ನೂತನ ಸಚಿವರಿಗೆ ಕೊಠಡಿ ಹಂಚಿಕೆ
Team Udayavani, Jun 8, 2018, 6:40 AM IST
ಬೆಂಗಳೂರು: ನೂತನ ಸಚಿವರಿಗೆ ಖಾತೆಗಳು ಹಂಚಿಕೆಯಾಗದಿದ್ದರೂ ವಿಧಾನಸೌಧ ಮತ್ತು ವಿಕಾಸಸೌಧದಲ್ಲಿ ಕೊಠಡಿಗಳು ಹಂಚಿಕೆಯಾಗಿವೆ. 25 ಸಚಿವರ ಪೈಕಿ 19 ಸಚಿವರಿಗೆ ವಿಧಾನಸೌಧ ಮತ್ತು ಆರು ಸಚಿವರಿಗೆ ವಿಕಾಸಸೌಧದಲ್ಲಿ ಕೊಠಡಿ ನೀಡಲಾಗಿದೆ.
ಅದರಲ್ಲೂ ವಿಕಾಸಸೌಧದಲ್ಲಿ ಕೊಠಡಿ ಪಡೆದವರೆಲ್ಲರೂ ಕಾಂಗ್ರೆಸ್ ಸಚಿವರು. ವಿಧಾನಸೌಧದಲ್ಲಿ ಆರ್.ವಿ.ದೇಶಪಾಂಡೆಗೆ 314-314ಎ, ಡಿ.ಕೆ. ಶಿವಕುಮಾರ್‌ಗೆ 336-336ಎ, ಕೆ.ಜೆ.ಜಾರ್ಜ್‌ಗೆ 317-317ಎ ಕೊಠಡಿಗಳನ್ನು ಹಂಚಿಕೆ ಮಾಡಲಾಗಿದ್ದು, ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲೂ ಅವರು ಅದೇ ಕೊಠಡಿಗಳಲ್ಲಿದ್ದರು.
ಅದೇ ರೀತಿ ವಿಕಾಸಸೌಧದಲ್ಲಿ ಈ ಹಿಂದೆ ಇದ್ದ ಕೊಠಡಿಗಳನ್ನೇ ಸಚಿವ ಕೃಷ್ಣ ಭೈರೇಗೌಡ (244-245), ಪ್ರಿಯಾಂಕ್ ಖರ್ಗೆ (242-243), ಯು.ಟಿ.ಖಾದರ್ (344-345) ಅವರು ಉಳಿಸಿಕೊಂಡಿದ್ದಾರೆ. ಉಳಿದಂತೆ ವಿಧಾನಸೌಧದಲ್ಲಿ ಎಚ್.ಡಿ.ರೇವಣ್ಣ (316-316ಎ), ಬಂಡೆಪ್ಪ ಕಾಶೆಂಪೂರ(339-339ಎ), ಜಿ.ಟಿ.ದೇವೇಗೌಡ (344-344ಎ),ಡಿ.ಸಿ.ತಮ್ಮಣ್ಣ (329-239ಎ), ಎಂ.ಸಿ.ಮನಗೂಳಿ (301-301ಎ), ಎನ್.ಎಚ್.ಶಿವಶಂಕರರೆಡ್ಡಿ
(262-262ಎ), ಎಸ್.ಆರ್.ಶ್ರೀನಿವಾಸ್ (342-342ಎ), ರಮೇಶ್ ಜಾರಕಿಹೊಳಿ (315-315ಎ), ವೆಂಕಟರಾವ್ ನಾಡಗೌಡ (305-305ಎ), ಸಿ.ಎಸ್.ಪುಟ್ಟರಾಜು (343-343ಎ),ಸಾ.ರಾ.ಮಹೇಶ್ (245-245ಎ), ಎನ್.ಮಹೇಶ್(257-257ಎ), ವೆಂಕಟರಮಣಪ್ಪ (340-340ಎ),ಸಿ.ಪುಟ್ಟರಂಗ ಶೆಟ್ಟಿ (259ಎ-260), ಆರ್.ಶಂಕರ್(337-337ಎ), ಡಾ.ಜಯಮಾಲಾ (252-253ಎ) ಕೊಠಡಿಗಳನ್ನು ಪಡೆದುಕೊಂಡಿದ್ದಾರೆ. ಇನ್ನು ವಿಕಾಸಸೌಧದಲ್ಲಿ ಜಮೀರ್ ಅಹಮದ್ ಖಾನ್ (342-343), ಶಿವಾನಂದ ಪಾಟೀಲ್ (143-146),ರಾಜಶೇಖರ ಪಾಟೀಲ್ ಹುಮ್ನಾಬಾದ್ ಅವರಿಗೆ (141-142) ಸಂಖ್ಯೆಯ ಕೊಠಡಿಗಳನ್ನು ಹಂಚಿಕೆ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Irrigation Development: ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದಿಂದ ಅನುದಾನ: ವಿ.ಸೋಮಣ್ಣ
Power Prayers: ಡಿಸಿಎಂ ಟೆಂಪಲ್ ರನ್ ವಿಚಾರ; ಎಚ್‌ಡಿಕೆ ವ್ಯಂಗ್ಯ, ಡಿಕೆಶಿ ಪ್ರತ್ಯುತ್ತರ
Name Road Row: ಮೈಸೂರಿನ ರಸ್ತೆಗೆ ನಾಮಕರಣ ವಿಚಾರ; ಗೊಂದಲಗಳಿಗೆ ತೆರೆ ಎಳೆದ ಸಿಎಂ
Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.