ಪ್ರಥಮ ಟೆಸ್ಟ್: ಚೇತರಿಸಿದ ವೆಸ್ಟ್ ಇಂಡೀಸ್
Team Udayavani, Jun 8, 2018, 6:00 AM IST
ಪೋರ್ಟ್ ಆಫ್ ಸ್ಪೇನ್: ಪ್ರವಾಸಿ ಶ್ರೀಲಂಕಾ ವಿರುದ್ಧ ಪೋರ್ಟ್ ಆಫ್ ಸ್ಪೇನ್ನಲ್ಲಿ ಮೊದಲ್ಗೊಂಡ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಆರಂಭಿಕ ಕುಸಿತದಿಂದ ಪಾರಾಗಿದೆ. ಓಪನರ್ಗಳಿಬ್ಬರನ್ನೂ ಬೇಗನೇ ಕಳೆದುಕೊಂಡ ವಿಂಡೀಸ್, ದ್ವಿತೀಯ ದಿನದಾಟದ ಆರಂಭದಲ್ಲಿ 6 ವಿಕೆಟಿಗೆ 268 ರನ್ಗಳಿಸಿ ಬ್ಯಾಟಿಂಗ್ ಮುಂದುವರಿಸುತ್ತಿದೆ. ಮಳೆಯಿಂದ ಗುರುವಾರದ ಆಟ ವಿಳಂಬವಾಗಿ ಮೊದಲ್ಗೊಂಡಿತ್ತು. ಮೊದಲ ದಿನದಾಟದ ಅಂತ್ಯಕ್ಕೆ ವಿಂಡೀಸ್ 6 ವಿಕೆಟಿಗೆ 246 ರನ್ ಗಳಿಸಿತ್ತು.
ಕ್ರೆಗ್ ಬ್ರಾತ್ವೇಟ್ (3) ಮತ್ತು ಡೆವೋನ್ ಸ್ಮಿತ್ (7) ಅವರನ್ನು ಅಗ್ಗಕ್ಕೆ ಕಳೆದುಕೊಂಡ ವಿಂಡೀಸ್ ಆರಂಭಿಕ ಆಘಾತಕ್ಕೆ ಸಿಲುಕಿತ್ತು. ಆತಿಥೇಯ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ಗಳು ಶ್ರೀಲಂಕಾ ದಾಳಿಯನ್ನು ತಡೆದು ನಿಲ್ಲುವುದರೊಂದಿಗೆ ತಂಡ ಚೇತರಿಕೆಯ ಹಾದಿ ಹಿಡಿಯಿತು. ಕೈರನ್ ಪೊವೆಲ್ (38), ಶೈ ಹೋಪ್ (44), ರೋಸ್ಟನ್ ಚೇಸ್ (38) ಜವಾಬ್ದಾರಿಯುತ ಆಟವಾಡಿದರು. ನಾಯಕ ಜಾಸನ್ ಹೋಲ್ಡರ್ 40 ರನ್ನುಗಳ ಕೊಡುಗೆ ಸಲ್ಲಿಸಿದರು.ಕೀಪರ್ ಶೇನ್ ಡೌರಿಚ್ ಕ್ರೀಸ್ ಆಕ್ರಮಿಸಿಕೊಂಡಿದ್ದು, 57 ರನ್ ಮಾಡಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.