5 ಬಾರಿ ಗೆದ್ದಿರುವ ರೆಡ್ಡಿಗೆ ಕಡೆಗೂ ಮಂತ್ರಿಗಿರಿ


Team Udayavani, Jun 7, 2018, 1:22 PM IST

chikk.jpg

ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದನೂರು ಕ್ಷೇತ್ರದಲ್ಲಿ ಸತತ 25 ವರ್ಷಗಳಿಂದ ಸೋಲಿಲ್ಲದ ಸರದಾರನಂತೆ ಚುನಾವಣೆಯಲ್ಲಿ ಐದು ಬಾರಿ ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್‌ ಕೋಟೆ ಯನ್ನು ಭದ್ರಪಡಿಸಿದ ಶಾಸಕ ಎನ್‌.ಎಚ್‌.ಶಿವಶಂಕರ ರೆಡ್ಡಿಗೆ ಕೊನೆಗೂ ಸಮ್ಮಿಶ್ರ ಸರ್ಕಾರದಲ್ಲಿ ನಿರೀಕ್ಷೆಯಂತೆ ಮಂತ್ರಿಗಿರಿ ಒಲಿದು ಬಂದಿದ್ದು, ಸಂಪುಟ ದರ್ಜೆ ಸಚಿವರಾಗಿ ಬುಧವಾರ ಪ್ರಮಾಣ ವಚನ ಸ್ವೀಕರಿಸಿದರು.

ಮೂರು ದಶಕಗಳಿಗೂ ಹೆಚ್ಚು ಕಾಲ ರಾಜಕಾರಣದಲ್ಲಿ ಪಳಗಿ ರುವ ನಾಗಸಂದ್ರದ ಎನ್‌.ಎಚ್‌.ಶಿವಶಂಕರರೆಡ್ಡಿ ಗ್ರಾಮ ಪಂಚಾಯಿತಿ ಮಟ್ಟದಿಂದ ರಾಜಕಾರಣ ಪ್ರವೇಶಿಸಿ ಕಾಂಗ್ರೆಸ್‌ ಪಕ್ಷದಲ್ಲಿ ವಿವಿಧ ಹಂತದಲ್ಲಿ ನಾಯಕರಾಗಿ ಬೆಳೆದು ಬಂದವರು. ಮಂಡಲ್‌ ಪ್ರಧಾನರಾಗಿ, ತಾಪಂ ಸದಸ್ಯರಾಗಿ ಗೌರಿಬಿದನೂರು ತಾಲೂಕಿನ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಗುರುವಿಗೆ ಸಡ್ಡು ಹೊಡೆದಿದ್ದ ರೆಡ್ಡಿ: ಮೊದಲ ಬಾರಿಗೆ 1999 ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ವಿಧಾನಸಭಾ ಚುನಾವಣಾ ಅಖಾಡಕ್ಕೆ ಇಳಿದಿದ್ದ ಎನ್‌.ಎಚ್‌.ಶಿವಶಂಕರರೆಡ್ಡಿ ಮೊದಲ ಚುನಾವಣೆಯಲ್ಲಿ ತಮ್ಮ ರಾಜಕೀಯ ಗುರುವಾಗಿದ್ದ ಹಿರಿಯ ರಾಜಕಾರಣಿ ಎಸ್‌. ವಿ.ಅಶ್ವತ್ಥನಾರಾಯಣರೆಡ್ಡಿ ಅವರರನ್ನು 862 ಅಲ್ಪಮತಗಳ ಅಂತರದಿಂದ ಸೋಲಿಸಿ ವಿಧಾನಸಭೆಗೆ ಆಯ್ಕೆಗೊಂಡಿದ್ದರು. 

ಅಂದಿನಿಂದ ಇಂದಿನವರೆಗೂ ಶಿವಶಂಕರರೆಡ್ಡಿ ರಾಜಕಾರಣದಲ್ಲಿ ಹಿಂತಿರುಗಿ ನೋಡಲೇ ಇಲ್ಲ. 2004, 2008, 2013, 2018 ಸೇರಿ ಸತತ ಐದು ಚುನಾವಣೆಗಳಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಗೌರಿಬಿದನೂರು ಕ್ಷೇತ್ರದಿಂದ ಸ್ಪರ್ಧಿಸಿ ವಿರೋಧ ಪಕ್ಷಗಳಿಗೆ ಸೆಡ್ಡು ಹೊಡೆದು ಐದು ಬಾರಿ ಸೋಲಿಲ್ಲದ ಸರದಾರನಂತೆ ತಮ್ಮ ಗೆಲುವಿನ ನಾಗಲೋಟ ಮುಂದುವರಿಸುವ ಮೂಲಕ ಕ್ಷೇತ್ರದಲ್ಲಿ ಹೊಸ ರಾಜಕೀಯ ಇತಿಹಾಸವನ್ನು ಸೃಷ್ಟಿಸಿ ಗಮನ ಸೆಳೆದಿದ್ದರು. 

ಕಳೆದ ಬಾರಿ ಕೈ ತಪ್ಪಿದ್ದ ಮಂತ್ರಿಗಿರಿ: ಕಳೆದ 2013 ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಪೂರ್ಣ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಆದರೂ ಜಿಲ್ಲೆಗೆ ಸಚಿವ ಸ್ಥಾನ ಸಿಗಲಿಲ್ಲ. ಸಚಿವ ಸ್ಥಾನಕ್ಕಾಗಿ ಎನ್‌. ಎಚ್‌.ಶಿವಶಂಕರರೆಡ್ಡಿ ಸಾಕಷ್ಟು ಹೋರಾಟ ನಡೆಸಿದ್ದರು. ಇದರ ನಡುವೆ ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್‌ ಕೂಡ ಸಚಿವ ಸ್ಥಾನಕ್ಕಾಗಿ ತೀವ್ರ ಪಟ್ಟು ಹಿಡಿದಿದ್ದರಿಂದ ಕಾಂಗ್ರೆಸ್‌ ಸರ್ಕಾರದಲ್ಲಿ ಇಬ್ಬರಿಗೂ ಮಂತ್ರಿ ಯೋಗ ಕೂಡಿ ಬರಲಿಲ್ಲ. ಹೀಗಾಗಿ ರೆಡ್ಡಿ ಅವರನ್ನು ಸಮಾಧಾನಪಡಿಸಲೆಂದೇ ಕಳೆದ ಅವಧಿ ಸರ್ಕಾರಲ್ಲಿ
ಶಿವಶಂಕರರೆಡ್ಡಿ ಹಿರಿತನವನ್ನು ಪರಿಗಣಿಸಿ ಕಾಂಗ್ರೆಸ್‌ ಸರ್ಕಾರ ವಿಧಾನಸಭೆ ಉಪ ಸಭಾಧ್ಯಕ್ಷರನ್ನಾಗಿ ಮಾಡಲಾಗಿತ್ತು. ಇದೀಗ ಐದನೇ ಬಾರಿ ಗೆದ್ದ ಹಿನ್ನೆಲೆಯಲ್ಲಿ ಜಿಲ್ಲಾ ಕೋಟಾದಡಿ ಎನ್‌.ಎಚ್‌. ಶಿವಶಂಕರರೆಡ್ಡಿಗೆ ಸಚಿವ ಸ್ಥಾನ ಸುಲಭವಾಗಿ ದಕ್ಕಿದೆ. ಪ್ರಬಲ ಸಮುದಾಯವಾಗಿರುವ ವೇಮನ ರೆಡ್ಡಿ ಸಮುದಾಯಕ್ಕೆ ಸೇರಿದ್ದಾರೆ

ಗೌರಿಬಿದನೂರಿಗೆ 2ನೇ ಬಾರಿ ಸಚಿವ ಸ್ಥಾನ ಗೌರಿಬಿದನೂರು ವಿಧಾನಸಭಾ ಕ್ಷೇತ್ರದಲ್ಲಿ 1983ರಲ್ಲಿ ನಡೆದ ಉಪಚುನಾವಣೆಯಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿ ಆಗಿನ ಕಾಂಗ್ರೆಸ್‌ ಅಭ್ಯರ್ಥಿ ಕೃಷ್ಣರಾವ್‌ ವಿರುದ್ಧ ಗೆಲುವು ಸಾಧಿಸಿದ್ದ
ಆರ್‌.ಎನ್‌.ಲಕ್ಷ್ಮೀಪತಿ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ ಸಚಿವ ಸಂಪುಟದಲ್ಲಿ ಸಣ್ಣ ನೀರಾವರಿ ಸಚಿವರಾಗಿ,
ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಬರೋಬ್ಬರಿ 35 ವರ್ಷಗಳ ಬಳಿಕ
ಇದೀಗ ಮತ್ತೆ ಗೌರಿಬಿದನೂರು ಕ್ಷೇತ್ರದ ಶಾಸಕ ಎನ್‌.ಎಚ್‌. ಶಿವಶಂಕರೆಡ್ಡಿ ಸಚಿವರಾಗುವ ಮೂಲಕ ಗೌರಿಬಿದನೂರಿಗೆ ಎರಡನೇ ಬಾರಿಗೆ ಮಂತ್ರಿ ಯೋಗ ಲಭಿಸಿದೆ.

ಸಚಿವ ಶಿವಶಂಕರೆಡ್ಡಿ ಕೃಷಿ ವಿಜ್ಞಾನ ಪದವೀಧರ ಮೈತ್ರಿ ಸರ್ಕಾರದಲ್ಲಿ ಸಂಪುಟ ದರ್ಜೆ ಸಚಿವರಾಗಿರುವ ಎನ್‌.
ಎಚ್‌.ಶಿವಶಂಕರರೆಡ್ಡಿ ಜಿಲ್ಲೆಯ ಗೌರಿಬಿದನೂರು ತಾಲೂಕಿನ ನಾಗಸಂದ್ರದ ಹಿರಿಯ ಸ್ವಾತಂತ್ರ್ಯ ಹೋರಾಟಗಾರರ
ಕುಟುಂಬವಾಗಿರುವ ಸುಭಾಷಣಮ್ಮ ಹಾಗೂ ಎನ್‌.ಎಸ್‌. ಹನುಮಂತರೆಡ್ಡಿ ದಂಪತಿ ಹಿರಿಯ ಪುತ್ರರಾಗಿದ್ದು, ಸೆ.24,
1954 ರಲ್ಲಿ ಹುಟ್ಟಿದ್ದಾರೆ. ಪತ್ನಿ ಸುಜಾತಮ್ಮ, ಮೂವರು ಸಹೋದರರು, ಇಬ್ಬರು ಸಹೋದರಿಯರು, ಓರ್ವ ಪುತ್ರ,
ಓರ್ವ ಪುತ್ರಿ ಇದ್ದಾರೆ. ರೈತ ಕುಟುಂಬದಲ್ಲಿ ಬೆಳೆದಿರುವ ಶಿವಶಂಕರರೆಡ್ಡಿ ಧಾರವಾಡ ಕೃಷಿ ವಿಶ್ವ ವಿದ್ಯಾಲಯದಲ್ಲಿ ಕೃಷಿ
ವಿಜ್ಞಾನದಲ್ಲಿ ಪದವಿ ಪಡೆದಿದ್ದಾರೆ. ರೆಡ್ಡಿ ಹುಟ್ಟೂರು ನಾಗಸಂದ್ರ ಹೆಚ್ಚು ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಗಳನ್ನು ಹೊಂದಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ 

ಕಾಗತಿ ನಾಗರಾಜಪ್ಪ

ಟಾಪ್ ನ್ಯೂಸ್

1-DYSP

ಮಧುಗಿರಿ: ಕಚೇರಿಯಲ್ಲೇ DYSP ರಾಸಲೀಲೆ!!: ವಿಡಿಯೋ ಸೆರೆ

2024ರಲ್ಲಿ ಆಟೋ ಮೊಬೈಲ್‌ ಕ್ಷೇತ್ರಕ್ಕೆ ಲಾಭ: ದಾಖಲೆ ಮಾರಾಟ

2024ರಲ್ಲಿ ಆಟೋ ಮೊಬೈಲ್‌ ಕ್ಷೇತ್ರಕ್ಕೆ ಲಾಭ: ದಾಖಲೆ ಮಾರಾಟ

CT Ravi ಪರ ಪ್ರತಿಭಟನೆ: 30 ಕ್ಕೂ ಹೆಚ್ಚು ಮಂದಿಗೆ ನೋಟಿಸ್‌

CT Ravi ಪರ ಪ್ರತಿಭಟನೆ: 30 ಕ್ಕೂ ಹೆಚ್ಚು ಮಂದಿಗೆ ನೋಟಿಸ್‌

Bihar ಸ್ಪರ್ಧಾತ್ಮಕ ಪರೀಕ್ಷೆ ರದ್ದುಆಗ್ರಹಿಸಿ ಪ್ರಶಾಂತ್‌ ಕಿಶೋರ್‌ ನಿರಶನ

Bihar ಸ್ಪರ್ಧಾತ್ಮಕ ಪರೀಕ್ಷೆ ರದ್ದುಆಗ್ರಹಿಸಿ ಪ್ರಶಾಂತ್‌ ಕಿಶೋರ್‌ ನಿರಶನ

RBI: 2000ರೂ. ಮುಖಬೆಲೆಯ 6,691 ಕೋಟಿಯ ನೋಟು ವಾಪಸಾಗಿಲ್ಲ

RBI: 2000ರೂ. ಮುಖಬೆಲೆಯ 6,691 ಕೋಟಿಯ ನೋಟು ವಾಪಸಾಗಿಲ್ಲ

Employment Rate: ಯುಪಿಎ 2.9 ಕೋಟಿ,ಮೋದಿ 17.9 ಕೋಟಿ ಉದ್ಯೋಗ ಸೃಷ್ಟಿ: ಸಚಿವ

Employment Rate: ಯುಪಿಎ 2.9 ಕೋಟಿ,ಮೋದಿ 17.9 ಕೋಟಿ ಉದ್ಯೋಗ ಸೃಷ್ಟಿ: ಸಚಿವ

ಫೆ.28ರಿಂದ 3 ದಿನ ಹಂಪಿ ಉತ್ಸವ: ಸಚಿವ ಜಮೀರ್‌ ಅಹ್ಮದ್‌

ಫೆ.28ರಿಂದ 3 ದಿನ ಹಂಪಿ ಉತ್ಸವ: ಸಚಿವ ಜಮೀರ್‌ ಅಹ್ಮದ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ

Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ

ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

9

Dr MC Sudhakar: ‘ಹೈಕಮಾಂಡ್‌ ಎಷ್ಟು ದಿನ ಜವಾಬ್ದಾರಿ ಕೊಡುತ್ತೋ ಅಷ್ಟು ದಿನ ಸಚಿವ’

Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿಗೆ ಗಾಯ

Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ

1-cbl

Chintamani: ರಸ್ತೆ ಅಪಘಾ*ತದಲ್ಲಿ ಯುವಕ ಸಾ*ವು,ಇಬ್ಬರಿಗೆ ಗಂಭೀರ ಗಾಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-DYSP

ಮಧುಗಿರಿ: ಕಚೇರಿಯಲ್ಲೇ DYSP ರಾಸಲೀಲೆ!!: ವಿಡಿಯೋ ಸೆರೆ

2024ರಲ್ಲಿ ಆಟೋ ಮೊಬೈಲ್‌ ಕ್ಷೇತ್ರಕ್ಕೆ ಲಾಭ: ದಾಖಲೆ ಮಾರಾಟ

2024ರಲ್ಲಿ ಆಟೋ ಮೊಬೈಲ್‌ ಕ್ಷೇತ್ರಕ್ಕೆ ಲಾಭ: ದಾಖಲೆ ಮಾರಾಟ

CT Ravi ಪರ ಪ್ರತಿಭಟನೆ: 30 ಕ್ಕೂ ಹೆಚ್ಚು ಮಂದಿಗೆ ನೋಟಿಸ್‌

CT Ravi ಪರ ಪ್ರತಿಭಟನೆ: 30 ಕ್ಕೂ ಹೆಚ್ಚು ಮಂದಿಗೆ ನೋಟಿಸ್‌

Bihar ಸ್ಪರ್ಧಾತ್ಮಕ ಪರೀಕ್ಷೆ ರದ್ದುಆಗ್ರಹಿಸಿ ಪ್ರಶಾಂತ್‌ ಕಿಶೋರ್‌ ನಿರಶನ

Bihar ಸ್ಪರ್ಧಾತ್ಮಕ ಪರೀಕ್ಷೆ ರದ್ದುಆಗ್ರಹಿಸಿ ಪ್ರಶಾಂತ್‌ ಕಿಶೋರ್‌ ನಿರಶನ

RBI: 2000ರೂ. ಮುಖಬೆಲೆಯ 6,691 ಕೋಟಿಯ ನೋಟು ವಾಪಸಾಗಿಲ್ಲ

RBI: 2000ರೂ. ಮುಖಬೆಲೆಯ 6,691 ಕೋಟಿಯ ನೋಟು ವಾಪಸಾಗಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.