ಅರಳಿನ ಸವಿ
Team Udayavani, Jun 8, 2018, 6:00 AM IST
ತಂಪು ಗುಣದ, ಬೇಗನೆ ಜೀರ್ಣವಾಗುವ ಅರಳಿಗೆ ವಿವಿಧ ತರಕಾರಿಗಳು, ಹಣ್ಣು ಇತ್ಯಾದಿಗಳನ್ನು ಸೇರಿಸಿ ಪಾನಕ, ರಾಯತ ಇತ್ಯಾದಿ ಹಲವಾರು ರೀತಿಯ ಸವಿರುಚಿಗಳನ್ನು ತಯಾರಿಸಬಹುದು.
ಅರಳಿನ ರಾಯತ
ಬೇಕಾಗುವ ಸಾಮಗ್ರಿ: ಅರಳು-‰ ಅರ್ಧ ಕಪ್, ತೆಂಗಿನತುರಿ- ಒಂದು ಕಪ್, ಜೀರಿಗೆ- ಕಾಲು ಚಮಚ, ಸಕ್ಕರೆ- ಒಂದು ಚಮಚ, ಕೆಂಪುಮೆಣಸಿನ ಪುಡಿ- ಅರ್ಧ ಚಮಚ, ಹೆಚ್ಚಿದ ಸೇಬು ಮತ್ತು ಈರುಳ್ಳಿ – ಒಂದು, ಕ್ಯಾರೆಟ್‌ತುರಿ- ನಾಲ್ಕು ಚಮಚ, ಮೊಸರು- ಎರಡು ಕಪ್, ಉಪ್ಪು$ ರುಚಿಗೆ.
ತಯಾರಿಸುವ ವಿಧಾನ: ತೆಂಗಿನತುರಿಗೆ ಉಪ್ಪು, ಸಾಸಿವೆ ಸೇರಿಸಿ ನಯವಾಗಿ ರುಬ್ಬಿ ಮಿಕ್ಸಿಂಗ್ ಬೌಲ್‌ಗೆ ಹಾಕಿ. ಇದಕ್ಕೆ ಸೇಬು, ಈರುಳ್ಳಿ, ಕ್ಯಾರೆಟ್‌ತುರಿ, ಸಕ್ಕರೆ, ಉಪ್ಪು ಬೇಕಷ್ಟು ಮೊಸರು ಸೇರಿಸಿ ಹದ ಮಾಡಿಕೊಂಡು ಇಂಗಿನ ಒಗ್ಗರಣೆ ನೀಡಿ. ನಂತರ ಸರ್ವ್ ಮಾಡುವಾಗ ಮೇಲಿನಿಂದ ಅರಳನ್ನು ಹರಡಿ ಸರ್ವ್ ಮಾಡಿ.
ಅರಳು ಬೂಂದಿ ಲಡ್ಡು
ಬೇಕಾಗುವ ಸಾಮಗ್ರಿ: ಕಡಲೆಹಿಟ್ಟು – ಎರಡು ಕಪ್, ಅರಳು- ಒಂದೂವರೆ ಕಪ್, ನೆಲಕಡ್ಲೆ ತರಿ- ಅರ್ಧ ಕಪ್, ಗೋಡಂಬಿ ತರಿ – ಕಾಲು ಕಪ್, ಬೆಲ್ಲ – ಕಾಲು ಕೆ.ಜಿ., ಏಲಕ್ಕಿ ಸುವಾಸನೆಗೆ.
ತಯಾರಿಸುವ ವಿಧಾನ: ಒಂದು ಕಪ್ ಕಡ್ಲೆಹಿಟ್ಟಿಗೆ ಸ್ವಲ್ಪ ನೀರು ಸೇರಿಸಿ ಗಟ್ಟಿಯಾಗಿ ಕಲಸಿ ಸೇಮೆ ಅಚ್ಚಿನಲ್ಲಿ ಕಾದ ಎಣ್ಣೆಗೆ ಒತ್ತಿ ಕರಿಯಿರಿ. ನಂತರ ಉಳಿದ ಕಡ್ಲೆಹಿಟ್ಟನ್ನು ದೋಸೆಹಿಟ್ಟಿನ ಹದಕ್ಕೆ ಕಲಸಿ ಬೂಂದಿ ತಟ್ಟೆಯಿಂದ ಕಾದ ಎಣ್ಣೆಗೆ ಹಾಕಿ ಬೂಂದಿಕಾಳುಗಳನ್ನು ಕರಿದು ತೆಗೆಯಿರಿ. ನಂತರ ಬೆಲ್ಲಕ್ಕೆ ಸ್ವಲ್ಪ$ ನೀರು ಸೇರಿಸಿ ಬಾಣಲೆಯಲ್ಲಿ ಪಾಕಕ್ಕೆ ಇಡಿ. ನೂಲು ಪಾಕವಾದಾಗ ಪಾಕವನ್ನು ನೀರಿಗೆ ಹಾಕಿದ ತಕ್ಷಣ ಗಟ್ಟಿಯಾದ್ರೆ ಸಾಕು ಒಲೆಯಿಂದ ಇಳಿಸಿ ಪುಡಿಮಾಡಿದ ಅರಳು, ಗೋಡಂಬಿ ಮತ್ತು ನೆಲಕಡ್ಲೆ ತರಿ, ಬೂಂದಿಕಾಳು, ಸೇಮೆ, ಏಲಕ್ಕಿಪುಡಿ ಇತ್ಯಾದಿಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಮಾಡಿ ಕೈಗೆ ತುಪ್ಪ ಸವರಿಕೊಂಡು ಉಂಡೆ ಕಟ್ಟಬೇಕು.
ಅರಳಿನ ಪಾನಕ
ಬೇಕಾಗುವ ಸಾಮಗ್ರಿ: ಅರಳು- ಆರು ಚಮಚ, ನೆನೆಸಿದ ಖರ್ಜೂರ- ಎರಡು, ನೆನೆಸಿದ ಒಣದ್ರಾಕ್ಷಿ- ಹತ್ತು, ಜೇನುತುಪ್ಪ- ರುಚಿಗೆ ಬೇಕಷ್ಟು.
ತಯಾರಿಸುವ ವಿಧಾನ : ಮಿಕ್ಸಿಜಾರಿಗೆ ಅರಳು, ಒಣದ್ರಾಕ್ಷಿ ಮತ್ತು ಖರ್ಜೂರ ಹಾಕಿ, ಇದಕ್ಕೆ ಸ್ವಲ್ಪ$ ನೀರು ಸೇರಿಸಿ, ನುಣ್ಣಗೆ ರುಬ್ಬಿ, ಮಿಕ್ಸಿಂಗ್ ಬೌಲ್‌ಗೆ ಹಾಕಿ ಬೇಕಷ್ಟು ನೀರು ಹಾಗೂ ಜೇನುತುಪ್ಪ ಸೇರಿಸಿ ಹದಮಾಡಿಕೊಂಡು ಸರ್ವ್ ಮಾಡಬಹುದು.
ಅರಳಿನ ಸಂಡಿಗೆ
ಬೇಕಾಗುವ ಸಾಮಗ್ರಿ: ಅರಳು- ಎರಡು ಕಪ್, ಸಬ್ಬಕ್ಕಿ- ಎರಡು ಕಪ್, ಹಸಿಮೆಣಸು- ನಾಲ್ಕು, ಇಂಗು- ಸುವಾಸನೆಗಾಗಿ, ಉಪ್ಪು ರುಚಿಗೆ ಬೇಕಷ್ಟು.
ತಯಾರಿಸುವ ವಿಧಾನ: ಸಬ್ಬಕ್ಕಿಯನ್ನು ತೊಳೆದು ಹಿಂದಿನ ದಿನ ರಾತ್ರಿ ನನೆಯಲು ಹಾಕಿ. ಮರುದಿನ ಇದಕ್ಕೆ ಬೇಕಷ್ಟು ನೀರು ಸೇರಿಸಿ ಚೆನ್ನಾಗಿ ಬೇಯಿಸಬೇಕು. ನಂತರ ಹತ್ತು ನಿಮಿಷ ನನೆಸಿದ ಅರಳಿಂದ ನೀರು ಚೆನ್ನಾಗಿ ತೆಗೆದು, ಬೆಂದ ಸಬ್ಬಕ್ಕಿಗೆ ಸೇರಿಸಿ. ನಂತರ ಹಸಿಮೆಣಸು, ಉಪ್ಪು$ ಮತ್ತು ಇಂಗನ್ನು ರುಬ್ಬಿಕೊಂಡು ಇದಕ್ಕೆ ಸೇರಿಸಿ. ಚೆನ್ನಾಗಿಮಿಶ್ರಮಾಡಿ. ದಪ್ಪಪ್ಲಾಸ್ಟಿಕ್ ಹಾಳೆಯಲ್ಲಿ ಸಂಡಿಗೆ ಬಿಟ್ಟು ನಾಲ್ಕು ಬಿಸಿಲು ಒಣಗಿಸಿದರೆ ಸಂಡಿಗೆ ಸಿದ್ಧ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ICC U19 ವನಿತಾ ಟಿ20 ವಿಶ್ವಕಪ್: ಭಾರತಕ್ಕೆ ನಿಕಿ ಪ್ರಸಾದ್ ನಾಯಕಿ
Maharashtra: ಬಾಸ್ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್
PM Modi: ಇಂದು ಕೆನ್-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ
A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್ ಬಿಹಾರಿ ವಾಜಪೇಯಿ
Election Commission: ದಾಖಲಾದ ಮತದಲ್ಲಿಏರಿಕೆ ಆಗುವುದು ಸಾಮಾನ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.