ಆತಂಕ ಸೃಷ್ಟಿಸಿದ ಕಾಡಾನೆ ಮತ್ತೆ ಕಾಡಿಗೆ
Team Udayavani, Jun 8, 2018, 1:38 PM IST
ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಿಂದ ಅಹಾರವನ್ನರಸಿ ಹೊರ ಬಂದಿದ್ದ ಕಾಡಾನೆಯೊಂದು ಕಾಡಂಚಿನಲ್ಲಿ ನಿರ್ಮಿಸಿದ್ದ ತಡೆಗೋಡೆಯಿಂದಾಗಿ ಕಾಡು ಸೇರಲು ಪರಿಪಾಟಿಲು ನಡೆಸಿ, ಕಾಡಂಚಿನ ಗ್ರಾಮಗಳಲ್ಲಿ ಅವಘಡ ಸೃಷ್ಟಿಸಿ ಆತಂಕ ಉಂಟು ಮಾಡಿದ್ದ ಆನೆಯನ್ನು ಕೊನೆಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಹರಸಾಹಸಪಟ್ಟು ಕೊನೆಗೂ ಕಾಡು ಸೇರಿಸಿದ್ದಾರೆ.
ನಾಗರಹೊಳೆ ಉದ್ಯಾನವನದಂಚಿನ ವೀರನಹೊಸಳ್ಳಿವಲಯ ವ್ಯಾಪ್ತಿಯ ಹನಗೋಡು ಹೋಬಳಿಯ ಕೊಳುವಿಗೆ, ಮುದುಗನೂರು ಮಾರ್ಗವಾಗಿ ಹಾದುಹೋಗಿ ಚಿಕ್ಕಹೆಜ್ಜೂರು ಹಾಡಿಗೆ ನುಗ್ಗಿ ಬೆ„ಕೊಂದನ್ನು ಜಖಂಗೊಳಿಸಿದೆ, ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತರು ಎಚ್ಚೆತ್ತುಕೊಂಡಿದ್ದರಿಂದ ಬಚಾವಾಗಿದ್ದಾರೆ.
ಲಕ್ಷ್ಮಣತೀರ್ಥ ನದಿ ಬಳಿಯಿಂದ ದಾಟಿ ಹೊರ ಬಂದಿರುವ ಹೆಣ್ಣಾನೆಯು ಬುಧವಾರ ರಾತ್ರಿ ಅಡ್ಡಾಡಿ ದಾರಿಯುದ್ದಕ್ಕೂ ಸಿಕ್ಕ ಬೆಳೆಯನ್ನು ತಿಂದು ಹಾಕಿ ರೈಲ್ವೆ ಹಳಿ ಬೇಲಿ ದಾಟಲಾಗದೆ ಪರಿತಪಿಸಿದೆ. ಅಷ್ಟರಲ್ಲಿ ಬೆಳಗಾಗಿದ್ದರಿಂದ ಕಾಡಿನೊಳಗೆ ಹೋಗಲು ಕೊಳುವಿಗೆ-ಮುದುಗನೂರು ಬಳಿ ಅಡ್ಡಾಡುತ್ತಿದ್ದುದನ್ನು ಕಂಡು ಸಾಕಷ್ಟು ಮಂದಿ ಗ್ರಾಮಸ್ಥರು ಜಮಾಯಿಸಿದ್ದರಿಂದ
ಗಾಬರಿಗೊಂಡ ಆನೆಯು ಚಿಕ್ಕಹೆಜ್ಜೂರು ಹಾಡಿಯೊಳಗೆ ನುಗ್ಗಿ ರಮೇಶ್ ಮನೆ ಮುಂದೆ ನಿಲ್ಲಿಸಿದ್ದ ಬೈಕನ್ನು ಜಖಂಗೊಳಿಸಿದೆ. ಹಾಡಿ ಮಂದಿ ಗಾಬರಿಗೊಂಡು ಮನೆ ಸೇರಿ ಕೊಂಡು ಕೂಗಿ ಕೊಂಡಿದ್ದರಿಂದ ಆನೆಯು ಕಾಡಂಚಿನ ಕಡೆಗೆ ದೌಡಾಯಿಸಿತಾದರೂ ತಡೆಗೋಡೆ ದಾಟಲಾಗದೆ ಸುತ್ತಮುತ್ತಲಿನಲ್ಲಿ ಓಡಾಡಿ ಬೀತಿ ಹುಟ್ಟಿಸಿದೆ.
ವಿಷಯ ತಿಳಿದ ವೀರನಹೊಸಳ್ಳಿ ವಲಯ ಅರಣ್ಯಾಧಿಕಾರಿ ಮಧುಸೂಧನ್ ನೇತೃತ್ವದಲ್ಲಿ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಅನೆಯನ್ನು ಕಾಡಿಗಟ್ಟಲು ಕೊಳುವಿಗೆಯ ಶ್ರೀರಾಮಲಿಂಗೇಶ್ವರ ದೇವಾಲಯದ ಬಳಿ ಇರುವ ಗೇಟ್ ತೆರೆದು ಪ್ರಯತ್ನಪಟ್ಟರೂ ಆನೆ ಕಾಡು ಸೇರಲು ನಿರಾಕರಿಸಿತು.
ಕೊನೆಗೆ ಹತ್ತಿರದ ಮತ್ತೂಂದು ಕಡೆ ತಡೆಗೋಡೆಯ ಕಂಬಿಗಳನ್ನು ತೆಗೆದು ಜನರ ಸಹಾಯದೊಂದಿಗೆ ಕಾಡಿಗಟ್ಟುವಲ್ಲಿ ಯಶಸ್ವಿಯಾದರು. ಈ ಭಾಗದ ಎಲ್ಲೆಡೆ ರೈಲ್ವೆ ಕಂಬಿ ತಡೆ ಗೋಡೆ ನಿರ್ಮಿಸಿದ್ದರೂ ಆನೆ ಹೊರ ಬಂದಿದ್ದಾರೂ ಹೇಗೆಂಬ ಪ್ರಶ್ನೆ ಇದೀಗ ಎದುರಾಗಿದ್ದು, ಲಕ್ಷ್ಮಣತೀರ್ಥ ನದಿಯ ಅಂಚಿನಿಂದ ಹೊರ ಬಂದಿರಬಹುದೆಂದು ಶಂಕಿಸಲಾಗಿದೆ
ಸೆರೆಸಿಕ್ಕ ಸಿರತೆ
ಮೈಸೂರು: ಕಳೆದ ಹಲವು ದಿನಗಳಿಂದ ಕೆಂಪಯ್ಯನಹುಂಡಿ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದ ಚಿರತೆ ಸೆರೆಸಿಕ್ಕಿದ್ದು, ಇದರಿಂದಾಗಿ ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ. ಮೈಸೂರು-ತಿ.ನರಸೀಪುರ ರಸ್ತೆಯಲ್ಲಿರುವ ಕೆಂಪಯ್ಯನಹುಂಡಿ ಗ್ರಾಮದಲ್ಲಿ ಕಳೆದ ಹಲವು ದಿನಗಳಿಂದ ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದ ಚಿರತೆ, ಗ್ರಾಮದ ಬೀದಿನಾಯಿಗಳು, ಹಸುಗಳ ಮೇಲೆ ದಾಳಿ ನಡೆಸುತ್ತಿತ್ತು.
ಇದರಿಂದ ಭಯಭೀತರಾಗಿದ್ದ ಗ್ರಾಮಸ್ಥರು ಚಿರತೆ ಸೆರೆ ಹಿಡಿಯುವಂತೆ ಅರಣ್ಯಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಚಿರತೆಯನ್ನು ಸೆರೆ ಹಿಡಿಯಲು ಮುಂದಾದ ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮದ ಪೈಪ್ ಕಾರ್ಖಾನೆ ಸಮೀಪದಲ್ಲಿ ಬೋನನ್ನು ಇರಿಸಿದ್ದರು.
ಅದರಂತೆ ಕಳೆದ ರಾತ್ರಿ ಆಹಾರ ಅರಸಿ ಬಂದ ಚಿರತೆ ಬೋನಿಗೆ ಬಿದ್ದಿದ್ದು, ಇದನ್ನು ಗಮನಿಸಿದ ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ತೆರಳಿದ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೆರೆ ಸಿಕ್ಕಿರುವ ಚಿರತೆಯನ್ನು ಎಚ್.ಡಿ.ಕೋಟೆ ತಾಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಬಿಟ್ಟಿದ್ದಾರೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.