ಸಾಕಾನೆ ಹಿಂಡು ನೋಡಿ ಬೆದರಿದ ಜನತೆ


Team Udayavani, Jun 7, 2018, 1:03 PM IST

bg-2.jpg

ಆನೇಕಲ್‌: ಬನ್ನೇರುಘಟ್ಟದ ಜೈವಿಕ ಉದ್ಯಾನವನದ 8 ಸಾಕಾನೆಗಳ ತಂಡ ಬಾಲಾಜಿ ಕಲ್ಯಾಣ ಮಂಟಪದ ಬಳಿಯ ಬಡಾವಣೆಯಲ್ಲಿ ಬಾರ್‌ ಮುಂದೆ ಪ್ರತ್ಯಕ್ಷವಾಗಿ ಅಕ್ಕ ಪಕ್ಕದಲ್ಲಿದ್ದ ಬಾಳೆ, ಒಣ ಹುಲ್ಲು ತಿಂದು ಅಪಾರ ನಷ್ಟ ಮಾಡಿವೆ.

 ಬನ್ನೇರುಘಟ್ಟ ಕಗ್ಗಲಿಪುರ ರಸ್ತೆಯಲ್ಲಿನ ಜನರು ವಾಕಿಂಗ್‌ ಮಾಡಲು ಬಾಲಾಜಿ ಕಲ್ಯಾಣ ಮಂಟಪದ ಬಡಾವಣೆಯ ರಸ್ತೆಯಲ್ಲಿ ಹೋಗುತ್ತಿದ್ದಂತೆ 8 ಆನೆಗಳ ತಂಡ ಕಂಡು ಕೆಲವರು ದಿಕ್ಕಾಪಾಲಗಿ ಓಡಿದ್ದರು. ಸುದ್ದಿ ತಿಳಿದು ಸ್ಥಳೀಯರು ಗುಂಪು ಸೇರಿ ಆನೆಗಳ ಕಾಲಿಗೆ ಕಬ್ಬಣದ ಸರಪಳಿ ಇರುವುದನ್ನು ಕಂಡು ಪಾರ್ಕಿನ ಆನೆಗಳು ಎಂದು ಸಮಾಧಾನ ದಿಂದ ಹತ್ತಿರ ಬಂದು ಮೊಬೈಲ್‌ಗ‌ಳಲ್ಲಿ ಪೋಟೋ ತೆಗೆದುಕೊಂಡರು ಇನ್ನು ಕೆಲವರು ಸಮೀಪಕ್ಕೆ ಹೋಗಿ ಸೆಲ್ಪಿ ತೆಗೆದು ಕೊಂಡು ಖುಷಿಪಟ್ಟರೆ, ಕೆಲವರು ಫೇಸ್‌ಬುಕ್‌ ಲೈವ್‌ ಸಹ ಬಿಟ್ಟು ಎಲ್ಲರೂ ನೋಡಲು ಅವಕಾಶ ಕಲ್ಪಿಸಿದರು. 

ಇನ್ನೊಂದಷ್ಟು ಮಂದಿ ಹೊಸದಾಗಿ ಬಾರ್‌ ಆಗಿದ್ದು ಅದನ್ನು ನೋಡಲು ಆನೆಗಳು ಬಂದಿವೆ ಎಂದು ತಮಗೆ ತೋಚಿದಂತೆ ಮಾತುಗಳನ್ನು ಆಡುತ್ತ ಹಾಸ್ಯ ಚಟಾಕಿ ಹಾರಿಸಿ ಕುಣಿದಾಡಿದರು. ಸುದ್ದಿ ಹರಡುತ್ತಿದ್ದಂತೆ ಜನ ಸೇರುತ್ತಿದ್ದಂತೆ ಆನೆಗಳು ಬೆಟ್ಟದ ದಾರಿ ಹಿಡಿದವು, ಪಾರ್ಕಿನ ಸಿಬ್ಬಂದಿಗೂ ಸುದ್ದಿ ತಿಳಿದು ಮಾವುತರ ತಂಡ ಬಂದು ಆನೆಗಳನ್ನು ಉದ್ಯಾನವನಕ್ಕೆ ಕರೆದು ಕೊಂಡು ಹೋದರು.

ಕುತೂಹಲ: ಉದ್ಯಾನವನದ ಆನೆಗಳು ಮನೆಗಳ ಹತ್ತಿರ ಬಂದಿದ್ದು ಇದೇ ಮೊದಲು, ಹತ್ತಾರು ವರ್ಷಗಳ ಹಿಂದೆ ಬಡಾವಣೆ ಇದ್ದ ಜಾಗದಲ್ಲಿ ಹೊಲ ತೋಟಗಳಿತ್ತು ಆಗ ಕಾಡಾನೆಗಳು, ಸಾಕಾನೆಗಳು ಬಂದು ಹೋಗುತ್ತಿದ್ದವು. ಆದರೆ
ಸದ್ಯ ಹೊಲ ತೋಟಗಳು ಮಾಯವಾಗಿ ಮನೆಗಳು ತಲೆ ಎತ್ತಿವೆ. ಅಂಗಡಿಗಳು, ಅಷ್ಟೇ ಅಲ್ಲದೆ ಬಾರ್‌ ಸಹ ಆರಂಭವಾಗಿದೆ ಇಂತಹ ಜಾಗದಲ್ಲಿ ಆನೆಗಳು ಬಂದಿದ್ದು , ಇಳಿಜಾರಿನ ಬೆಟ್ಟ ಇಳಿದು ಬಂದಿದ್ದು ಮಾತ್ರ ತೀವ್ರ ಕುತೂಹಲ ಕೆರಳಿಸಿತ್ತು. 

ರದ್ಧಾಂತ: ಉದ್ಯಾನವನದ ಆನೆಗಳು ಕಳೆದ ಮೂರು ನಾಲ್ಕು ದಿನಗಳ ಹಿಂದೆಯೂ ಬೆಟ್ಟದ ಮೇಲಿನ ಶ್ರೀಲಕ್ಷ್ಮೀನರಸಿಂಹ ದೇವಾಲಯದ ಮುಂಭಾಗದಲ್ಲಿ ಭಕ್ತರ ಅನುಕೂಲಕ್ಕೆ ವ್ಯವಸ್ಥೆ ಮಾಡಿದ್ದ ನೀರಿನ ಟ್ಯಾಂಕ್‌, ನಲ್ಲಿ, ಪೈಪ್‌ಗಳನ್ನು ಮುರಿದು ಹಾಕಿ ರದ್ದಾಂತ ಮಾಡಿದ್ದವು. ಆ ಘಟನೆ ಮರೆಯುವ ಮುನ್ನವೇ ಬೆಟ್ಟ ಇಳಿದು ಮನೆಗಳ ಬಳಿ ಬಂದು ಮತ್ತಷ್ಟು ಆತಂಕ ಸೃಷ್ಟಿಸಿವೆ. 

ಆಗ್ರಹ: ಉದ್ಯಾನವನದ ಸಾಕಾನೆಗಳು ದೇವಾಲಯದ ಪೈಪ್‌ ಗಳನ್ನು ಹಾಳುಮಾಡಿದೆ, ಗುರುವಾರ ಸಹ ಒಣಹುಲ್ಲಿನ ಮೆದೆ, ಬಾಳೆ ಗಿಡಗಳನ್ನು ತಿಂದು , ತುಳಿದು ಹಾಕಿದೆ. ಹೀಗೆ 8 ಆನೆಗಳು ಒಮ್ಮೆ ಬಂದರೆ ಎಷ್ಟು ಫ‌ಜೀತಿ ಮಾಡಿ ಹೋಗುತ್ತವೆ. ಪಾರ್ಕಿನ ಅಧಿಕಾರಿಗಳು ಆನೆಗಳನ್ನು ತಮ್ಮ ವ್ಯಾಪ್ತಿಯಲ್ಲಿ ಇರುವಂತೆ ವ್ಯವಸ್ಥೆ ಮಾಡಬೇಕು ಇಲ್ಲವಾದರೆ ಪಾರ್ಕ್‌ ಮುಂದೆ ತೀವ್ರ ಪತ್ರಿಭಟನೆ ಮಾಡ ಬೇಕಾಗುತ್ತದೆ ಎಂದು ಬನ್ನೇರುಘಟ್ಟದ ಶ್ರೀ ಚಂಪಕಧಾಮಸ್ವಾಮಿ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಎ.ಸಂಪಂಗಿರಾಮಯ್ಯ ಎಚ್ಚರಿಕೆ ನೀಡಿದರು.

ಆನೆ ಬಂದಿದ್ದು ಹೇಗೆ?: ಬನ್ನೇರುಘಟ್ಟ ಸುತ್ತ ಮುತ್ತಲ ಕೆಲ ಹಳ್ಳಿಗಳಲ್ಲಿ ಕಾಡಾನೆಗಳು ಬಂದು ಹೋಗುವುದು ಸಾಮಾನ್ಯ ಸಂಗತಿ ಆದರೆ ಸಾಕಾನೆಗಳು ಬಂದು ಫ‌ಜಿತಿ ಮಾಡುವುದು ಇದೇ ಮೊದಲು. ಸಹಜವಾಗಿ ಉದ್ಯಾನದಲ್ಲಿನ ಸಾಕಾನೆಗಳನ್ನು ರಾತ್ರಿ ವೇಳೆ ಕಾಡಿಗೆ ಬಿಡುವುದು ಮುಂಜಾನೆ ಆನೆ ಶಿಬಿರಕ್ಕೆ ತರೆದು ತರುವುದು ವಾಡಿಕೆ. ರಾತ್ರಿ ವೇಳೆ ಕಾಡಿನಲ್ಲಿ ಸುತ್ತಾಡುವ ಆನೆಗಳು ಹೀಗೆ ಒಂದೊಂದು ಸಾರಿ ಹಳ್ಳಿಗಳತ್ತ ಬಂದು ರದ್ಧಾಂತ ಸೃಷ್ಟಿಸುತ್ತವೆ.

ಟಾಪ್ ನ್ಯೂಸ್

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!

ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್

Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

1-wqewq

UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ

ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ

Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ

Congress is taking revenge by forming SIT: Araga Jnanendra

Shimoga: ಎಸ್ಐಟಿ ರಚನೆ ಮೂಲಕ ಕಾಂಗ್ರೆಸ್ ಹಗೆ ತೀರಿಸಿಕೊಳ್ಳುತ್ತಿದೆ: ಆರಗ ಜ್ಞಾನೇಂದ್ರ

Maharashtra Election: Election officials checked Amit Shah’s bag

Maharashtra Election: ಅಮಿತ್‌ ಶಾ ಅವರ ಬ್ಯಾಗ್‌ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Stray dogs: ಅಂ.ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೀದಿ ನಾಯಿಗಳ ಹಾವಳಿ

Stray dogs: ಅಂ.ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೀದಿ ನಾಯಿಗಳ ಹಾವಳಿ

Tragic: ಮರದ ಕಾರ್ಖಾನೆಯಲ್ಲಿ ಆಕಸ್ಮಿಕ ಬೆಂಕಿ; ಕಾರ್ಮಿಕ ಸಜೀವ ದಹನ

Tragic: ಮರದ ಕಾರ್ಖಾನೆಯಲ್ಲಿ ಆಕಸ್ಮಿಕ ಬೆಂಕಿ; ಕಾರ್ಮಿಕ ಸಜೀವ ದಹನ

Market: ಬೆಲೆ ಕುಸಿತ; ಬೂದು ಕುಂಬಳ ಬೀದಿಪಾಲು!

Market: ಬೆಲೆ ಕುಸಿತ; ಬೂದು ಕುಂಬಳ ಬೀದಿಪಾಲು!

Crime: ಪಂಚೆ ಧರಿಸು ಎಂದಿದ್ದಕ್ಕೆ ಅಪ್ಪನನ್ನೇ ಕೊಂದ ಮಗ!

Crime: ಪಂಚೆ ಧರಿಸು ಎಂದಿದ್ದಕ್ಕೆ ಅಪ್ಪನನ್ನೇ ಕೊಂದ ಮಗ!

9-bng

Channapatna: ಸಾಲಕ್ಕೆ ಹೆದರಿ ದಂಪತಿ ನೇಣಿಗೆ ಶರಣು

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!

ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್

Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

kmc

Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ

1-wqewq

UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.