ಉಡುಪಿ: ಪೂರ್ಣ ಮುಂಗಾರಿನ ಪ್ರವೇಶ ಅನುಭವ 

Team Udayavani, Jun 9, 2018, 6:00 AM IST

080618astro00004.jpg

ಉಡುಪಿ: ಮುಂಗಾರು ಪೂರ್ವ ಮಳೆ ನಗರದಲ್ಲಿ ಒಂದಷ್ಟು ಅವಾಂತರ ಸೃಷ್ಟಿಸಿದ ಬಳಿಕ ಗುರುವಾರ ರಾತ್ರಿಯಿಂದೀಚೆಗೆ  ಮುಂಗಾರಿನ ಅಧಿಕೃತ ಪ್ರವೇಶವಾಗಿದೆ. ವ್ಯಾಪಕ ಮಳೆಯಾಗಿದ್ದು ಗಾಳಿ, ಸಿಡಿಲು ಇಲ್ಲದ್ದರಿಂದ ಹೆಚ್ಚಿನ ಹಾನಿ ಸಂಭವಿಸಿಲ್ಲ. ಆದರೆ ಆದರೆ ತೋಡುಗಳು ತುಂಬಿ ಹರಿದು ಕೆಲವೆಡೆ ರಸ್ತೆಗಳು ಜಲಾವೃತವಾದರೆ, ಇನ್ನು ಕೆಲವೆಡೆ ಮನೆಯಂಗಳಗಳಿಗೆ ನೀರು ನುಗ್ಗಿದೆ.

ಮೂಡನಿಡಂಬೂರು ಜಲಾವೃತ
ಮೂಡನಿಡಂಬೂರು-ನಿಟ್ಟೂರು ಸಂಪರ್ಕ ರಸ್ತೆ ಜಲಾವೃತಗೊಂಡಿತು. ಶುಕ್ರವಾರ ಸಂಜೆಯವರೆಗೂ ಕೆಲವು ದ್ವಿಚಕ್ರ ವಾಹನಗಳು ನೀರಿನಲ್ಲೇ ಸಾಗಿದವು. ಇಲ್ಲಿನ ಕೆಲವು ಮನೆಗಳ ಅಂಗಳಕ್ಕೆ ನೀರು ನುಗ್ಗಿತು. ಮೂಡನಿಡಂಬೂರು ಗರೋಡಿ ಆವರಣಕ್ಕೂ ನೀರು ಆವರಿಸಿತು. ಇಲ್ಲಿನ ಸೇತುವೆ (ಕಲ್ಸಂಕ ತೋಡು) ಅಡಿಭಾಗದಲ್ಲಿ ಕೊಳಚೆ ನೀರಿನ ಪೈಪ್‌ ಅಡ್ಡವಾಗಿದ್ದು ಕಸಗಳು ತಡೆಹಿಡಿಯಲ್ಪಡುತ್ತವೆ. ಇದು ಕೂಡ ನೀರು ಮೇಲೇರಲು ಕಾರಣವಾಗಿದೆ. ಇಲ್ಲಿ ಮಳೆನೀರು ಮತ್ತು ಕೊಳಚೆ ನೀರಿನ ಸಮಸ್ಯೆ ಎರಡೂ ಇದೆ. ಇದರೊಂದಿಗೆ ಇಲ್ಲಿನ ನಾಗಬನ ಪರಿಸರವೂ ಜಲಾವೃತವಾಗಿದೆ. ಇಲ್ಲಿನ ತೋಡಿನಲ್ಲಿ ರಾಶಿ ರಾಶಿ ಪ್ಲಾಸ್ಟಿಕ್‌ ಬಾಟಲಿ ಮತ್ತಿತರ ತ್ಯಾಜ್ಯಗಳು ಸಂಗ್ರಹವಾಗಿವೆ. 

ಮನೆಗಳಿಗೆ ಹಾನಿ
ಉಡುಪಿ ತಾಲೂಕಿನ ಕಡೆಕಾರು ಗ್ರಾಮದ ಶೀಲಾ ಕುಂದರ್‌ ಅವರ ಮನೆಗೆ ಮರ ಬಿದ್ದು ಸುಮಾರು 20,000 ರೂ., ಉಡುಪಿ ತಾಲೂಕಿನ ಬಿಟ್ಟು ಪೂಜಾರಿ ಅವರ ಮನೆಗೆ ಮರ ಬಿದ್ದು  60,000 ರೂ. ಹಾಗೂ ಕುತ್ಪಾಡಿ ಗ್ರಾಮದ ರಾಜು ಅವರ ಮನೆಗೆ ಮರಬಿದ್ದು 45,000 ರೂ. ಹಾನಿಯಾಗಿರುವ ಬಗ್ಗೆ  ವರದಿಯಾಗಿದೆ.

ಗರಿಗೆದರಿದ ಕೃಷಿ ಚಟುವಟಿಕೆ
ಮುಂಗಾರುಪೂರ್ವ ಮಳೆಯ ಅನಂತರ ಸಿದ್ಧವಾಗಿದ್ದ ರೈತರು ಇದೀಗ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಸಂತೃಪ್ತರಾಗಿದ್ದು ಕೃಷಿ ಚಟುವಟಿಕೆಯನ್ನು ಪೂರ್ಣಪ್ರಮಾಣದಲ್ಲಿ ಆರಂಭಿಸಿದ್ದಾರೆ. ಹಲವೆಡೆ ಗದ್ದೆಗೆ ಗೊಬ್ಬರ ಹಾಕುವ, ಉಳುಮೆಗೆ ತಯಾರಾಗುತ್ತಿರುವ ದೃಶ್ಯ ಕಂಡುಬಂತು.

ಶಾಲೆಗಳಿಗೆ ರಜೆ: ಚರ್ಚೆ
ಭಾರೀ ಮಳೆ ಹಿನ್ನೆಲೆಯಲ್ಲಿ ಶಾಲೆಗಳಿಗೆ ಜಿಲ್ಲಾಡಳಿತ ಶುಕ್ರವಾರದಂದು ಬೆಳಗ್ಗೆ 8 ಗಂಟೆಗೆ ರಜೆ ಘೋಷಿಸಿತ್ತು. ಈ ಸುದ್ದಿ ತಿಳಿಯುವಷ್ಟರಲ್ಲಿ ಅದಾಗಲೇ ವಿದ್ಯಾರ್ಥಿ ಗಳು ಶಾಲೆಗೆ ತೆರಳಿದ್ದರು. ಕೆಲವರು ಶಾಲಾ ಹಾದಿಯಲ್ಲಿದ್ದರು. ಸಮೀಪದ ನಿವಾಸಿ ಗಳು ಮಾತ್ರ ಶಾಲೆಗೆ ಹೊರಡಲಿಲ್ಲ. ರಜೆ ಘೋಷಣೆ ಮಳೆ ವರದಿಯನ್ನಾಧರಿಸಿ ಮಾಡ ಬೇಕಿತ್ತು, ಬೆಳಗ್ಗೆ ಮಾಡಿದ್ದು ಒಳ್ಳೆಯದಾಯ್ತು ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.   

ಶಿಕ್ಷಕರ ಜವಾಬ್ದಾರಿ
ಒಂದು ವೇಳೆ ಶಾಲೆ ಆರಂಭವಾದ ಅನಂತರ ಅಥವಾ ಮಕ್ಕಳು ಶಾಲೆಗೆ ಬಂದ ಅನಂತರ ರಜೆ ಘೋಷಣೆಯಾದರೆ ಮಳೆಗೆ ಮಕ್ಕಳನ್ನು ಮನೆಗೆ ವಾಪಸು ಕಳುಹಿಸುವ ಸಂದರ್ಭದಲ್ಲಿ ಶಿಕ್ಷಕರು ಹೆಚ್ಚಿನ ಮುತುವರ್ಜಿ ವಹಿಸುವುದು ಅಗತ್ಯ ಎಂದು ಅನೇಕ ಮಂದಿ ಹೆತ್ತವರು ಅಭಿಪ್ರಾಯಪಟ್ಟಿದ್ದಾರೆ. ಯಾವ ಮಕ್ಕಳು ತಗ್ಗುಪ್ರದೇಶ ಅಥವಾ ಮಳೆನೀರು ಹರಿಯುವ ಅಪಾಯಕಾರಿ ಪ್ರದೇಶಗಳಿಂದ ಬರುತ್ತಾರೆ ಎಂಬ ನಿಖರ ಮಾಹಿತಿಯನ್ನು ಶಿಕ್ಷಕರು ಹೊಂದಿರಬೇಕು. ಅಂತಹ ಮಕ್ಕಳ ಹೆತ್ತವರನ್ನು ಸಂಪರ್ಕಿಸಿ ಅನಂತರವೇ ಮಕ್ಕಳನ್ನು ಶಾಲೆಯಿಂದ ಮನೆಗೆ ಕಳುಹಿಸಬೇಕು ಎಂಬ ಅಭಿಪ್ರಾಯವನ್ನು ಹೆತ್ತವರು ವ್ಯಕ್ತಪಡಿಸಿದ್ದಾರೆ.

ನಿರಂತರ ಕಸ ಎಸೆತ
ಕಲ್ಸಂಕ ತೋಡು ಸೇರಿದಂತೆ ನಗರದ ತೋಡು ಗಳಿಗೆ ಪ್ಲಾಸ್ಟಿಕ್‌ ಬಾಟಲಿ, ಬಳಕೆ ಯಾದ ಇತರ ವಸ್ತುಗಳನ್ನು ನಿರಂತರವಾಗಿ ಎಸೆಯಲಾಗುತ್ತಿದೆ. ಇದರ ಪರಿಣಾಮ ಮಳೆಗಾಲದಲ್ಲಿ ಅನುಭವಕ್ಕೆ ಬರುತ್ತಿದೆ. ನಗರಸಭೆಯ ಕಾರ್ಮಿಕರು ಇಂತಹ ತ್ಯಾಜ್ಯಗಳನ್ನು ತೆಗೆಯುವ ಕೆಲಸದಲ್ಲಿ ನಿರತರಾಗಿದ್ದಾರೆ. ಆದರೆ ಮತ್ತೆ ಮತ್ತೆ ಇಂತಹ ತ್ಯಾಜ್ಯ ರಾಶಿಗಳು ಬಂದು ಸೇರುತ್ತಿವೆ. ಬೇಜವಾಬ್ದಾರಿಯಿಂದ ವರ್ತಿಸುವ ಜನರಿಂದಾಗಿ ಸಮಸ್ಯೆ ಹೆಚ್ಚಿದೆ.

ಚಿತ್ರಗಳು: ಆಸ್ಟ್ರೋಮೋಹನ್‌

ಟಾಪ್ ನ್ಯೂಸ್

Bangladeshದಲ್ಲಿ ಮುಂದುವರಿದ ಸಂಘರ್ಷ, ಮೂರು ಹಿಂದೂ ದೇವಾಲಯ ಧ್ವಂಸ

Bangladeshದಲ್ಲಿ ಮುಂದುವರಿದ ಸಂಘರ್ಷ, ಮೂರು ಹಿಂದೂ ದೇವಾಲಯ ಧ್ವಂಸ

BGT 2024-25: Australia’s leading pacer ruled out of Adelaide Test

BGT 2024-25: ಅಡಿಲೇಡ್‌ ಟೆಸ್ಟ್‌ ನಿಂದ ಹೊರಬಿದ್ದ ಆಸ್ಟ್ರೇಲಿಯಾದ ಪ್ರಮುಖ ವೇಗಿ

2-bng-crime

Bengaluru Crime: ಅತಿಯಾಗಿ ಮೊಬೈಲ್‌ ಬಳಸಿದಕ್ಕೆ ಪ್ರೇಯಸಿ ಹತ್ಯೆ?

Maharashtra; Gondia bus accident: PM announces compensation

Maharashtra; ಗೊಂಡಿಯಾ ಬಸ್‌ ಅಪಘಾತ: 11ಕ್ಕೇರಿದ ಸಾವಿನ ಸಂಖ್ಯೆ, ಪರಿಹಾರ ಘೋಷಿಸಿದ ಪ್ರಧಾನಿ

ಮುಳುಗಿದ 200 ಪ್ರಯಾಣಿಕರಿದ್ದ ಬೋಟ್;‌ ಮಹಿಳೆಯರು ಸೇರಿ ಹಲವರ ಸಾವು

Nigeria: ಮುಳುಗಿದ 200 ಪ್ರಯಾಣಿಕರಿದ್ದ ಬೋಟ್;‌ ಮಹಿಳೆಯರು ಸೇರಿ ಹಲವರ ಸಾವು

Man arrested for giving Coast Guard information to Pakistan for Rs 200

Gujarat: 200 ರೂ ಆಸೆಗಾಗಿ ಪಾಕಿಸ್ತಾನಕ್ಕೆ ನೌಕಾಪಡೆ ಮಾಹಿತಿ ನೀಡಿದಾತನ ಬಂಧನ

Dharwad: ಅಪ್ಪ ಪಡೆದ 1 ಲಕ್ಷ ರೂ. ಸಾಲಕ್ಕೆ ಮಗನ ಕಾಲಿಗೆ ಸರಪಳಿ!Dharwad: ಅಪ್ಪ ಪಡೆದ 1 ಲಕ್ಷ ರೂ. ಸಾಲಕ್ಕೆ ಮಗನ ಕಾಲಿಗೆ ಸರಪಳಿ!

Dharwad: ಅಪ್ಪ ಪಡೆದ 1 ಲಕ್ಷ ರೂ. ಸಾಲಕ್ಕೆ ಮಗನ ಕಾಲಿಗೆ ಸರಪಳಿ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Manipal: ಹುಲ್ಲು ತರಲು ತೆರಳಿದ್ದ ಮಹಿಳೆಯ ಮೃತದೇಹ ಪತ್ತೆ

Manipal: ಹುಲ್ಲು ತರಲು ತೆರಳಿದ್ದ ಮಹಿಳೆಯ ಮೃತದೇಹ ಪತ್ತೆ

illegal sand mining ಸಹಕಾರ ಮಾಡಿರುವ ಆರೋಪ: ಕಾಪು ಎಸ್‌ಐ ಅಮಾನತು

illegal sand mining ಸಹಕಾರ ಮಾಡಿರುವ ಆರೋಪ: ಕಾಪು ಎಸ್‌ಐ ಅಮಾನತು

ಕುಲಕಸುಬನ್ನು ಉಳಿಸಿ ಬೆಳೆಸಬೇಕಿದೆ: ಕಾಳಹಸ್ತೇಂದ್ರ ಶ್ರೀ

Barkur Shri Kallikamba Temple: ಕುಲಕಸುಬನ್ನು ಉಳಿಸಿ ಬೆಳೆಸಬೇಕಿದೆ: ಕಾಳಹಸ್ತೇಂದ್ರ ಶ್ರೀ

Malpe: ಏಕರೂಪದ ಮೀನುಗಾರಿಕೆಗೆ ಪ್ರಯತ್ನ

Malpe: ಏಕರೂಪದ ಮೀನುಗಾರಿಕೆಗೆ ಪ್ರಯತ್ನ

Udupi: ಗೀತಾರ್ಥ ಚಿಂತನೆ 109: ದೇವರ ಇಚ್ಛೆ ಏನು?

Udupi: ಗೀತಾರ್ಥ ಚಿಂತನೆ 109: ದೇವರ ಇಚ್ಛೆ ಏನು?

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Tulu Movie: ಮೊದಲ ಹಂತದ ಚಿತ್ರೀಕರಣ ಮುಗಿಸಿದ ʼಪಿಲಿಪಂಜʼ ಸಿನಿಮಾ

Tulu Movie: ಮೊದಲ ಹಂತದ ಚಿತ್ರೀಕರಣ ಮುಗಿಸಿದ ʼಪಿಲಿಪಂಜʼ ಸಿನಿಮಾ

4-bng

Bengaluru: ಒಂಟಿ ಮಹಿಳೆಯರನ್ನು ಟಾರ್ಗೆಟ್‌ ಮಾಡಿ ಸರಗಳ್ಳತನ

Jalandhara movie review

Jalandhara Movie Review; ನದಿಯ ಸುಳಿಯಲ್ಲಿ ಸಾವಿನ ಸೆಲೆ

Bangladeshದಲ್ಲಿ ಮುಂದುವರಿದ ಸಂಘರ್ಷ, ಮೂರು ಹಿಂದೂ ದೇವಾಲಯ ಧ್ವಂಸ

Bangladeshದಲ್ಲಿ ಮುಂದುವರಿದ ಸಂಘರ್ಷ, ಮೂರು ಹಿಂದೂ ದೇವಾಲಯ ಧ್ವಂಸ

BGT 2024-25: Australia’s leading pacer ruled out of Adelaide Test

BGT 2024-25: ಅಡಿಲೇಡ್‌ ಟೆಸ್ಟ್‌ ನಿಂದ ಹೊರಬಿದ್ದ ಆಸ್ಟ್ರೇಲಿಯಾದ ಪ್ರಮುಖ ವೇಗಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.