ಕೋಳ್ಯೂರು ರಾಮಚಂದ್ರ ರಾವ್: ಕಲಾಕೋವಿದನಿಗೆ 85
Team Udayavani, Jun 8, 2018, 6:00 AM IST
ತೆಂಕುತಿಟ್ಟು ವೇಷಧಾರಿಯಾಗಿ ಅರ್ಥದಾರಿಯಾಗಿ ಮತ್ತು ನಾಟ್ಯ ಗುರುಗಳಾಗಿ ಶ್ರೇಷ್ಠತೆಯನ್ನು ಹೊಂದಿದವರು ಡಾ| ಕೋಳ್ಯೂರು ರಾಮಚಂದ್ರ ರಾವ್. ಪ್ರಸ್ತುತ ಅವರಿಗೆ 85 ಸಂವತ್ಸರ ಕಳೆಯಿತು. ಹತ್ತಾರು ಮೇಳಗಳಲ್ಲಿ ಸೇವೆಗೈದ ಲೋಕ ಸಂಚಾರಿ. ಸರಳ- ಸಾತ್ವಿಕ ಗುಣಸಂಪನ್ನ. ವಿಶ್ವವಿದ್ಯಾಲಯ ಹಂತದಿಂದ ರಾಷ್ಟ್ರಪತಿ ಭವನದವರೆಗೆ ವಿಸ್ತರಿಸಿದ ಕೀರ್ತಿದಾವಳ್ಯ.
ಕಳೆದ ವರ್ಷದವರೆಗೂ ಕರಾವಳಿಯ ಆಟ-ಕೂಟಗಳ ಪಟ್ಟಿಯಲ್ಲಿ ರಾಯರ ಹೆಸರು ಪ್ರಚಲಿತವಿತ್ತು, ಇತ್ತೀಚಿನ ಕೆಲ ತಿಂಗಳಿನಿಂದ ವಯೋಸಹಜವಾಗಿ ಅವರನ್ನು ಕಾಡುವ ಮರೆವು ರಂಗದಿಂದ ವಿರಮಿಸುವಂತೆ ಮಾಡಿದೆ. ಕಾರ್ಯಕ್ರಮಗಳಿಗೆ ಸ್ವತಂತ್ರವಾಗಿ ಸಂಚರಿಸುವ ಚೈತನ್ಯ ಸಾಲದು. ಉಳಿದಂತೆ ಉತ್ತಮ ಆರೋಗ್ಯ. ಕುಂದದ ಜೀವನೋತ್ಸಾಹ. ಮನೆಗೆ ಬಂದವರಲ್ಲಿ ಕುಶಲೋಪರಿ. ಹಿಂದಿನ ಕಾಲದ ಕಲಾಯಾನದ ವರ್ಣನೆ. ಕಲಾ ಚಟುವಟಿಕೆಯಲ್ಲಿ ತಾನಿನ್ನೂ ಪಾಲ್ಗೊಳ್ಳಬೇಕೆಂಬ ತುಡಿತ. ವಿರಾಮದ ವೇಳೆ ಪುರಾಣದ ಅಧ್ಯಯನ. ಪಾತ್ರಗಳ ಅಭಿವ್ಯಕ್ತಿಯ ಕುರಿತು ಮರು ಚಿಂತನೆ. ಒಟ್ಟಿನಲ್ಲಿ ಯಕ್ಷಗಾನವೇ ಉಸಿರು. ಅದೇ ಅವರಿಗೆ ಹಸಿವು. ಸ್ವತಃ ಅವರೇ ಹೇಳಿಕೊಳ್ಳುವಂತೆ, ವಿಪುಲವಾದ ಸ್ಥಾನ- ಮಾನಗಳ ಸಂಪ್ರಾಪ್ತಿ. ಬಣ್ಣದ ಬದುಕಿನಲ್ಲಿ ಪರಿಪೂರ್ಣ ಸಂತೃಪ್ತಿ.
ಪುರುಷ ಪ್ರಧಾನವೆನಿಸಿದ ಯಕ್ಷಗಾನ ವಲಯದಲ್ಲಿ ಅಗರಿ, ಬಲಿಪ, ಸಾಮಗದ್ವಯರು, ಶೇಣಿ, ತೆಕ್ಕಟ್ಟೆ, ಗೋವಿಂ¨ ಭಟ್,ಚಿಟ್ಟಾಣಿ, ಜಲವಳ್ಳಿ…ಬಲುದೊಡ್ಡ ಹೆಸರು. ಸ್ತ್ರೀ ಭೂಮಿಕೆಯಲ್ಲಿ ಕೋಳ್ಯೂರರೇ ಅಂದಿನ ರಂಗದ ಪಟ್ಟದರಸಿ. ಕತೆಯ ಮೂಲದ ಆಳವನ್ನು ಸ್ಪಷ್ಟವಾಗಿ ಅರಿತವರು. ಪುರಾಣ ಲೋಕವನ್ನು ಮರು ಸೃಷ್ಟಿಗೊಳಿಸುವವರು. ಜನರ ಮನಮುಟ್ಟುವ ಸರಳವಾದ ಅರ್ಥಶುದ್ಧಿ. ಸತ್ವಯುತ ಸಂದೇಶ ಬಿತ್ತರಿಸುವ ಸ್ವಭಾವ ಸಿದ್ಧಿ. ಭಾವ-ಶುೃತಿಗೆ ಚ್ಯುತಿ ಬರದಂತೆ, ಸದಾ ಜಾಗೃತಬುದ್ಧಿ. ಅಶೋಕವನದ ಸೀತೆ, ಅಕ್ಷಯಾಂಬರದ ದ್ರೌಪದಿ, ಅಂಬೆ, ತಾರೆ, ಮಂಡೋದರಿ… ಬೇರೆ ಇಲ್ಲವೆಂಬಷ್ಟು ಪಾತ್ರಚಿತ್ರಣ ಪ್ರಸಿದ್ಧಿ. ಪಂಚವಟಿಯ ಶೂರ್ಪನಖೀಯಿಂದ ತುಳುನಾಡಿನ ಸಿರಿಯವರೆಗೆ ರಾಯರ ದೃಷ್ಟಿಯಲ್ಲಿ ಎಲ್ಲವೂ ಮೌಲ್ಯಾಧಾರಿತ. ಸ್ತ್ರೀ ವೇಷದ ರೂಪ ಲಾವಣ್ಯವನ್ನು ಕಂಡು “ನಿಜವಾಗಿ ಆಕೆ ಮಹಿಳಾ ಕಲಾವಿದೆ ಆಗಿರಬೇಕು’ ಎಂಬುದಾಗಿ ಪ್ರೇಕ್ಷಕರು ಪಂಥಾಹ್ವಾನ ಮಾಡುತ್ತಿದ್ದರಂತೆ. ಆರು ದಶಕಗಳ ತಿರುಗಾಟದಲ್ಲಿ ಚೌಕಿ ಹಾಗೂ ವೇದಿಕೆಯ ಶಿಸ್ತನ್ನು ಕಾಯ್ದುಕೊಂಡ ಮೇರು ಕಲಾವಿದ.
ಅವರ ಸಾಧನೆಯ ಸಂಕೇತವಾಗಿ ಕಾಸರಗೋಡು ಜಿಲ್ಲೆಯ ಕೋಳ್ಯೂರು ಪ್ರದೇಶ ಕಲಾವಲಯದಲ್ಲಿ ಹೆಸರಾಂತವಾಯಿತು.
ಸುಬ್ರಹ್ಮಣ್ಯ ಬೈಪಾಡಿತ್ತಾಯ ನಂದಳಿಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Thekkatte: ಕುಂಭಾಶಿಯಲ್ಲಿ ಸಿದ್ಧವಾಗಿದೆ ನಂದಿ ದೇಗುಲದ ಬ್ರಹ್ಮರಥ
Lupus Nephritis: ಲೂಪಸ್ ನೆಫ್ರೈಟಿಸ್ ರೋಗಿಗಳಿಗೆ ಒಂದು ಮಾರ್ಗದರ್ಶಿ
Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ
Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ
Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.