490 ರನ್: ನ್ಯೂಜಿಲ್ಯಾಂಡ್ ವನಿತೆಯರ ದಾಖಲೆ
Team Udayavani, Jun 9, 2018, 6:00 AM IST
ಡಬ್ಲಿನ್: ನ್ಯೂಜಿಲ್ಯಾಂಡ್ ವನಿತೆಯರು ಏಕದಿನ ಕ್ರಿಕೆಟ್‌ನಲ್ಲಿ 490 ರನ್ನುಗಳ ಬೃಹತ್ ಮೊತ್ತ ಪೇರಿಸಿ 21 ವರ್ಷಗಳ ತಮ್ಮದೇ ವಿಶ್ವದಾಖಲೆಯನ್ನು ಅಳಿಸಿದ್ದಾರೆ. ಶುಕ್ರವಾರ ಡಬ್ಲಿನ್‌ನಲ್ಲಿ ಆತಿಥೇಯ ಅಯರ್‌ಲ್ಯಾಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲ್ಯಾಂಡ್ ಕೇವಲ 4 ವಿಕೆಟಿಗೆ 490 ರನ್ನುಗಳ ಬೃಹತ್ ಮೊತ್ತವನ್ನು ಪೇರಿಸಿತು. ಇದು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳ ಇತಿಹಾಸದಲ್ಲೇ ತಂಡವೊಂದು ಗಳಿಸಿದ ಆತ್ಯಧಿಕ ರನ್ ಆಗಿದೆ. ಇದಕ್ಕೂ ಮುನ್ನ ಪಾಕಿಸ್ಥಾನ ವಿರುದ್ಧದ 1997ರ ಕ್ರೈಸ್ಟ್‌ಚರ್ಚ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ 5 ವಿಕೆಟಗೆ 455 ರನ್ ಪೇರಿಸಿ ವಿಶ್ವದಾಖಲೆ ನಿರ್ಮಿಸಿತ್ತು.
ಪುರುಷರ ಏಕದಿನ ಕ್ರಿಕೆಟ್‌ನಲ್ಲೂ ಇಷ್ಟೊಂದು ದೊಡ್ಡ ಮೊತ್ತ ದಾಖಲಾಗದಿರುವುದು ವನಿತೆಯರ ಪಾಲಿನ ಹೆಗ್ಗಳಿಕೆ. ಪುರುಷರ ಏಕದಿನ ಪಂದ್ಯದ ಸರ್ವಾಧಿಕ ಸ್ಕೋರ್ 3ಕ್ಕೆ 444 ರನ್. ಇದನ್ನು 2016ರ ಪಾಕಿಸ್ಥಾನ ಎದುರಿನ ನಾಟಿಂಗಂ ಪಂದ್ಯದಲ್ಲಿ ಇಂಗ್ಲೆಂಡ್ ದಾಖಲಿಸಿತ್ತು.
ಅಯರ್‌ಲ್ಯಾಂಡ್ ವಿರುದ್ಧ ನಾಯಕಿ ಸುಝಿ ಬೇಟ್ಸ್ 151 ರನ್ (94 ಎಸೆತ, 24 ಬೌಂಡರಿ, 2 ಸಿಕ್ಸರ್) ಹಾಗೂ ವನ್‌ಡೌನ್ ಆಟಗಾರ್ತಿ ಮ್ಯಾಡ್ಡಿ ಗ್ರೀನ್ 121 ರನ್ (77 ಎಸೆತ, 15 ಬೌಂಡರಿ, 1 ಸಿಕ್ಸರ್) ಬಾರಿಸಿ ಶತಕ ಸಂಭ್ರಮ ಆಚರಿಸಿದರು. ಓಪನರ್ ಜೆಸ್ ವಾಟಿRನ್ 62 ಮಾಡಿದರು. ಬೇಟ್ಸ್-ವಾಟಿRನ್ ಜೋಡಿಯ ಮೊದಲ ವಿಕೆಟ್ ಜತೆಯಾಟದಲ್ಲಿ 18.5 ಓವರ್‌ಗಳಿಂದ 172 ರನ್ ಹರಿದು ಬಂತು. ಬೇಟ್ಸ್ -ಗ್ರೀನ್ ದ್ವಿತೀಯ ವಿಕೆಟಿಗೆ 116 ರನ್ ಒಟ್ಟುಗೂಡಿಸಿದರು.
ಅಯರ್‌ಲ್ಯಾಂಡ್ ಬೌಲರ್‌ಗಳಲ್ಲಿ ಲೆಗ್‌ಸ್ಪಿನ್ನರ್ ಕಾರಾ ಮರ್ರೆ 10 ಓವರ್‌ಗಳಲ್ಲಿ 119 ರನ್ ಬಿಟ್ಟುಕೊಟ್ಟು ಬಹಳ ದುಬಾರಿಯಾದರು. ಉಳಿದಂತೆ ಮೂವರು 90 ಪ್ಲಸ್ ರನ್ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT: ಆಸೀಸ್ ಮಾಧ್ಯಮದ ವಿರುದ್ದ ವಿರಾಟ್ ಗರಂ: ಏರ್‌ಪೋರ್ಟ್ ನಲ್ಲಿ ವರದಿಗಾರ್ತಿ ಜತೆ ಜಗಳ
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?; ವೇಗಿಗೆ ಆಸೀಸ್ ಪ್ರವಾಸ ಕಷ್ಟ!
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.