![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Jun 8, 2018, 6:00 AM IST
ಬೆಂಗಳೂರು: ಪತಿ ಅಥವಾ ಪತ್ನಿ, ಸ್ನೇಹಿತರಿಗೆ, ಆಪ್ತರಿಗೆ, ಸಂಬಂಧಿಕರಿಗೆ… ಹೀಗೆ ಯಾರಿಗೂ ಎಟಿಎಂ ಕಾರ್ಡ್ ಹಾಗೂ ಪಿನ್ ನಂಬರ್ ಶೇರ್ ಮಾಡಲೇಬೇಡಿ.
ಒಂದು ವೇಳೆ ನೀವು ನೀಡಿದ ಎಟಿಎಂ ಕಾರ್ಡ್ ಬಳಸಿ ಅವರು ಎಟಿಎಂ ಕೇಂದ್ರಗಳಲ್ಲಿ ಹಣ ಡ್ರಾ ಮಾಡಿದಾಗ ಅಕಸ್ಮಾತ್ ತಾಂತ್ರಿಕ ದೋಷಗಳಿಂದ ಹಣ ಬರದಿದ್ದರೆ ಆ ಹಣ ಪುನ: ನಿಮ್ಮ ಅಕೌಂಟ್‌ಗೆ ಮರು ಪಾವತಿಯಾಗುವುದು ಕನಸಿನ ಮಾತು.
ಹೌದು, ಇದು ಮೂರುವರೆ ವರ್ಷದ ಹಿಂದೆ ದಾಖಲಾಗಿದ್ದ ಪ್ರಕರಣವೊಂದಕ್ಕೆ ತೀರ್ಪು ನೀಡಿರುವ ಗ್ರಾಹಕ ನ್ಯಾಯಾಲಯ, ಎಟಿಎಂ ಕಾರ್ಡ್ ವರ್ಗಾವಣೆ ಮತ್ತು ಪಿನ್ ನಂ. ಹಂಚಿಕೆ ಕಾನೂನು ಬಾಹಿರವೆಂದು ಹೇಳಿ ಬ್ಯಾಂಕ್ ಪರವೇ ತೀರ್ಪು ನೀಡಿದೆ. ಜತೆಗೆ ಹಣ ಕಳೆದುಕೊಂಡು ಪ್ರಕರಣ ದಾಖಲಿಸಿದ್ದ ದಂಪತಿಯ ಅರ್ಜಿಯನ್ನು ವಜಾ ಮಾಡಿದೆ.
ಮೂರೂವರೆ ವರ್ಷಗಳ ಹಿಂದೆ ಬೆಂಗಳೂರಿನ ಮಹಿಳೆ ವಂದನಾ ಎಂಬುವರು ತಮ್ಮ ಪತಿಗೆ ಹಣ ಡ್ರಾ ಮಾಡಿಕೊಂಡು ಬರುವಂತೆ ತಮ್ಮ ಎಟಿಎಂ ಕಾರ್ಡ್, ಪಿನ್ ನಂಬರ್ ನೀಡಿದ್ದರು. ಕಾರ್ಡ್ ಪಡೆದಿದ್ದ ಅವರ ಪತಿ 25 ಸಾವಿರ ರೂ. ಹಣ ಡ್ರಾ ಮಾಡಲು ಯತ್ನಿಸಿದ್ದರು. ಆದರೆ, ಯಂತ್ರದ ತಾಂತ್ರಿಕ ದೋಷದಿಂದ ಹಣ ಬರಲೇ ಇಲ್ಲ. ಹೀಗಾಗಿ ಖಾತೆಯಿಂದ ಕಡಿತವಾಗಿರುವ 25 ಸಾವಿರ ರೂ.ಗಳನ್ನು ನೀಡುವಂತೆ ಎಸ್‌ಬಿಐಗೆ ನಿರ್ದೇಶಿಸುವಂತೆ ಈ ದಂಪತಿ ಗ್ರಾಹಕ ನ್ಯಾಯಾಲಯದ ಮೊರೆ ಹೋಗಿತ್ತು.
ಸತತ ಮೂರುವರೆ ವರ್ಷಗಳ ಕಾಲ ವಿಚಾರಣೆ ನಡೆದು ಇದೀಗ ತೀರ್ಪು ಪ್ರಕಟಿಸಿರುವ ಗ್ರಾಹಕ ನ್ಯಾಯಾಲಯ ಬ್ಯಾಂಕ್‌ನ ವಾದಕ್ಕೆ ಮನ್ನಣೆ ನೀಡಿದೆ. ಮಹಿಳೆ ಖುದ್ದಾಗಿ ಎಟಿಎಂಗೆ ತೆರಳಲು ಸಾಧ್ಯವಾಗದಿದ್ದರೆ ತಮ್ಮ ಅಕೌಂಟ್‌ಗೆ ಹಣ ಡ್ರಾ ಮಾಡಿಕೊಳ್ಳಲು ಚೆಕ್ ನೀಡಬಹುದಿತ್ತು. ಅದು ಸಾಧ್ಯವಾಗದಿದ್ದರೆ ಎಟಿಎಂ ಪಿನ್ ನಂಬರ್ ಶೇರ್ ಮಾಡಲು ಹಾಗೂ ಪತಿ ತಮ್ಮ ಎಟಿಎಂ ಕಾರ್ಡ್ ಬಳಸಿ ಹಣ ಡ್ರಾ ಮಾಡಿಕೊಳ್ಳಲು ಅನುಮತಿ ನೀಡುವ ಸಂಬಂಧ ಸಂಬಂಧ ಪಟ್ಟ ಬ್ಯಾಂಕ್ ಅಧಿಕಾರಿಗಳಿಂದ ಅನುಮತಿ ಪತ್ರ ಪಡೆದುಕೊಳ್ಳಬಹುದಿತ್ತು ಎಂದು ಆದೇಶದಲ್ಲಿ ತಿಳಿಸಿದೆ. ಎಟಿಎಂ ಕಾರ್ಡ್ ಹಾಗೂ ಪಿನ್ ನಂಬರ್ ನೀಡುವಾಗ ಬ್ಯಾಂಕ್ ವಿಧಿಸಿದ್ದ ಷರತ್ತುಗಳನ್ನು ದೂರುದಾರರು ಉಲ್ಲಂ ಸಿದ್ದಾರೆ ಎಂದು ಅಭಿಪ್ರಾಯಪಟ್ಟು ದೂರು ವಜಾಗೊಳಿಸಿದೆ.
ಪ್ರಕರಣ ಏನು?
ಮಾರತ್‌ಹಳ್ಳಿಯ ನಿವಾಸಿಯಾದ ವಂದನಾ ಎಂಬುವವರು 2013ರ ನವೆಂಬರ್‌ನಲ್ಲಿ ಮಗುವಿಗೆ ಜನ್ಮ ನೀಡಿದ್ದರಿಂದ ಹೊರಗಡೆ ಹೋಗಲು ಸಾಧ್ಯವಾಗದೇ ತಮ್ಮ ಪತಿ ರಾಜೇಶ್‌ಕುಮಾರ್‌ಗೆ ತಮ್ಮ ಎಸ್‌ಬಿಐ ಎಟಿಎಂ ಕಾರ್ಡ್ ನೀಡಿ ಪಿನ್ ನಂಬರ್ ತಿಳಿಸಿ 25 ಸಾವಿರ ರೂ. ಡ್ರಾ ಮಾಡಿಕೊಂಡು ಬರುವಂತೆ ತಿಳಿಸಿದ್ದರು. ಅದರಂತೆ, ನವೆಂಬರ್ 14 ಹತ್ತಿರದ ಎಟಿಎಂ ಕೇಂದ್ರಕ್ಕೆ ತೆರಳಿದ್ದ ರಾಜೇಶ್‌ಕುಮಾರ್ ಎಟಿಎಂ ಕಾರ್ಡ್ ಸ್ವೆ„ಪ್ ಮಾಡಿದ್ದಾರೆ. ಆದರೆ, 25 ಸಾವಿರ ರೂ. ಬಂದಿರಲಿಲ್ಲ. ಇದರಿಂದ ಕಂಗಾಲಾದ ಅವರು ಕೂಡಲೇ ಬ್ಯಾಂಕ್ ಕಸ್ಟಮರ್ ಕೇರ್‌ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಅಲ್ಲಿನ ಸಿಬ್ಬಂದಿ ಎಟಿಎಂ ಯಂತ್ರದಲ್ಲಿ ತಾಂತ್ರಿಕ ದೋಷವಿರಬಹುದು ಹೀಗಾಗಿ ಹಣ ಬಂದಿಲ್ಲ ಮುಂದಿನ 24 ಗಂಟೆಗಳಲ್ಲಿ ಹಣ ಅಕೌಂಟ್‌ಗೆ ಮರುಪಾವತಿಯಾಗಲಿದೆ ಎಂದು ಹೇಳಿದ್ದಾರೆ.
ಇದಾದ ಕೆಲ ದಿನಗಳ ಬಳಿಕವೂ ಅಕೌಂಟ್‌ಗೆ 25 ಸಾವಿರ ರೂ, ಜಮಾ ಆಗದಿದ್ದರಿಂದ ದಂಪತಿ ಇಬ್ಬರೂ ಬ್ಯಾಂಕ್ ಶಾಖೆಗೆ ತೆರಳಿ ದೂರು ನೀಡಿದ್ದಾರೆ.ಇದನ್ನು ಪರಿಶೀಲಿಸಿದ್ದ ಅಧಿಕಾರಿಗಳು ಎಟಿಎಂ ಕೇಂದ್ರದಿಂದ ಹಣ ಡ್ರಾ ಆಗಿದೆ ಎಂಬ ಸ್ಪಷ್ಟನೆ ನೀಡಿ ದೂರು ಮುಕ್ತಾಯಗೊಳಿಸಿದ್ದರು.
ಸಿಸಿಟಿವಿ ಪೂಟೇಜ್ ಕೂಡ ಬ್ಯಾಂಕ್‌ನವರಿಗೆ ಫ್ಲಸ್ ಆಗಿತ್ತು!
ದೂರು ನೀಡಿ ಸುಮ್ಮನಾಗದ ಈ ದಂಪತಿ ಡ್ರಾಗೆ ತೆರಳಿದ್ದ ಎಟಿಎಂ ಕೇಂದ್ರದ ಸಿಸಿಟಿವಿ ಪೂಟೇಜ್ ಕೇಳಿ ಪರಿಶೀಲಿಸಿದ್ದರು. ದೃಶ್ಯಾವಳಿಯಲ್ಲಿ ರಾಜೇಶ್‌ಕುಮಾರ್ ರಸೀದಿ ಮಾತ್ರ ಪಡೆದಿದ್ದು, ಹಣ ತೆಗೆದುಕೊಂಡಿಲ್ಲದಿರುವುದು ಸ್ಪಷ್ಟವಾಗಿತ್ತು. ಅಲ್ಲಿ, ಕಾರ್ಡ್ ಬಳಕೆದಾರರಾದ ವಂದನಾ ಇಲ್ಲದಿರುವುದು ನಿಜವಾಗಿತ್ತು.
ಬಳಿಕ ವಂದನಾ ಅವರು, ಆರ್‌ಟಿಐ ಮೂಲಕ ನವೆಂಬರ್ 16ರಂದು ಎಟಿಎಂ ಯಂತ್ರದಲ್ಲಿದ್ದ ಹಣದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದು 25 ಸಾವಿರ ರೂ. ಹೆಚ್ಚುವರಿಯಾಗಿ ಇರುವುದು ಗೊತ್ತಾಗಿತ್ತು. ಈ ದಾಖಲೆಗಳನ್ನಿಟ್ಟುಕೊಂಡೇ ವಂದನಾ ಅವರು, ಪುನ: ಎಸ್‌ಬಿಐನ ಓಂಬುಡ್ಸ್‌ಮನ್ ( ಸಾರ್ವಜನಿಕ ತನಿಖಾಧಿಕಾರಿ) ಬಳಿ ದೂರು ನೀಡಿದರು. ಆದರೆ, ತನಿಖಾಧಿಕಾರಿಗಳು, ನಿಯಮಗಳನ್ನು ಉಲ್ಲಂ ಸಿ ಎಟಿಎಂ ಕಾರ್ಡ್‌ನ ಪಿನ್ ನಂಬರ್ ಶೇರ್ ಮಾಡಲಾಗಿದೆ ಎಂಬ ಕಾರಣ ನೀಡಿ ದೂರು ಮುಕ್ತಾಯಗೊಳಿಸಿದ್ದರು.
ಹೀಗಾಗಿ, ವಂದನಾ ಅವರು 2014ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ 4ನೇ ಗ್ರಾಹಕ ನ್ಯಾಯಾಲಯಕ್ಕೆ ದೂರು ನೀಡಿ, 25 ಸಾವಿರ ರೂ.ಗಳಿಗೆ ಶೇ 18 ರಷ್ಟು ದಂಡ, ಆರ್‌ಬಿಐ ನಿಯಾಮಗಳಿಗಂತೆ ಪ್ರತಿದಿನ 100 ರೂ. ದಂಡದ ಜತೆಗೆ 5 ಲಕ್ಷ ರೂ. ಪರಿಹಾರ ನೀಡುವಂತೆ ಸಲ್ಲಿಸಿದ್ದ ದೂರು ಮೇ 29ರಂದು ವಜಾಗೊಂಡಿದೆ.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.