆಗೆ ಸುಮಾರು 30 ರೂ. ಖರ್ಚಾಗುತ್ತದೆ. ಸರಕಾರ ಸಬ್ಸಿಡಿ ದರದಲ್ಲಿ ಗಿಡಗಳನ್ನು ರೈತರಿಗೆ ವಿತರಿಸುತ್ತಿದೆ. ಮೂರು ವರ್ಷಗಳಲ್ಲಿ 100 ರೂ. ಕೊಡಲಾಗುತ್ತದೆ. ರೈತರು ತಮ್ಮ ಜಾಗದಲ್ಲಿ ಗಿಡಗಳನ್ನು ನೆಟ್ಟು ಪರಿಸರಕ್ಕೂ ಸ್ವಂತಕ್ಕೂ ಪ್ರಯೋಜನ ಪಡೆದುಕೊಳ್ಳಬೇಕು.
– ಪ್ರಭಾಕರನ್, ಉಪ ಸಂರಕ್ಷಣಾಧಿಕಾರಿ, ಕುಂದಾಪುರ ವಿಭಾಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು
Udupi: ಆಟೋರಿಕ್ಷಾ ಢಿಕ್ಕಿ; ವೃದ್ಧನಿಗೆ ಗಾಯ
ಬೆಳಪು ಸಹಕಾರಿ ಸಂಘ: ಡಾ.ದೇವಿಪ್ರಸಾದ್ ಶೆಟ್ಟಿ ನೇತೃತ್ವದ ತಂಡಕ್ಕೆ 8ನೇ ಬಾರಿ ಚುಕ್ಕಾಣಿ
Aadhar Card: ಆಧಾರ್ ನವೀಕರಣ ಮಾಡಿಕೊಂಡಿದ್ದೀರಾ?: ಹಾಗಾದರೆ ಈ ಸುದ್ದಿ ಓದಲೇಬೇಕು!
Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.