ಬಂಡುಕೋರ ಸಂಸದ ಶರದ್ ಯಾದವ್‌ಗೆ ವೇತನ, ಭತ್ಯೆ ಇಲ್ಲ: ಸುಪ್ರೀಂ
Team Udayavani, Jun 7, 2018, 12:22 PM IST
ಹೊಸದಿಲ್ಲಿ : ರಾಜ್ಯಸಭಾ ಸದಸ್ಯತ್ವದಿಂದ ತನ್ನ ಅನರ್ಹತೆಯನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ವಿಚಾರಣೆಗೆ ಬಾಕಿ ಇರುವಷ್ಟು ಕಾಲ ಮಾಜಿ ಜನತಾ ದಳ (ಯು) ಅಧ್ಯಕ್ಷ ಹಾಗೂ ಬಂಡುಕೋರ ಸಂಸದ ಶರದ್ ಯಾದವ್ ಅವರ ಮಾಸಿಕ ವೇತನ ಮತ್ತು ಭತ್ತೆಯನ್ನು ನಿಲ್ಲಿಸುವ ದಿಲ್ಲಿ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ಮಾರ್ಪಡಿಸಿದೆ.
ಕಳೆದ ಡಿಸೆಂಬರ್ 15ರಂದು ದಿಲ್ಲಿ ಹೈಕೋರ್ಟ್ ಆದೇಶಿಸಿರುವ ಪ್ರಕಾರ ಶರದ್ ಯಾದವ್ ಅವರು ತಮ್ಮ ಅಧಿಕೃತ ಬಂಗಲೆಯನ್ನು ಉಳಿಸಿಕೊಳ್ಳಬಹುದು, ಆದರೆ ಮಾಸಿಕ ವೇತನ, ಭತ್ಯೆ ಮತ್ತು ಇತರ ಸೌಕರ್ಯಗಳನ್ನು ಪಡೆಯುವಂತಿಲ್ಲ ಎಂದು ರಜಾಕಾಲದ ನ್ಯಾಯಮೂರ್ತಿಗಳಾದ ಎ ಕೆ ಗೋಯಲ್ ಮತ್ತು ಅಶೋಕ್ ಭೂಷಣ್ ತಮ್ಮ ಆದೇಶದಲ್ಲಿ ಹೇಳಿದರು.
ಶರದ್ ಯಾದವ್ ಅವರು ದಿಲ್ಲಿಯಲ್ಲಿನ ತಮ್ಮ ಸರಕಾರಿ ಬಂಗಲೆಯನ್ನು ಉಳಿಸಿಕೊಳ್ಳಬಹುದು; ಮಾಸಿಕ ವೇತನ, ಭತ್ಯೆ ಮತ್ತು ಇತರ ಸೌಕರ್ಯ ಪಡೆಯುವುದನ್ನು ಮುಂದುವರಿಸಬಹುದು ಎಂದು ದಿಲ್ಲಿ ಹೈಕೋರ್ಟ್ ನೀಡಿದ್ದ ಮಧ್ಯಾವಧಿ ಆದೇಶವನ್ನು ಜೆಡಿಯು ರಾಜ್ಯಸಭಾ ಸಂಸದ ರಾಮಚಂದ್ರ ಪ್ರಸಾದ್ ಸಿಂಗ್ ಅವರು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಿದ್ದರು.
ದಿಲ್ಲಿ ಹೈಕೋರ್ಟ್ ಶರದ್ ಯಾದವ್ ಅವರ ರಾಜ್ಯಸಭಾ ಸದಸ್ಯತ್ವದ ಅನರ್ಹತೆಗೆ ತಡೆ ನೀಡಲು ನಿರಾಕರಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra: 35 ಪ್ರಯಾಣಿಕರಿದ್ದ ಬಸ್ ಪಲ್ಟಿ… ೧೦ ಮಂದಿ ಮೃತ್ಯು, ಹಲವರಿಗೆ ಗಾಯ
Karnataka ಸೇರಿ 4ರಾಜ್ಯಗಳಿಗೆ ಬೇಕಿದ್ದ ಹಂತಕ ಅರೆಸ್ಟ್, 2000 CCTV ಪರಿಶೀಲಿಸಿದ್ದ ಪೊಲೀಸರು
Maharashtra: ದಿಢೀರನೆ ಊರಿಗೆ ತೆರಳಿದ ಶಿಂಧೆ; ಮತ್ತೆ ಮುಂದುವರಿದ ʼಮಹಾ ಸಿಎಂʼ ಕಗ್ಗಂಟು
Sambhal Mosque Survey: ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್
Jammu Kashmir: ದೊಡ್ಡ ಯೋಜನೆ ವಿಫಲ; ಉಗ್ರರ ಅಡಗುತಾಣವನ್ನು ಧ್ವಂಸ ಮಾಡಿದ ಸೇನೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.